ಫಿಟ್ನೆಸ್ ವಿಷ್ಯ ಬಂದಾಗ ರಾಜಕೀಯ ಬಿಟ್ಟು ಅವರ ಆರೋಗ್ಯದ ಗುಟ್ಟನ್ನು ನಾವು ತಿಳಿದುಕೊಳ್ಬೇಕು. ಪ್ರಧಾನಿ ನರೇಂದ್ರ ಮೋದಿ ಫಿಟ್ನೆಸ್ ಬಗ್ಗೆ ಎಲ್ಲರಿಗೂ ತಿಳಿದಿದೆ. ಈಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಗ್ಯದ ಗುಟ್ಟನ್ನು ತಿಳಿಯುವ ಸಮಯ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯ 3500 ಕಿಲೋಮೀಟರ್ ಉದ್ದದ ಭಾರತ್ ಜೋಡೋ ಯಾತ್ರೆ ಇತ್ತೀಚಿನ ಚರ್ಚೆಯ ವಿಷಯವಾಗಿದೆ. ಇದ್ರಲ್ಲಿ ರಾಹುಲ್ ಗಾಂಧಿಯ ಫಿಟ್ನೆಸ್ ಎಲ್ಲರ ಗಮನ ಸೆಳೆದಿದೆ. ಅಷ್ಟು ದೂರ ನಡೆಯೋದು ಮಾತ್ರವಲ್ಲ ರಾಹುಲ್ ಗಾಂಧಿ ಒಂದೇ ಟೀ ಶರ್ಟ್ ಧರಿಸಿದ್ದು ಇಲ್ಲಿ ವಿಶೇಷವಾಗಿದೆ. ಕೊರೆಯುವ ಚಳಿ (Cold) ಯಲ್ಲಿ ಎಲ್ಲರೂ ಸ್ವೆಟರ್, ಜಾಕೆಟ್ ಹೊದ್ದು ಓಡಾಡ್ತಿದ್ದಾರೆ. ಆದ್ರೆ ರಾಹುಲ್ ಗಾಂಧಿ (Rahul Gandhi) ತೆಳ್ಳನೆಯ ಟೀ ಶರ್ಟ್ (Tshirt) ಧರಿಸಿದ್ದಾರೆ. ರಾಹುಲ್ ಗಾಂಧಿಗೆ ಚಳಿಯಿಲ್ವಾ ಎಂಬ ಪ್ರಶ್ನೆ ಅನೇಕರನ್ನು ಕಾಡ್ತಿದೆ. ಒಂದು ಟೀ ಶರ್ಟ್ ಧರಿಸಿ, ಯಾತ್ರೆ ಮಧ್ಯೆ ಮಕ್ಕಳ ಜೊತೆ ಆಟ, ಟ್ಯಾಂಕ್ ಏರುವುದು, ಬಸ್ ಹತ್ತುವುದು, ಓಟ, ಪುಷ್ – ಅಪ್ ಮಾಡುವುದು ಇದ್ರಿಂದ ರಾಹುಲ್ ಗೆ ಸುಸ್ತಾಗಲ್ವಾ ಎಂಬ ಪ್ರಶ್ನೆಗೆ ನಾವಿಂದು ಉತ್ತರ ನೀಡ್ತೇವೆ. ರಾಹುಲ್ ಗಾಂಧಿಗೆ ಈಗ 52 ವರ್ಷ. ಉಳಿದ ನಾಯಕರಿಗಿಂತ ಬೇಗ ಬೇಗ ಹೆಜ್ಜೆ ಹಾಕುವ ರಾಹುಲ್ ಜೊತೆ ನಡೆಯೋದು ನಾಯಕರಿಗೆ ಕಷ್ಟವಾಗ್ತಿದೆ. ಇದಕ್ಕೆಲ್ಲ ರಾಹುಲ್ ಜೀವನ ಶೈಲಿ ಮುಖ್ಯ ಕಾರಣ.
ಧ್ಯಾನ (Meditation) : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಧ್ಯಾನದಲ್ಲಿ ಒಲವು ಹೊಂದಿದ್ದಾರೆ. ದಿನದಲ್ಲಿ ಸ್ವಲ್ಪ ಸಮಯ ಅವರು ಧ್ಯಾನ ಮಾಡ್ತಾರೆ ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಕೂಡ ಈ ಬಗ್ಗೆ ಸುಳಿವು ನೀಡಿದ್ದಾರೆ. ರಾಹುಲ್ ಗಾಂಧಿ, ಧ್ಯಾನದಲ್ಲಿ ಪ್ರಬುದ್ಧತೆ ಮತ್ತು ಶಾಂತಿಯನ್ನು ಕಂಡುಕೊಂಡಿದ್ದಾರೆ ಎಂದಿದ್ದರು.
undefined
12 ಕಿಲೋಮೀಟರ್ ಓಡ್ತಾರೆ ರಾಹುಲ್ : ಹೌದು, ಬ್ಯುಸಿ ಶೆಡ್ಯೂಲ್ ಮಧ್ಯೆಯೂ ರಾಹುಲ್ ಓಟ ನಿಲ್ಲೋದಿಲ್ಲ. ಅವರು ತಮ್ಮ ಕೆಲಸದ ಮಧ್ಯೆ ವರ್ಕ್ ಔಟ್ ಗೆ ಸಮಯ ನೀಡ್ತಾರೆ. ಎರಡು ದಿನಕ್ಕೊಮ್ಮೆ ಸುಮಾರು 12 ಕಿಲೋಮೀಟರ್ ಓಡ್ತಾರಂತೆ ರಾಹುಲ್ ಗಾಂಧಿ. ಸಮಯ ಸಿಕ್ಕಾಗ ರನ್ನಿಂಗ್ ಶುರು ಮಾಡ್ತಾರೆ ಕಾಂಗ್ರೆಸ್ ನಾಯಕ.
ಜುಂಬಾ ಡ್ಯಾನ್ಸ್ ಮಾಡಿ ಬಿಂದಾಸ್ ಆಗಿ, ಫಿಟ್ ಆಗಿರಿ
ರಾಹುಲ್ ಡಯಟ್ ನಲ್ಲಿರುತ್ತೆ ಡ್ರೈ ಫ್ರೂಟ್ಸ್ (Dry Fruits) : ಪತ್ರಕರ್ತರೊಬ್ಬರು ರಾಹುಲ್ ಯಾತ್ರೆಯ ವೇಳೆ ಫೋಟೋವನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ರಾಹುಲ್, ಹುರಿದ ಮಖಾನಾ, ಮಿಶ್ರ ಡ್ರೈ ಫ್ರೂಟ್ಸ್ ಕುಂಬಳಕಾಯಿ ಬೀಜಗಳು, ಗೋಡಂಬಿ, ಬಾದಾಮಿ, ಒಣದ್ರಾಕ್ಷಿ ಮತ್ತು ಶೇಂಗಾ ತಿನ್ನುತ್ತಿದ್ದರು. ಡ್ರೈ ಫ್ರೂಟ್ಸ್ ನಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜವಿರುತ್ತದೆ. ಇದನ್ನು ಸೂಪರ್ ಫುಡ್ ಎಂದೇ ಕರೆಯಲಾಗುತ್ತದೆ. ಈ ಒಣ ಹಣ್ಣುಗಳು ತೂಕ ನಿಯಂತ್ರಿಸುವ ಜೊತೆಗೆ ಕ್ಯಾಲೊರಿ ಬರ್ನ್ ಮಾಡುತ್ತವೆ. ಹಸಿವನ್ನು ಕಡಿಮೆ ಮಾಡುವ ಕಾರಣ ತೂಕ ಕಡಿಮೆಯಾಗುತ್ತದೆ.
ರಾಹುಲ್ ಡಯಟ್ ಚಾರ್ಟ್ (Diet Chart) : ರಾಹುಲ್ ಯಾತ್ರೆ ವೇಳೆ ಆಯಾ ಪ್ರದೇಶದ ವಿಶೇಷ ಆಹಾರವನ್ನು ಸೇವನೆ ಮಾಡಿದ್ದಾರೆ. ಆದ್ರೆ ಅವರು ನಿತ್ಯ ಜೀವನದಲ್ಲಿ ಡಯಟ್ ಫಾಲೋ ಮಾಡ್ತಾರೆ. ಮಸಾಲೆಯುಕ್ತ ಆಹಾರ ಹಾಗೂ ಸಿಹಿ ಆಹಾರವನ್ನು ಅವರು ಜಾಸ್ತಿ ಸೇವನೆ ಮಾಡೋದಿಲ್ಲ.
ಮಧುಮೇಹಿಗಳಿಗೆ ಬೀಟ್ ರೂಟ್ ಬೆಸ್ಟ್! ಎಷ್ಟು ಪ್ರಮಾಣ ಬೆಟರ್?
ರಾಹುಲ್ ಬೆಳಿಗ್ಗೆ ಹಣ್ಣು ತಿನ್ನುತ್ತಾರೆ. ಬೆಳಿಗ್ಗೆ 8 ಗಂಟೆಗೆ ಸಕ್ಕರೆಯಿಲ್ಲದ ಟೀ ಅಥವಾ ಕಾಫಿ ಸೇವನೆ ಮಾಡ್ತಾರೆ. 10 ಗಂಟೆಗೆ ಉಪಹಾರ ಸೇವನೆ ಮಾಡುವ ರಾಹುಲ್ ಪರೋಟಾ, ಆಮ್ಲೆಟ್ ತಿನ್ನುತ್ತಾರೆ. ಮಧ್ಯಾಹ್ನದ ಊಟಕ್ಕೆ ದಾಲ್, ತರಕಾರಿ, ರೊಟ್ಟಿ, ಅನ್ನ ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡ್ತಾರೆ. ಪನ್ನೀರ್ ಅವರ ಇಷ್ಟದ ಆಹಾರದಲ್ಲಿ ಒಂದು. ಆದ್ರೆ ಈ ಯಾವುದೇ ಆಹಾರ ಹೆಚ್ಚು ಸ್ಪೈಸಿ ಇರೋದಿಲ್ಲ. ಹಾಗೆ ರಾತ್ರಿ ಹಣ್ಣು ಹಾಗೂ ಹಾಲು ಸೇವನೆ ಮಾಡ್ತಾರೆ ರಾಹುಲ್ ಗಾಂಧಿ. ರಾಹುಲ್ ಗಾಂಧಿ ತಿನ್ನುವ ಆಹಾರದಲ್ಲಿ ಶೇಕಡಾ 20ಕ್ಕಿಂತ ಹೆಚ್ಚು ಕಾರ್ಬೋಹೈಡ್ರೇಟ್ ಇರೋದಿಲ್ಲ. ಪ್ರೋಟೀನ್ ಹೆಚ್ಚು ಸೇವನೆ ಮಾಡುವ ರಾಹುಲ್ ಮೊಸರನ್ನು ಇಷ್ಟಪಡ್ತಾರೆ.