ಸೋಶಿಯಲ್‌ ಮೀಡಿಯಾ 'ಕ್ರೋಮಿಂಗ್‌' ಟ್ರೆಂಡ್‌ಗೆ ಬಲಿಯಾದ 13 ವರ್ಷದ ಬಾಲಕಿ!

By Santosh Naik  |  First Published May 30, 2023, 2:07 PM IST

ಬ್ಲ್ಯೂವೇಲ್‌ ಚಾಲೆಂಜ್‌ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ.. ಸೋಶಿಯಲ್‌ ಮೀಡಿಯಾದ ಟ್ರೆಂಡ್‌ನಿಂದಾಗಿ ಸಾಕಷ್ಟು ಜನ ಪ್ರಾಣ ಕಳೆದುಕೊಂಡಿದ್ದರು. ಈಗ ಅದೇ ರೀತಿಯ ಇನ್ನೊಂದು ಸೋಶಿಯಲ್‌ ಮೀಡಿಯಾ ಟ್ರೆಂಡ್‌ ವೈರಲ್‌ ಆಗಿದ್ದು, ಆಸ್ಟ್ರೇಲಿಯಾದಲ್ಲಿ 13 ವರ್ಷದ ಬಾಲಕಿಯೊಬ್ಬಳು ಸಾವು ಕಂಡಿದ್ದಾಳೆ.


ನವದೆಹಲಿ (ಮೇ.30): ಬಹುಶಃ ಕಳೆದೊಂದು ದಶಕದಲ್ಲಿ ಯಾವುದಾದರೂ ಸೋಶಿಯಲ್‌ ಮೀಡಿಯಾ ಟ್ರೆಂಡ್‌ ಜನರ ಬದುಕಿನ ಮೇಲೆ ನೇರವಾದ ಪರಿಣಾಮ ಬೀರಿದ್ದರೆ, ಅದು ಬ್ಲ್ಯೂ ವೇಲ್‌ ಚಾಲೆಂಜ್‌. 2016ರಲ್ಲಿ ವಿಶ್ವದಲ್ಲಿ ಬಹಳ ಜನಪ್ರಿಯತೆಯೊಂದಿಗೆ ಅಷ್ಟೇ ಪ್ರಮಾಣದ ಕುಖ್ಯಾತಿಯನ್ನೂ ಪಡೆದುಕೊಂಡಿದ್ದ ಈ ಚಾಲೆಂಜ್‌ಗೆ ನೂರಾರು ಮಂದಿ ಸಾವು ಕಂಡಿದ್ದರು. ಭಾರತದಲ್ಲೂ ಇದರ ಪರಿಣಾಮ ಬೀರಿತ್ತಲ್ಲದೆ, ಸರ್ಕಾರ ಕೂಡ ಈ ಚಾಲೆಂಜ್‌ನಲ್ಲಿ ಭಾಗವಹಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿತ್ತು.  ಈ ಚಾಲೆಂಜ್‌ನಲ್ಲಿ ಭಾಗವಹಿಸಿ ಹಲವರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದರು. ಈಗ ಮತ್ತೊಂದು ರೀತಿಯ ಸೋಶಿಯಲ್‌ ಮೀಡಿಯಾ ಚಾಲೆಂಜ್‌ ವೈರಲ್‌ ಆಗುತ್ತಿದೆ. ಇದು ಮೂಲವಾಗಿ ಟಿಕ್‌ಟಾಕ್‌ನಲ್ಲಿ ವೈರಲ್‌ ಆಗಿದ್ದು, ಅದರೊಂದಿಗೆ ಬೇರೆ ಬೇರೆ ಸೋಶಿಯಲ್‌ ಮೀಡಿಯಾ ವೇದಿಕೆಗೂ ಹಬ್ಬಿಕೊಳ್ಳುತ್ತಿದೆ. ಆಸ್ಟ್ರೇಲಿಯಾದಲ್ಲಿ 13 ವರ್ಷದ ಬಾಲಕಿ ಎಸ್ರಾ ಹೇಯ್ನೆಸ್‌, ಈ ಸೋಶಿಯಲ್‌ ಮೀಡಿಯಾ ಟ್ರೆಂಡ್‌ಗೆ ಬಲಿಯಾಗಿದ್ದಾಳೆ. ಜನರ ಪ್ರಾಣಕ್ಕೆ ಕಂಟಕವಾಗಿರುವ ಈ ಸೋಶಿಯಲ್‌ ಮೀಡಿಯಾ ಟ್ರೆಂಡ್‌ಅನ್ನು 'ಕ್ರೋಮಿಂಗ್‌' ಎನ್ನುವ ಹೆಸರಿನಿಂದ ಕರೆಯಲಾಗುತ್ತಿದೆ. ಡಿಯೋಡ್ರೆಂಟ್‌ ಕ್ಯಾನ್‌ಅನ್ನು ಈ ಚಾಲೆಂಜ್‌ನಲ್ಲಿ ಭಾಗವಹಿಸಲು ಬಳಸಿದ್ದ ಬಾಲಕಿ, ಹೃದಯಸ್ತಂಭನದಿಂದ ಸಾವು ಕಂಡಿದ್ದಾಳೆ. ಆಕೆಯ ಮೆದುಳು ಕೂಡ ಸಂಪೂರ್ಣವಾಗಿ ಹಾನಿಯಾಗಿದ್ದು, ಚಿಕಿತ್ಸೆಗೆ ಸ್ವಲ್ಪವೂ ಸಹಕರಿಸದ ರೀತಿಯಲ್ಲಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಏನಿದು ಕ್ರೋಮಿಂಗ್‌ ಟ್ರೆಂಡ್‌: ಈ ಚಾಲೆಂಜ್‌ನ ಪ್ರಮುಖ ಅಂಶ ಏನೆಂದರೆ, ವಿಷಕಾರಿ ಆಗಿರುವ ವಸ್ತುಗಳನ್ನು ಉಸಿರಾಡಬೇಕು. ಇದು ಮತ್ತು ಏರಿಸುವಂಥ ಉತ್ಪನ್ನಗಳಾಗಿರಬೇಕು. ಮೆಟಾಲಿಕ್‌ ಪೇಂಟ್‌, ಪೆಟ್ರೋಕೆಮಿಕಲ್ಸ್‌, ಸ್ಲೋವಲೆಂಟ್ಸ್‌, ಡಿಯೋಡ್ರೆಂಟ್‌ ಹಾಗೂ ಕೆಮಿಕಲ್ಸ್‌ಗಳನ್ನು ಉಸಿರಾಡಬೇಕು. ಉದ್ದೇಶಪೂರ್ವಕವಾಗಿ ಇವುಗಳನ್ನು ಉಸಿರಾಡಿದರೆ, ಅಥವಾ ಮಿತಿಮೀರಿಯಾಗಿ ಇವುಗಳ ಉಸಿರಾಟ ಮಾಡಿದರೆ ದೇಹದ ಮೇಲೆ ಪರಿಣಾಮ ಬೀರುತ್ತದೆ. ಮೂಲವಾಗಿ ಇದು ಆಸ್ಟ್ರೇಲಿಯಾದಲ್ಲಿ ಈ ಟ್ರೆಂಡ್‌ ಆರಂಭವಾಗಿದ್ದು, ಈಗ ಜಗತ್ತಿನಲ್ಲಿ ವ್ಯಾಪಕವಾಗಿದೆ. ಕ್ರೋಮಿಂಗ್‌ನಿಂದಾಗಿ, ಶ್ವಾಸಕೋಶ, ಹೃದಯ ಹಾಗೂ ಮೆದುಳಿಗೆ ಆಮ್ಲಜನಮಕದ ಕೊರತೆ ವಿಪರೀತವಾಗಿ ಕುಂಠಿತವಾಗುತ್ತದೆ. ಸರಿಯಾದ ಮಾರ್ಗೋಪಾಯಗಳು ಇಲ್ಲದೇ ಹೋದಲ್ಲಿ ಇವುಗಳಿಗೆ ಹಾನಿಯಾಗಲಿದ್ದು, ಪ್ರಾಣಕ್ಕೆ ಕಂಟಕವಾಗಲಿದೆ. 

ಇನ್ನು ಎಸ್ರಾ ಹೇಯ್ನಸ್‌ ಡಿಯೋಡ್ರೆಂಟ್‌ ಚಾಲೆಂಜ್‌ಅನ್ನು ಕ್ರೋಮಿಂಕ್‌ನಲ್ಲಿ ಮಾಡಿದ್ದರು. ರಾತ್ರಿ ಮಲಗುವ ವೇಳೆ ಎಸ್ರಾ ಡಿಯೋಡ್ರೆಂಟ್‌ ಚಾಲೆಂಜ್‌ ಮಾಡಿ ಮಲಗಿದ್ದಳು. ಡಿಯೋಡ್ರೆಂಟ್‌ಅನ್ನು ಉಸಿರಾಡಿದ್ದರಿಂದ ರಾತ್ರಿ ನಿದ್ರೆಯಲ್ಲಿಯೇ ಆಕೆಗೆ ಹೃದಯಸ್ತಂಭನವಾಗಿದೆ. 8 ದಿನಗಳ ಕಾಲ ಆಕೆಯನ್ನು ವೆಂಟಿಲೇಟರ್‌ನಲ್ಲಿ ಇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾಳೆ. ಆಕೆಯ ಮೆದುಳಿಗೆ ಎಷ್ಟು ಪ್ರಮಾಣದ ಹಾನಿಯಾಗಿತ್ತೆಂದರೆ, ಚಿಕಿತ್ಸೆ ಮಾಡೋದು ಸಾಧ್ಯವೇ ಇರಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಕೊನೆಗೆ ವೆಂಟಿಲೇಟರ್‌ಅನ್ನು ಆಫ್‌ ಮಾಡಿದ ಬೆನ್ನಲ್ಲಿಯೇ ಆಕೆ ಸಾವು ಕಂಡಿದ್ದಾಳೆ.

Virtual Autism: ಮಗು ಅಳ್ತಾ ಇದೆ ಅಂತ ಮೊಬೈಲ್ ಕೊಟ್ರೆ ಮುಗೀತು ಕಥೆ, ಆಟಿಸಂ ಕಾಡಬಹುದು!

ಈಕೆಯ ಸಾವು ಆಸ್ಟ್ರೇಲಿಯಾದಲ್ಲಿ ಆಘಾತಕ್ಕೆ ಕಾರಣವಾಗಿದೆ. ಕ್ರೋಮಿಂಗ್‌ ಚಾಲೆಂಜ್‌ ಪ್ರಾಣವನ್ನೂ ತೆಗೆಯಬಹುದು ಎನ್ನುವ ಅರಿವು ಮೂಡಿಸಲಾಗುತ್ತಿದೆ. ಇದು ಸಾಮಾನ್ಯವಾಗಿ ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಒಬ್ಬರು ಹೃದಯಾಘಾತಕ್ಕೆ ಒಳಗಾಗುತ್ತಾರೆ. ಕ್ರೋಮಿಂಗ್ ಬಗ್ಗೆ ಜಾಗೃತಿ ಹೆಚ್ಚುತ್ತಿದೆ.

 

Tap to resize

Latest Videos

WHATSAPP UPDATE: ಮೆಸೇಜಿಂಗ್‌ ಅಪ್ಲಿಕೇಶ್‌ನಲ್ಲಿ ಬಿಗ್‌ ಚೇಂಜ್‌, ನಿಮ್ಮ ಮೊಬೈಲ್‌ಗೆ ಬಂತಾ ಈ 2 ಹೊಸ ಫೀಚರ್‌?

'ನನ್ನ ಮಗಳ ಸಾವಿನೊಂದಿಗೆ ನಾನು ಉಳಿದ ಎಲ್ಲಾ ಮಕ್ಕಳಿಗೂ ಒಂದು ಮಾತನ್ನು ಹೇಳಲು ಬಯಸುತ್ತೇನೆ. ಇಂಥ ಸಿಲ್ಲಿಯಾಗಿರುವ ಟ್ರ್ಯಾಪ್‌ಗಳಿಗೆ ಬಲಿಯಾಗಬೇಡಿ. ಇಷ್ಟುದಿನ ಮನೆಯಲ್ಲಿ ಆಟವಾಡಿಕೊಂಡು ಇರುತ್ತಿದ್ದ ನನ್ನ ಮಗಳು ಈಗ ಇಲ್ಲ ಎಂದುಕೊಳ್ಳೋದು ಹೇಗೆ' ಎಂದು ಬಾಲಕಿಯ ತಂದೆ ಪೌಲ್‌ ಹೇಯ್ನಸ್‌ ಹೇಳಿದ್ದಾರೆ.

click me!