ನಮ್ಮ ಆಹಾರ ನಮ್ಮ ನಿಯಂತ್ರಣದಲ್ಲಿರಬೇಕು. ಕೆಲವೊಂದು ಆಹಾರವನ್ನು ಮಿತವಾಗಿ ಸೇವನೆ ಮಾಡಿದ್ರೆ ಆರೋಗ್ಯ ವೃದ್ಧಿಸುತ್ತದೆ. ಅದ್ರಲ್ಲಿ ರೆಡ್ ವೈನ್ ಕೂಡ ಒಂದು. ಅದ್ರಿಂದ ಏನೆಲ್ಲ ಲಾಭವಿದೆ ಎಂಬ ವಿವರ ಇಲ್ಲಿದೆ.
ಆಲ್ಕೋಹಾಲ್ ಸೇವನೆ ಆರೋಗ್ಯವನ್ನು ಹದಗೆಡಿಸುತ್ತದೆ. ಅದೇ ಕಪ್ಪು ದ್ರಾಕ್ಷಿಯಲ್ಲಿ ಮಾಡಿದ ರೆಡ್ ವೈನ್ ಆರೋಗ್ಯಕ್ಕೆ ಒಳ್ಳೆಯದು. ಕೆಂಪು ವೈನ್ ಅನ್ನು ರಿಲಾಕ್ಸಿಂಗ್ ಡ್ರಿಂಕ್ ಎಂದೇ ಪರಿಗಣಿಸಲಾಗುತ್ತದೆ. ಇದನ್ನು ಎಲ್ಲಾ ವಯಸ್ಸಿನ ಜನರು ಇಷ್ಟಪಡುತ್ತಾರೆ. ಇದನ್ನು ಸರಿಯಾದ ಪ್ರಮಾಣದಲ್ಲಿ ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಕೆಂಪು ವೈನ್ ಕಪ್ಪು ದ್ರಾಕ್ಷಿಯನ್ನು ಫಾರ್ಮ್ಯಾಟ್ ಮಾಡುವ ಮೂಲಕ ತಯಾರಿಸಲಾದ ಪಾನೀಯವಾಗಿದ್ದು, ಇದು ಆಲ್ಕೊಹಾಲ್ಯುಕ್ತ ಪಾನೀಯವಾಗಿದೆ.
ರೆಡ್ (Red) ವೈನ (Wine)ನ್ನು ಔಷಧಿ (Medicine) ಯಾಗಿ ಸೇವನೆ ಮಾಡಬೇಕಾಗುತ್ತದೆ. ಕೆಂಪು ವೈನ್ ನಲ್ಲಿ ಮೆಗ್ನೀಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ (Vitamin C) ಇರುತ್ತದೆ. ಅದಲ್ಲದೆ ಇದು ರೆಸ್ವೆರಾಟ್ರೊಲ್ ಮತ್ತು ಪಾಲಿಫಿನಾಲ್ ಗಳಂತಹ ಉತ್ಕರ್ಷಣ ನಿರೋಧಕವಾಗಿದೆ. ರೆಡ್ ವೈನ್ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ನಮ್ಮ ದೇಹವನ್ನು ಸ್ವತಂತ್ರ ರಾಡಿಕಲ್ ಗಳಿಂದ ರಕ್ಷಿಸುತ್ತದೆ. ಒತ್ತಡ ನಿವಾರಣೆ ಕೆಲಸವನ್ನು ಕೂಡ ರೆಡ್ ವೈನ್ ಮಾಡುತ್ತದೆ. ನಾವಿಂದು ರೆಡ್ ವೈನ್ ನಿಂದ ಇನ್ನೇನಲ್ಲ ಪ್ರಯೋಜನವಿದೆ ಎಂಬುದನ್ನು ನಿಮಗೆ ಹೇಳ್ತೇವೆ.
HEALTH TIPS: ಕೊಲೆಸ್ಟ್ರಾಲ್ ಕಡಿಮೆ ಮಾಡ್ಬೇಕಾ? ವೆಜ್ ಡಯಟ್ ಶುರುಮಾಡಿ
ರೆಡ್ ವೈನ್ ಪ್ರಯೋಜನಗಳು : ಕೆಂಪು ವೈನ್ ನಲ್ಲಿ ರೆಸ್ವೆರಾಟ್ರೋಲ್ ಇರುತ್ತದೆ. ಇದು ದೇಹದಲ್ಲಿ ಸಕ್ಕರೆ ಮಟ್ಟವನ್ನ ನಿಯಂತ್ರಿಸುವ ಕೆಲಸ ಮಾಡುತ್ತದೆ. ಇದು ನಿಯಮಿತ ಆಹಾರ ಹಾಗೂ ವ್ಯಾಯಾಮದ ಜೊತೆ ಇದರ ಸೇವನೆ ಮಾಡಿದಾಗ ಇದು ಒಳ್ಳೆಯ ಪರಿಣಾಮ ನೀಡುತ್ತದೆ. ಟೈಪ್ 2 ಮಧುಮೇಹ ಹೊಂದಿರುವ ಮಹಿಳೆಯರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಕೆಲಸವನ್ನು ರೆಡ್ ವೈನ್ ಮಾಡುತ್ತದೆ.
ಕೆಟ್ಟ ಕೊಲೆಸ್ಟ್ರಾಲ್ (Bad Cholestral) ನಿಯಂತ್ರಣ : ರೆಡ್ ವೈನ್ ಹೃದಯಕ್ಕೆ ಒಳ್ಳೆಯದು. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕೆಂಪು ವೈನ್ ನಲ್ಲಿ ಪಾಲಿಫಿನಾಲ್ ಗಳಿದ್ದು, ಹೃದಯವನ್ನು ರಕ್ಷಿಸುವ ಕೆಲಸ ಮಾಡುತ್ತವೆ. ಹೃದಯದ ಒಳಪದರವನ್ನು ಇವು ರಕ್ಷಿಸುತ್ತವೆ. ಉತ್ತಮ ಕೊಲೆಸ್ಟ್ರಾಲ್ ಹೆಚ್ಚಳಕ್ಕೂ ಇದು ನೆರವಾಗುತ್ತದೆ.
Recipe Tips : ಪಲ್ಯ, ಅನ್ನ ಉಳಿದ್ರೆ ಎಸೆಯೋ ಬದಲು ಹೀಂಗ್ ಮಾಡ್ಕೊಂಡು ತಿನ್ನಿ
ಚರ್ಮದ ಹೊಳಪು (Glowing Skin) : ಅನೇಕರು ರೆಡ್ ವೈನ್ ಸೇವನೆ ಮಾಡೋಕೆ ಮುಖ್ಯ ಕಾರಣ ಚರ್ಮ. ಚರ್ಮಕ್ಕೆ ಹೊಳಪು ನೀಡುವ ಕಾರ್ಯ ಇದರಿಂದ ಆಗುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ದೇಹಕ್ಕೆ ಒಳ್ಳೆಯದು. ರೆಡ್ ವೈನ್ ತಯಾರಿಕೆಗೆ ಬಳಸುವ ದ್ರಾಕ್ಷಿಯಲ್ಲಿ ರೆಸ್ವೆರಾಟ್ರೊಲ್, ಕ್ಯಾಟೆಚಿನ್ ಮತ್ತು ಪ್ರೊ-ಆಂಥೋಸಯಾನಿನ್ ನಂತಹ ಆಂಟಿ ಆಕ್ಸಿಡೆಂಟ್‌ಗಳಿವೆ. ಇವು ಚರ್ಮ ಸುಕ್ಕಾಗದಂತೆ ತಡೆಯುತ್ತವೆ.
ಈಸ್ಟ್ರೊಜೆನ್ ಹಾರ್ಮೋನ್ (Estrogen Harmone) ಏರಿಕೆ : ಈಸ್ಟ್ರೊಜೆನ್, ಪ್ರೊಜೆಸ್ಟರಾನ್, ಪ್ರೊಲ್ಯಾಕ್ಟಿನ್ ಮತ್ತು ಥೈರಾಯ್ಡ್ ನಂತಹ ಹಾರ್ಮೋನುಗಳನ್ನು ನಿಯಂತ್ರಿಸಲು ವೈನ್ ಸಹಾಯ ಮಾಡುತ್ತದೆ. ಈಸ್ಟ್ರೊಜೆನ್ ಹಾರ್ಮೋನ್ ಹೆಚ್ಚಾದಾಗ ಮುಟ್ಟು ನಿಯಮಿತವಾಗಿ, ತೂಕ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ ರೆಡ್ ವೈನ್ ಪ್ರೊಜೆಸ್ಟರಾನ್ ಅನ್ನು ಕಡಿಮೆ ಮಾಡುತ್ತದೆ. ಪ್ರೋಲ್ಯಾಕ್ಟಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದ್ರಿಂದ ಮುಟ್ಟು ನಿಯಮಿತವಾಗುತ್ತದೆ. ಯೋನಿಯ ಶುಷ್ಕತೆ ಕಡಿಮೆಯಾಗುತ್ತದೆ. ಥೈರಾಯ್ಡ್ ಸಮಸ್ಯೆಗೆ ಪರಿಹಾರ ನೀಡುತ್ತದೆ.
ಈ ಎಲ್ಲ ಸಮಸ್ಯೆಗೆ ರೆಡ್ ವೈನ್ : ರೆಡ್ ವೈನ್ ಮೊಡವೆಯನ್ನು ಕಡಿಮೆ ಮಾಡುತ್ತದೆ. ಅದ್ರಲ್ಲಿರುವ ರೆಸ್ವೆರಾಟ್ರೊಲ್ ಮೊಡವೆ ವಿರೋಧಿಯಾಗಿ ವರ್ತಿಸುತ್ತದೆ. ಇದು ಒತ್ತಡ ಕಡಿಮೆ ಮಾಡಲು ನೆರವಾಗುತ್ತದೆ. ನಿದ್ರೆ ಸಮಸ್ಯೆಯಿರುವವರು ಇದನ್ನು ಸೇವನೆ ಮಾಡ್ಬಹುದು. ಉರಿಯೂತ ಗುಣಲಕ್ಷಣವನ್ನು ಹೊಂದಿರುವ ರೆಡ್ ವೈನ್ ಕೀಲು ನೋವನ್ನು ಕಡಿಮೆ ಮಾಡುತ್ತದೆ.
ರೆಡ್ ವೈನ್ ಸೇವನೆ ಮಾಡುವವರು ಏನು ಮಾಡ್ಬೇಕು? : ಈ ಎಲ್ಲ ಪ್ರಯೋಜನವಿರುದ ರೆಡ್ ವೈನ್ ಸೇವನೆ ಮುನ್ನ ಕೆಲ ಎಚ್ಚರಿಕೆ ವಿಷ್ಯವನ್ನು ತಿಳಿದಿರಬೇಕು. ರೆಡ್ ವೈನ್ ಯಾವುದೇ ಖಾಯಿಲೆಗೆ ಸಂಪೂರ್ಣ ಪರಿಹಾರವಲ್ಲ ಎಂಬುದನ್ನು ನೀವು ತಿಳಿದಿರಬೇಕು. ಇದು ರೋಗದ ಲಕ್ಷಣವನ್ನು ಸೌಮ್ಯ ಮಾಡುತ್ತದೆ. ಕೆಂಪು ವೈನ್ ಸೇವನೆ ಮಾಡಿದ ನಂತ್ರ ನೀವು ಸಾಕಷ್ಟು ನೀರು ಕುಡಿಯಬೇಕಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಇದರ ಸೇವನೆ ಮಾಡಬೇಡಿ.