
ಆರೋಗ್ಯಕ್ಕೆ ನಿದ್ದೆ ಮುಖ್ಯವಾಗಿದೆ. ಅದರಲ್ಲೂ ಮಕ್ಕಳು ಆರೋಗ್ಯಕರವಾಗಿ ಬೆಳೆಯಬೇಕು ಅಂದ್ರೆ ಸರಿಯಾಗಿ ನಿದ್ದೆ ಆಗ್ಲೇಬೇಕು. ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಮಗುವಿನ ಒಟ್ಟಾರೆ ಬೆಳವಣಿಗೆಗೆ ನಿದ್ರೆ ಮುಖ್ಯವಾಗಿದೆ. ತಜ್ಞರ ಪ್ರಕಾರ, ಹೆಚ್ಚು ನಿದ್ರೆ ಮಾಡುವ ಶಿಶುಗಳು ಹೆಲ್ದೀಯಾಗಿರುತ್ತಾರೆ. ಆದರೆ ರಾತ್ರಿ ಹೊತ್ತಿನಲ್ಲಿ ಮಕ್ಕಳನ್ನು ಮಲಗಿಸೋಉ ಮಾತ್ರ ಪೋಷಕರಿಗೆ ತುಂಬಾ ಕಷ್ಟಕರವಾದ ಕೆಲಸ. ಮಕ್ಕಳು (Children) ವಿನಾಕಾರಣ ರಚ್ಚೆ ಹಿಡಿಯುವುದು, ಕಿರಿಕಿರಿ ಮಾಡುವುದು ಮಾಡುತ್ತಾರೆ. ಇಂಥಾ ಸಂದರ್ಭದಲ್ಲಿ ಮಕ್ಕಳನ್ನು ಮಲಗಿಸೋಕೆ ಪೋಷಕರು (Parents) ಎಲ್ಲಾ ರೀತಿಯ ಟೆಕ್ನಿಕ್ ಉಪಯೋಗಿಸಬೇಕಾಗುತ್ತದೆ. ಯಾವುದೇ ಪೋಷಕರು ತಮ್ಮ ಮಗು ಉತ್ತಮವಾಗಿ ನಿದ್ರೆ (Sleep) ಪಡೆಯಲು ಸಹಾಯ ಮಾಡಲು ಕೆಲವು ತಜ್ಞರು ಶಿಫಾರಸು ಮಾಡಲಾದ ಸರಳ ಹಂತಗಳು ಇಲ್ಲಿವೆ.
ನಿದ್ರೆಯ ವೇಳಾಪಟ್ಟಿಯನ್ನು ಹೊಂದಿಸಿ: ಪ್ರತಿಯೊಬ್ಬರ ದೇಹವೂ ಆಂತರಿಕ ಗಡಿಯಾರವನ್ನು ಹೊಂದಿರುತ್ತದೆ. ಇದನ್ನು ಸಿರ್ಕಾಡಿಯನ್ ರಿದಮ್ ಎಂದು ಕರೆಯಲಾಗುತ್ತದೆ. ಇದು ದಿನದ ವಿವಿಧ ಸಮಯಗಳಲ್ಲಿ ವಿಭಿನ್ನ ದೈಹಿಕ ಕಾರ್ಯಗಳನ್ನು ನಿರ್ವಹಿಸುತ್ತದೆ. ದೇಹದ ಸಿರ್ಕಾಡಿಯನ್ ರಿದಮ್ ಪ್ರಕಾರ, ನಾವು ನಮ್ಮ ನಿದ್ರೆಯ ವೇಳಾಪಟ್ಟಿಯನ್ನು ಸೂರ್ಯಾಸ್ತ ಮತ್ತು ಸೂರ್ಯೋದಯಕ್ಕೆ ಅನುಗುಣವಾಗಿ ಹೊಂದಿಸಬೇಕು.
Kids Health: ಆಟಿಕೆಯಿಂದ ಕಾಯಿಲೆ ಹರಡುತ್ತೆ, ಟಾಯ್ಸ್ ಕ್ಲೀನ್ ಮಾಡೋದ್ ಹೇಗೆ ಗೊತ್ತಿರಲಿ
ತಜ್ಞರ ಪ್ರಕಾರ, ಶಿಶುಗಳು ಸುಮಾರು 12 ವಾರಗಳಲ್ಲಿ ತಮ್ಮ ಸಿರ್ಕಾಡಿಯನ್ ರಿದಮ್ ಅನ್ನು ಅಭಿವೃದ್ಧಿಪಡಿಸುತ್ತಾರೆ. ಹೀಗಿದ್ದೂ, ಇದು ಎಲ್ಲಾ ಮಕ್ಕಳಿಗೆ ಸ್ವಾಭಾವಿಕವಾಗಿ ಅಭಿವೃದ್ಧಿಯಾಗದಿರಬಹುದು, ಅದಕ್ಕಾಗಿಯೇ ನಿದ್ರೆಯ ವೇಳಾಪಟ್ಟಿಯನ್ನು ಹೇರುವುದು ಸಹಾಯ ಮಾಡುತ್ತದೆ. ಪ್ರತಿ ರಾತ್ರಿಯೂ (Night) ಒಂದೇ ಸಮಯದಲ್ಲಿ ನಿಮ್ಮ ಮಗುವನ್ನು ಮಲಗಿಸುವ ಗುರಿಯನ್ನು ಹೊಂದಿರಿ, ಇದರಿಂದ ಮಗು ಶೀಘ್ರದಲ್ಲೇ ಸರಿಯಾದ ಸಮಯದಲ್ಲಿ ಮಲಗುವ ಅಭ್ಯಾಸವನ್ನು ಅಭಿವೃದ್ಧಿಪಡಿಸುತ್ತದೆ.
ಮಲಗುವ ಮುನ್ನ ದೀಪಗಳನ್ನು ಮಂದಗೊಳಿಸಿ: ಮೆಲಟೋನಿನ್ ಮೆದುಳಿನಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಆಗಿದ್ದು, ಅದು ನಿದ್ರೆ ಮತ್ತು ಎಚ್ಚರದ ಚಕ್ರಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸಂಜೆ ಸೂರ್ಯಾಸ್ತದ ನಂತರ ಮೆಲಟೋನಿನ್ ಮಟ್ಟವು ಹೆಚ್ಚಾಗಲು ಆರಂಭವಾಗುತ್ತದೆ ಮತ್ತು ರಾತ್ರಿಯಿಡೀ ಅಧಿಕವಾಗಿರುತ್ತದೆ. ಸೂರ್ಯೋದಯದ ನಂತರ, ನಿದ್ರೆಯ ಹಾರ್ಮೋನ್ ಮಟ್ಟವು ಕುಸಿಯುತ್ತದೆ, ಅಂದರೆ ಇದು ಎಚ್ಚರಗೊಳ್ಳುವ ಸಮಯ. ರಾತ್ರಿಯಲ್ಲಿ ಕೃತಕ ಬೆಳಕಿನ ಅತಿಯಾದ ಮಾನ್ಯತೆ ನಿಮ್ಮ ಮೆಲಟೋನಿನ್ ಉತ್ಪಾದನೆಯನ್ನು ಅಡ್ಡಿಪಡಿಸುತ್ತದೆ. ಆದ್ದರಿಂದ, ಮಲಗುವ ಮುನ್ನ ದೀಪಗಳನ್ನು ಮಂದಗೊಳಿಸಲು ಸಲಹೆ ನೀಡಲಾಗುತ್ತದೆ. ಇದು ನಿಮ್ಮ ಮಗುವಿನ ಮೆಲಟೋನಿನ್ ಉತ್ಪಾದನೆಯನ್ನು ಪ್ರಚೋದಿಸಲು ಸಹಾಯ ಮಾಡುತ್ತದೆ.
ಬೆಚ್ಚಗಿನ ಸ್ನಾನವು ನಿದ್ರಿಸಲು ಸಹಾಯ ಮಾಡುತ್ತದೆ: ಬೆಚ್ಚಗಿನ ಸ್ನಾನದ ನಂತರ, ಮಗುವಿನ ದೇಹದ (Body) ಉಷ್ಣತೆಯು ತಣ್ಣಗಾಗಲು ಪ್ರಾರಂಭವಾಗುತ್ತದೆ. ಹೀಗಾಗಿ ಮಗು ಹೆಚ್ಚು ಸುಲಭವಾಗಿ ನಿದ್ರಿಸಲು ಸಾಧ್ಯವಾಗುತ್ತದೆ. ನೀವು ಬಳಸುವ ನೀರು ತುಂಬಾ ಬಿಸಿಯಾಗಿರಬಾರದು. ನಿಮ್ಮ ಮಗುವಿಗೆ ಇನ್ನೂ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲವಾದರೆ, ಮಗುವಿನ ದೇಹವನ್ನು ಸ್ವಚ್ಛಗೊಳಿಸಲು ಮೃದುವಾದ ಬಟ್ಟೆಯನ್ನು ಬಳಸಬಹುದು.
Winter Tips: ಮಕ್ಕಳ ಬಗ್ಗೆ ಹೆಚ್ಚು ಕಾಳಜಿಯಿರಲಿ, ಇಮ್ಯುನಿಟಿ ಹೆಚ್ಚಿಸೋದು ಹೇಗೆ ತಿಳ್ಕೊಳ್ಳಿ
ಮಗುವಿಗೆ ಮೃದುವಾದ ಮಸಾಜ್ ನೀಡಿ: ಲೋಷನ್ ಅಥವಾ ಎಣ್ಣೆಯನ್ನು ಬಳಸಿ ಮೃದುವಾದ ಮಸಾಜ್ ಮಾಡುವುದು ಮಕ್ಕಳಿಗೆ ಖುಷಿ ನೀಡುತ್ತದೆ. ಇದು ನಿಮ್ಮ ಮಗುವನ್ನು ರಾತ್ರಿಯ ನಿದ್ರೆಗಾಗಿ ಶಾಂತಗೊಳಿಸಬಹುದು. ಕೆಲವು ಎಣ್ಣೆಗಳು ಮಗುವಿನ ಬೆಳವಣಿಗೆಗೆ (Growth) ಸಹಾಯ ಮಾಡುತ್ತವೆ. ಪೋಷಕರು ಮತ್ತು ಮಗುವಿನ ನಡುವಿನ ಚರ್ಮದ ಸಂಪರ್ಕವನ್ನು ಬಲಪಡಿಸುತ್ತದೆ.
ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ: ಮಕ್ಕಳು ಸಾಮಾನ್ಯವಾಗಿ ಪ್ರತಿ ನಿದ್ರೆಯ ಚಕ್ರದ ಕೊನೆಯಲ್ಲಿ ಪ್ರತಿ ಗಂಟೆಗೆ ಎಚ್ಚರಗೊಳ್ಳುತ್ತಾರೆ. ಅವರು ಮತ್ತೆ ಮಲಗಲು ತೊಟ್ಟಿಲನ್ನೇ ಅವಲಂಬಿಸಬಹುದು. ಹೀಗಾಗಿ ಮಕ್ಕಳನ್ನು ತೊಟ್ಟಿಲಿಂದ ಬೆಡ್‌ಗೆ, ಬೆಡ್‌ನಿಂದ ತೊಟ್ಟಿಲಿಗೆ ಶಿಫ್ಟ್ ಮಾಡುವ ಕೆಲಸ ಮಾಡದಿರಿ. ಇದು ಮಗು ಆರಾಮವಾಗಿ ನಿದ್ರಿಸಲು ಅಡ್ಡಿಯನ್ನುಂಟು ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.