ದಿನಕ್ಕೆ ಬರೀ 200 ಕ್ಯಾಲೊರಿ ಇಳಿಸಿದರೂ ಹೃದಯ ಸಮಸ್ಯೆ ಗಾಯಬ್‌!

By Suvarna News  |  First Published Aug 18, 2021, 4:13 PM IST

ಹೃದಯ ಸಮಸ್ಯೆ, ಬಿಪಿ ಇರುವವರು ಅತಿಯಾದ ವ್ಯಾಯಾಮ ಮಾಡಬೇಕಿಲ್ಲ. ದಿನಕ್ಕೆ ಕೇವಲ 200 ಕ್ಯಾಲೊರಿ ಇಳಿಸಿದರೆ ಸಾಕು ಎನ್ನುತ್ತಿದೆ ಒಂದು ಅಧ್ಯಯನ. ಇದು ನಿಜಾನಾ?


ಹೆಚ್ಚಿನ ವೈದ್ಯರು ಮತ್ತು ಪೌಷ್ಟಿಕತೆ ತಜ್ಞರು ಹೃದಯ ರೋಗಿಗಳಿಗೆ ವ್ಯಾಯಾಮ ಶಿಫಾರಸು ಮಾಡುತ್ತಾರೆ. ಅದರಲ್ಲೂ ಏರೋಬಿಕ್‌ ವ್ಯಾಯಾಮಗಳು ರಕ್ತಪರಿಚಲನೆಯನ್ನು ಸುಧಾರಿಸುತ್ತವೆ, ಹೃದಯ ಸ್ನಾಯುಗಳನ್ನು ಬಲಪಡಿಸುತ್ತವೆ. ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಆದರೆ ಎಷ್ಟು ವ್ಯಾಯಾಮ ಮಾಡಬೇಕು ಎಂಬುದರ ಬಗ್ಗೆ ಭಿನ್ನಾಬಿಪ್ರಾಯವಿದೆ. ಹೊಸದೊಂದು ಅಧ್ಯಯನದ ಪ್ರಕಾರ, ಪ್ರತಿದಿನ ಮಿತವಾದ ವ್ಯಾಯಾಮದಿಂದ ಕೇವಲ 200 ಕ್ಯಾಲೊರಿ ಕಡಿತಗೊಳಿಸುವುದರ ಮೂಲಕ ಸ್ಥೂಲಕಾಯದವರು, ಹಿರಿಯ ನಾಗರಿಕರು ಹೃದಯವನ್ನು ನಿರಂತರವಾಗಿ ಆರೋಗ್ಯವಾಗಿಟ್ಟುಕೊಳ್ಳಬಹುದು. ಇದು ಹೆಚ್ಚಿನ ವ್ಯಾಯಾಮಕ್ಕಿಂತಲೂ ಪರಿಣಾಮಕಾರಿ. 

ವ್ಯಾಯಾಮ ಮತ್ತು ಆಹಾರ ಕಡಿತ 
ಸ್ಥೂಲಕಾಯ ಹೊಂದಿರುವ ಹಿರಿಯ ವಯಸ್ಕರಲ್ಲಿ, ಏರೋಬಿಕ್‌ ವ್ಯಾಯಾಮ ಹಾಗೂ ಮಿತಾಹಾರ ಅಥವಾ ದೈನಂದಿನ ಕ್ಯಾಲೋರಿಗಳಲ್ಲಿ ಕಡಿತದೊಂದಿಗೆ ಸಂಯೋಜಿಸಲಾಗುತ್ತದೆ. ಇದರಿಂದ ಮಹಾಪಧಮನಿಯ ಬಿಗಿತ ಕಡಿಮೆಯಾಗುತ್ತದೆ. ಇದು ರಕ್ತನಾಳದ ಆರೋಗ್ಯದ ಅಳತೆ, ಹೃದಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬರಿಯ ವ್ಯಾಯಾಮಕ್ಕೆ ಹೋಲಿಸಿದರೆ ಆಹಾರ ಮತ್ತು ವ್ಯಾಯಾಮದ ಸಂಯೋಜನೆ ಹೆಚ್ಚು ಅನುಕೂಲಕಾರಿ. ಇದು ಮಹಾಪಧಮನಿಯ ಬಿಗಿತದಲ್ಲಿ ವಯಸ್ಸು ಹೆಚ್ಚಾದಂತೆ ಆಗುವ ಹೆಚ್ಚಳವನ್ನು ಸರಿದೂಗಿಸಲು ಸಹಾಯ ಮಾಡಬಹುದು. 

Tap to resize

Latest Videos

ರೈಸ್ ಟೀ ಎಂದರೇನು ಗೊತ್ತಾ? ಇದ್ರಿಂದ ಎಷ್ಟೊಂದು ಪ್ರಯೋಜನಗಳಿವೆ...
ಏರೋಬಿಕ್‌ ವ್ಯಾಯಾಮವು ಸಾಮಾನ್ಯವಾಗಿ ಮಹಾಪಧಮನಿಯ ರಚನೆ ಮತ್ತು ಕಾರ್ಯದ ಮೇಲೆ ಒಳ್ಳೆಯ ಪರಿಣಾಮಗಳನ್ನು ಬೀರುತ್ತದೆ. ಆದರೆ, ಬೊಜ್ಜು ಹೊಂದಿರುವ ಹಿರಿಯ ವಯಸ್ಕರಲ್ಲಿ ಮಹಾಪಧಮನಿಯ ಬಿಗಿತವನ್ನು ಸುಧಾರಿಸಲು ವ್ಯಾಯಾಮ ಮಾತ್ರ ಸಾಕಾಗುವುದಿಲ್ಲ. ಉತ್ತರ ಕೆರೊಲಿನಾದ ವಿನ್‌ಸ್ಟನ್‌- ಸೇಲಂನಲ್ಲಿರುವ ವೇಕ್‌ ಫಾರೆಸ್ಟ್‌ ಸ್ಕೂಲ್‌ ಆಫ್‌ ಮೆಡಿಸಿನ್‌ನಲ್ಲಿ ಜೆರಂಟಾಲಜಿ ಮತ್ತು ಜೆರಿಯಾಟ್ರಿಕ್‌ ಮೆಡಿಸಿನ್‌ನ ಅಧ್ಯಯನದ ಪ್ರಮುಖ ಲೇಖಕ ಬ್ರಿಂಕ್ಲೆ, ''ಬೊಜ್ಜು ಹೊಂದಿರುವ ವಯಸ್ಕರಲ್ಲಿ ಏರೋಬಿಕ್ ವ್ಯಾಯಾಮಕ್ಕೆ ಹೋಲಿಸಿದರೆ ತೂಕ ನಷ್ಟಕ್ಕೆ ಕ್ಯಾಲೋರಿ ನಿರ್ಬಂಧವನ್ನು ಸೇರಿಸುವುದು ರಕ್ತನಾಳದ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆಗೆ ಕಾರಣವಾಗುತ್ತದೆಯೇ ಎಂದು ನಿರ್ಧರಿಸಲು ನಾವು ಪ್ರಯತ್ನಿಸಿದ್ದೇವೆ’’ ಎಂದು ಹೇಳಿದ್ದಾರೆ. 
 


ಈ ಪ್ರಯೋಗದಲ್ಲಿ 160 ಹಿರಿಯ ವಯಸ್ಕರನ್ನು ಒಳಗೊಂಡಿದ್ದು, 65-79 ವರ್ಷ ವಯಸ್ಸಿನವರು. ಭಾಗವಹಿಸಿದವರ ಸರಾಸರಿ ವಯಸ್ಸು 69 ವರ್ಷ, 74ರಷ್ಟು ಮಹಿಳೆಯರು ಮತ್ತು 73 ಪ್ರತಿಶತದಷ್ಟು ಬಿಳಿಯರು. 20 ವಾರಗಳವರೆಗೆ ಮೂರು ಗುಂಪುಗಳಲ್ಲಿ ಒಂದಕ್ಕೆ ತಮ್ಮ ನಿಯಮಿತ ಆಹಾರದೊಂದಿಗೆ ವ್ಯಾಯಾಮ ಮಾತ್ರ, ಎರಡನೇ ಗುಂಪಿಗೆ ವ್ಯಾಯಾಮ ಮತ್ತು ಮಧ್ಯಮ ಕ್ಯಾಲೋರಿ ನಿರ್ಬಂಧ (ಅಂದಾಜು 250 ಕ್ಯಾಲೊರಿ/ದಿನ ಕಡಿತ), ಮೂರನೇ ಗುಂಪಿಗೆ ವ್ಯಾಯಾಮ ಮತ್ತು ಹೆಚ್ಚು ತೀವ್ರವಾದ ಕ್ಯಾಲೋರಿ ನಿರ್ಬಂಧ ( ಸರಿಸುಮಾರು 600 ಕ್ಯಾಲೋರಿಗಳ ಕಡಿತ/ದಿನ) ವಿಧಿಸಲಾಯಿತು. 
ತಜ್ಞರ ನಿಗಾ ಹಾಗೂ ನಿರ್ದೇಶನದಡಿಯಲ್ಲಿ ಡಯಟೀಶಿಯನ್ ಅನುಮೋದಿತ ಮೆನು ಪ್ರಕಾರ ಅವರು ತಮ್ಮದೇ ಆದ ವ್ಯಾಯಾಮ, ಉಪಾಹಾರ ಮಾಡಿದರು. ವೇಕ್‌ ಫಾರೆಸ್ಟ್‌ ಸ್ಕೂಲ್‌ ಆಫ್‌ ಮೆಡಿಸಿನ್‌ನಲ್ಲಿರುವ ಜೆರಿಯಾಟ್ರಿಕ್‌ ರಿಸರ್ಚ್‌ ಸೆಂಟರ್‌ನಲ್ಲಿ 20 ವಾರಗಳ ಅಧ್ಯಯನದ ಅವಧಿಗೆ ವಾರದಲ್ಲಿ ನಾಲ್ಕು ದಿನ ಏರೋಬಿಕ್‌ ವ್ಯಾಯಾಮ ತರಬೇತಿಯನ್ನು ಪ್ರತಿಯೊಬ್ಬರೂ ಪಡೆದರು. 

ವಯಸ್ಸು 50 ದಾಟಿದೆಯೇ ? ಪ್ರತಿನಿತ್ಯ ತಿನ್ನಲು ಅತ್ಯುತ್ತಮ ಆಹಾರಗಳಿವು

ಫಲಿತಾಂಶಗಳು
ಐದು ತಿಂಗಳ ಅಧ್ಯಯನದ ಅವಧಿಯಲ್ಲಿ ಒಟ್ಟು ದೇಹದ ತೂಕದ ಸುಮಾರು 10% ಅಥವಾ ಸುಮಾರು 20 ಪೌಂಡುಗಳಷ್ಟು ತೂಕ ಕಡಿಮೆಯಾಯಿತು. ಮಹಾಪಧಮನಿಯ ಬಿಗಿತದಲ್ಲಿ ಗಮನಾರ್ಹ ಸುಧಾರಣೆ  ಕಂಡುಬಂತು.  ಇದು ವ್ಯಾಯಾಮ ಮತ್ತು ಮಧ್ಯಮ ಕ್ಯಾಲೋರಿ ನಿರ್ಬಂಧದ ಗುಂಪಿಗೆ ಮಾತ್ರ ಕಂಡುಬಂತು. ಸಂಶೋಧನೆಯ ಇನ್ನಿತರ ಅಂಶಗಳೆಂದರೆ, ಯಾವುದೇ ಮಹಾಪಧಮನಿಯ ಬಿಗಿತ ಕಡಿತವು ವ್ಯಾಯಾಮ-ಮಾತ್ರ ಗುಂಪು ಅಥವಾ ವ್ಯಾಯಾಮ ಮತ್ತು ಹೆಚ್ಚು ತೀವ್ರವಾದ ಕ್ಯಾಲೋರಿ ನಿರ್ಬಂಧ ಗುಂಪಿನಲ್ಲಿ ಗಮನಾರ್ಹವಾಗಿ ಬದಲಾಗಿಲ್ಲ. ವ್ಯಾಯಾಮ-ಮಾತ್ರ ಗುಂಪಿಗೆ ಹೋಲಿಸಿದರೆ ಕ್ಯಾಲೋರಿ-ನಿರ್ಬಂಧಿತ ಗುಂಪುಗಳಲ್ಲಿ  ಒಟ್ಟು ಕೊಬ್ಬು ದ್ರವ್ಯರಾಶಿ, ಶೇಕಡಾ ದೇಹದ ಕೊಬ್ಬು, ಹೊಟ್ಟೆಯ ಕೊಬ್ಬು ಮತ್ತು ಸೊಂಟದ ಸುತ್ತಳತೆಯಲ್ಲಿನ ಬದಲಾವಣೆಗಳು ಹೆಚ್ಚಾಗಿವೆ. ತೀವ್ರ ಕ್ಯಾಲೋರಿ ನಿರ್ಬಂಧ ಗುಂಪಿನಲ್ಲಿ ಸುಮಾರು ಎರಡು ಪಟ್ಟು ಕಡಿಮೆ ಕ್ಯಾಲೋರಿಗಳ ಹೊರತಾಗಿಯೂ ಕ್ಯಾಲೋರಿ-ನಿರ್ಬಂಧಿತ ಗುಂಪುಗಳ ನಡುವೆ ತೂಕ ನಷ್ಟ ಹೆಚ್ಚೇನೂ ಆಗಿಲ್ಲ. 
ಅಂದರೆ ಇದರರ್ಥ ಇಷ್ಟೇ- ಹೃದಯ ಸಮಸ್ಯೆಗೆ ಸಂಬಂಧಿಸಿದಂತೆ ತೂಕ ಇಳಿಕೆಯ ವ್ಯಾಯಾಮ ಹಾಗೂ ಮಿತಾಹಾರ ಸೇವನೆ ಜೊತಜೊತೆಗೇ ಹೋಗಬೇಕು. ಇವೆರಡೂ ಮಧ್ಯಮಗತಿಯಲ್ಲಿ ಇದ್ದರೆ, ನಿಮ್ಮ ಆರೋಗ್ಯ ಹೆಚ್ಚು ಸುಧಾರಿಸಿಕೊಳ್ಳುತ್ತದೆ, ಹೃದಯ ಸಮಸ್ಯೆಯಿಂದ ಪಾರಾಗಬಹುದು. 

ಹ್ಯಾಂಡ್ ಸ್ಯಾನಿಟೈಸರ್ ಕೂಡ ಆರೋಗ್ಯಕ್ಕೆ ಹಾನಿಕಾರಕ

click me!