ಒಂಟಿಯಾಗಿರೋದನ್ನು ಅನೇಕರು ಇಷ್ಟಪಡ್ತಾರೆ. ಆದ್ರೆ ಒಂಟಿತನದಿಂದ ಮಾನಸಿಕ ಮಾತ್ರವಲ್ಲ ದೈಹಿಕ ಆರೋಗ್ಯವೂ ಹಾಳಾಗ್ತಿದೆ. ಒಂಟಿತನದ ಬಗ್ಗೆ ನಡೆದ ಸಂಶೋಧನೆಯೊಂದು ಆಘಾತಕಾರಿ ವಿಷ್ಯ ಹೊರಹಾಕಿದೆ. ಹಸಿವು ನಮ್ಮ ದೇಹದ ಮೇಲೆ ಪ್ರಭಾವ ಬೀರುವುದಕ್ಕಿಂತ ಹೆಚ್ಚಿನ ಹಾನಿ ಒಂಟಿತನದಿಂದ ಆಗುತ್ತೆ.
ಗಿಜಿಬಿಜಿ, ಗಲಾಟೆ ಮಧ್ಯೆ ಇದ್ದಾಗ ಶಾಂತಿ ಬೇಕು ಎನ್ನಿಸುತ್ತದೆ. ನೆಮ್ಮದಿಯಾಗಿ, ಪ್ರಶಾಂತ ಜಾಗದಲ್ಲಿ ಸ್ವಲ್ಪ ಸಮಯ ಕಳೆಯಬೇಕು ಎಂಬ ಜನರು ಅಂಥ ಜಾಗದ ಹುಡುಕಾಟ ನಡೆಸ್ತಾರೆ. ಆದ್ರೆ ಮನುಷ್ಯ ಸಮಾಜ ಜೀವಿ. ಆತನಿಗೆ ಏಕಾಂಗಿಯಾಗಿ ಜೀವನ ನಡೆಸಲು ಸಾಧ್ಯವಿಲ್ಲ.
ಮಾನವನಿಗೆ ಗಾಳಿ, ನೀರು, ಆಹಾರ (Food) ಬಹಳ ಅಗತ್ಯ. ಅದೇ ರೀತಿ, ಜೀವನ ನಡೆಸಲು ಇನ್ನೊಬ್ಬರ ಅಗತ್ಯವಿರುತ್ತದೆ. ಒಂಟಿಯಾಗಿ ಜೀವನ ನಡೆಸಲು ಸಾಧ್ಯವಿಲ್ಲ. ಒಂಟಿ (Alone) ಯಾಗಿ ಜೀವನ ನಡೆಸುವ ವ್ಯಕ್ತಿ ದೈಹಿಕ ಹಾನಿ ಮತ್ತು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಂಟಿಯಾಗಿ ಜೀವನ ಸಾಗಿಸುವ ವ್ಯಕ್ತಿ ಏನೆಲ್ಲ ಸಮಸ್ಯೆ ಎದುರಿಸುತ್ತಾನೆ ಎನ್ನುವ ಬಗ್ಗೆ ಸಂಶೋಧನೆ ನಡೆದಿದೆ. ಅಧ್ಯಯನ (Study) ದಲ್ಲಿ ಇದ್ರ ಬಗ್ಗೆ ಏನೆಲ್ಲ ಹೇಳಲಾಗಿದೆ ಎಂಬುದನ್ನು ನಾವಿಂದು ಹೇಳ್ತೇವೆ.
undefined
ಸೂಡಾನ್‌ನಿಂದ ಕರ್ನಾಟಕಕ್ಕೆ ಬಂದವರಲ್ಲಿ ಹಳದಿ ಜ್ವರದ ಭೀತಿ..!
ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾನಿಲಯ ಮತ್ತು ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಸಂಶೋಧನೆ ಪ್ರಕಾರ, ಎಂಟು ಗಂಟೆಗಳ ಒಂಟಿತನವು ವ್ಯಕ್ತಿಯೊಳಗಿನ ಧನಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದ್ರ ಎಂಟು ಗಂಟೆಗಳ ಕಾಲ ಆಹಾರ ಸೇವಿಸದೆ ದೇಹ ಸುಸ್ತಾಗುತ್ತದೆ. ಎಂಟು ಗಂಟೆಗಳ ಕಾಲ ಒಬ್ಬಂಟಿಯಾಗಿರುವುದು ದಣಿವನ್ನು ನೀಡುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ. ವಿಯೆನ್ನಾ ವಿಶ್ವವಿದ್ಯಾಲಯ ಮತ್ತು ಬ್ರಿಟನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ಗಮನ ಸೆಳೆಯುವ ವಿಷ್ಯವೊಂದು ಪತ್ತೆಯಾಗಿದೆ. ಜನರ ಜೊತೆ ವಾಸಿಸುವ ವ್ಯಕ್ತಿ, ಒಂಟಿಯಾಗಿ ವಾಸಿಸುವ ವ್ಯಕ್ತಿಗಿಂತ ಅತಿ ಬೇಗ ಪ್ರಭಾವಕ್ಕೆ ಒಳಗಾಗ್ತಾರಂತೆ. ಲ್ಯಾಬ್ ನಿಂದ ಹಿಡಿದು ಪೀಲ್ಡ್ ವರ್ಕ್ ವರೆಗೆ ನಡೆದ ಸಂಶೋಧನೆಯಲ್ಲಿ ಇದು ಗಮನ ಸೆಳೆದಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಒಂಟಿಯಾಗಿ ವಾಸಿಸುವ ವ್ಯಕ್ತಿಯ ದೇಹದಲ್ಲಿ ಶಕ್ತಿಯ ಕೊರತೆಯುಂಟಾಗುತ್ತದೆ. ಹೋಮಿಯೋಸ್ಟಾಟಿಕ್ ಪ್ರತಿಕ್ರಿಯೆಯಲ್ಲಿನ ಬದಲಾವಣೆಯಿಂದಾಗಿ ಅವರಿಗೆ ಶಕ್ತಿ ಕಡಿಮೆಯಾಗುತ್ತದೆ. ಒಬ್ಬಂಟಿಯಾಗಿರುವ ವ್ಯಕ್ತಿಯನ್ನು ಏಕಾಏಕಿ ಅನೇಕ ಜನರ ಮಧ್ಯೆ ಬಿಟ್ಟರೆ, ಅವನು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸುತ್ತಾನೆ ಎಂದು ಸಂಶೋಧಕರು ಹೇಳಿದ್ದಾರೆ.
ಅಬ್ಬಬ್ಬಾ.ಎರಡು ಶಿಶ್ನದೊಂದಿಗೆ ಜನಿಸಿದ ಮಗು, ಗುದದ್ವಾರವೇ ಇಲ್ಲ, ಬೆಚ್ಚಿಬಿದ್ದ ವೈದ್ಯರು!
ಸಂಶೋಧಕರು ಸಾಮಾಜಿಕ ಪ್ರತ್ಯೇಕತೆ ಮತ್ತು ಆಹಾರದ ಕೊರತೆ ನಡುವೆ ವಿಶೇಷ ರೀತಿಯ ಹೋಲಿಕೆ ಮಾಡಲಾಗಿದೆ. ದೇಹದಲ್ಲಿ ಆಹಾರ ಕೊರತೆಯಿದ್ದಾಗ ಯಾವ ಸಮಸ್ಯೆ ಕಾಡುತ್ತದೆಯೋ ಅದೇ ಸಮಸ್ಯೆ 8 ಗಂಟೆಗಳ ಕಾಲ ವ್ಯಕ್ತಿ ಒಂಟಿಯಾಗಿದ್ದಾಗ ಕಾಡುತ್ತದೆ. ಸಂಶೋಧನೆಯ ಪ್ರಕಾರ, ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರಜ್ಞರಾದ ಅನಾ ಸ್ಟಿಜೋವಿಕ್ ಮತ್ತು ಪಾಲ್ ಫೋರ್ಬ್ಸ್ ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆಹಾರದ ಕೊರತೆಯಾದಾಗ ಹಾಗೂ ಒಂಟಿಯಾಗಿದ್ದಾಗ ಸಾಕಷ್ಟು ಆಯಾಸ ಮತ್ತು ದೇಹದಲ್ಲಿ ಶಕ್ತಿಯ ಕೊರತೆ ಕಂಡು ಬರುತ್ತದೆ ಎಂದು ಅವರು ಹೇಳಿದ್ದಾರೆ.
ಸಂಶೋಧಕರು 30 ಮಹಿಳಾ ಸ್ವಯಂಸೇವಕರನ್ನು ಮೂರು ದಿನಗಳವರೆಗೆ ತಲಾ ಎಂಟು ಗಂಟೆಗಳ ಕಾಲ ಅಧ್ಯಯನ ಮಾಡಿದ್ದಾರೆ. ಈ ಮಹಿಳಾ ಸ್ವಯಂಸೇವಕರನ್ನು ಒಂದು ದಿನ ಒಬ್ಬಂಟಿಯಾಗಿ ಮತ್ತು ಒಂದು ದಿನ ಆಹಾರವಿಲ್ಲದೆ ಇರಿಸಲಾಯಿತು. ನಂತರ ಅವರಿಗೆ ಆಹಾರವನ್ನು ನೀಡಲಾಯಿತು. ಆದರೆ ಒಂಟಿಯಾಗಿಯೇ ಉಳಿಯುವಂತೆ ಸಲಹೆ ನೀಡಲಾಯ್ತು. ಆಹಾರ ಸೇವನೆ ಮಾಡಿಯೂ ಒಂಟಿಯಾಗಿದ್ದ ಮಹಿಳೆಯರು ಒತ್ತಡ ಅನುಭವಿಸುತ್ತಿದ್ದರು. ಅವರ ಮನಸ್ಥಿತಿಯಲ್ಲಿ ಬದಲಾವಣೆಯಾಗಿತ್ತು. ಆಯಾಸ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹೃದಯ ಬಡಿತ ಹೆಚ್ಚಾಗಿತ್ತು. ಲಾಲಾರಸದ ಕಾರ್ಟಿಸೋಲ್ ಮಟ್ಟಗಳು ಗಣನೀಯವಾಗಿ ಹೆಚ್ಚಾಗಿದ್ದವು ಎಂದು ಸಂಶೋಧಕರು ಹೇಳಿದ್ದಾರೆ.
ಆಸ್ಟ್ರಿಯಾ, ಇಟಲಿ ಅಥವಾ ಜರ್ಮನಿಯಲ್ಲಿ ವಾಸಿಸುವ 87 ಮಂದಿಯ ಮೇಲೂ ಪ್ರಯೋಗ ನಡೆದಿದೆ. ಏಪ್ರಿಲ್ ಮತ್ತು ಮೇ 2020 ರ ನಡುವಿನ ಕೊರೊನಾ ಲಾಕ್‌ಡೌನ್ ಜನರ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಿದೆ ಎಂದು ಅವರು ಹೇಳಿದ್ದಾರೆ. 8 ಗಂಟೆ ಮಾತ್ರವಲ್ಲ ದೀರ್ಘಕಾಲ ಒಂಟಿಯಾಗಿದ್ರೆ ಬೊಜ್ಜು ಕೂಡ ಹೆಚ್ಚಾಗುತ್ತದೆ ಎಂಬುದು ಹಿಂದೆ ನಡೆದ ಸಂಶೋಧನೆಯಿಂದ ಪತ್ತೆಯಾಗಿದೆ. ಒಂಟಿತನ ದೈಹಿಕ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಅಕಾಲಿಕ ಮರಣದ ಅಪಾಯವೂ ತುಂಬಾ ಹೆಚ್ಚು.