ನಮ್ಮ ಅಡುಗೆ ಮನೆಯಲ್ಲಿರುವ ಮಸಾಲೆಗಳು ಅಡುಗೆ ರುಚಿಯನ್ನು ಮಾತ್ರ ಹೆಚ್ಚಿಸೋದಿಲ್ಲ. ಆರೋಗ್ಯಕ್ಕೂ ಒಳ್ಳೆಯದು. ಅದ್ರಲ್ಲಿ ಹಿಪ್ಪಲಿ ಬಹುಖಾಯಿಲೆಯನ್ನು ಗುಣಪಡಿಸುವ ಗುಣ ಹೊಂದಿದೆ. ಕೆಮ್ಮು, ನೆಗಡಿ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ.
ಆಹಾರದ ರುಚಿ ಹೆಚ್ಚಾಗಬೇಕು ಅಂದ್ರೆ ಮಸಾಲೆಯನ್ನು ಬಳಸ್ತೇವೆ. ಮಸಾಲೆಯಿಲ್ಲದ ಆಹಾರ ಬಾಯಿಗೆ ರುಚಿಸೋದಿಲ್ಲ. ಕೇವಲ ಅಡುಗೆಗೆ ಮಾತ್ರವಲ್ಲ ಆರೋಗ್ಯಕ್ಕೂ ಈ ಮಸಾಲೆ ಪ್ರಯೋಜನಕಾರಿ. ನಮ್ಮ ಅಡುಗೆ ಮನೆಯಲ್ಲಿ ಸಾಕಷ್ಟು ಮಸಾಲೆ ಪದಾರ್ಥಗಳಿರುತ್ತವೆ. ಶುಂಠಿ, ಅರಿಶಿನ, ಜೀರಿಗೆ, ಲವಂಗ ಹೀಗೆ ಅನೇಕ ಮಸಾಲೆ ಪದಾರ್ಥಗಳನ್ನು ನಾವು ಪ್ರತಿ ನಿತ್ಯ ಬಳಸ್ತೇವೆ. ಅಡುಗೆ ಮನೆಯಲ್ಲಿ ಜಾಗ ಪಡೆದಿರುವ ಇನ್ನೊಂದು ಮಸಾಲೆ ಅಂದ್ರೆ ಹಿಪ್ಪಲಿ. ಕೊರೊನಾ (Corona) ಸಂದರ್ಭದಲ್ಲಿ ಈ ಹಿಪ್ಪಲಿ (Pippali) ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಹಿಪ್ಪಲಿಯಲ್ಲಿ ಪ್ರೋಟೀನ್ ಗಳು, ಉರಿಯೂತದ ಕೊಬ್ಬುಗಳು, ಕಾರ್ಬೋಹೈಡ್ರೇಟ್ ಗಳು, ವಿಟಮಿನ್ ಗಳು, ಅಮೈನೋ ಆಮ್ಲಗಳನ್ನು ಹೊಂದಿರುತ್ತದೆ. ಇವೆಲ್ಲವೂ ನಮ್ಮ ಆರೋಗ್ಯ (Health) ಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಿಪ್ಲಿಯನ್ನು ನೀವು ಆಹಾರದಲ್ಲಿ ಬಳಕೆ ಮಾಡಬಹುದು. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಆರೋಗ್ಯವನ್ನೂ ಕಾಪಾಡುತ್ತದೆ. ನಾವಿಂದು ಹಿಪ್ಲಿ ಬಳಕೆಯಿಂದ ಆಗುವ ಆರೋಗ್ಯ ಪ್ರಯೋಜನಗಳನ್ನು ನಿಮಗೆ ಹೇಳ್ತೆವೆ.
ಕೆಮ್ಮು – ನೆಗಡಿಗೆ ಪರಿಹಾರ : ಚಳಿಗಾಲದಲ್ಲಿ ಅನೇಕರಿಗೆ ಅರೋಗ್ಯ ಸಮಸ್ಯೆ ಕಾಡುತ್ತದೆ. ಅದ್ರಲ್ಲೂ ಶೀತ ಮತ್ತು ಕೆಮ್ಮಿನ ಸಮಸ್ಯೆ ಬಹುತೇಕ ಎಲ್ಲರಲ್ಲಿ ಕಾಣಿಸಿಕೊಳ್ಳುತ್ತದೆ. ನೀವು ಚಳಿಗಾಲದಲ್ಲಿ ಶೀತದಿಂದ ದೂರವಿರಬೇಕು ಅಂದ್ರೆ ಹಿಪ್ಲಿಯನ್ನು ಸೇವಿಸಬೇಕು. ಕೆಮ್ಮು ಕಾಡ್ತಿದ್ದರೆ ಕೂಡ ನೀವು ಹಿಪ್ಲಿ ಬಳಸಬಹುದು. ಹಿಪ್ಲಿಯನ್ನು ನೀವು ಮೊದಲು ಪುಡಿ ಮಾಡಬೇಕು. ನಂತ್ರ ಈ ಪುಡಿಗೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಬೇಕು. ನಂತ್ರ ಅದನ್ನು ಸ್ವಲ್ಪ ಸ್ವಲ್ಪ ಸೇವನೆ ಮಾಡಬೇಕು.
ಮಲಬದ್ಧತೆ ಸಮಸ್ಯೆಗೆ ಪರಿಹಾರ : ಅನೇಕ ಜನರು ಮಲಬದ್ಧತೆ ಸಮಸ್ಯೆಯನ್ನು ಎದುರಿಸುತ್ತಾರೆ. ಇದು ಕೂಡ ಚಳಿಗಾಲದಲ್ಲಿ ಜನರನ್ನು ಹೆಚ್ಚಾಗಿ ಕಾಡುತ್ತದೆ. ಮಲಬದ್ಧತೆ ನಿಮಗೆ ಕಾಡ್ತಿದೆ ಎಂದಾದ್ರೆ ನೀವು ಹಿಪ್ಲಿಯನ್ನು ಔಷಧಿಯಂತೆ ಬಳಸಬಹುದು. ಹೊಟ್ಟೆಯಲ್ಲಿ ಗ್ಯಾಸ್, ಅಸಿಡಿಟಿ, ಅಜೀರ್ಣದಂತಹ ಸಮಸ್ಯೆ ಇದ್ದವರು ಕೂಡ ಯಾವುದೇ ಭಯವಿಲ್ಲದೆ ಹಿಪ್ಲಿ ಬಳಕೆ ಮಾಡಬಹುದು. ನೀವು ಹಿಪ್ಲಿಯನ್ನು ಕಷಾಯದ ರೂಪದಲ್ಲಿ ಸೇವನೆ ಮಾಡಬೇಕಾಗುತ್ತದೆ. ಒಂದು ಪಾತ್ರೆಗೆ ನೀರನ್ನು ಹಾಕಿ, ಅದಕ್ಕೆ ಹಿಪ್ಲಿ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಬೇಕು. ನಂತ್ರ ಅದನ್ನು ಸೋಸಿ ನೀವು ಸೇವನೆ ಮಾಡಬಹುದು. ಪ್ರತಿ ದಿನ ಹಿಪ್ಲಿ ಕಷಾಯ ಕುಡಿಯಬಹುದು. ಆದ್ರೆ ದಿನಕ್ಕೆ ಒಮ್ಮೆ ಮಾತ್ರ ಸೇವಿಸಿ. ಹಿಪ್ಲಿಯಲ್ಲಿರುವ ಪೋಷಕಾಂಶಗಳು ಮತ್ತು ಖನಿಜಗಳು ಅಜೀರ್ಣ ಸಮಸ್ಯೆಯನ್ನು ಹೋಗಲಾಡಿಸಲು ಬಹಳ ಪರಿಣಾಮಕಾರಿ.
ಹಿರಿಯರು ಮನೆಯಲ್ಲಿದ್ದರೆ ಹೆರಿಗೆ ನಂತ್ರ ನೀರು ಕುಡಿಯಲು ಬಿಡೋಲ್ಲ, ಇದು ಒಳ್ಳೇದಾ?
ಈ ಸಮಸ್ಯೆಗೆ ಹಿಪ್ಲಿ ಮದ್ದು : ಹಿಪ್ಲಿ ಚಿಕ್ಕ ಕಾಯಿಲೆಗಳಿಂದ ಹಿಡಿದು ದೊಡ್ಡ ಕಾಯಿಲೆಗಳವರೆಗೆ ಅನೇಕ ಖಾಯಿಲೆಗಳನ್ನು ದೂರವಿರಲು ಸಹಾಯ ಮಾಡುತ್ತದೆ. ಸಂಶೋಧನೆ ಪ್ರಕಾರ, ಹಿಪ್ಲಿ ಸಸ್ಯದಲ್ಲಿ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಪತ್ತೆಯಾಗಿವೆ. ಇದ್ರಲ್ಲಿರುವ ಪೈಪರ್‌ಲಾಂಗುಮೈನ್ ಎಂಬ ರಾಸಾಯನಿಕ ಶ್ವಾಸಕೋಶ, ಸ್ತನ, ಲ್ಯುಕೇಮಿಯಾ ಮತ್ತು ಮೆದುಳಿನ ಗೆಡ್ಡೆಗಳಂತಹ ಅನೇಕ ರೀತಿಯ ಕ್ಯಾನ್ಸರ್‌ಗಳಲ್ಲಿ ಬಹಳ ಪ್ರಯೋಜನಕಾರಿ ಎಂಬುದು ಸಾಬೀತಾಗಿದೆ. ಹಲ್ಲು ನೋವಿನ ಸಮಸ್ಯೆಗೂ ಹಿಪ್ಲಿ ಪರಿಣಾಮಕಾರಿ. ಹಿಪ್ಲಿ ಪುಡಿಗೆ ಉಪ್ಪು, ಅರಿಶಿನ ಮತ್ತು ಸಾಸಿವೆ ಎಣ್ಣೆಯನ್ನು ಬೆರೆಸಿ ಹಲ್ಲು ನೋವು ಇರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ.
ಮನುಷ್ಯರ ಆಯಸ್ಸು ತಿನ್ನುತ್ತಿದೆ ಒಂಟಿತನ!
ಹಿಪ್ಲಿ ಸೇವನೆ ವೇಳೆ ಈ ಬಗ್ಗೆ ಗಮನವಿರಲಿ : ಹಿಪ್ಲಿ, ದೇಹವನ್ನು ಬಿಸಿಗೊಳಿಸುವ ಗುಣವನ್ನು ಹೊಂದಿದೆ. ಹಾಗಾಗಿ ಆರೋಗ್ಯಕ್ಕೆ ಒಳ್ಳೆಯದಾದ್ರೂ ಹಿಪ್ಲಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಬಾರದು ಎನ್ನುತ್ತಾರೆ ತಜ್ಞರು. ಪ್ರತಿ ದಿನ ಬಳಕೆ ಮಾಡುವ ಬದಲು ನೀವು ವಾರಕ್ಕೆ ಮೂರು ದಿನ ಬಳಸಿದ್ರೆ ಬಹಳ ಒಳ್ಳೆಯದು.