ವಯಾಗ್ರ ನಿಷೇಧವಾಗಿದ್ದೇ ಆಗಿದ್ದು, ಪಾಕಿಸ್ತಾನದಲ್ಲಿ ಹಲ್ಲಿ ತೈಲಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಮುಳ್ಳು ಬಾಲದ ಹಲ್ಲಿಯ ಎಣ್ಣೆಯಿಂದ ಮಸಾಜ್ ಮಾಡಿಕೊಂಡರೆ ಲೈಂಗಿಕ ಸಾಮರ್ಥ್ಯ ಹೆಚ್ಚುತ್ತದೆ ಎಂದು ನಂಬಲಾಗಿದೆ.
ಜನರು ಲೈಂಗಿಕ ತೃಪ್ತಿಗಾಗಿ ಏನೆಲ್ಲ ಮಾಡುತ್ತಾರೆ. ಲೈಂಗಿಕ ಶಕ್ತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ವಿವಿಧ ಔಷಧ ಮಾಡುವುದರಿಂದ ಹಿಡಿದು ದೈಹಿಕ ಕಸರತ್ತುಗಳನ್ನು ಸಹ ಅಭ್ಯಾಸ ಮಾಡಿಕೊಳ್ಳುತ್ತಾರೆ. ಲೈಂಗಿಕ ಕಾಮಾಸಕ್ತಿ ಕುಂದಿದವರಿಗೆ ಇತ್ತೀಚಿನ ವರ್ಷಗಳಲ್ಲಿ ವಯಾಗ್ರ ಭಾರೀ ವರದಾನವಾಗಿದೆ. ಲೈಂಗಿಕ ಶಕ್ತಿ ಹೆಚ್ಚಿಸುವ ಮೂಲಕ ಕಾಮನೆಗಳ ತೃಪ್ತಿಗೊಳಿಸುವ ಮಾತ್ರೆ ಎಂದೇ ಜನಪ್ರಿಯವಾಗಿರುವ ವಯಾಗ್ರ ಈಗ ಭಾರೀ ಬೇಡಿಕೆಯಲ್ಲೂ ಇದೆ. ಇಂತಹ ಮಾತ್ರೆಯನ್ನು ಇತ್ತೀಚೆಗೆ ಪಾಕಿಸ್ತಾನದಲ್ಲಿ ನಿಷೇಧ ಮಾಡಲಾಗಿದೆ. ಅದೆಷ್ಟೋ ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಕಾರಣವಾಗಿದ್ದ ವಯಾಗ್ರ ಮಾತ್ರೆ ನಿಷೇಧವಾಗಿದ್ದೇ ಆಗಿದ್ದು, ಪಾಕಿಸ್ತಾನದ ಹಲವು ಪ್ರಾಂತ್ಯಗಳಲ್ಲಿ ಕಾಮೋತ್ತೇಜಕಗೊಳಿಸುವ ವಿವಿಧ ಪರ್ಯಾಯ ಮಾರ್ಗಗಳು ಜನಪ್ರಿಯವಾಗುತ್ತಿವೆ. ಸಾಮಾನ್ಯವಾಗಿ ಕಾಮೋತ್ತೇಜನಕ್ಕೆಂದು ಹಲವು ರೀತಿಯ ತೈಲಗಳು ಬಳಕೆಯಲ್ಲಿವೆ. ಅವುಗಳಲ್ಲಿ ಹಲ್ಲಿಯ ತೈಲವೂ ಒಂದು! ಅಚ್ಚರಿಯಾಗಬಹುದು. ಅದೇನು ವಿಚಿತ್ರವೋ ಗೊತ್ತಿಲ್ಲ, ಮುಳ್ಳು ಬಾಲದ ಹಲ್ಲಿಯಿಂದ ತೆಗೆದ ಎಣ್ಣೆ ಅಲ್ಲೀಗ ಭಾರೀ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಜನಪ್ರಿಯತೆ ಗಳಿಸಿಕೊಂಡಿದೆ. ಮುಖ್ಯವಾಗಿ ರಾವಲ್ಪಿಂಡಿ ಪ್ರದೇಶದ ಪುರುಷರು ಇದನ್ನು ಹೆಚ್ಚು ಪ್ರಮಾಣದಲ್ಲಿ ಬಳಕೆ ಮಾಡುತ್ತಿರುವುದಾಗಿ ಸುದ್ದಿಸಂಸ್ಥೆಗಳು ವರದಿ ಮಾಡಿವೆ.
Quack 'aphrodisiac' from lizard a hit
📸 Farooq Naeem pic.twitter.com/ZqtI2LVNba
ರಾವಲ್ಪಿಂಡಿಯ (Rawalpindi) ರಾಜಾ ಮಾರುಕಟ್ಟೆಯಲ್ಲಿ (Raza Market) ಹಲ್ಲಿಯ ತೈಲಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. “ಬಿಸಿ ರಕ್ತದ ಪಾಕಿಸ್ತಾನಿ ಪುರುಷರು (Pakistani Men) ತಮ್ಮ ಲೈಂಗಿಕ (Sexual) ಕೊರತೆಗಳನ್ನು ಶೀತ ರಕ್ತದ (Cold Blood) ಹಲ್ಲಿನ ತೈಲದಿಂದ (Lizard Oil) ನಿವಾರಣೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಎಎಫ್ ಪಿ ಸುದ್ದಿಸಂಸ್ಥೆ ಹೇಳಿದೆ. ಹಾಸಿಗೆಯಲ್ಲಿ ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ರಾವಲ್ಪಿಂಡಿ ಪುರುಷರು ಹೊಸ ಮಾರ್ಗ ಕಂಡುಕೊಂಡಿದ್ದಾರೆ ಎಂದು ಹೇಳಲಾಗಿದೆ. ವೈಜ್ಞಾನಿಕವಾಗಿ ಇದು ಸಾಬೀತಾಗಿಲ್ಲ. ಆದರೂ ಬೇಡಿಕೆ ಮಾತ್ರ ವಿಪರೀತವಾಗಿದೆ.
undefined
Relationship Tips : ಪರಾಕಾಷ್ಠೆ ಸಿಗ್ತಿಲ್ಲ ಅಂತಾ ಹೇಳೋದು ಹೇಗೆ?
ಕೇವಲ ಐದು ಹನಿ ಬಳಕೆ
ಹಲ್ಲಿಯ ಕೊಬ್ಬಿನಿಂದ ತೆಗೆದ ಎಣ್ಣೆ, ಚೇಳಿನ ತೈಲವನ್ನು ಕಟುವಾದ ಮಸಾಲೆಯೊಂದಿಗೆ ಬೆರೆಸಲಾಗುತ್ತದೆ. ಸಾಂಡಾ ತೈಲ (Sanda Oil) ಎಂದೂ ಕರೆಯಲ್ಪಡುತ್ತದೆ. ರಾಜಾ ಮಾರುಕಟ್ಟೆಯಲ್ಲಿ ನಾಲ್ಕು ವ್ಯಾಪಾರಿಗಳು ಇದನ್ನು ಮಾರಾಟ ಮಾಡುತ್ತಾರೆ. ಇವರಲ್ಲಿ ಒಬ್ಬರಾಗಿರುವ ಯಾಸಿರ್ ಅಲಿ ಎಂಬುವರು “ಕೇವಲ ಐದು ಹನಿಗಳನ್ನು ಪುರುಷರ ಜನನಾಂಗಕ್ಕೆ ಹಚ್ಚಿ ಮಸಾಜ್ ಮಾಡಬೇಕು. ಇದು ಮ್ಯಾಜಿಕ್ (Magic) ಮಾಡುತ್ತದೆ. ಲೈಂಗಿಕ ಸಾಮರ್ಥ್ಯ (Stamina) ಹೆಚ್ಚಿಸುತ್ತದೆ, ಕಾಮೋತ್ತೇಜನ ಮಾಡುತ್ತದೆ’ ಎಂದು ಹೇಳುತ್ತಾರೆ.
ಗ್ರೀಕ್ ಪುರಾಣಗಳಲ್ಲಿ ಲೈಂಗಿಕ ದೇವತೆಯನ್ನು ಅಫ್ರೊಡೈಸಿಯಾಕ್ ಎಂದು ಹೇಳಲಾಗುತ್ತದೆ. ಅದನ್ನು ಆರಾಧಿಸಿದರೆ ಲೈಂಗಿಕ ಶಕ್ತಿ ಹೆಚ್ಚುತ್ತದೆ ಎನ್ನಲಾಗುತ್ತಿತ್ತು. ಇದೂ ಸಹ ಅಷ್ಟೇ ಪರಿಣಾಮಕಾರಿ ಎನಿಸಿದೆ ಎಂದು ಫಾರೂಕ್ ನಾಸೀಮ್ ಎಂಬುವರು ಟ್ವಿಟ್ ಮಾಡಿದ್ದಾರೆ.ಗ್ರೀಕ್ ಪುರಾಣಗಳಲ್ಲಿ ಲೈಂಗಿಕ ದೇವತೆಯನ್ನು ಅಫ್ರೊಡೈಸಿಯಾಕ್ ಎಂದು ಹೇಳಲಾಗುತ್ತದೆ. ಅದನ್ನು ಆರಾಧಿಸಿದರೆ ಲೈಂಗಿಕ ಶಕ್ತಿ ಹೆಚ್ಚುತ್ತದೆ ಎನ್ನಲಾಗುತ್ತಿತ್ತು. ಇದೂ ಸಹ ಅಷ್ಟೇ ಪರಿಣಾಮಕಾರಿ ಎನಿಸಿದೆ ಎಂದು ಫಾರೂಕ್ ನಾಸೀಮ್ ಎಂಬುವರು ಟ್ವಿಟ್ ಮಾಡಿದ್ದಾರೆ.
ರಾಜಸ್ಥಾನದಲ್ಲಿ ಕಳ್ಳಬೇಟೆ (Hunt)
ನಮ್ಮ ದೇಶದ ರಾಜಸ್ಥಾನದಲ್ಲಿ ಇದು ಭಾರೀ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತದೆ. ಇದನ್ನು ಭಾರತೀಯ ಮುಳ್ಳು ಬಾಲದ ಹಲ್ಲಿ (Spine Tailed Lizard) ಅಥವಾ ಸಾಂಡಾ ಎಂದು ಕರೆಯಲಾಗುತ್ತದೆ. ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಈ ಹಲ್ಲಿಯನ್ನು ಕಳ್ಳ ಬೇಟೆ, ಸಾಗಾಟ ಮಾಡಲಾಗುತ್ತದೆ. ತಮ್ಮ ಗೂಡುಗಳಿಂದ ಹೊರಬಂದು ಬಿಸಿಲಿಗೆ ಕೂರುವ ಸಮಯದಲ್ಲಿ ಅವುಗಳನ್ನು ಹಿಡಿಯಲಾಗುತ್ತದೆ.
ಇಸ್ಲಾಮಾಬಾದ್ ಸಮೀಪದ 25 ವರ್ಷದ ಮಹಮ್ಮದ್ ನಾಸೀರ್ ಎಂಬಾತ ಮೀನುಗಾರಿಕೆಗೆ ಬಳಕೆ ಮಾಡುವ ತಂತಿ ಬಲೆಗಳ ಮೂಲಕ ಈ ಹಲ್ಲಿಗಳನ್ನು ಹಿಡಿಯುತ್ತಾನೆ. ಈತನ ವಂಶ ಇದರಲ್ಲಿ ಪಳಗಿದೆ. ಈತ ನಾಲ್ಕನೇ ತಲೆಮಾರಿನ ಕಳ್ಳ ಬೇಟೆಗಾರನಾಗಿದ್ದು, ‘ಪ್ರಾಣಿ ಓಡಿ ಹೋಗದಿರಲು ತಂತಿಬಲೆ ಬಳಕೆ ಮಾಡುತ್ತೇವೆ. ಯಾವುದೇ ಪ್ರಾಣಿ ಪ್ರಾಣಭಯದಲ್ಲಿರುವಾಗ ಬುಲೆಟ್ ವೇಗದಲ್ಲಿ ಓಡುತ್ತದೆ’ ಎಂದು ಹೇಳುತ್ತಾನೆ.
Women Health : ಮಧುಮೇಹವಿದೆ ಅಂತ ಸೆಕ್ಸಿನಿಂದ ದೂರ ಓಡ್ಬೇಡಿ, ಈ ಟಿಪ್ಸ್ ಪಾಲಿಸಿ
ಅದೇ ಜೀವನ
“ಕೆಲವೊಮ್ಮೆ ಈ ಹಲ್ಲಿಗಳನ್ನು ಹಿಡಿಯಲು ನೋವಾಗುತ್ತದೆ. ಅವು ತಮ್ಮ ಸ್ಥಳದಲ್ಲೇ ಬದುಕಬೇಕು. ಆದರೆ, ಅವುಗಳನ್ನು ಹಿಡಿದು ಮಾರುವುದು ನಮ್ಮ ಕಾಯಕವಾಗಿದೆ. ಜೀವನ ಅದರಿಂದಲೇ ನಡೆಯುತ್ತದೆ’ ಎನ್ನುತ್ತಾನೆ ನಾಸೀರ್.
ಸಾಂಪ್ರದಾಯಿಕ (Conservative) ದೇಶದ ಎನಿಸಿರುವ ಪಾಕಿಸ್ತಾನದಲ್ಲಿ ಸಾಮಾನ್ಯವಾಗಿ ದಂಪತಿಗಳು ಹೆಚ್ಚು ಮಕ್ಕಳನ್ನು ಹೊಂದುವ ಒತ್ತಡದಲ್ಲಿರುತ್ತಾರೆ. ಆದರೆ, ಸಹಜವಾಗಿ ಹೆಚ್ಚುತ್ತಿರುವ ಬಂಜೆತನದಿಂದಾಗಿ ಹಾಗೂ ವಯಾಗ್ರದಂತಹ (Viagra) ಉತ್ಪನ್ನಗಳು ಕಾನೂನುಬಾಹಿರ (Outlaw) ಎನಿಸಿರುವುದರಿಂದ ಇಂತಹ ಕಳ್ಳ ದಂಧೆಗಳು ಹೆಚ್ಚುತ್ತಿವೆ.