
ಕ್ಯಾನ್ಸರ್ ಬಂದ್ರೆ ಕಥೆ ಮುಗಿತು ಎನ್ನುವ ಕಾಲ ಈಗಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಿದ್ರೆ ಕೆಲ ಕ್ಯಾನ್ಸರ್ ನಿಂದ ಮುಕ್ತಿ ಪಡೆಯಬಹುದು. ಕ್ಯಾನ್ಸರ್ ಗುಣಪಡಿಸಲು ಅನೇಕ ರೀತಿಯ ಚಿಕಿತ್ಸೆಗೆ ರೋಗಿಯನ್ನು ಒಳಪಡಿಸಲಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆಗೆ ರೇಡಿಯೇಶನ್ ಥೆರಪಿ ಕೂಡ ಮಾಡಲಾಗುತ್ತದೆ.
ರೇಡಿಯೇಶನ್ (Radiation) ಥೆರಪಿ ಬಗ್ಗೆ ಕೆಲವರು ಕೇಳಿರ್ತಾರೆ, ಮತ್ತೆ ಕೆಲವರು ಓದಿರ್ತಾರೆ. ಇನ್ನು ಕೆಲವರು ರೇಡಿಯೇಶನ್ ಥೆರಪಿಗೆ ಒಳಗಾಗಿರಬಹುದು. ರೇಡಿಯೇಶನ್ ಥೆರಪಿ ಮೂಲಕ ಕ್ಯಾನ್ಸರ್ (Cancer ) ಕೋಶಗಳನ್ನು ನಾಶಮಾಡಲು ಪ್ರಯತ್ನಿಸಲಾಗುತ್ತದೆ. ಕ್ಯಾನ್ಸರ್ ದೇಹದ ಇತರ ಭಾಗಗಳಿಗೆ ಹರಡುವುದನ್ನು ಇದು ತಡೆಯುತ್ತದೆ. ನಾವಿಂದು ರೇಡಿಯೇಶನ್ ಥೆರಪಿ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
Hair Fall: ಇಂಥ ಬೆರಳು ಹೊಂದಿರೋರಿಗೆ ತಲೆ ಬೋಳಾಗುವ ಅಪಾಯ ಹೆಚ್ಚು
ರೇಡಿಯೇಶನ್ ಥೆರಪಿ (Therapy) ಗೆ ರೇಡಿಯೊಥೆರಪಿ ಎಂದೂ ಕರೆಯುತ್ತಾರೆ. ಇದನ್ನು ಕ್ಯಾನ್ಸರ್ ಚಿಕಿತ್ಸೆಯ ಬಹಳ ಮುಖ್ಯ ಭಾಗವೆಂದು ಪರಿಗಣಿಸಲಾಗುತ್ತದೆ. ಕ್ಯಾನ್ಸರ್ ಚಿಕಿತ್ಸೆ ದೀರ್ಘಕಾಲ ನಡೆಯುವಂತಹ ಚಿಕಿತ್ಸೆ. ಇದರ ವಿರುದ್ಧ ಹೋರಾಡುವ ವ್ಯಕ್ತಿ ಮಾನಸಿಕವಾಗಿ ಬಲ ಹೊಂದಿರುವುದು ಬಹಳ ಮುಖ್ಯ.
ರೇಡಿಯೇಶನ್ ಥೆರಪಿ ಏಕೆ ಬೆಸ್ಟ್? : ಇದು ಕ್ಯಾನ್ಸರ್ ಕೋಶವನ್ನು ಸಂಪೂರ್ಣ ನಾಶಗೊಳಿಸುವ ಕೆಲಸ ಮಾಡುತ್ತದೆ. ಅನೇಕ ಸಂದರ್ಭಗಳಲ್ಲಿ ಕೀಮೋಥೆರಪಿಯ ನಂತರ ರೇಡಿಯೇಶನ್ ಥೆರಪಿ ನೀಡಲಾಗುತ್ತದೆ. ಕ್ಯಾನ್ಸರ್ ಮತ್ತೆ ದೇಹಕ್ಕೆ ವಾಪಸ್ ಆಗದಂತೆ ತಡೆಯಲು ಈ ಚಿಕಿತ್ಸೆ ಬೆಸ್ಟ್.
Health Tips : ಬ್ರೇಕ್ ಅಪ್ ಆದಾಗ ಕಾಡೋ ಹೃದಯ ಬೇನೆಗೆ ಈ ಹಾರ್ಮೋನ್ ಕಾರಣ
ರೋಗಿಗೆ ಜೀವದಾನ ನೀಡುತ್ತೆ ಈ ಚಿಕಿತ್ಸೆ : ಸರಿಯಾದ ಸಮಯಕ್ಕೆ ಕ್ಯಾನ್ಸರ್ ಇರುವುದು ಪತ್ತೆಯಾದರೆ, ರೆಡಿಯೇಶನ್ ಥೆರಪಿ ಮೂಲಕ ಇದನ್ನು ಗುಣಪಡಿಸಬಹುದು. ಇದು ರೋಗಿಗೆ ಮರುಜೀವ ನೀಡುತ್ತದೆ. ಈ ಥೆರಪಿಯಲ್ಲಿ ಕ್ಯಾನ್ಸರ್ ಕೋಶಗಳು ಅಥವಾ ಗೆಡ್ಡೆಗಳು ಹರಡುವುದಿಲ್ಲ. ಕ್ಯಾನ್ಸರ್ ಕೋಶಗಳು ನಿಧಾನವಾಗಿ ಸಾಯುತ್ತವೆ. ಇದರಿಂದ ಅದು ದೇಹದ ಇತರ ಭಾಗಗಳಿಗೆ ವೇಗವಾಗಿ ಹರಡುವುದಿಲ್ಲ. ಕ್ಯಾನ್ಸರ್, ಗೆಡ್ಡೆಯ ರೂಪವನ್ನು ಪಡೆದಿದ್ದರೆ, ಅದಕ್ಕೆ ರೆಡಿಯೇಶನ್ ಥೆರಪಿ ಒಳ್ಳೆಯದು. ಕ್ಯಾನ್ಸರ್ ಇತರ ಚಿಕಿತ್ಸೆಯಲ್ಲಿ ಕ್ಯಾನ್ಸರ್ ಕೋಶಗಳು ಸಾಯುವ ಜೊತೆಗೆ ಇತರ ಜೀವಕೋಶಗಳು ಸಹ ಸಾಯುತ್ತವೆ. ಆದರೆ ರೇಡಿಯೊಥೆರಪಿಯಲ್ಲಿ, ಕ್ಯಾನ್ಸರ್ ಕೋಶಗಳು ಮತ್ತು ಎನ್ ಎನ್ ಎ ಮಾತ್ರ ಸಾಯುತ್ತವೆ. ಹಾಗಾಗಿ ಕ್ಯಾನ್ಸರ್ ಕೋಶ ಹರಡಲು ಇಲ್ಲಿ ಅವಕಾಶವಿಲ್ಲ. ರೇಡಿಯೊಥೆರಪಿ ಮಾಡಿದ ತಕ್ಷಣ ಕ್ಯಾನ್ಸರ್ ಕೋಶಗಳು ಸಾಯುವುದಿಲ್ಲ. ಚಿಕಿತ್ಸೆ ಪಡೆದ ವಾರ, ತಿಂಗಳಾದ್ರೂ ಕ್ಯಾನ್ಸರ್ ಕೋಶಗಳು ಸಾಯ್ತಿರುತ್ತದೆ.
ರೇಡಿಯೋ ಥೆರಪಿ ಚಿಕಿತ್ಸೆಯ ಅಡ್ಡಪರಿಣಾಮಗಳು : ಕ್ಯಾನ್ಸರ್ ನ ಎಲ್ಲ ವಿಧದ ಚಿಕಿತ್ಸೆಯಲ್ಲೂ ಅಡ್ಡ ಪರಿಣಾಮ ಇದ್ದೇ ಇದೆ. ರೆಡಿಯೋ ಥೆರಪಿ ಚಿಕಿತ್ಸೆಯನ್ನು ಕ್ಯಾನ್ಸರ್ ಚಿಕಿತ್ಸೆಗೆ ಉತ್ತಮ ಮಾರ್ಗವೆಂದು ಪರಿಗಣಿಸಲಾಗಿದೆಯಾದ್ರೂ ರೇಡಿಯೋ ಥೆರಪಿ ಚಿಕಿತ್ಸೆಯಲ್ಲೂ ಕೆಲವು ಅಡ್ಡ ಪರಿಣಾಮಗಳನ್ನು ಕಾಣಬಹುದು. ಕ್ಯಾನ್ಸರ್ ರೋಗಿ ಈ ರೇಡಿಯೋ ಥೆರಪಿ ಚಿಕಿತ್ಸೆ ಪಡೆದ ನಂತರ ರೋಗಿಯ ದೇಹದ ಮೇಲೆ ಅಡ್ಡ ಪರಿಣಾಮಗಳು ಗೋಚರಿಸುತ್ತದೆ. ರೋಗಿಗೆ ಹಸಿವು ಕಡಿಮೆಯಾಗುತ್ತದೆ. ಆತ ಬಹುಬೇಗ ಸುಸ್ತಿಗೊಳಗಾಗ್ತಾನೆ. ಚರ್ಮದ ಬಣ್ಣ ಬದಲಾಗುತ್ತದೆ. ಚರ್ಮ ಕೆಂಪಾಗುವುದಲ್ಲದೆ ತುರಿಕೆ ಕಾಣಿಸಿಕೊಳ್ಳುತ್ತದೆ. ರೇಡಿಯೋ ಥೆರಪಿ ಚಿಕಿತ್ಸೆ ಪಡೆದ ವ್ಯಕ್ತಿಯ ಬಾಯಲ್ಲಿ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುವುದಿದೆ.
ರೆಡಿಯೋ ಥೆರಪಿ ಚಿಕಿತ್ಸೆಗೆ ತಗಲುವ ವೆಚ್ಚ : ರೇಡಿಯೋ ಥೆರಪಿ ಚಿಕಿತ್ಸೆಯು, ಕ್ಯಾನ್ಸರ್ ಯಾವ ಹಂತದಲ್ಲಿದೆ ಎಂಬುದನ್ನು ಅವಲಂಭಿಸಿರುತ್ತದೆ. ಹಾಗೆ ಬೇರೆ ಬೇರೆ ಕ್ಯಾನ್ಸರ್ ಗೆ ಅದ್ರ ವೆಚ್ಚ ಬೇರೆ. ಸುಮಾರು 1.5 ಲಕ್ಷದಿಂದ 3 ಲಕ್ಷದವರೆಗೆ ಚಿಕಿತ್ಸೆ ವೆಚ್ಚ ತಗಲುತ್ತದೆ. ರೋಗಿಯ ದೇಹದಲ್ಲಿ ಕ್ಯಾನ್ಸರ್ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದ ನಂತ್ರ ಈ ಚಿಕಿತ್ಸೆ ನೀಡಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.