ಗ್ಯಾಂಬ್ಲಿಂಗ್‌, ಗೇಮಿಂಗ್‌ಗಿಂತ ಪೋರ್ನ್‌ ಮೇಲೆ ಪುರುಷರಿಗೆ ಹೆಚ್ಚಿನ ಆಸಕ್ತಿ: ವರದಿ

By Santosh NaikFirst Published Jul 22, 2024, 6:27 PM IST
Highlights

ಅಂತರ್ಜಾಲದಲ್ಲಿನ ಪ್ರಚೋದನಕಾರಿ ವಿಚಾರಗಳಿಗೆ ಮಾನವನ ಮೆದುಳುಗಳು ಕ್ವಿಕ್‌ ಆಗಿ ವ್ಯಸನಕಾರಿಯಾಗುತ್ತದೆ ಎಂದು ಸಂಶೋಧನೆ ಹೇಳಿದೆ. ಮೂರು ಪ್ರಚಲಿತ ಇಂಟರ್ನೆಟ್ ಆಧಾರಿತ ವ್ಯಸನಗಳಾದ ಪೋರ್ನ್‌, ಗ್ಯಾಂಬ್ಲಿಂಗ್‌ ಹಾಗೂ ವಿಡಿಯೋ ಗೇಮ್‌ಗಳ ಮೇಲೆ ಹೆಚ್ಚಿನ ಗಮನ ಹೋಗುತ್ತಿದೆ ಎಂದು ಎಚ್ಚರಿಸಿದೆ.
 

ನವದೆಹಲಿ (ಜು.22): ಆರೋಗ್ಯವಂತ ವಯಸ್ಕ ಪುರುಷರಿಗೆ ಗೇಮಿಂಗ್ ಅಥವಾ ಜೂಜಾಟಕ್ಕಿಂತ,  ಪೋರ್ನ್‌ ವೀಕ್ಷಣೆ ಮತ್ತು ಸೆಕ್ಸ್‌ ಹೆಚ್ಚು ವ್ಯಸನಕಾರಿ ಮತ್ತು ರಿವಾರ್ಡಿಂಗ್‌ ಎಂದು ಹೊಸ ಸಂಶೋಧನೆಯು ಬಹಿರಂಗಪಡಿಸಿದೆ. ಹ್ಯೂಮನ್ ಬ್ರೈನ್ ಮ್ಯಾಪಿಂಗ್‌ನಲ್ಲಿ ಪ್ರಕಟವಾಗಿರುವ ಅಧ್ಯಯನವು ಮಾನವನ ಮೆದುಳು ಇಂಟರ್ನೆಟ್-ಸಂಬಂಧಿತ ಪ್ರಚೋದಕಗಳಿಗೆ ಎಷ್ಟು ಕ್ವಿಕ್‌ ಆಗಿ ಪ್ರತಿಕ್ರಿಯಿಸುತ್ತದೆ ಎನ್ನುವುದನ್ನು ತಿಳಿಸಿದೆ. ಮೂರು ಪ್ರಚಲಿತ ಇಂಟರ್ನೆಟ್ ಆಧಾರಿತ ವ್ಯಸನಗಳಾದ ಪೋರ್ನೋಗ್ರಫಿ, ಗ್ಯಾಂಬ್ಲಿಂಗ್‌ ಮತ್ತು ವೀಡಿಯೊ ಗೇಮಿಂಗ್ ಮೇಲೆ ಕೇಂದ್ರೀಕರಿಸಿ ಅಧ್ಯಯನ ಮಾಡಲಾಗಿದೆ. ಆರೋಗ್ಯಕರ ವಯಸ್ಕ ಪುರುಷರೂ ಕೂಡ ಇವುಗಳಿಂದ ವ್ಯಸನಕಾರಿಯಾಗುತ್ತಾರೆ ಎಂದು ಅಧ್ಯಯನ ಹೇಳಿದೆ. 31 ಪುರುಷ ಸ್ಪರ್ಧಿಗಳ ಮೇಲೆ ಮಾಡಿದ ಅಧ್ಯಯನ ಇದಾಗಿದೆ. 19 ರಿಂದ 38 ವರ್ಷದ ಪುರುಷರು ಇವರಾಗಿದ್ದಾರೆ. ಪೋರ್ನ್‌ ಇಮೇಜ್‌, ವಿಡಿಯೋ ಗೇಮ್‌ ಸ್ಕ್ರೀನ್‌ ಶಾಟ್‌ ಹಾಗೂ ಹಣದ ಚಿತ್ರಗಳೊಂದಿಗೆ ಒಂದನ್ನು ಆಯ್ಕೆ ಮಾಡುವಂತೆ ಹೇಳಲಾಯಿತು. ಇವರ ನಿಜವಾದ ಇಂಟ್ರಸ್ಟ್‌ ಯಾವುದು ಎನ್ನುವುದನ್ನು ಗುರುತಿಸುವ ಸಲುವಾಗಿ ಪ್ರತಿ ಆಯ್ಕೆಗೂ ಸಣ್ಣ ಕ್ಯಾಶ್‌ ರಿವಾರ್ಡ್‌ ಕೂಡ ಇಡಲಾಗಿತ್ತು.

ಪ್ರಯೋಗವು MRI ಸ್ಕ್ಯಾನರ್ ಒಳಗೆ ಕ್ಲಾಸಿಕಲ್‌ ಕಂಡೀಷನಿಂಗ್ ವಿಧಾನವನ್ನು ಬಳಸಿದೆ. ಜ್ಯಾಮಿತೀಯ ಅಂಕಿಅಂಶಗಳನ್ನು (ತಟಸ್ಥ ಪ್ರಚೋದನೆಗಳು) ಸಂಘವನ್ನು ರಚಿಸಲು ರಿವಾರ್ಡಿಂಗ್‌ ಚಿತ್ರಗಳೊಂದಿಗೆ (ಅಶ್ಲೀಲ, ಗೇಮಿಂಗ್, ಅಥವಾ ಹಣ)ಜೋಡಿಸಲಾಗಿತ್ತು. ಇದನ್ನು 68 ಪ್ರಯೋಗಗಳಲ್ಲಿ ಪದೇ ಪದೇ ಮಾಡಲಾಯಿತು, ತಟಸ್ಥ ಪ್ರಚೋದನೆಯು ಕೆಲವೊಮ್ಮೆ ಪ್ರತಿಫಲವನ್ನು ಅನುಸರಿಸುತ್ತದೆ. ತಟಸ್ಥ ಪ್ರಚೋದನೆಗಳನ್ನು ಪ್ರತಿಫಲಗಳೊಂದಿಗೆ ಲಿಂಕ್ ಮಾಡಲು ಮೆದುಳು ಹೇಗೆ ಕಲಿಯುತ್ತದೆ ಎಂಬುದನ್ನು ನೋಡುವುದು ಗುರಿಯಾಗಿತ್ತು.

Latest Videos

ಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಅಪರಾಧವಲ್ಲ: ಹೈಕೋರ್ಟ್‌! ಏನಿದು ಪ್ರಕರಣ?

ಅಶ್ಲೀಲ ಚಿತ್ರಗಳಿಗೆ ಸಂಬಂಧಿಸಿದ ಶೇಪ್‌ಗಳನ್ನು ಗೇಮಿಂಗ್ ಅಥವಾ ಹಣಕ್ಕೆ ಲಿಂಕ್ ಮಾಡುವುದಕ್ಕಿಂತ ಹೆಚ್ಚು ಆಹ್ಲಾದಕರ ಮತ್ತು ಪ್ರಚೋದಕ ಎಂದು ರೇಟ್ ಮಾಡಲಾಗಿದೆ ಎಂದು ಡೇಟಾ ತೋರಿಸಿದೆ. ಈ ಅಧ್ಯಯನವು ಆರೋಗ್ಯಕರ ಸಂದರ್ಭದಲ್ಲಿ ಮೆದುಳು ಇಂಟರ್ನೆಟ್-ಸಂಬಂಧಿತ ಪ್ರತಿಫಲಗಳನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಅಂತರವನ್ನು ತುಂಬುವ ಗುರಿಯನ್ನು ಹೊಂದಿದೆ. 

18 ತುಂಬಿದವರಿಗೆ ತಿಂಗಳಿಗೆ 30 ಅಶ್ಲೀಲ ಚಿತ್ರ ವೀಕ್ಷಣೆ ಮಾತ್ರ,ಏನಿದು ಪೋರ್ನ್ ಪಾಸ್‌ಪೋರ್ಟ್ ನಿಯಮ?

click me!