ನಮ್ಮ ಹಿರಿಯ ನಾಗರಿಕರನ್ನು ನಾವೀಗ ಬಹಳ ಎಚ್ಚರಿಕೆಯಿಂದ ರಕ್ಷಿಸಬೇಕಾಗಿದೆ. ಹೇಗೆ? ಈ ಕೆಳಗಿನ ಸ್ಟೆಪ್ ಫಾಲೋ ಮಾಡಲೇಬೇಕು.
ಚೀನಾ, ಇಟಲಿ, ಸ್ಪೇನ್ ಎಲ್ಲಿ ನೋಡಿದರೂ ಕೋವಿಡ್ 19 ಸೋಂಕಿನಿಂದ ಸತ್ತವರಲ್ಲಿ ಎಂಬತ್ತು ಶೇಕಡಕ್ಕಿಂತ ಹೆಚ್ಚು ಮಂದಿ ವೃದ್ಧರು. ಹೀಗಾಗಿ, ನಮ್ಮ ಹಿರಿಯ ನಾಗರಿಕರನ್ನು ನಾವೀಗ ಬಹಳ ಎಚ್ಚರಿಕೆಯಿಂದ ರಕ್ಷಿಸಬೇಕಾಗಿದೆ. ಹೇಗೆ? ಈ ಕೆಳಗಿನ ಸ್ಟೆಪ್ ಫಾಲೋ ಮಾಡಲೇಬೇಕು.
- ಮನೆಗೆ ಹೊರಗಿನವರು ಯಾರೂ ಬರದಿರಲಿ. ಬರುವುದು ಅನಿವಾರ್ಯ ಆಗಿದ್ದರೆ ಒಂದು ಮೀಟರ್ ಅಂತರ ಅವರಿಂದ ಕಾಪಾಡಿಕೊಳ್ಳಿ. ಅವರಿಂದ ಏನನ್ನೇ ಪಡೆದರೂ ಶುಚೀಕರಿಸಲು ಮರೆಯಬೇಡಿ.
- ವೃದ್ಧರು ಮನೆಯಿಂದ ಯಾವ ಕಾರಣಕ್ಕೂ ಹೊರಗೆ ಹೋಗದಿರಲಿ. ದಿನಸಿ ತರಕಾರಿ ಇತ್ಯಾದಿ ಸಾಮಗ್ರಿ ಯುವಕರೇ ತರಲಿ. ಮನೆಯಲ್ಲಿ ಕೇವಲ ವೃದ್ಧರೇ ಇರುವುದು ಎಂದಾಗಿದ್ದರೆ ದಿನಸಿ ತರಲು ಸ್ಥಳೀಯಾಡಳಿತ ನೀಡುವ ನಂಬರ್ ಬಳಸಿಕೊಳ್ಳಿ. ಅಥವಾ ನೆರೆಕೆರೆಯವರ ಸಹಾಯ ಪಡೆಯಿರಿ. ಹೊರಗೆ ಹೋಗುವುದು ಅನಿವಾರ್ಯ ಆಗಿದ್ದರೆ ಸಾಮಾಜಿಕ ಅಂತರವನ್ನು ಹೆಚ್ಚು ಎಚ್ಚರದಿಂಧ ಪಾಲಿಸಿ. ಎಲ್ಲರೂ ಮುಟ್ಟಿರಬಹುದಾದ ಗ್ರಿಲ್ಸ್ ಮುಂತಾದವನ್ನು ನೀವು ಮುಟ್ಟಲೇಬೇಡಿ.
ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಹೀಗ್ ಕಾಪಾಡಿ
- ಹೊರಗಿಂದ ತಂದ ಸಾಮಗ್ರಿಗಳನ್ನು ವೃದ್ಧರು ಮುಟ್ಟದಿರಲಿ. ಚೆನ್ನಾಗಿ ಶುದ್ಧೀಕರಿಸಿದರೆ ಮಾತ್ರ ಮುಟ್ಟಲಿ. ತುಂಬಾ ಶ್ರಮವಹಿಸಿ ಮಾಡುವ ಕೆಲಸವನ್ನು ಅವರಿಗೆ ವಹಿಸಬೇಡಿ. ಎಂದರೆ ಯಾವಾಗಿನದಕ್ಕಿಂತಲೂ ಸ್ವಲ್ಪ ಹೆಚ್ಚಿನ ಎಚ್ಚರಿಕೆಯಿಂದಲೇ ನೀವು ಅವರನ್ನು ಈಗ ನೊಡಿಕೊಳ್ಳಬೇಕು.
undefined
- ಹಿರಿಯರು ಪ್ರತಿದಿನ ಶುದ್ಧವಾದ, ಬಿಸಿಬಿಸಿಯಾದ, ಆರೋಗ್ಯಕರವಾದ ಊಟ ಮಾಡಬೇಕು. ತಂಗಳು ಬೇಡ. ಸಾಕಷ್ಟು ಬಿಸಿನೀರು ಕುಡಿಯಬೇಕು. ಸರಿಯಾದ ಹೊತ್ತಿಗೆ ಊಟ ತಿಂಡಿ ಮಾಡಿ, ಸಾಕಷ್ಟು ವ್ಯಾಯಾಮವನ್ನೂ ಮಾಡಲಿ. ಯೋಗ ಮಾಡಬಹುದು. ಮನೆಯೊಳಗೇ ಓಡಾಡಬಹುದು. ಆದರೆ ಮೂಳೆಗಳಿಗೆ ಏಟು ಬೀಳುವಷ್ಟು ಕಠಿಣ ವ್ಯಾಯಾಮ ಬೇಡ.
- ಜಂಕ್‌ಫುಡ್, ಬೇಕರಿ ತಿಂಡಿ, ಆನ್‌ಲೈನ್ ಮೂಲಕ ಬಂದ ತಿಂಡಿ ಸಹವಾಸ ಹಿರಿಯರಿಗೆ ಈಗ ಬೇಡ.
- ಹೊರಗಿನವರು ಮುಟ್ಟಿದ ಯಾವುದೇ ವಸ್ತು- ನೋಟು, ಕಾರ್ಡು ಇತ್ಯಾದಿ- ಒಮ್ಮೆ ಸ್ಯಾನಿಟೈಸರ್ ಬಳಸಿ ಶುಚೀಕರಿಸಿ ಬಳಸುವುದು ಲೇಸು.
- ಆರೋಗ್ಯಕರ ಆಹಾರ, ಹಣ್ಣು, ತರಕಾರಿ ಸೇವಿಸಿ. ಆದರೆ ಶೀತಕಾರಕ ಹಣ್ಣು, ತರಕಾರಿ ಬೇಡ.
- ಸಣ್ಣ ಪ್ರಮಾಣದ ಶೀತ, ಕೆಮ್ಮು ಕಾಣಿಸಿಕೊಂಡರೆ ಶುಂಠಿ ಜೀರಿಗೆ ಕಾಳುಮೆಣಸು ಕಷಾಯ ಸಾಕಾಗುತ್ತದೆ. ಅಷ್ಟಕ್ಕೆ ಬೇಕಾಗಿ ಕ್ಲಿನಿಕ್‌ಗೆ ಓಡುವುದು ಬೇಕಿಲ್ಲ.
ವಯಸ್ಸು 50 ಆಯಿತೆಂದರೆ ಬದಲಾಗಲಿ ಡಯಟ್!
- ಹೃದಯ ಕಾಯಿಲೆ ಇರುವವರು, ಡಯಾಬಿಟಿಸ್ ಇರುವವರು ತಮ್ಮ ನಿತ್ಯದ ಔಷಧಗಳನ್ನು ಸಾಕಷ್ಟು ಮೊದಲೇ ತಂದಿಟ್ಟುಕೊಳ್ಳಿ. ಔಷಧಿ ಮುಗಿದ ಮೇಲೆ ಕೊನೆಯ ಕ್ಷಣದಲ್ಲಿ ಒದ್ದಾಟ ಬೇಡ.
- ಮನೆಯವರೊಂದಿಗೆ ಪ್ರೀತಿ, ಸೌಹಾರ್ದ ಸಂಬಂಧ ಕಾಪಾಡಿಕೊಳ್ಳಿ. ಅವರು ದೂರದಲ್ಲಿದ್ದರೆ, ದಿನಕ್ಕೊಮ್ಮೆಯಾದರೂ ಫೋನ್ ಮೂಲಕ ಮಾತಾಡಿಕೊಳ್ಳಿ. ನಗುತ್ತಿರಿ, ನಗಿಸುತ್ತಿರಿ. ಸಣ್ಣಪುಟ್ಟ ಆರೋಗ್ಯಕರ ಹವ್ಯಾಸಗಳು ಇರಲಿ. ಉದಾಹರಣೆಗೆ ಪೇಂಟಿಂಗ್, ಹಾಡುವುದು, ಗಾರ್ಡನಿಂಗ್ ಇತ್ಯಾದಿ.
ಮಕ್ಕಳಲ್ಲಿ ಹೆಚ್ಚುತ್ತಿರುವ ಕೊರೋನಾ: ವೈದ್ಯರ ಸಲಹೆ ಇಲ್ಲಿದೆ ಕೇಳೋಣ
- ಆಗಾಗ ಮುಖ ಕಣ್ಣು ಮೂಗು ಬಾಯಿ ಮುಟ್ಟಿಕೊಳ್ಳಬೇಡಿ. ಕೈ ತೊಳೆದುಕೊಳ್ಳುತ್ತಿರಿ.