Health Tips: ಪಿಜ್ಜಾ, ಬರ್ಗರ್ ತಿಂತೀರಾ? ಕ್ಯಾನ್ಸರ್ ಬರೋ ಚಾನ್ಸ್ ಹೆಚ್ಚು! ಹುಷಾರು

By Suvarna News  |  First Published Nov 29, 2022, 6:06 PM IST

“ಚೀಸ್, ತರಕಾರಿ ಇರೋ ಪಿಜ್ಜಾ ಆರೋಗ್ಯಕ್ಕೆ ಒಳ್ಳೆಯದು’ ಎಂದು ಭಾವಿಸಬೇಡಿ. ಅದರಲ್ಲಿರುವ ಚೀಸ್, ತರಕಾರಿ ಆರೋಗ್ಯಕ್ಕೆ ಒಳ್ಳೆಯದೇ ಆದರೂ ಜತೆಗೇ ಇರುವ ವಿವಿಧ ಕೆಮಿಕಲ್ ಗಳಿಂದ ಕ್ಯಾನ್ಸರ್ ಅಪಾಯ ಹೆಚ್ಚುತ್ತದೆ. ಹೀಗಾಗಿ, ಅತಿಯಾಗಿ ಸಂಸ್ಕರಣೆಗೆ ಒಳಪಟ್ಟ ಕೆಲವು ಆಹಾರಗಳಿಂದ ಪಾಲಕರೂ ದೂರವಿರಿ, ಮಕ್ಕಳನ್ನೂ ದೂರವಿರಿಸಿ. 
 


ವೀಕೆಂಡ್ ಬಂತೆಂದರೆ ಬಹುತೇಕರಿಗೆ ಬಾಹ್ಯ ತಿನಿಸಿನ ಬಯಕೆ ಶುರುವಾಗುತ್ತದೆ. ಮಕ್ಕಳೂ ವಿವಿಧ ತಿನಿಸುಗಳನ್ನು ತರಿಸಿಕೊಳ್ಳಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಮಕ್ಕಳ ತಿಂಡಿಗಳಲ್ಲಿ ಪಿಜ್ಜಾ, ಬರ್ಗರ್ ಗೆ ಪ್ರಥಮ ಸ್ಥಾನ. ಅವುಗಳಲ್ಲೇ ಫ್ಲೇವರ್, ಕಂಟೆಂಟ್ ಬೇರೆ ಬೇರೆ ಅಷ್ಟೆ. ಆದರೆ, ಪಿಜ್ಜಾ, ಬರ್ಗರ್ ನಂತಹ ಅತಿಯಾಗಿ ಸಂಸ್ಕರಣೆಗೆ ಒಳಪಟ್ಟ ಆಹಾರದಲ್ಲಿ ಹಾನಿಕಾರ ರಾಸಾಯನಿಕಗಳು ಇರುತ್ತವೆ ಎನ್ನುವುದು ಬೇಸರದ ಸಂಗತಿ. ಇವುಗಳು ದೇಹಕ್ಕೆ ತೀವ್ರ ಹಾನಿಯುಂಟು ಮಾಡುತ್ತವೆ. ಹಲವು ರಾಸಾಯನಿಕಗಳಂತೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವುದು ಚಿಂತಿಸಬೇಕಾದ ವಿಚಾರ. ಅಲ್ಟ್ರಾ ಪ್ರೊಸೆಸ್ಡ್ ಅಂದರೆ ಅತಿಯಾಗಿ ಸಂಸ್ಕರಣೆಯಾದ ಆಹಾರವೆಂದರೆ, ಪಿಜ್ಜಾ, ಪಾಸ್ತಾ, ಬರ್ಗರ್, ಪ್ಯಾಕ್ಡ್ ಸ್ನ್ಯಾಕ್ಸ್, ಕೋಲ್ಡ್ ಡ್ರಿಂಕ್ಸ್, ಕೇಕ್, ಬಿಸ್ಕತ್ ಗಳನ್ನು ಉದಾಹರಿಸಬಹುದು. ಇವುಗಳಲ್ಲಿ ನಾರಿನಂಶ ಹಾಗೂ ಪೋಷಕಾಂಶಗಳು ಅತಿ ಕಡಿಮೆ ಪ್ರಮಾಣದಲ್ಲಿ ಇರುತ್ತವೆ.

ಇತ್ತೀಚೆಗೆ ನಡೆಸಲಾದ ಒಂದು ಅಧ್ಯಯನದ ಪ್ರಕಾರ, ಇಂತಹ ಆಹಾರಗಳ ಸೇವನೆ ಅಂತಿಮವಾಗಿ ಪರಿಣಾಮ ಬೀರುವುದು ಆರೋಗ್ಯದ ಮೇಲೆ. ಅದು ಸಹ ಜೀವ ಹಾಗೂ ಬದುಕಿನೊಂದಿಗೆ  ಚೆಲ್ಲಾಟವಾಡುವ ಕ್ಯಾನ್ಸರ್ ನಂತಹ ರೋಗ ಬರಬಹುದು. ದೀರ್ಘ ಸಮಯ ಇಂತಹ ಆಹಾರಗಳನ್ನು ಪದೇ ಪದೆ ಸೇವನೆ ಮಾಡುತ್ತಿದ್ದರೆ ಹಾನಿ ಗ್ಯಾರೆಂಟಿ. 

Latest Videos

undefined

ರೆಡಿ ಟು ಈಟ್ (Ready to Eat) ಹಾಗೂ ಅತಿಯಾಗಿ ಸಂಸ್ಕರಣೆಯಾದ (Ultra Processed) ತಿನಿಸುಗಳನ್ನು ತಿನ್ನುವುದರಿಂದ ಪುರುಷರಲ್ಲಿ ಶೇ.29ರಷ್ಟು, ಮಹಿಳೆಯರಲ್ಲಿ ಶೇ.17ರಷ್ಟು ಪ್ರಮಾಣದಲ್ಲಿ ಕ್ಯಾನ್ಸರ್ (Cancer) ಅಪಾಯ ಹೆಚ್ಚುತ್ತದೆ.

ಮನೆಯಲ್ಲಿ ಮಾಡುವ ಆಹಾರದಲ್ಲಿ ಯಾವುದೇ ರೀತಿಯ ಕೆಮಿಕಲ್ (Chemical) ಇರುವುದಿಲ್ಲ. ಮಾಡುವ ಸಮಯದಲ್ಲೂ ಉತ್ಪಾದನೆಯಾಗುವುದಿಲ್ಲ ಹಾಗೂ ಅವುಗಳನ್ನು ರುಚಿಗಾಗಿ ಬಳಸುವುದೂ ಇಲ್ಲ. ಆದರೆ, ಇವುಗಳಲ್ಲಿ ವಿವಿಧ ರಾಸಾಯನಿಕ, ಹಾಗೆಯೇ ಅತಿಯಾದ ಸ್ವೀಟ್ನರ್ ಕೂಡ ಬಳಕೆಯಾಗುತ್ತದೆ. ಈ ಅಂಶಗಳೇ ಜಂಕ್ ಫುಡ್ (Junk Food) ನಲ್ಲಿ ಹೆಚ್ಚಾಗಿ ಬಳಕೆಯಾಗುತ್ತವೆ. ಸಾಮಾನ್ಯವಾಗಿ ಎಲ್ಲರೂ ಬಳಕೆ ಮಾಡುವ ಅತಿಯಾದ ಸಂಸ್ಕರಣೆಗೆ ಒಳಪಡುವ ಆಹಾರಗಳಾದ ಇನ್ ಸ್ಟಂಟ್ ನ್ಯೂಡಲ್ಸ್, ರೆಡಿ ಟು ಈಟ್ ಮೀಲ್ಸ್, ಪ್ಯಾಕ್ ಆಗಿರುವ ಸ್ನ್ಯಾಕ್ಸ್ (Snacks) ಮುಂತಾದವು ಸುಲಭವಾಗಿ, ಕೈಗೆಟುಕುವ ದರದಲ್ಲಿ ಲಭಿಸುತ್ತವೆ. ಇದರಿಂದಲೇ ಇವುಗಳ ಜನಪ್ರಿಯತೆಯೂ ಅಧಿಕ ಎನ್ನಬಹುದು. 

High Calorie Foods: ಕ್ಯಾಲರಿ ಬಗ್ಗೆ ಯೋಚಿಸ್ತೀರಾ? ಹಾಗಿದ್ರೆ ಈ ಡೇಂಜರಸ್‌ ತಿನಿಸುಗಳಿಂದ ದೂರವಿದ್ದುಬಿಡಿ

23 ಸಾವಿರ ಜನರ ಮೇಲೆ ನಡೆಸಲಾಗಿದ್ದ ಅಧ್ಯಯನದಲ್ಲಿ ಅಲ್ಟ್ರಾ ಪ್ರೊಸೆಸ್ಡ್ ಆಹಾರ ಸೇವನೆ ಮಾಡುವವರ ಮರಣ ಪ್ರಮಾಣ (Death Rate) ಕೂಡ ಅಧಿಕವಾಗಿದೆ. ಹೀಗಾಗಿ, ಇಂತಹ ಆಹಾರದಿಂದ ದೂರವಿರುವುದು ಕ್ಷೇಮ. 

ದೂರವಿರೋದು ಸುಲಭವಲ್ಲ:  ಸಂಸ್ಕರಣೆಯಾದ ಆಹಾರ (Food) ಸಹಜವಾಗಿ ನಮಗೆ ಬೇಕಾಗುವುದಿಲ್ಲ. ಯಾವುದೇ ಕಾರಣಕ್ಕೂ ಅದರ ಅಗತ್ಯವಿರುವುದಿಲ್ಲ. ಅವುಗಳನ್ನು ತಿನ್ನುವುದು ಕೇವಲ ನಮ್ಮ ಬಾಯಿರುಚಿಗೆ ಹಾಗೂ ಅವುಗಳ ಸ್ವಾದಕ್ಕೆ ಒಂದು ರೀತಿಯ ದಾಸರಾಗಿ ಅವುಗಳನ್ನು ತಿನ್ನುತ್ತೇವೆ, ಇವುಗಳಿಂದ ದೂರವಿರುವುದು ಸುಲಭವಲ್ಲ ಎಂದು ಬ್ರೆಜಿಲ್ ನಲ್ಲಿ ನಡೆದ ಅಧ್ಯಯನವೊಂದು ಹೇಳಿದೆ. ಇದು ನಿಜವೂ ಹೌದು. ಈ ಆಹಾರಗಳಲ್ಲಿ ದೇಹಕ್ಕೆ (Body Health) ಬೇಕಾದ ಯಾವೊಂದು ಅಂಶವೂ ಇರುವುದಿಲ್ಲ. ಅಧಿಕ ಕ್ಯಾಲರಿ (Calorie) ಹಾಗೂ ಆರೋಗ್ಯವನ್ನು ಕುಂದಿಸುವ ಅಂಶಗಳು ಮಾತ್ರವೇ ಇದ್ದರೂ, ಅದು ತಿಳಿದಿದ್ದರೂ ಎಲ್ಲರೂ ತಿನ್ನುತ್ತೇವೆ. “ಇದರಲ್ಲಿ ಆರೋಗ್ಯಕರ ಚೀಸ್ ಇರುತ್ತದೆ, ತರಕಾರಿ ಇದೆ, ಹಣ್ಣಿದೆ’ ಎಂದು ಯಾರೇ ಪ್ರಚಾರ ಮಾಡಿದರೂ ಅದು ಸತ್ಯವಲ್ಲ. 

ಕುಟುಂಬದಲ್ಲಿ cancer ಇತಿಹಾಸ ಇದ್ರೆ, ಈ 5 ಆಹಾರದಿಂದ ದೂರವೇ ಇರಿ

ಇಲ್ಲಿ ಸಾಮೂಹಿಕ ಬದ್ಧತೆ ಇರಬೇಕಾದುದು ಅತಿ ಅಗತ್ಯ. ಸರ್ಕಾರ ಅತಿಯಾಗಿ ಸಂಸ್ಕರಣೆ ಮಾಡಿದ ಆಹಾರದ ಉತ್ಪಾದನೆ, ಪ್ರಚಾರ ಹಾಗೂ ಮಾರಾಟದ ಮೇಲೆ ಕಠಿಣ ನಿರ್ಬಂಧವನ್ನು ಹೇರಬೇಕು. ಪಾಲಕರು (Parents) ಸ್ವತಃ ಇಂತಹ ಆಹಾರದಿಂದ ದೂರವುಳಿದು ಮಕ್ಕಳ (Children) ಆರೋಗ್ಯವನ್ನು ರಕ್ಷಿಸಬೇಕು. ಜತೆಗೆ, ಮಕ್ಕಳಲ್ಲಿ ಆರೋಗ್ಯಕರ ಆಹಾರದ ಬಗ್ಗೆ ಅರಿವು ಮೂಡಿಸಬೇಕು. 

click me!