
ಕರುಳಿನ ಸಮಸ್ಯೆಗಳು (Gut health) ಸಾಮಾನ್ಯವಾಗಿದ್ದರೂ, ಅವು ನಮ್ಮ ದೈನಂದಿನ ಜೀವನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ಊಟದ ನಂತರ ಉಬ್ಬುವುದು, ಜೀರ್ಣಕ್ರಿಯೆ ನಿಧಾನವಾದ ನಂತರ ಅಥವಾ ಹೇಳಿಕೊಳ್ಳಲು ಸಾಧ್ಯವಾಗದ ಅಸ್ವಸ್ಥತೆ, ಏನೋ ಒಂಥರಾ ಕಿರಿಕಿರಿ.. ಇವೆಲ್ಲವೂ ಕರುಳಿನ ಸಮಸ್ಯೆಗೆ ಕಾರಣವಾಗಿದೆ. ಇದೇ ಕಾರಣಕ್ಕೆ ಗಟ್ಸ್ ಹೆಲ್ತ್ ಬಹು ಮುಖ್ಯವಾಗಿದೆ. ಏಕೆಂದರೆ ನಮ್ಮ ಎಲ್ಲಾ ಸಮಸ್ಯೆಗಳಿಗೂ ಕಾರಣ ಹೊಟ್ಟೆಯೇ. ಆದ್ದರಿಂದ ಜೀರ್ಣಾಂಗ ವ್ಯವಸ್ಥೆಯಲ್ಲಿ ಸ್ವಲ್ಪ ಏರುಪೇರಾದ್ರೂ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದೀಗ ಬಾಲಿವುಡ್ನ ಖ್ಯಾತ ನಟ ಮಾಧವನ್ ಅವರ ಡಯಾಟೀಷಿಯನ್ ಲ್ಯೂಕ್ ಕೌಟಿನ್ಹೋ ಅವರೊಂದು ಸುಲಭದ ಟಿಪ್ಸ್ ಕೊಟ್ಟಿದ್ದಾರೆ. ಇದು ತಂಗಳನ್ನದ ಟಿಪ್ಸ್. ಈ ರೀತಿ ತಂಗಳನ್ನ ತಿಂದರೆ ಎಲ್ಲಾ ಸಮಸ್ಯೆಗೂ ಪರಿಹಾರ ಎಂದಿದ್ದಾರೆ ಅವರು.
ಲ್ಯೂಕ್ ಕೌಟಿನ್ಹೋ ಇತ್ತೀಚೆಗೆ X ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅಕ್ಕಿ ಕಾಂಜಿ ಎಂದು ಇದನ್ನು ಅವರು ಕರೆದಿದ್ದಾರೆ. ಕಾಂಜಿ ಎಂದು ಕರೆಯಲ್ಪಡುವ ಪಿಷ್ಟ ಪಾನೀಯದ ಪ್ರಯೋಜನಗಳ ಪಟ್ಟಿ ಮಾಡಿದ್ದಾರೆ ಅವರು. ಇದನ್ನು ಸಾಂಪ್ರದಾಯಿಕವಾಗಿ ಪಝಾಯ ಕಾಂಜಿ ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ಇವೆಲ್ಲಾ ಯಾರಿಗೆ ಅರ್ಥ ಆಗತ್ತೆ ಹೇಳಿ. ದಕ್ಷಿಣ ಭಾರತದಲ್ಲಿ ಫೇಮಸ್ ಆಗಿರೋ, ಬಡವರ ಮನೆಯ ಆಹಾರ ಎಂದೇ ಹೇಳಲಾಗ್ತಿರೋ, ಎಷ್ಟೋ ಮಂದಿ ಬಾಲ್ಯದಲ್ಲಿ ಇದನ್ನೇ ತಿಂದು ಬೆಳೆದಿರೋ ತಂಗಳನ್ನ ಇದಾಗಿದೆ ಅಷ್ಟೇ.
ಇದಕ್ಕೆ ಅವರು ಟಿಪ್ಸ್ ಕೊಟ್ಟಿದ್ದಾರೆ. ಅದೇನೆಂದರೆ, ರಾತ್ರಿಯೇ ಅನ್ನ ಮಾಡಿ ಅದನ್ನು ನೀರಿನಲ್ಲಿ ನೆನೆಸಿ ಇಡಬೇಕು. ಇದಕ್ಕೆ ಮಣ್ಣಿನ ಪಾತ್ರೆ ಬೆಸ್ಟ್. ಬೆಳಗಾಗುವುದರ ಒಳಗೆ ಅದು ಉತ್ತಮ ಹುದುಗುವಿಕೆಗಾಗಿ ತಯಾರಾಗುತ್ತದೆ. ಈ ಅನ್ನವು ನೈಸರ್ಗಿಕವಾಗಿ ಪ್ರಯೋಜನಕಾರಿ ಬ್ಯಾಕ್ಟೀರಿಯಾಗಳಿಂದ ಸಮೃದ್ಧವಾಗುತ್ತದೆ. ಬೆಳಿಗ್ಗೆ ಇದಕ್ಕೆ ಮಜ್ಜಿಗೆ ಅಥವಾ ಮೊಸರು ಹಾಕಿ ಕಲಸಬೇಕು. ಹಾಗೆಯೇ ತಿನ್ನಲು ರುಚಿ ಎನ್ನಿಸದೇ ಹೋದರೆ, ಕರಿಬೇವು ಮತ್ತು ಸಾಸಿವೆ ಒಗ್ಗರಣೆ ಕೊಟ್ಟು ತಿನ್ನಬಹುದು ಎಂದಿದ್ದಾರೆ ಅವರು.
ಈ ಊಟವನ್ನು ಭಾರತೀಯ ಮನೆಗಳಲ್ಲಿ ಬಹಳ ಹಿಂದಿನಿಂದಲೂ ಸೇವಿಸಲಾಗುತ್ತಿದೆ ಎಂದು ಲ್ಯೂಕ್ ಕೌಟಿನ್ಹೋ ಹೇಳಿದ್ದಾರೆ. ವಿಶೇಷವಾಗಿ ಜೀರ್ಣಕಾರಿ ಅಸ್ವಸ್ಥತೆ, ಕಾಲೋಚಿತ ಸೋಂಕುಗಳು ಅಥವಾ ಆಯಾಸದ ಅವಧಿಯಲ್ಲಿ, ದೇಹಕ್ಕೆ ಸೌಮ್ಯವಾದ ಪೋಷಣೆಯ ಅಗತ್ಯವಿರುವಾಗ ಇದು ತುಂಬಾ ಉತ್ತಮ ಆಹಾರ ಎಂದಿದ್ದಾರೆ. ಅವರ ಪ್ರಕಾರ, ಜೀರ್ಣಕ್ರಿಯೆಯನ್ನು ಪ್ರಾರಂಭಿಸಲು ಬೆಳಿಗ್ಗೆ ಬೇಗನೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ಮೊದಲು ತಿನ್ನುವುದು ಉತ್ತಮ.
ಧುರಂಧರ್ 2 ರ ಯಶಸ್ಸಿನಲ್ಲಿ ಮುಳುಗಿರುವ ನಟ, ಹಿಂದಿನ ಸಂದರ್ಶನವೊಂದರಲ್ಲಿ ತಮ್ಮ ಆಹಾರದಲ್ಲಿ ಕಂಜಿ ಪ್ರಮುಖ ಆಹಾರಗಳಲ್ಲಿ ಒಂದಾಗಿದೆ ಎಂದು ಒಪ್ಪಿಕೊಂಡರು, ಇದು 55 ವರ್ಷ ವಯಸ್ಸಿನಲ್ಲೂ ಸಹ ಫಿಟ್ ಆಗಿರಲು ಸಹಾಯ ಮಾಡುತ್ತದೆ. ಇದು ವಿಶೇಷವಾಗಿ ಚೈತನ್ಯಶೀಲರಾಗಿ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವ ಗುರಿಯನ್ನು ಹೊಂದಿರುವವರಿಗೆ ಸಹಾಯಕವಾಗಿದೆ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.