ಯಾರ ಬಾಯಲ್ಲಿ ಕೇಳಿದ್ರೂ ಮೂಡ್ ಔಟ್ ಎಂಬ ಮಾತು ಕೇಳಿ ಬರುತ್ತೆ. ಇಡೀ ದಿನ ದುಡಿದು ತಲೆ ಕೆಟ್ಟು ಹೋಗಿದೆ ಅನ್ನೋರೇ ಹೆಚ್ಚು. ಮನಸ್ಸು ಯಾವಾಗ್ಲೂ ಕೂಲ್ ಆಗಿರಬೇಕೆಂದ್ರೆ ನಾವು ಕೂಲ್ ಟಿಪ್ಸ್ ಫಾಲೋ ಮಾಡ್ಬೇಕು.
ಬೆಳಗ್ಗೆಯಿಂದ ಸಂಜೆಯ ತನಕ ಅನವರತ ದುಡಿಮೆ, ಕೆಲಸದ ಒತ್ತಡ, ಸಂಸಾರದ ಜವಾಬ್ದಾರಿಗಳನ್ನು ಹೆಗಲ ಮೇಲೆ ಹೊತ್ತುಕೊಂಡವರಿಗೆ ಮಾನಸಿಕ ಶಾಂತಿ ಬಹಳ ಮುಖ್ಯವಾಗಿರುತ್ತದೆ. ಇಂದಿನ ದಿನಗಳಲ್ಲಿ ಒತ್ತಡದ ಜೀವನಶೈಲಿ ಕಾಮನ್ ಆಗಿದೆ. ಜನರಲ್ಲಿ ತಾಳ್ಮೆ, ಬುದ್ಧಿಶಕ್ತಿ ಇದ್ದಾಗ ಮಾತ್ರ ಎಂತಹ ವರ್ಕ್ ಪ್ರೆಶರ್ ಅನ್ನು ಕೂಡ ನಿಭಾಯಿಸಲು ಸಾಧ್ಯ. ಆಗ ಮೆದುಳು ಕೂಡ ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ನಮ್ಮ ಸುತ್ತ ಅಂತಹ ವಾತಾವರಣ ನಿರ್ಮಾಣವಾಗಬೇಕೆಂದರೆ ನಾವೇ ಕೆಲವು ಟಿಪ್ಸ್ ಗಳನ್ನು ಅಳವಡಿಸಿಕೊಳ್ಳಬೇಕು.
ಧ್ಯಾನ (Meditation) ದ ಮೂಲಕ ಮನಸ್ಸನ್ನು ಶಾಂತಗೊಳಿಸಿ : ಕೆಲಸದಲ್ಲಿ ಬಹಳ ಪ್ರಾಮಾಣಿಕತೆ ತೋರಿಸುವವರಿಗೆ ಅದೇ ಒಂದು ದೊಡ್ಡ ಪ್ರಪಂಚವಾಗಿಬಿಡುತ್ತದೆ. ಆ ಜಗತ್ತಿನಿಂದ ಹೊರಗೆ ಬಂದ ಮೇಲೂ ಅವರು ತಮ್ಮ ಕೆಲಸದ ಬಗ್ಗೆಯೇ ವಿಚಾರಮಾಡುತ್ತಾರೆ. ಇದರಿಂದ ಅವರ ಮಾನಸಿಕ ನೆಮ್ಮದಿ ದೂರವಾಗುತ್ತದೆ. ಇಂತಹ ಸಮಸ್ಯೆಗಳಿಂದ ಹೊರಬರಲು ಮೆಡಿಟೇಶನ್ (Meditation) ಒಂದು ಉತ್ತಮ ಮಾರ್ಗವಾಗಿದೆ. ಇದು ಮನಸ್ಸನ್ನು ಶಾಂತವಾಗಿಡುವಲ್ಲಿ ಹೆಚ್ಚು ಸಹಕಾರಿಯಾಗಿದೆ. ಸಂಜೆಯ ಸಮಯದಲ್ಲಿ ಅಥವಾ ಮುಂಜಾನೆ ನಿಮ್ಮ ಬ್ಯುಸಿ ಶೆಡ್ಯುಲ್ ನಲ್ಲಿ ಸ್ವಲ್ಪ ಬಿಡುವು ಮಾಡಿಕೊಳ್ಳಿ. ಆ ಸಮಯದಲ್ಲಿ ಒಂದು ಏಕಾಂತ ಅಥವಾ ಪ್ರಶಾಂತ ಸ್ಥಳದಲ್ಲಿ ಕೂತು ನಿಮ್ಮ ಕಣ್ಣುಗಳನ್ನು ಮುಚ್ಚಿ ನಿಮ್ಮ ಉಸಿರಿನ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಇದರಿಂದ ಉಂಟಾಗುವ ಸಕಾರಾತ್ಮಕ ಪರಿಣಾಮ ಕೇವಲ ಒಂದೇ ವಾರದಲ್ಲಿ ನಿಮಗೆ ತಿಳಿಯುತ್ತದೆ.
undefined
Health Tips: ಜಿಮ್‌ಗೆ ಹೋಗೋರಿಗೆ ಬೆಸ್ಟ್ ಆಹಾರ ಸೋಯಾ ಚಂಕ್ಸ್
ವ್ಯಾಯಾಮ (Exercise) ಮಾಡಿ : ಶಾರೀರಿಕ ವ್ಯಾಯಾಮವನ್ನು ನೀವು ನಿತ್ಯ ಮಾಡುವುದ್ರಿಂದ ಒತ್ತಡದಿಂದ ದೂರವಿರಬಹುದು. ವ್ಯಾಯಾಮ ನಿಮ್ಮ ಮೂಡ್ ಚೆನ್ನಾಗಿರಲು ನೆರವಾಗುತ್ತದೆ. ರನ್ನಿಂಗ್, ವಾಕಿಂಗ್, ಯೋಗ, ವ್ಯಾಯಾಮ ಮುಂತಾದವು ನಿಮ್ಮ ಮನಸ್ಸನ್ನು ರಿಲಾಕ್ಸ್ ಮಾಡುತ್ತವೆ ಮತ್ತು ನಿಮ್ಮನ್ನು ಒತ್ತಡದಿಂದ ದೂರ ಮಾಡುತ್ತವೆ. ಹಲವು ಬಾರಿ ವ್ಯಾಯಾಮದಿಂದಲೇ ಸಣ್ಣ ಪುಟ್ಟ ಶರೀರದ ತೊಂದರೆಗಳು ದೂರವಾಗುತ್ತವೆ. ಹೊರಗಿನ ಪ್ರಪಂಚಕ್ಕೆ ಹೋಗಿ ನಾಲ್ಕು ಮಂದಿಯ ಜೊತೆ ಒಡನಾಡಿ ಅವರ ಜೊತೆ ಸೇರಿ ವಾಕಿಂಗ್, ರನ್ನಿಂಗ್ ಮಾಡುವುದರಿಂದಲೂ ಮನಸ್ಸು ಪ್ರಶಾಂತವಾಗಿರುತ್ತೆ.
ಓದುವ ಹವ್ಯಾಸ ಬೆಳೆಸಿಕೊಳ್ಳಿ : ಒಂದು ಪುಸ್ತಕ ನಮ್ಮನ್ನು ಬೇರೆಯದೇ ಒಂದು ಲೋಕಕ್ಕೆ ಕರೆದುಕೊಂಡುಹೋಗುತ್ತೆ. ಇದರಿಂದ ಸಾಮಾಜಿಕ ಜ್ಞಾನ ಹೆಚ್ಚುವುದರ ಜೊತೆಗೆ ಒತ್ತಡಗಳು ಕೂಡ ದೂರವಾಗುತ್ತೆ. ಪ್ರತಿನಿತ್ಯ ಸ್ವಲ್ಪ ಸಮಯ ಓದುವುದರಿಂದ ಟೆನ್ಶನ್ ಮತ್ತು ಸ್ಟ್ರೆಸ್ ನಿಂದ ದೂರವಿರಬಹುದು. ಇದು ಬಹಳ ಬೇಗ ಉತ್ತಮ ಪ್ರತಿಕ್ರಿಯೆಯನ್ನು ನೀಡುತ್ತೆ. ಓದುವುದು ಮನಸ್ಸನ್ನು ರಿಲಾಕ್ಸ್ ಆಗಿರಿಸುವ ಅತೀ ಸರಳ ವಿಧಾನವಾಗಿದೆ.
Healthy Food: ಮಕ್ಕಳಿಗೆ ಹಾಲಿನ ಜೊತೆ ಇವನ್ನ ನೀಡಿದ್ರೆ ಆಹಾರ ವಿಷವಾದೀತು ಜೋಕೆ
ನಿಮ್ಮವರು ಹಾಗೂ ಕುಟುಂಬದೊಂದಿಗೆ ಸಮಯ ಕಳೆಯಿರಿ : ಮನೆಯ ವಾತಾವರಣ, ಮಕ್ಕಳು, ತಂದೆ, ತಾಯಿಯರೊಡನೆ ಕುಳಿತು ಮಾತನಾಡುವುದ್ರಿಂದ, ಹರಟೆ ಹೊಡೆಯುವುದರಿಂದ ಮನಸ್ಸು ಬಹಳ ಸಂತೋಷದಲ್ಲಿರುತ್ತೆ. ಏನು ಮಾಡಲೂ ಮನಸ್ಸಿಲ್ಲ ಎಂದಾಗ ನಿಮ್ಮ ಆಪ್ತರ ಬಳಿ ನಾಲ್ಕು ಮಾತಾಡಿದರೂ ಸಾಕು ಮನಸ್ಸಿಗೆ ಎಷ್ಟೋ ನೆಮ್ಮದಿ ಸಿಗುತ್ತೆ. ಇದ್ರಿಂದ ನಿಮ್ಮ ಮೈಂಡ್ ಕೂಡ ರಿಲಾಕ್ಸ್ ಆಗುತ್ತೆ. ನೀವು ನಿಮ್ಮ ಇಷ್ಟದವರ ಜೊತೆ ಊಟ ಮಾಡಬಹುದು ಅಥವಾ ಚ್ಯಾಟ್ ಕೂಡ ಮಾಡಬಹುದು.
ಸಂಗೀತ ಕೇಳಿ (Listen Music) ರಿಲಾಕ್ಸ್ ಆಗಿ : ಓದಿನಂತೆಯೇ ಸಂಗೀತ ಕೂಡ ನಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುತ್ತದೆ. ಮನಸ್ಸು ಕೆಟ್ಟಾಗ, ವಿಚಲಿತವಾದಾಗ ಒಂದು ಒಳ್ಳೆಯ ಹಾಡು ಕೇಳುವುದರಿಂದ ನಿಮ್ಮ ಮೂಡ್ ಸರಿಯಾಗುತ್ತದೆ. ದಿನದ ಸ್ವಲ್ಪ ಸಮಯದಲ್ಲಿ ಸಂಗೀತವನ್ನು ಆಲಿಸುವುದರಿಂದ ಟೆನ್ಶನ್ ಕಡಿಮೆಯಾಗಿ ಮೆದುಳಿಗೂ ಕೂಡ ಆರಾಮ ಸಿಗುತ್ತೆ. ವ್ಯಕ್ತಿಯ ಮೂಡ್ ಅನ್ನು ಬದಲಾಯಿಸುವಲ್ಲಿ ಸಂಗೀತ ಪವರ್ ಫುಲ್ ಕೆಲಸ ಮಾಡುತ್ತೆ ಎಂದು ಅನೇಕ ಅಧ್ಯಯನಗಳು ಹೇಳಿವೆ.