ಒಂದೆಡೆ ಕೋವಿಡ್ ಲಸಿಕೆಯನ್ನು ನೀಡುವ ಅಭಿಯಾನ ನಡೆಯುತ್ತಿದೆ. ಇನ್ನೊಂದೆಡೆ ಅದರ ಬಗ್ಗೆ ಮಿಥ್‌ಗಳು, ಸುಳ್ಳು ಕಲ್ಪನೆಗಳು ಹರಿದಾಡುತ್ತಿವೆ. ಈ ತಪ್ಪು ಕಲ್ಪನೆಗಳಿಂದ ದೂರವಾಗೋಣ ಬನ್ನಿ.
ಕೋವಿಡ್ ಲಸಿಕೆಗಳನ್ನು ನೀಡಲು ಆರಂಭಿಸಿದಂದಿನಿಂದ ಕೋಟ್ಯಂತರ ಜನರಿಗೆ ಅದನ್ನು ನೀಡಲಾಗಿದೆ. ಮತ್ತೊಂದೆಡೆ, ಹರಡಿರುವ ತಪ್ಪು ಕಲ್ಪನೆಗಳಿಂದಾಗಿ ಅನೇಕ ಮಂದಿ ತಮ್ಮ ವ್ಯಾಕ್ಸಿನ್ ಶಾಟ್ ಪಡೆಯಲು ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ಸಮಾಜ ಇನ್ನೂ ಕೋವಿಡ್‌ನ ಆತಂಕದಿಂದ ದೂರವಾಗಿಲ್ಲ. ಇಲ್ಲಿ ಕೆಲವು ಅಂಥ ಮಿಥ್‌ಗಳನ್ನು ದೂರ ಮಾಡುವ ಪ್ರಯತ್ನ ಮಾಡಲಾಗಿದೆ.
ಮಿಥ್ಯೆ 1: ಲಸಿಕೆಯ ಅಡ್ಡ ಪರಿಣಾಮಗಳು ಮಾರಕ
ನಿಮಗೆ ತಿಳಿದಿರುವಂತೆ, ಕೋವಿಡ್ ಲಸಿಕೆ ಎಂದರೆ ದೇಹದಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಸಕ್ರಿಯಗೊಳಿಸುವ ನಿಜವಾದ ವೈರಸ್‌ನ ದುರ್ಬಲ ಅನುಕರಣೆಯಾಗಿದೆ. ಈ ಪ್ರಕ್ರಿಯೆಯಲ್ಲಿ, ಒಬ್ಬ ವ್ಯಕ್ತಿಯು ಸಣ್ಣ ಪ್ರಮಾಣದ ಜ್ವರ, ಆಯಾಸ, ಕೀಲು ನೋವು ಮತ್ತು ಸ್ನಾಯು ನೋವಿನಂತಹ ಕೆಲವು ನಿರುಪದ್ರವಿ ಅಡ್ಡ ಪರಿಣಾಮಗಳನ್ನು ಅನುಭವಿಸಬಹುದು. ಕೆಲವರು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದುವುದೂ ಇಲ್ಲ. ಜೀವಕ್ಕಾಗಲೀ ದೀರ್ಘಾರೋಗ್ಯಕ್ಕಾಗಲೀ ಯಾವುದೇ ಆತಂಕ ಇಲ್ಲ. ನೀವು ಮಾಡಬೇಕಾಗಿರುವುದು ಚೆನ್ನಾಗಿ ವಿಶ್ರಾಂತಿ ಪಡೆಯುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಹೆಚ್ಚು ಶ್ರಮಪಡುವ ಕೆಲಸ ಮಾಡದಿರುವುದು.
ನೀರು ಕುಡಿಯೋದು ಅಂದ್ರೆ ನೀರು ಕುಡಿದಷ್ಟು ಸುಲಭವಲ್ಲ!
ಮಿಥ್ಯೆ 2: ಕೋವಿಡ್ ಲಸಿಕೆ ಬಂಜೆತನಕ್ಕೆ ಕಾರಣವಾಗಬಹುದು
ಬಂಜೆತನದ ಭಯದಿಂದ ಅನೇಕ ಜನರು ತಮ್ಮ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಾರೆ. ಅನೇಕ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಲಸಿಕೆಯಿಂದಾಗಿ ವ್ಯಕ್ತಿಯ ಫಲವತ್ತತೆಗೆ ಹೇಗೆ ಭೀಕರವಾದ ಬೆದರಿಕೆ ಉಂಟಾಗಬಹುದು ಎಂಬ ಬಗ್ಗೆ ವದಂತಿಗಳನ್ನು ಹರಡಿದವು. ತಜ್ಞರ ಪ್ರಕಾರ ಇದು ಸುಳ್ಳು. ಲಸಿಕೆಗಳು ಯಾವುದೇ ರೀತಿಯಲ್ಲಿ ವ್ಯಕ್ತಿಯ ಫಲವತ್ತತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಅದು ಪುರುಷರು ಮತ್ತು ಮಹಿಳೆಯರಲ್ಲಿ ಫಲವತ್ತತೆಯ ಯಾವುದೇ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.
ಮಿಥ್ಯೆ 3: ಈಗಾಗಲೇ ಕೋವಿಡ್ ಸೋಂಕಿಗೆ ಒಳಗಾದವರಿಗೆ ಲಸಿಕೆ ಅಗತ್ಯವಿಲ್ಲ
ಒಮ್ಮೆ ಕೋವಿಡ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡವರು ಚೇತರಿಸಿಕೊಂಡ ನಂತರ ಕನಿಷ್ಠ ಮೂರು ತಿಂಗಳು ಕೋವಿಡ್ ಲಸಿಕೆಗಳನ್ನು ಪಡೆಯಬೇಕಿಲ್ಲ. ಯಾಕೆಂದರೆ ನೈಸರ್ಗಿಕವಾಗಿಯೇ ಇಮ್ಯುನಿಟಿ ಅಂಥವರಲ್ಲಿ ಬಂದಿರುತ್ತೆ. ಆದಾಗ್ಯೂ, ಒಮ್ಮೆ ನೀವು ಕೋವಿಡ್ ಸೋಂಕಿನಿಂದ ಸಂಪೂರ್ಣವಾಗಿ ಚೇತರಿಸಿಕೊಂಡು, ಆರು ತಿಂಗಳ ನಂತರ, ನೀವು ಖಂಡಿತವಾಗಿಯೂ ವೈರಸ್ ವಿರುದ್ಧ ಲಸಿಕೆ ಹಾಕಿಸಿಕೊಳ್ಳಬಹುದು. ಇದು ಎರಡು ಬಾರಿ ವೈರಸ್ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಮಿಥ್ಯೆ 4: ಸರಿಯಾದ ಪ್ರಯೋಗ ನಡೆಸದೆ ಲಸಿಕೆ ಬಿಡುಗಡೆ ಮಾಡಲಾಗಿದೆ, ಅದ್ದರಿಂದ ಸುರಕ್ಷಿತವಲ್ಲ
ಕೋವಿಡ್ -19 ವಿರುದ್ಧ ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸಲು ಅನೇಕ ವೈದ್ಯಕೀಯ ವೃತ್ತಿಪರರು, ಫಾರ್ಮಾಸ್ಯುಟಿಕಲ್ ದೈತ್ಯರು ಮತ್ತು ವಿಜ್ಞಾನಿಗಳು ಒಗ್ಗೂಡಿದ್ದರು. ಸಾವಿರಾರು ಮಂದಿಯ ಮೇಲೆ ಪ್ರಯೋಗ ನಡೆಸಲಾಗಿದೆ. ಪ್ರತಿಯೊಬ್ಬರ ಪ್ರತಿಯೊಂದು ದೇಹಲಕ್ಷಣಗಳ ಮೇಲೂ ನಿಗಾ ಇಡಲಾಗಿದೆ. ಯಾವುದೇ ಗಂಭೀರ ಅಡ್ಡಪರಿಣಾಮಗಳು ಆಗಿಲ್ಲ. ಲಸಿಕೆಗಳು ಕೆಲವು ಜನರ ಮೇಲೆ ಕೆಲವು ಪ್ರತಿಕೂಲ ಪ್ರತಿಕ್ರಿಯೆಗಳನ್ನು ಹೊಂದಿದ್ದರೂ, ಲಕ್ಷಾಂತರ ಜನರು ಈಗಾಗಲೇ ತಮ್ಮ ಶಾಟ್‌ಗಳನ್ನು ಪಡೆದಿದ್ದಾರೆ. ಅವರೆಲ್ಲರೂ ಕೋವಿಡ್‌ನಿಂದ ಸುರಕ್ಷಿತರಾಗಿದ್ದಾರೆ ಎಂದು ಹೇಳಬಹುದು. ಕೋವಿಡ್ ಲಸಿಕೆಗಳು ತೀವ್ರವಾದ ಸೋಂಕು ಮತ್ತು ಆಸ್ಪತ್ರೆಗೆ ಸೇರುವ ಅಪಾಯವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಜ್ಞರು ನಂಬಿದ್ದಾರೆ.
ಆಲ್ಕೋಹಾಲ್: ಆರೋಗ್ಯಕ್ಕೆ ಒಳ್ಳೇಯದು, ಆದರೆ ಕಡೀಷನ್ಸ್ ಅಪ್ಲೈ!
ಮಿಥ್ಯೆ 5: ಮುಟ್ಟಿನ ವೇಳೆ ಲಸಿಕೆ ತೆಗೆದುಕೊಳ್ಳಬಾರದು
ಮಹಿಳೆಯರು ತಮ್ಮ ಪಿರಿಯಡ್ಸ್ ಸಮಯದಲ್ಲಿ ತಮ್ಮ ಕೋವಿಡ್ ಲಸಿಕೆಗಳನ್ನು ತೆಗೆದುಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಆರೋಗ್ಯ ತಜ್ಞರು ಮತ್ತು ಸ್ತ್ರೀರೋಗ ತಜ್ಞರ ಪ್ರಕಾರ, ಮುಟ್ಟಿನ ಸಮಯದಲ್ಲಿ ನಿಮ್ಮ ಲಸಿಕೆ ಜಬ್ ತೆಗೆದುಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ. ಕೆಲವು ಮಹಿಳೆಯರು ಮೈಯಲ್ಲಿ ಹಗುರವಾದ ಅಥವಾ ಭಾರವಾದ ಅನುಭವ ಹೊಂದಬಹುದಾದರೂ, ಮುಟ್ಟಿನ ಸಮಯದಲ್ಲಿ ಲಸಿಕೆ ತೆಗೆದುಕೊಳ್ಳುವಲ್ಲಿ ಯಾವುದೇ ದೊಡ್ಡ ಅಪಾಯವಿಲ್ಲ. ಆದರೂ ಈ ಸಮಯದಲ್ಲಿ ಹೆಚ್ಚಿನ ನೋವು ಅನುಭವಿಸುವವರು ಇದನ್ನು ಮುಂದಕ್ಕೆ ಹಾಕಬಹುದು.
ಮಿಥ್ಯೆ 6: ಲಸಿಕೆಗಳು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.
ಕೋವಿಡ್ ಲಸಿಕೆಗಳು ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತವೆ ಎಂಬುದು ತುಂಬಾ ತಪ್ಪು ಅಭಿಪ್ರಾಯ. ಇದಕ್ಕೆ ವಿರುದ್ಧವಾಗಿ, ಕೋವಿಡ್ ಲಸಿಕೆಗಳು ನಿಮ್ಮ ರೋಗನಿರೋಧಕ ವ್ಯವಸ್ಥೆಗೆ ಮಾರಕ ರೋಗಕಾರಕಗಳನ್ನು ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಅದರ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಯಾವುದೇ ರೀತಿಯಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುವುದಿಲ್ಲ.
ಮುಂಜಾನೆ ಖಾಲಿ ಹೊಟ್ಟೆಗೆ ಟೀ ಕುಡಿಯೋ ಅಬ್ಯಾಸ ಇದ್ರೆ ಇಂದೇ ಬಿಟ್ಬಿಡಿ