Health Tips: ಎಳ್ಳೆಣ್ಣೆಯಲ್ಲಿ ಬಾಯಿ ಮುಕ್ಕಳಿಸಿ, ಆರೋಗ್ಯ ಹೇಗೆ ಸುಧಾರಿಸುತ್ತೆ ನೋಡಿ!

By Suvarna NewsFirst Published Aug 27, 2022, 3:23 PM IST
Highlights

ಬಾಯಿ ಆರೋಗ್ಯವಾಗಿದ್ರೆ ಬಹುತೇಕ ದೇಹದ ಎಲ್ಲ ಭಾಗ ಆರೋಗ್ಯವಾಗಿದ್ದಂತೆ. ಬಾಯಿ ಸ್ವಚ್ಛತೆ ಬಹಳ ಮುಖ್ಯವಾಗುತ್ತದೆ. ಪ್ರತಿ ದಿನ ಬ್ರಷ್ ಮಾಡೋದು ಮಾತ್ರವಲ್ಲ ಮನೆ ಮದ್ದಿನ ಮೂಲಕವೂ ಬಾಯಿ ಆರೋಗ್ಯ ಕಾಪಾಡಿಕೊಳ್ಳಬಹುದು.
 

ಬೆಳಿಗ್ಗೆ ಎದ್ದ ತಕ್ಷಣ ಬಾಯಿ ತೊಳೆಯೋದು ಎಲ್ಲರ ಬಹುಮುಖ್ಯ ಕೆಲಸ. ಕೆಲವರು ಎದ್ದ ತಕ್ಷಣ ಬ್ರಷ್ ಮಾಡ್ತಾರೆ. ಮತ್ತೆ ಕೆಲವರು ನೀರು ಕುಡಿದು ನಂತ್ರ ಬ್ರಷ್ ಮಾಡ್ತಾರೆ. ನಿಮ್ಮ ಆರೋಗ್ಯ ಸರಿಯಾಗಿರ್ಬೇಕು ಅಂದ್ರೆ ಬೆಳಿಗ್ಗೆ ಎದ್ದ ತಕ್ಷಣ ಆಯಿಲ್ ಪುಲ್ಲಿಂಗ್ ಮಾಡಬೇಕು ಎನ್ನುತ್ತಾರೆ ತಜ್ಞರು. ಇದ್ರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀವು ಪಡೆಯಬಹುದು. ಆಯುರ್ವೇದದಲ್ಲಿ ಆಯಿಲ್ ಪುಲ್ಲಿಂಗ್ ಗೆ ಹೆಚ್ಚಿನ ಮಹತ್ವವಿದೆ. ಆಯುರ್ವೇದದಲ್ಲಿ ಆಯಿಲ್ ಪುಲ್ಲಿಂಗ್ ಗೆ  ಗಂಡೂಷ ಕ್ರಿಯೆ ಎಂದು ಕರೆಯಲಾಗುತ್ತದೆ. 

ಆಯಿಲ್ ಪುಲ್ಲಿಂಗ್ (Oil Pulling) ಮಾಡುವ ವಿಧಾನ : ಬೆಳಿಗ್ಗೆ ಎದ್ದ ತಕ್ಷಣ ಬ್ರಷ್ (Brush) ಮಾಡದೆ ಆಯಿಲ್ ಪುಲ್ಲಿಂಗ್ ಮಾಡ್ಬೇಕು. ಒಂದು ಅಥವಾ ಎರಡು ಚಮಚ ಎಣ್ಣೆಯನ್ನು ಬಾಯಿಗೆ ಹಾಕಿಕೊಳ್ಳಬೇಕು. ನಂತ್ರ ಬಾಯಿ ಮುಕ್ಕಳಿಸಬೇಕು. ನಂತ್ರ ಎಣ್ಣೆಯನ್ನು ತುಪ್ಪಿ, ಬಾಯಿ ಕ್ಲೀನ್ ಮಾಡ್ಬೇಕು. ಸಾಮಾನ್ಯವಾಗಿ ಜನರು ತುಪ್ಪ, ಸಾಸಿವೆ ಎಣ್ಣೆ ಅಥವಾ ತೆಂಗಿನ ಎಣ್ಣೆಯಿಂದ ಆಯಿಲ್ ಪುಲ್ಲಿಂಗ್ ಮಾಡ್ತಾರೆ. ಆದ್ರೆ ಬರೀ ಇವುಗಳಿಂದ ಮಾತ್ರವಲ್ಲ ಎಳ್ಳೆಣ್ಣೆಯಿಂದ ಕೂಡ ಆಯಿಲ್ ಪುಲ್ಲಿಂಗ್ ಮಾಡ್ಬಹುದು. ಎಳ್ಳೆಣ್ಣೆ (Sesame Oil)ಯಿಂದ ಗಾರ್ಗಿಲ್ ಮಾಡಿದ್ರೆ ಸಾಕಷ್ಟು ಪ್ರಯೋಜನವಿದೆ.

ಎಳ್ಳೆಣ್ಣೆಯಿಂದ ಆಯಿಲ್ ಪುಲ್ಲಿಂಗ್ : ಎಳ್ಳಿನ ಎಣ್ಣೆಯಿಂದ ಬಾಯಿ ಮುಕ್ಕಳಿಸುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಬರೀ ಬಾಯಿ  ಆರೋಗ್ಯ ಸುಧಾರಿಸುವುದಲ್ಲದೆ  ಹೊಟ್ಟೆ ಮತ್ತು ಚರ್ಮಕ್ಕೂ ಇದು ಬಹಳ ಉಪಯೋಗಕಾರಿ 

ಮಕ್ಕಳು ಆಗಾಗ ಅಯ್ಯೋ ಹೊಟ್ಟೆನೋವು ಅಂತಾರಾ ? ಸಮಸ್ಯೆ ಇಲ್ಲಿದೆ ನೋಡಿ

ಎಳ್ಳಿನ ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ ನಮ್ಮ ಬಾಯಿಯ ಆರೋಗ್ಯಕ್ಕೆ ಹಾನಿ ಮಾಡುವ ಸ್ಟ್ರೆಪ್ಟೋಕೊಕಸ್ ಮ್ಯುಟನ್ಸ್  ಕಡಿಮೆಯಾಗುತ್ತದೆ. ಎಳ್ಳಿನ ಎಣ್ಣೆ ಮೌತ್ ವಾಶ್ ರೂಪದಲ್ಲಿಯೇ ಕೆಲಸ ಮಾಡುತ್ತದೆ. ಇತರ ಎಣ್ಣೆಗಳಿಗಿಂತ ಆಯಿಲ್ ಪುಲ್ಲಿಂಗ್ ಮಾಡಲು ಎಳ್ಳೆಣ್ಣೆ ಹೆಚ್ಚು ಪರಿಣಾಮಕಾರಿ ಎನ್ನಬಹುದು. 

ಎಳ್ಳಿನ ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ ಬಾಯಿ ರುಚಿ ಹೆಚ್ಚುತ್ತದೆ.   
ಎಳ್ಳಿನ ಎಣ್ಣೆಯಿಂದ ಗಾರ್ಗಲ್ ಮಾಡಿದ್ರೆ  ಹಲ್ಲುಗಳ ಮೇಲಿರುವ ಕೊಳೆ ಸ್ವಚ್ಛವಾಗುತ್ತದೆ.
ಎಳ್ಳಿನ ಎಣ್ಣೆಯಿಂದ ಬಾಯಿ ಮುಕ್ಕಳಿಸಿದ್ರೆ ಹಳದಿಯಾಗಿರುವ ಹಲ್ಲು ಬಿಳಿಯಾಗುತ್ತದೆ. ನೈಸರ್ಗಿಕವಾಗಿ ಹಲ್ಲನ್ನು ಬಿಳಿ ಮಾಡುವ ಶಕ್ತಿ ಎಳ್ಳಿನ ಎಣ್ಣೆಗಿದೆ.  
ನಿಮ್ಮ ಬಾಯಿಯಿಂದ ದುರ್ವಾಸನೆ ಬರ್ತಿದ್ದರೆ ನೀವು ಎಳ್ಳಿನ ಎಣ್ಣೆಯನ್ನು ಬಳಸಬೇಕು. ಎಳ್ಳಿನ ಎಣ್ಣೆಯಿಂದ ಬಾಯಿ ಮುಕ್ಕಳಿಸಿದ್ರೆ ದುರ್ವಾಸನೆ ಕಡಿಮೆಯಾಗುತ್ತದೆ.

ಸಸ್ಯಾಹಾರಿಗಳಾ, ಆಲೂಗಡ್ಡೆ ಚಿಪ್ಸ್ ಅಪ್ಪಿತಪ್ಪಿಯೂ ತಿನ್ಬೇಡಿ

ಎಳ್ಳಿನ ಎಣ್ಣೆಯ ಆಯಿಲ್ ಪುಲ್ಲಿಂಗ್ ಒಸಡುಗಳಿಗೆ ಶಕ್ತಿ ನೀಡಲು ಸಹಕಾರಿ. ಒಸಡಿನ ರಕ್ತಸ್ರಾವ ಸಮಸ್ಯೆಯನ್ನು ಕೂಡ ಇದು ಕಡಿಮೆ ಮಾಡುತ್ತದೆ. ಇದ್ರಿಂದ ಹಲ್ಲು ನೋವು ಹಾಗೂ ಹಲ್ಲು ಬೇಗ ಬೀಳುವ ಸಮಸ್ಯೆಯನ್ನು ತಪ್ಪಿಸಬಹುದುದಾಗಿದೆ. 

ಬರೀ ಬಾಯಿಗೆ ಮಾತ್ರವಲ್ಲದೆ ಇಡೀ ದೇಹದ ಆರೋಗ್ಯಕ್ಕೆ ಎಳ್ಳಿನ ಎಣ್ಣೆ ಆಯಿಲ್ ಪುಲ್ಲಿಂಗ್ ಸಹಕಾರಿ. ಮೈಗ್ರೇನ್, ಸೈನಸ್ ತಲೆನೋವು ಮತ್ತು ಅಸ್ತಮಾದಂತಹ ಉಸಿರಾಟದ ತೊಂದರೆ ಇರುವವರು ಕೂಡ ಆಯಿಲ್ ಪುಲ್ಲಿಂಗ್ ಮಾಡಿ ಪ್ರಯೋಜನ ಪಡೆಯಬಹುದು.  

ಎಳ್ಳಿನ ಎಣ್ಣೆ ಗಾರ್ಗಲ್, ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ತರಲು ಸಹಾಯ ಮಾಡುತ್ತದೆ. ಎಳ್ಳಿನ ಎಣ್ಣೆಯಿಂದ ಬಾಯಿ ಮುಕ್ಕಳಿಸಿದ್ರೆ   ದೇಹದಲ್ಲಿ ಸಂಗ್ರಹವಾಗಿರುವ ವಿಷಕಾರಿ ಅಂಶ ಹೊರ ಹೋಗುತ್ತದೆ. ಇದು ಚರ್ಮಕ್ಕೆ ಹೊಳಪು ನೀಡುವ ಜೊತೆಗೆ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ಹೊಟ್ಟೆಯಲ್ಲಿ ಸಂಗ್ರಹವಾದ ಹಾನಿಕಾರಕ ಬ್ಯಾಕ್ಟೀರಿಯಾ ಹೊರ ಹಾಕುವ ಕೆಲಸವನ್ನು ಎಳ್ಳಿನ ಎಣ್ಣೆ ಮಾಡುತ್ತದೆ. ಕರುಳಿನಲ್ಲಿ ಸಂಗ್ರಹವಾಗಿರುವ ವಿಷವನ್ನು ಕೂಡ ಎಳ್ಳಿನ ಎಣ್ಣೆ ಆಯಿಲ್ ಪುಲ್ಲಿಂಗ್ ನಿಂದ ನೀವು ಸುಲಭವಾಗಿ ಹೊರಹಾಕಬಹುದು. ಪದೇ ಪದೇ ಬಾಯಿ ಹುಣ್ಣಿನಿಂದ ಬಳಲುವ ಜನರು ಕೂಡ ಎಳ್ಳಿನ ಎಣ್ಣೆ ಆಯಿಲ್ ಪುಲ್ಲಿಂಗ್ ಮಾಡ್ಬಹುದು.  ಹುಣ್ಣು ಕಡಿಮೆ ಮಾಡುವ ಜೊತೆಗೆ ಧ್ವನಿಯಲ್ಲಿ ಸುಧಾರಣೆ ತರುತ್ತದೆ. ಗಂಟಲು ನೋವಿನ ಸಮಸ್ಯೆಗೂ ಇದು ಪರಿಹಾರ ನೀಡುತ್ತದೆ.

ಎಳ್ಳಿನ ಎಣ್ಣೆ ಗಾರ್ಗಲ್ ಹೇಗೆ? : ಇದನ್ನು ಪ್ರತಿ ದಿನ ಮಾಡಿದ್ರೆ ಲಾಭ ಹೆಚ್ಚು. ಪ್ರತಿ ದಿನ  ಬೆಳಿಗ್ಗೆ  ಬ್ರಷ್ ಮಾಡುವ ಮೊದಲು ಒಂದರಿಂದ ಎರಡು ಚಮಚ ಎಳ್ಳಿನ ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಕನಿಷ್ಠ 5 ನಿಮಿಷ ಬಾಯಿ ಮುಕ್ಕಳಿಸಬೇಕು. 
 

click me!