ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತೀರಾ? ಎಚ್ಚರ

By Suvarna NewsFirst Published Aug 27, 2022, 5:39 PM IST
Highlights

ರಾತ್ರಿ ಅನೇಕರಿಗೆ ಆಗಾಗ ಏಳುವ ಅಭ್ಯಾಸವಿರುತ್ತದೆ. ಒಂದಲ್ಲ ಎರಡಲ್ಲ ಮೂರ್ನಾಲ್ಕು ಬಾರಿ ಮೂತ್ರ ವಿಸರ್ಜನೆ ಮಾಡಲು ಹೋಗ್ತಾರೆ. ನಿದ್ರೆ ಹಾಳು ಮಾಡುವ ಈ ಮೂತ್ರ ಕೆಲ ಅನಾರೋಗ್ಯದ ಸಂಕೇತವೂ ಹೌದು.
 

ದೇಹದ ಹೊಲಸು ಮೂತ್ರದ ಮೂಲಕ ಹೊರಗೆ ಹೋಗುತ್ತದೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ.  ಮೂತ್ರ ದೇಹದ ಕೊಳಕು ದ್ರವ. ಮೂತ್ರದಲ್ಲಿ ನೀರು, ಉಪ್ಪು, ಪೊಟ್ಯಾಸಿಯಮ್, ರಂಜಕ, ಯೂರಿಯಾ, ಯೂರಿಕ್ ಆಮ್ಲದಂತಹ ಎಲೆಕ್ಟ್ರೋಲೈಟ್‌ ರಾಸಾಯನಿಕವಿರುತ್ತದೆ. ಆಗಾಗ ಮೂತ್ರವನ್ನು ದೇಹದಿಂದ ಹೊರಗೆ ಹಾಕುವುದು ಬಹಳ ಮುಖ್ಯ. ಮೂತ್ರವನ್ನು ಕಟ್ಟಿಕೊಂಡ್ರೆ ಸಮಸ್ಯೆ ಶುರುವಾಗುತ್ತದೆ. ಹಾಗೆ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಕೂಡ ಒಳ್ಳೆಯದಲ್ಲ. ಮೂತ್ರ ವಿಸರ್ಜನೆ ವಿಧಾನವೇ ನಮ್ಮ ಆರೋಗ್ಯವನ್ನು ಹೇಳುತ್ತದೆ. ಕೆಲವರು ದಿನದ ಸಮಯದಲ್ಲಿ ಪದೇ ಪದೇ ಮೂತ್ರ ವಿಸರ್ಜನೆ ಮಾಡಲು ಹೋಗ್ತಾರೆ. ಮತ್ತೆ ಕೆಲವರು ರಾತ್ರಿ ಏಳುವ ಅಭ್ಯಾಸ ಹೊಂದಿರ್ತಾರೆ. ರಾತ್ರಿ ಎರಡು ಬಾರಿ ಮೂತ್ರ ವಿಸರ್ಜನೆ ಮಾಡುವುದು ವಿಶೇಷವೇನಲ್ಲ. ಅನೇಕರು ರಾತ್ರಿ ಎರಡು ಬಾರಿ ಮೂತ್ರ ವಿಸರ್ಜನೆ ಮಾಡ್ತಾರೆ. ಆದ್ರೆ ರಾತ್ರಿ ಎರಡಕ್ಕಿಂತ ಹೆಚ್ಚು ಬಾರಿ ಶೌಚಾಲಯಕ್ಕೆ ಹೋಗುವುದು ಒಳ್ಳೆಯ ಸೂಚನೆಯಲ್ಲ. ಇದು ಅನೇಕ ರೋಗಗಳ ಸಂಕೇತವನ್ನು ನೀಡುತ್ತದೆ. 

ರಾತ್ರಿ (Night) ಪದೇ ಪದೇ ಮೂತ್ರ (Urine) ವಿಸರ್ಜನೆ ಮಾಡಲು ಕಾರಣವೇನು ಗೊತ್ತಾ? : ರಾತ್ರಿ ಕೆಲವರು ನಿದ್ರೆಯಿಂದ ಎಚ್ಚರವಾಗೋದೇ ಇಲ್ಲ. ಅಂದ್ರೆ 8 ಗಂಟೆಗಳ ಕಾಲ ಸುಖ ನಿದ್ರೆ ಮಾಡ್ತಾರೆ. ಅವರಿಗೆ ಮೂತ್ರ ವಿಸರ್ಜನೆ ಸಮಸ್ಯೆ ಬರುವುದಿಲ್ಲ. ಮತ್ತೆ ಕೆಲವರಿಗೆ ಮೂತ್ರ ವಿಸರ್ಜನೆಯಿಂದ ನಿದ್ರೆ (Sleep) ಹಾಳಾಗುತ್ತದೆ. ಅಂದ್ರೆ ರಾತ್ರಿ 4- 5 ಬಾರಿ ಶೌಚಾಲಯಕ್ಕೆ ಹೋಗ್ತಾರೆ. ಇದಕ್ಕೆ ಅನೇಕ ಕಾರಣವಿದೆ. ಜೀವನ ಶೈಲಿಯಿಂದ ಹಿಡಿದು ವೈದ್ಯಕೀಯ ಸ್ಥಿತಿವರೆಗೆ ಅನೇಕ ಕಾರಣಗಳು ಇದಕ್ಕಿದೆ.

Health Tips: ಎಳ್ಳೆಣ್ಣೆಯಲ್ಲಿ ಬಾಯಿ ಮುಕ್ಕಳಿಸಿ, ಆರೋಗ್ಯ ಹೇಗೆ ಸುಧಾರಿಸುತ್ತೆ ನೋಡಿ! 

ವಯಸ್ಸಾದ ವ್ಯಕ್ತಿಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದನ್ನು ನೋಕ್ಟುರಿಯಾ ಎಂದು ಕರೆಯುತ್ತಾರೆ. 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಈ ಸಮಸ್ಯೆಯಾದ್ರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ. ಯಾಕೆಂದ್ರೆ ಇದು ಕೆಲ ರೋಗಗಳ ಸಂಕೇತವಾಗಿದೆ. ಅತಿ ಸಕ್ರಿಯವಾದ ಮೂತ್ರಕೋಶ (OAB)ಮೂತ್ರಕೋಶ, ಪ್ರಾಸ್ಟೆಸ್ ಗಡ್ಡೆಗಳು, ಮಧುಮೇಹ, ಆತಂಕ, ಮೂತ್ರಪಿಂಡದಲ್ಲಿ ಸೋಂಕು, ಕಾಲಿನ ಕೆಳ ಭಾಗದ ಊತ, ನರದ ಅಸ್ವಸ್ಥತೆ,ಅಂಗ ವೈಫಲ್ಯ, ಮೂತ್ರದ ಸೋಂಕು ಇದಕ್ಕೆ ಕಾರಣವಾಗಿರಬಹುದು.  

ಮಾತ್ರೆಗಳ ಸೇವನೆ ನೊಕ್ಟೊರಿಯಾಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಅಧಿಕ ರಕ್ತದೊತ್ತಡ ಸಮಸ್ಯೆ ಎದುರಿಸುವ ಜನರಿಗೆ ನೀಡುವ ಮೂತ್ರವರ್ಧಕ ಮಾತ್ರೆ ನೊಕ್ಟೊರಿಯಾ ಸಮಸ್ಯೆಗೆ ಕಾರಣವಾಗುತ್ತದೆ. 
ರಾತ್ರಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಲು ಮತ್ತೊಂದು ಕಾರಣ ಜೀವನಶೈಲಿ. ಅತಿಯಾದ ದ್ರವ ಆಹಾರ ಸೇವನೆ ಕೂಡ ಇದಕ್ಕೆ ಕಾರಣ. ಆಲ್ಕೋಹಾಲ್ ಮತ್ತು ಕೆಫೀನ್ ಹೊಂದಿರುವ ಪಾನೀಯ ಸಮಸ್ಯೆ ಹೆಚ್ಚು ಮಾಡುತ್ತದೆ. ಇದನ್ನು ಹೆಚ್ಚು ಸೇವನೆ ಮಾಡುವವರು ರಾತ್ರಿ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋಗ್ತಾರೆ. ಆಲ್ಕೋಹಾಲ್ ಹಾಗೂ ಕೆಫೀನ್ ಪಾನೀಯಗಳು ದೇಹದಲ್ಲಿ ಹೆಚ್ಚು ಮೂತ್ರ ಉತ್ಪಾದನೆ ಮಾಡಲು ಕಾರಣವಾಗುತ್ತದೆ.  

ಶ್‌..ಸೈಲೆಂಟಾಗಿರಿ..ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ತಿಳ್ಕೊಳ್ಳಿ

ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆಗೆ ಪರಿಹಾರವೇನು? : ಯಾವ ಕಾರಣಕ್ಕೆ ಈ ಸಮಸ್ಯೆಯಾಗ್ತಿದೆ ಎಂಬುದನ್ನು ಪತ್ತೆ ಹಚ್ಚಿದ ನಂತ್ರ ವೈದ್ಯರು ಅದಕ್ಕೆ ತಕ್ಕಂತೆ ಔಷಧಿ ನೀಡ್ತಾರೆ. ಇದಲ್ಲದೆ ಜೀವನ ಶೈಲಿಯಲ್ಲಿ ಬದಲಾವಣೆ ಅಗತ್ಯವಾಗುತ್ತದೆ. ರಾತ್ರಿ ಮಲಗುವ 2 – 4 ಗಂಟೆ ಮೊದಲು ನೀರು ಕುಡಿಯುವ ಪ್ರಮಾಣವನ್ನು ಕಡಿಮೆ ಮಾಡ್ಬೇಕು. ಬೆಳಿಗ್ಗೆ ಹೆಚ್ಚು ನೀರು ಕುಡಿಯಬೇಕು. ಮದ್ಯ ಮತ್ತು ಕೆಫೀನ್  ಪಾನೀಯಗಳಿಂದ ದೂರವಿರಬೇಕು. ಮಲಗುವ ಮುನ್ನ ಮೂತ್ರ ವಿಸರ್ಜನೆ ಮಾಡಿ ಮಲಗಬೇಕು. ಕೆಲವೊಂದು ವ್ಯಾಯಾಮ ಹಾಗೂ ಯೋಗದಿಂದ ದೇಹದ ಸ್ನಾಯುಗಳನ್ನು ಬಲಪಡಿಸಬಹುದು. ಧ್ಯಾನ ಮುದ್ರೆಗಳಿಂದಲೂ ಮನಸ್ಸನ್ನು ನಿಯಂತ್ರಿಸಬೇಕು. ಅನೇಕರು ನಿದ್ರೆ ಬರದ ಕಾರಣ ಪದೇ ಪದೇ ಮೂತ್ರ ವಿಸರ್ಜನೆ ಮಾಡ್ತಿರುತ್ತಾರೆ. ನಿದ್ರೆ ಸರಿಯಾಗಿ ಬಂದ್ರೆ ಈ ಸಮಸ್ಯೆ ಕಡಿಮೆಯಾಗುತ್ತದೆ. 
 

click me!