ಬಾಯಿ ಕ್ಯಾನ್ಸರ್‌ ಬರದೇ ಇರೋಕೆ, ʼಅದರʼ ನಂತರ ಬಾಯಿ ತೊಳಕೊಂಡರೆ ಸಾಕಾ?

Published : Mar 26, 2026, 05:10 PM IST
oral cancer

ಸಾರಾಂಶ

ಮುಖ ಮೈಥುನದಿಂದ ಬಾಯಿ ಕ್ಯಾನ್ಸರ್ (oral cancer) ಬರುವ ಅಪಾಯವಿದ್ದು, ವಿಶೇಷವಾಗಿ HPV ಸೋಂಕಿತರೊಂದಿಗೆ ಸಂಪರ್ಕಿಸಿದಾಗ ಇದು ಹೆಚ್ಚು. ಈ ಅಪಾಯವನ್ನು ಕಡಿಮೆ ಮಾಡಲು, ಸಂಪರ್ಕದ ನಂತರ ಬಾಯಿ ತೊಳೆಯುವುದು ಮಾತ್ರ ಸಾಲದು. ಮತ್ತೇನು? 

ತುಂಬಾ ಮಂದಿ ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ಸಂಗಾತಿಯನ್ನು ಖುಷಿಪಡಿಸಲು ಬಾಯಿ- ನಾಲಿಗೆಯನ್ನು ಬಳಸುತ್ತಾರೆ. ಆ ಮೂಲಕ ಲೈಂಗಿಕ ಸುಖ ನೀಡುತ್ತಾರೆ. ತಾವೂ ಹಾಗೆಯೇ ಸುಖ ಪಡೆಯುತ್ತಾರೆ. ಆದರೆ ಇದರಿಂದ ಬಾಯಿಯ ಕ್ಯಾನ್ಸರ್‌ ಬರೋ ಚಾನ್ಸ್‌ ಇದೆ ಎಂಬುದೂ ನಿಜವೇ. ಆದರೆ ಇದು ಅನೇಕ ಸಂಗಾತಿಗಳ ಜೊತೆ, HPV ವೈರಸ್‌ ಹೊಂದಿದ ವ್ಯಕ್ತಿಗಳ ಜೊತೆಗೆ ಲೈಂಗಿಕ ಕ್ರಿಯೆಯ ವೇಳೆ ನಾಲಿಗೆಯನ್ನು ಬಳಸುವುದರಿಂದ ಬರುತ್ತದೆ. ಪರಸ್ಪರ ನಿಷ್ಠರಾಗಿರುವ, ಒಂದೇ ಸಂಗಾತಿಯನ್ನು ಹೊಂದಿರುವವರು ಇದಕ್ಕೆ ಅಷ್ಟು ಅಂಜಬೇಕಿಲ್ಲ. ಆದರೂ ಮುಂಜಾಗ್ರತೆ ವಹಿಸುವುದು ಒಳ್ಳೆಯದು.

ಪ್ರಶ್ನೆ ಏನೆಂದರೆ, ಮುಖ ಮೈಥುನದ ಬಳಿಕ ಬಾಯಿಯನ್ನು ಚೆನ್ನಾಗಿ ತೊಳೆದುಕೊಂಡರೆ ಸಾಕಾ ಎಂಬುದು. ಬಾಯಿಯನ್ನು, ನಾಲಿಗೆ ಹಾಗೂ ಹಲ್ಲುಗಳನ್ನು ಸಾಧ್ಯವಾದಷ್ಟು ಚೊಕ್ಕಗೊಳಿಸಿಕೊಳ್ಳುವುದು ಒಳ್ಳೆಯದು. ಒಳ್ಳೆಯ ಮೌತ್‌ವಾಶ್‌ ಬಳಸಬೇಕು. ಇದರ ಜೊತೆಗೆ ಮೌತ್‌ ಕಾಂಡೋಮ್‌ ಅನ್ನೂ ಸುರಕ್ಷಿತವಾಗಿ ಬಳಸುವ ಕಲೆ ತಿಳಿದರೆ ಒಳ್ಳೆಯದು.

ಸಾಮಾನ್ಯವಾಗಿ ಈ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ. ಆದರೆ ಇತ್ತೀಚಿಗೆ ಇವುಗಳಿಂದ ಸಿಗುವ ಪ್ರಯೋಜನಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಇದೊಂದು ಲೇಟೆಕ್ಸ್‌ನಿಂದ ತಯಾರಿಸಲಾದ ತೆಳ್ಳಗಿನ ಶೀಟ್ ಆಗಿದೆ. ಇದನ್ನು ಓರಲ್ ಸಂಪರ್ಕದ ವೇಳೆ ಬಳಸಲಾಗುತ್ತದೆ, ಇದರಿಂದ ಬಾಯಿ ಮತ್ತು ಸಂಗಾತಿಯ ಲೈಂಗಿಕ ಅಂಗದ ಚರ್ಮದ ನಡುವೆ ನೇರ ಸಂಪರ್ಕವಾಗುವುದನ್ನು ತಡೆಯಬಹುದು. ಇದರ ಮುಖ್ಯ ಉದ್ದೇಶ ಸೋಂಕು ಹರಡುವ ಅಪಾಯವನ್ನು ಕಡಿಮೆ ಮಾಡುವುದಾಗಿದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ, ಇದು ರಕ್ಷಾಕವಚದಂತೆ ಕಾರ್ಯನಿರ್ವಹಿಸಿ ದೇಹದ ದ್ರವಗಳು ಅಥವಾ ಸೋಂಕಿತ ಚರ್ಮದ ನೇರ ಸಂಪರ್ಕವನ್ನು ತಪ್ಪಿಸುವುದಕ್ಕೆ ಸಹಾಯವಾಗುತ್ತದೆ.

ಅದರಲ್ಲಿಯೂ ಸುರಕ್ಷಿತ ವಿಧಾನಗಳನ್ನು ಅನುಸರಿಸಲು ಬಯಸುವವರಿಗೆ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಜಾಗರೂಕರಾಗಿರುವವರಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ. ತಜ್ಞರ ಪ್ರಕಾರ, ಹ್ಯೂಮನ್ ಪ್ಯಾಪಿಲೋಮಾವೈರಸ್ (HPV) ಇದು ಚರ್ಮದಿಂದ ಚರ್ಮ ಸಂಪರ್ಕದ ಮೂಲಕ ಹರಡುತ್ತದೆ ಮತ್ತು ಓರಲ್ ಸಂಪರ್ಕದ ಮೂಲಕವೂ ದೇಹಕ್ಕೆ ಪ್ರವೇಶಿಸಬಹುದು. ಮೌತ್ ಕಾಂಡೋಮ್‌ ನೇರ ಸಂಪರ್ಕವನ್ನು ತಡೆಯುವುದರಿಂದ ಈ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಶೇಕಡಾ ನೂರು ರಕ್ಷಣೆ ಕೊಡಲ್ಲ

ಆದರೆ, ಇದು 100% ರಕ್ಷಣೆ ನೀಡುವುದಿಲ್ಲ ಎಂಬುದನ್ನು ಗಮನದಲ್ಲಿಡಬೇಕು. HPV ಕೇವಲ ದ್ರವಗಳ ಮೂಲಕವಷ್ಟೇ ಅಲ್ಲ, ಚರ್ಮದ ಸಂಪರ್ಕದಿಂದಲೂ ಹರಡುತ್ತದೆ. ಹೀಗಾಗಿ, ಸುತ್ತಮುತ್ತಲಿನ ಚರ್ಮ ಸೋಂಕಿತವಾಗಿದ್ದರೆ ಅಪಾಯ ಮುಂದುವರಿಯಬಹುದು. ಆದರೂ, ನಿಯಮಿತವಾಗಿ ಮತ್ತು ಸರಿಯಾಗಿ ಬಳಸಿದರೆ ಸೋಂಕಿನ ಸಾಧ್ಯತೆಯನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬಹುದು. ಆದರೆ ಇದಕ್ಕಿಂತಲೂ ಪರಿಣಾಮಕಾರಿ ರಕ್ಷಣಾ ಕ್ರಮವೆಂದರೆ HPV ಲಸಿಕೆ (ವ್ಯಾಕ್ಸಿನೇಷನ್) ತೆಗೆದುಕೊಳ್ಳುವುದು.

ಮೌತ್‌ ಕಾಂಡೋಮ್‌ ಬಳಸುವಾಗ ಯಾವಾಗಲೂ ಹೊಸದು ಮತ್ತು ಸರಿಯಾಗಿ ಪ್ಯಾಕ್ ಮಾಡಿರುವ ಉತ್ಪನ್ನವನ್ನೇ ಬಳಸಬೇಕು. ಬಳಸುವ ಮೊದಲು ಇದರಲ್ಲಿ ಚಿಕ್ಕ ರಂಧ್ರಗಳಿಲ್ಲವೆಂಬುದನ್ನು ಪರಿಶೀಲಿಸಬೇಕು. ಒಂದು ಬಾರಿ ಬಳಸಿದ ನಂತರ ಮರುಬಳಕೆ ಮಾಡಬಾರದು. ಬಳಸುವಾಗ ಸರಿಯಾಗಿ ಹಿಡಿದುಕೊಂಡು ಅದು ಜಾರಿಬಿಳದಂತೆ ನೋಡಿಕೊಳ್ಳಬೇಕು. ಆಯಿಲ್ ಆಧಾರಿತ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಬೇಕು. ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ ಮೌತ್ ಕಾಂಡೋಮ್‌ನ ಸಂಪೂರ್ಣ ಪ್ರಯೋಜನ ಸಿಗುತ್ತದೆ

ಧೂಮಪಾನ, ತಂಬಾಕು ಸೇವನೆ ಮತ್ತು ಅಸ್ವಸ್ಥ ಜೀವನಶೈಲಿ ಕೂಡ ಓರಲ್ ಕ್ಯಾನ್ಸರ್‌ಗೆ ಪ್ರಮುಖ ಕಾರಣಗಳಾಗಿವೆ. ಆದ್ದರಿಂದ, ಕೇವಲ ಮೌತ್ ಕಾಂಡೋಮ್‌ನ ಮೇಲೆ ಅವಲಂಬಿಸದೇ, ಆರೋಗ್ಯಕರ ಜೀವನಶೈಲಿ ಮತ್ತು ನಿಯಮಿತ ವೈದ್ಯಕೀಯ ತಪಾಸಣೆ ಅಗತ್ಯವಾಗಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Zombie Drug: ಮನುಷ್ಯರನ್ನು ಜೀವಂತ ಶವವಾಗಿಸುವ ಈ ಡ್ರಗ್ ಯಾವುದು? ಇದರ ಅಪಾಯಗಳೇನು?
Bedwetting: ಮಕ್ಕಳು ಹಾಸಿಗೆ ಒದ್ದೆ ಮಾಡ್ತಾರಾ? ಕಾರಣ ಏನು, ಪರಿಹಾರ ಹೇಗೆ? ಇಲ್ಲಿದೆ ಮಾಹಿತಿ