67ನೇ ವಯಸ್ಸಿನ ಮುಕೇಶ್ ಅಂಬಾನಿ ಆರೋಗ್ಯದ ಸೀಕ್ರೆಟ್ ಏನು? ಪ್ರತಿದಿನ ಸೇವಿಸುವ ಆಹಾರ ಏನು?

By Mahmad RafikFirst Published Sep 12, 2024, 10:42 AM IST
Highlights

ಬಿಡುವಿಲ್ಲದ ವೇಳಾಪಟ್ಟಿಯೂ ಮುಖೇಶ್ ಅಂಬಾನಿ ಯೋಗ, ಧ್ಯಾನ ಮತ್ತು ಸಾತ್ವಿಕ್ ಆಹಾರದ ಮೂಲಕ ತಮ್ಮನ್ನು ತಾವು ಫಿಟ್ ಆಗಿರಿಸಿಕೊಳ್ಳುತ್ತಾರೆ. ಪ್ರತಿದಿನ ಬೆಳಗ್ಗೆ 5.30ಕ್ಕೆ ಏಳುವ ಮುಕೇಶ್ ಅಂಬಾನಿ ಜೀವನಶೈಲಿ ಹೀಗಿರುತ್ತದೆ.

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ, ಭಾರತದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬ ಅದ್ಧೂರಿ ಜೀವನಶೈಲಿಯಿಂದಲೇ ಇಡೀ ವಿಶ್ವದಲ್ಲಿ ಸುದ್ದಿಯಾಗುತ್ತಿರುತ್ತಾರೆ. ಮುಕೇಶ್ ಅಂಬಾನಿ ಪ್ರೀತಿಯ ಮಡದಿ ನೀತಾ ಅವರ ಜೀವನಶೈಲಿ ಹೆಚ್ಚು ಚರ್ಚೆಯಲ್ಲಿರುತ್ತದೆ. ಭಾರತಯ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಸ್ವಸ್ಥ ಆರೋಗ್ಯಕ್ಕಾಗಿ ಬಿಡುವಿಲ್ಲದ ಸಮಯದಲ್ಲಿಯೂ ಯೋಗಕ್ಕಾಗಿ ಸಮಯವನ್ನು ಮೀಸಲಿಡುತ್ತಾರೆ ಎಂದು ವರದಿಯಾಗಿದೆ. ಈ ವರದಿಯಲ್ಲಿ ಮುಕೇಶ್ ಅಂಬಾನಿ ದೈನಂದಿನ ಜೀವನ ಮತ್ತು ಸೇವಿಸುವ ಆಹಾರದ ಬಗ್ಗೆ ತಿಳಿಯೋಣ. 

ಮುಕೇಶ್ ಅಂಬಾನಿ ಯೋಗ ಮತ್ತು ಧ್ಯಾನದೊಂದಿಗೆ ತಮ್ಮ ಜೀವನವನ್ನು ಆರಂಭಿಸುತ್ತಾರೆ. ಲಘು ಆಹಾರಕ್ಕೆ ಮೊದಲ ಆದ್ಯತೆ ನೀಡುವ ಮುಕೇಶ್ ಅಂಬಾನಿ,  ಶಿಸ್ತುಬದ್ಧ ಜೀವನಶೈಲಿಯ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ.  ಯಾವುದೇ ಕಾರಣಕ್ಕೂ ರುಚಿಯಾಗಿದೆ ಎಂದು ಹೆಚ್ಚಿನ ಆಹಾರವನ್ನು ಮುಕೇಶ್ ಅಂಬಾನಿ ಸೇವಿಸಲ್ಲ. ತಜ್ಞ ವೈದ್ಯರ ಸಲಹೆ ಮೇರೆಗೆ ಮುಕೇಶ್ ಅಂಬಾನಿಯವರ ಸೇವಿಸುವ ಆಹಾರ ನಿಗಧಿಯಾಗುತ್ತದೆ. 

Latest Videos

ಮುಖೇಶ್ ಅಂಬಾನಿ ಪ್ರತಿದಿನ ಬೆಳಗ್ಗೆ 5:30ಕ್ಕೆ ಎದ್ದು ಯೋಗ ಮತ್ತು ಧ್ಯಾನ ಮಾಡುತ್ತಾರೆ. ಬೆಳಗಿನ ವ್ಯಾಯಾಮದಲ್ಲಿ ಸೂರ್ಯ ನಮಸ್ಕಾರ ಮತ್ತು ಧ್ಯಾನದ ನಂತರ ಒಂದು ಸಣ್ಣ ನಡಿಗೆ ಸೇರಿದೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಮುಕೇಶ್ ಅಂಬಾನಿ ಎಂದಿಗೂ ತಮ್ಮ ಬೆಳಗಿನ ದಿನಚರಿಯನ್ನು ಎಂದಿಗೂ ತಪ್ಪಿಸುವುದಿಲ್ಲ. ಇದು ಮುಕೇಶ್ ಅಂಬಾನಿಯವರ ಸಕಾರಾತ್ಮಕ ದಿನದ ಆರಂಭಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಮುಕೇಶ್ ಅಂಬಾನಿ ದೈಹಿಕ ಜೊತೆಯಲ್ಲಿ ಮಾನಸಿಕ ಆರೋಗ್ಯ ಸಮತೋಲದಲ್ಲಿರುವಂತೆ ನೋಡಿಕೊಳ್ಳುತ್ತಾರೆ.

ಮುಕೇಶ್ ಅಂಬಾನಿ ಸೇವಿಸುವ ಆಹಾರದಲ್ಲಿ ಹಣ್ಣು, ಜ್ಯೂಸ್ ಮತ್ತು ಇಡ್ಲಿ-ಸಾಂಬಾರ್ ಸೇರಿದ್ದು, ಸಾತ್ವಿಕ ಆಹಾರವನ್ನೇ ಸೇವಿಸಲು ಇಷ್ಟಪಡುತ್ತಾರೆ. ಶಿಸ್ತಿನ ಆಹಾರಶೈಲಿ ಪದ್ಧತಿಯನ್ನು ರೂಢಿಸಿಕೊಂಡಿರುವ ಮುಕೇಶ್ ಅಂಬಾನಿ, ವಾರಕ್ಕೆ ಒಮ್ಮೆ ಮಾತ್ರ ಹೊರಗಿನ (ಹೋಟೆಲ್) ಆಹಾರ ಸೇವನೆ ಮಾಡತ್ತಾರೆ ಎಂದು ಸಂದರ್ಶನವೊಂದರಲ್ಲಿ ನೀತಾ ಅಂಬಾನಿ ಹೇಳಿದ್ದರು. ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಕುಟುಂಬಸ್ಥರ ಜೊತೆ ಸೇವಿಸಲು ಪತಿ ಇಷ್ಟ ಅಂತ ನೀತಾ ಅಂಬಾನಿ ಹೇಳಿದ್ದರು.

ಜಿಯೋದಿಂದ ಮಹತ್ವದ ಘೋಷಣೆ: 3 ತಿಂಗಳು ಅನ್‌ಲಿಮಿಟೆಡ್‌ ಕಾಲ್ ಜೊತೆ ಡೇಟಾ ಪ್ಲಾನ್, ಬೆಲೆ ಜಸ್ಟ್ 1 ರೂಪಾಯಿ

ಮುಖೇಶ್ ಅಂಬಾನಿಯವರ ಆಹಾರ ಪದ್ಧತಿಯು ದಿನವಿಡೀ ಒಂದೇ ಆಗಿರುತ್ತದೆ, ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಸಾಂಪ್ರದಾಯಿಕ ಭಾರತೀಯ ಆಹಾರವನ್ನು ತಿನ್ನುತ್ತಾರೆ. ದಾಲ್, ಸಬ್ಜಿ, ಅನ್ನ, ಸೂಪ್ ಮತ್ತು ಸಲಾಡ್ ಸೇರಿದಂತೆ ಗುಜರಾತಿ ಆಹಾರ ಶೈಲಿಯನ್ನು ಮುಕೇಶ್ ಅಂಬಾನಿ ಇಷ್ಟಪಡುತ್ತಾರೆ. ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಮನೆಯಲ್ಲಿ ಬೇಯಿಸಿದ ಆಹಾರವನ್ನು ಆದ್ಯತೆ ನೀಡುತ್ತಾರೆ. ಕೋಟ್ಯಂತರ ಮೌಲ್ಯದ ಆಸ್ತಿಯ ಮಾಲೀಕರಾಗಿರುವ ಮುಕೇಶ್ ಅಂಬಾನಿ ಪಾರ್ಟಿಗಳಲ್ಲಿ ಭಾಗಿಯಾದರೂ ಮದ್ಯಪಾನ ಮಾಡಲ್ಲ.

ಮದ್ಯಪಾನ ಮತ್ತು ಜಂಕ್‌ ಫುಡ್‌ನಿಂದ ದೂರವಿರೋ ಮುಕೇಶ್ ಅಂಬಾನಿ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ. ಪಾರ್ಟಿ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾದರೂ ಮುಕೇಶ್ ಅಂಬಾನಿ ಅಲ್ಲಿನ ಆಹಾರವನ್ನು ಸೇವಿಸಲ್ಲ. ಸಸ್ಯಾಹಾರಿ ಆಹಾರವನ್ನೇ ಸೇವಿಸುವ ಮುಕೇಶ್ ಅಂಬಾನಿ ಕಟ್ಟುನಿಟ್ಟಾದ ಆಹಾರ, ಯೋಗ, ಧ್ಯಾನದಿಂದಾಗಿ 67ನೇ ವಯಸ್ಸಿನಲ್ಲಿಯೂ ಫಿಟ್ ಆಗಿದ್ದಾರೆ.

ಅಂಬಾನಿಗೆ ಸವಾಲೆಸಯಲು ಬರ್ತಿದೆ ಆಫ್ರಿಕನ್ ಕಂಪನಿ; ಮಹಾ ಕಾಳಗಕ್ಕೆ ಸಾಕ್ಷಿಯಾಗಲಿದೆ ಭಾರತದ ಮಾರುಕಟ್ಟೆ

click me!