ಇತ್ತೀಚಿನ ದಿನಗಳಲ್ಲಿ ಮಧುಮೇಹ(Diabetes) ಎಂಬುದು ವಿಪರೀತವಾಗಿ ಹೆಮ್ಮರವಾಗಿ ಬೆಳೆದಿದೆ. ಔಷಧಗಳು ಇದ್ದರೂ ಮಧುಮೇಹ ನಿಯಂತ್ರಣಕ್ಕೆ ಬರುವುದು ಕಷ್ಟವಾಗಿದೆ. ಅಲ್ಲದೆ ಇತ್ತೀಚೆಗೆ ಪುಟ್ಟ ಮಕ್ಕಳಿಗೂ(Children's) ಮಧುಮೇಹ ಹರಡುತ್ತಿರುವುದು ವಿಪರ್ಯಾಸ. ಈ ಬಗ್ಗೆ ಇಲ್ಲಿದೆ ಮಾಹಿತಿ.
ಮಧುಮೇಹ ಪ್ರಾರಂಭದಲ್ಲಿ ಎಲ್ಲರಿಗೂ ಭಯ ಹುಟ್ಟಿಸುತ್ತಿತ್ತು. ಇದೊಂದು ವಯಸ್ಕರ ಕಾಯಿಲೆ ಎಂದೇ ಕಾಣುತ್ತಿತ್ತು. ವೇಗದ ಗತಿಯ ತಾಂತ್ರಿಕ ಪರಿಸರವು ಸಾಧಕ ಬಾಧಕಗಳನ್ನು ಹೊಂದಿದೆ. ಚಿಕ್ಕ ಮಕ್ಕಳು ಮತ್ತು ಹದಿಹರೆಯದವರು ಎಂದಿಗೂ Type 2 ಮಧುಮೇಹವನ್ನು ಹೊಂದಿರಲಿಲ್ಲ. ಈಗ ಸುಮಾರು ಮೂರನೇ ಒಂದು ಭಾಗದಷ್ಟು ಅಮೇರಿಕನ್ ಯುವಕರು ಅಧಿಕ ತೂಕ ಹೊಂದಿದ್ದಾರೆ. ಇದು Type 2 Diabetes ಹೊಂದಿರುವ ಮಕ್ಕಳ ಹೆಚ್ಚಳಕ್ಕೆ ನಿಕಟ ಸಂಬAಧ ಹೊಂದಿದೆ, ಕೆಲವರು 10 ವರ್ಷದಲ್ಲಿಯೇ ಮಧುಮೇಹ ಹೊಂದುತ್ತಾರೆ.
ಬೆಳೆಯುತ್ತಿರುವ ಜಗತ್ತು ಹಾಗೂ ಬದಲಾಗುತ್ತಿರುವ ಜೀವನ ಶೈಲಿ(Lifestyle). ಪರಿಸರದ ಸಾಧಕ ಬಾಧಕಗಳ ಪಾಲನ್ನು ಹೊಂದಿದೆ. ಜೀವನ ಶೈಲಿಯಲ್ಲಿನ ಬದಲಾವಣೆಗಳು ಸಾಂಕ್ರಾಮಿಕವಲ್ಲದ ರೋಗಗಳ ಹೆಚ್ಚಳಕ್ಕೆ ಕಾರಣವಾಗಿದೆ.ಭಾರತದಲ್ಲಿ ವಿಶೇಷವಾಗಿ ಕಳಪೆ ಜೀವನಶೈಲಿ ಆಯ್ಕೆಗಳು ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳು ಮಕ್ಕಳಲ್ಲಿ ಮಧುಮೇಹವನ್ನು ಹೆಚ್ಚಿಸುತ್ತಿವೆ. 1,28,500 ಭಾರತೀಯ ಹದಿಹರೆಯದವರು ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಡಯಾಬಿಟಿಸ್ ಅಟ್ಲಾಸ್(Diabetes Atlas) ವರದಿ ಮಾಡಿದೆ. ಅದರಲ್ಲಿ 97,700 ಮಕ್ಕಳಿದ್ದಾರೆ. ಆದರೆ ಡಿಸೆಂಬರ್ 2021ರಲ್ಲಿ ಶೇ.95ಕ್ಕೂ ಹೆಚ್ಚು ಭಾರತೀಯರು ಮಧುಮೇಹದಿಂದ ಹೋರಾಡುತ್ತಿದ್ದಾರೆ ಅಥವಾ ಒಳಗಾಗುತ್ತಿದ್ದಾರೆ ಎಂದು ತಿಳಿಸಿದೆ.
ಮಕ್ಕಳಲ್ಲಿ Type 2 ಮಧುಮೇಹ ಹೆಚ್ಚುತ್ತಿದೆ. ಆದರೆ ಪೋಷಕರು ಈ ಬಗ್ಗೆ ಹೆಚ್ಚು ತಿಳಿದು ಅದನ್ನು ತಡೆಯಬಹುದು. ಇತ್ತೀಚಿನ ದಿನಗಳಲ್ಲಿ, ನಗರ ಪ್ರದೇಶದ ಮೂರನೇ ಒಂದು ಭಾಗದಷ್ಟು ಮಕ್ಕಳು ಅಧಿಕ ತೂಕ(Weight Gain) ಹೊಂದಿದ್ದಾರೆ. ವಿಶೇಷವಾಗಿ ಅವರ ಹೊಟ್ಟೆಗಳು. ಇದು ಇನ್ಸುಲಿನ್(Insulin) ಪ್ರತಿರೋಧಕಕ್ಕೆ ಕೊಡುಗೆ ನೀಡುತ್ತದೆ. ಅಲ್ಲದೆ ಟೈಪ್ 2 ಡಯಾಬಿಟಿಸ್‌ಗೆ ಗಮನಾರ್ಹವಾದ ಹಾಗೂ ಮಾರ್ಪಡಿಸಬಹುದಾದ ಅಪಾಯಕಾರಿ ಅಂಶವಾಗಿದೆ.
ಮಕ್ಕಳಲ್ಲಿ ಹೆಚ್ಚುತ್ತಿದೆ Diabetes, ಈಗ್ಲೇ ಹುಷಾರಾಗಿ!
ಮಕ್ಕಳಲ್ಲಿ ಟೈಪ್ 2 ಮಧುಮೇಹವನ್ನು ತಡೆಗಟ್ಟಲು ಪೋಷಕರು ತಿಳಿದಿರಲೇಬೇಕಾದ ಕೆಲವು ಸಂಗತಿಗಳು ಇಲ್ಲಿವೆ.
1. ಮೊದಲಿಗೆ ಮಗುವಿಗೆ ಆರೋಗ್ಯ ಚೆನ್ನಾಗಿರಲು ಉತ್ತಮ ಆಹಾರ ಸೇವನೆಯ ಕುರಿತು ಹಾಗೂ ಪ್ರಾಮುಖ್ಯತೆಯನ್ನು ಪೋಷಕರು ಕಲಿಸಬೇಕು. ಜಂಕ್ ಫುಡ್(Junk Food) ತ್ಯಜಿಸುವುದು, ಆರೋಗ್ಯಕರ ತಿಂಡಿಗಳಲ್ಲಿ ತೊಡಗಿಸಿಕೊಳ್ಳುವುದು, ತಿನ್ನುವಾಗ ಟಿವಿ(TV), ಮೊಬೈಲ್(Mobile), ಲ್ಯಾಪ್‌ಟಾಪ್(Laptop) ನೋಡುವುದನ್ನು ತಪ್ಪಿಸುವುದು, ಹೆಚ್ಚು ನೀರು ಕುಡಿಯುವುದು, ಹೆಚ್ಚು ಹಣ್ಣು(Fruit) ಮತ್ತು ಹಸಿರು ತರಕಾರಿಗಳನ್ನು(Vegetables) ಸೇವಿಸುವುದು, ನಿಧಾನವಾಗಿ ತಿನ್ನುವುದು, ಶಾಪಿಂಗ್‌ಗೆ(Shopping) ಹೋಗುವ ಮುನ್ನ ಹೊಟ್ಟೆ ತುಂಬಾ ತಿನ್ನುವುದು, ಕುಟುಂಬದ ಜೊತೆಗೆ ಊಟ ಮಾಡುವುದು, ಸಣ್ಣ ಪದಾರ್ಥಗಳನ್ನು ಬಡಿಸುವುದು ಮತ್ತು ಆರೋಗ್ಯಕರ ಆಹಾರವನ್ನು ಆನಂದಿಸಿ ಸೇವಿಸುವುದನ್ನು ಕಲಿಸುವುದು ಬಹಳ ಮುಖ್ಯ.
2. ಪ್ರತೀ ದಿನ ನಿಮ್ಮ ಮಗು ಕನಿಷ್ಠ 60 ನಿಮಿಷಗಳ ಕಾಲ ನಿಯಮಿತ ದೈಹಿಕ ಚಟುವಟಿಕೆಯಲ್ಲಿ(Physical Activity) ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಿ. ಈ ಚಟುವಟಿಕೆಯನ್ನು ನಿಧಾನವಾಗಿ ಪ್ರಾರಂಭಿಸಿ ಮತ್ತು ಹೆಚ್ಚಿನದಾಗಿ ಮಾಡಿ. ಒಟ್ಟಿಗೆ ಫಿಟ್‌ನೆಸ್(Fitness) ತರಗತಿಗಳಿಗೆ ಹಾಜರಾಗಲು, ಕ್ರೀಡೆಯನ್ನು ಆಯ್ಕೆ ಮಾಡಲು ಮಕ್ಕಳಿಗೆ ಪ್ರೋತ್ಸಾಹಿಸಿ. ಮನೆಯಲ್ಲಿ ವ್ಯಾಯಾಮ(Exercise) ಸಲಕರಣೆಗಳನ್ನು ಹೊಂದಲು, ಮನೆಕೆಲಸಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳಲು ಮತ್ತು ಉತ್ತಮ ನಿದ್ರೆಯ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
3. ಮಾನಸಿಕ ಯೋಗಕ್ಷೇಮದ ಮೇಲೆ ಕೇಂದ್ರೀಕರಿಸಿ ಮತ್ತು ಅಧ್ಯಯನದ ಒತ್ತಡ ಮತ್ತು ಹೆಚ್ಚಿನ ಒತ್ತಡವನ್ನು ನಿರ್ವಹಿಸಲು ಅವರಿಗೆ ಸಹಾಯ ಮಾಡಿ.
4. ಮಕ್ಕಳಿಗೆ ನಿಯಮಿತ ತಪಾಸಣೆ ಮತ್ತು ಮಧುಮೇಹ ಪರೀಕ್ಷೆಗಾಗಿ ಪೋಷಕರು ಮಕ್ಕಳನ್ನು ಮಕ್ಕಳ ವೈದ್ಯರ ಬಳಿ ಕರೆದೊಯ್ಯುವುದು.
ಪೋಷಕರು ಮಕ್ಕಳಲ್ಲಿ ಕಂಡು ಬರುವ ಮಧುಮೇಹವನ್ನು ಗುರುತಿಸುವುದು ಹೇಗೆ ?
ಮಕ್ಕಳಲ್ಲಿ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಈ ಪರಿಣಾಮಕಾರಿ ಮಾರ್ಗಗಳನ್ನು ಅನುಸರಿಸಿ.
1. ಸಮತೋಲಿತ ಆಹಾರಕ್ರಮವನ್ನು ಅನುಸರಿಸುವುದು.
2. ನಿಯಮಿತ ವ್ಯಾಯಾಮದ ನಿರ್ವಹಿಸುವುದು.
3. ಸರಿಯಾದ ನೈರ್ಮಲ್ಯ ಮಾನದಂಡಗಳನ್ನು ಅನುಸರಿಸುವುದು.
4. ರಕ್ತದಲ್ಲಿನ ಸಕ್ಕರೆ ಮಟ್ಟಗಳ ನಿಯಮಿತ ತಪಾಸಣೆ.
5. ತೂಕ ನಷ್ಟ.
ಮಕ್ಕಳಲ್ಲಿ ಮಧುಮೇಹದ ಆರಂಭಿಕ ಪತ್ತೆಗಾಗಿ ಈ ರೋಗಲಕ್ಷಣಗಳನ್ನು ಪೋಷಕರು ಗಮನಿಸಬೇಕು.
1. ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಮೂತ್ರಕೋಶದ ಸೋಂಕು.
2. ಗಾಯಗಳು ಹಾಗೂ ಸೋಂಕುಗಳು ನಿಧಾನವಾಗಿ ವಾಸಿಯಾಗುವುದು.
3. ದೃಷ್ಟಿ ಮಂದವಾಗುವುದರೊAದಿಗೆ ಬಳಲಿಕೆ.
4. ಅತಿಯಾದ ಬಾಯಾರಿಕೆ.
5. ಮೂತ್ರ ಮತ್ತು ರಕ್ತದಲ್ಲಿ ಹೆಚ್ಚಿನ ಮಟ್ಟದ ಗ್ಲೂಕೋಸ್(Glucose).
6. ಕೈ ಕಾಲುಗಳಲ್ಲಿ ಜುಮ್ಮೆನ್ನುವುದು.
7. ವಾಕರಿಕೆ ಮತ್ತು ವಾಂತಿ(Vomit) ಜೊತೆಗೆ ಪಿತ್ತ.