ಕೊರೋನಾ ಎದುರಿಸುವುದಕ್ಕೆ ನಾವೆಲ್ಲಾ ವಿಟಮಿನ್ ಸಿ, ಡಿ. ಇ, ಎಫ್ ಸಿಗುತ್ತೆ ಎಂದು ಸೇವಿಸುವ ವಸ್ತುಗಳು ಅತಿಯಾದರೆ ಕೊರೊನಾ ಬರುವ ಮೊದಲೇ ನಿಮ್ಮ ಬಾಡಿ ಬಸವಳಿದೀತು, ಎಚ್ಚರಿಕೆ.
ಇತ್ತೀಚೆಗೆ ಪ್ರತಿಷ್ಠಿತ ಅಸ್ಪತ್ರೆಯೊಂದರ ತಜ್ಞ ವೈದ್ಯರು ಕುತೂಹಲಕಾರಿ ಕೇಸೊಂದನ್ನು ಅಟೆಂಡ್ ಮಾಡಿದರು. ಟೈಪ್ 2 ಡಯಾಬಿಟಿಸ್ ಇದ್ದ ಪೇಷೆಂಟ್ ವಾಂತಿ ಭೇದಿ ಸಮಸ್ಯೆಯಿಂದ ಅವರ ಹತ್ತಿರ ಬಂದಿದ್ದರು.
ತಪಾಸಣೆ ಮಾಡಿದಾಗ ವಿಟಮಿನ್ ಡಿ ಟಾಕ್ಸಿಕ್ ಆದದ್ದು ಕಂಡುಬಂತು. ವಿಚಾರಿಸಿದಾಗ, ವಾಟ್ಸ್ಯಾಪ್‌ನಲ್ಲಿ ಬಂದ ಸಲಹೆಗಳನ್ನು ಸೀರಿಯಸ್ಸಾಗಿ ತೆಗೆದುಕೊಂಡು ವಿಟಮಿನ್ ಡಿ ಗುಳಿಗೆಗಳನ್ನು ಅತಿಯಾಗಿ ತೆಗೆದುಕೊಂಡಿದ್ದರು. ವಾರಕ್ಕೊಂದು ತೆಗೆದುಕೊಳ್ಳುವ ಬದಲು ದಿನಕ್ಕೊಂದು ತೆಗೆದುಕೊಂಡಿದ್ದರು. ಅದು ಎಡವಟ್ಟಾಗಿತ್ತು.
undefined
ಈಗ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಕೊರೊನಾ ಕೇಸುಗಳ ಜೊತೆಗೇ ಇಂಥ ಪ್ರಕರಣಗಳೂ ಕಾಣಿಸಿಕೊಳ್ಳತೊಡಗಿವೆ ಅನ್ನುತ್ತಾರೆ ತಜ್ಞರು. ವಿಟಮಿನ್ ಡಿ ದೇಹಕ್ಕೆ ಬೇಕು ನಿಜ. ಹಾಗಂತ ಅದರ ಗುಳಿಗೆಗಳನ್ನು ಅತಿಯಾಗಿ ತೆಗೆದುಕೊಂಡರೆ ವಾಕರಿಕೆ, ವಾಂತಿ, ನಿರ್ಜಲೀಕರಣ, ತೂಕಡಿಕೆ, ಗೊಂದಲ, ನಿದ್ರಾವಸ್ಥೆ ಇತ್ಯಾದಿ ಉಂಟಾಗುತ್ತವೆ. ರಕ್ತದಲ್ಲಿ ವಿಟಮಿನ್ ಡಿಯ ಅಂಶ ಒಂದು ಮಿಲಿಲೀಟರ್‌ಗೆ 150 ನ್ಯಾನೋ ಗ್ರಾಂಗಿಂತ ಹೆಚ್ಚಾಗಕೂಡದು.
ಉತ್ತಮ ಆರೋಗ್ಯಕ್ಕೆ ನ್ಯೂಟ್ರಿಶನಿಸ್ಟ್ ನೀಡಿದ ಸರಳ ಸಲಹೆಗಳು
ಇತ್ತೀಚೆಗೆ ಡಾಕ್ಟರ್ ಬಳಿಗೆ ಹೋಗುತ್ತಿರುವ ಎಲ್ಲ ಪೇಷೆಂಟ್‌ಗಳೂ ತಾವು ಇಮ್ಯೂನಿಟಿ ಹೆಚ್ಚಿಸುವುದಕ್ಕಾಗಿ ಒಂದಲ್ಲ ಒಂದು ಕಷಾಯ, ಗುಳಿಗೆ, ಅಥವಾ ಹೋಮಿಯೋಪತಿಯ ಆರ್ಸೇನಿಕಂ ಆಲ್ಬಂ ತೆಗೆದುಕೊಳ್ಳುವುದನ್ನು ಹೇಳುತ್ತಿದ್ದಾರೆ. ಅರಿಶಿನ, ಮೆಂತೆ ಕಾಳು ಕೂಡ ಸಾಕಷ್ಟು ಸೇವಿಸುತ್ತಾರೆ. ಸೇವಿಸಲಿ. ಆದರೆ ಸರಿಯಾದ ಪ್ರಮಾಣ ಎಷ್ಟು ಎಂದು ತಿಳಿಯದೆ ಸೇವಿಸುತ್ತಿರುವುದೇ ಸಮಸ್ಯೆಯಾಗಿದೆ.
ಪ್ರತಿಯೊಬ್ಬನಿಗೂ ಒಂದೇ ಅಳತೆ ನಡೆಯುವುದಿಲ್ಲ. ಒಬ್ಬೊಬ್ಬರ ದೇಹಕ್ಕೂ ಅವರವರ ದೇಹಪ್ರಕೃತಿಗೆ ಅನುಗುಣವಾಗಿ ಇವುಗಳ ಪ್ರಮಾಣ ಬೇರೆ ಬೇರೆ ಬೇಕಾಗಬಹುದು. ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ, ನ್ಯಾಚುರೋಪತಿ ಮಾದರಿಯಲ್ಲಿ ಹಲವು ಕಷಾಯಗಳೂ, ಗುಳಿಗೆಗಳೂ ರೋಗ ನಿರೋಧಶಕ್ತಿ ಹೆಚ್ಚಿಸುವಂಥವು ಇವೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ, ಇವುಗಳನ್ನು ಬಳಸಿ ದೇಹಾರೋಗ್ಯ ಹೆಚ್ಚಿಸಿಕೊಳ್ಳಿ ಎಂದು ಆಗಾಗ ಹೇಳಿದ್ದಾರೆ. ಆದರೆ ಇವನ್ನು ಬಳಸುವಾಗ ಆಯುಷ್ ಸಚಿವಾಲಯದ ನೀಡಿದ ಪ್ರಕಟಣೆಗಳಲ್ಲಿ ಅವುಗಳ ಡೋಸೇಜ್ ವಿವರಿಸಲಾಗಿದೆ; ಅಷ್ಟೇ ಪ್ರಮಾಣದಲ್ಲಿ ಸೇವಿಸಬೇಕು. ಅಥವಾ ತಲೆತಲಾಂತರದಿಂದ ಇವುಗಳನ್ನು ನೀಡುತ್ತಿರುವ ಪರಿಣತ ವೈದ್ಯರ ಬಳಿಯಾದರೂ ಸಲಹೆ ಪಡೆಯಬೇಕು.
ಮುಂಜಾನೆ ಎದ್ದು ಹೀಗೆ ಮಾಡಿದ್ರೆ ದಿನವಿಡೀ ಫ್ರೆಶ್ ಇರುತ್ತೆ ಮನಸ್ಸು!
ಮೆಂತೆ ಕಾಳುಗಳನ್ನು ಒಂದು ಹದದಲ್ಲಿ ಸೇವಿಸಬೇಕು. ಜಾಸ್ತಿ ಸೇವಿಸಿದರೆ ಅದು ರಕ್ತವನ್ನು ತೆಳು ಮಾಡುತ್ತದೆ. ಲಿವರ್ ಸಮಸ್ಯೆ ಇರುವವರಲ್ಲಿ ಮತ್ತು ಇಲ್ಲದವರಲ್ಲೂ, ಅಪಾಯಕಾರಿ ಮಟ್ಟ ಮುಟ್ಟಿದರೆ ಬ್ಲೀಡಿಂಗ್ ಶುರು ಆಗಿಬಿಡಬಹುದು. ಅಲೋವೆರಾ ಜ್ಯೂಸ್ ಕೂಡ ಒಳ್ಳೆಯದು. ಆದರೆ ಇದು ಅತಿಯಾದರೆ ಲಿವರ್ ಡ್ಯಾಮೇಜಾಗುವುದು ಖಾತ್ರಿ. ಅರಿಶಿನವನ್ನು ಹಾಲಿಗೆ ಹಾಕಿ ಅಥವಾ ಬಿಸಿನೀರಿನಲ್ಲಿ ಕದಡಿ ಕುಡಿಯುವುದು ಒಳ್ಳೆಯದು. ಆದರೆ ಇದು ದಿನಕ್ಕೆ ಅರ್ಧ ಸ್ಪೂನ್‌ಗಿಂತ ಹೆಚ್ಚು ಇರಬಾರದು. ಹೀಗೆ ದಿನಕ್ಕೆ ಎರಡು- ಮೂರು ಸ್ಪೂನ್ ಪ್ರತಿದಿನ ತಿಂಗಳುಗಟ್ಟಲೆ ಸೇವಿಸಿದ ಒಬ್ಬ ವ್ಯಕ್ತಿ ಕಂಗಳು ಪೂರ್ಣ ಹಳದಿಯಾಗಿ, ಲಿವರ್ ಸಮಸ್ಯೆ ಉಂಟಾಗಿರಬಹುದು ಎಂಬ ಭಯ ಮೂಡಿಸಿದ್ದನ್ನು ವೈದ್ಯರೊಬ್ಬರು ನೆನೆದಿದ್ದಾರೆ.
ಅಶ್ವಗಂಧ - ಮಕಾ ಬೇರು ಮಹಿಳೆಯರ ಸೆಕ್ಸ್ ಡ್ರೈವ್ ಹೆಚ್ಚಿಸೋ ಗಿಡಮೂಲಿಕೆಗಳು
ಕಷಾಯ, ಚ್ಯವನಪ್ರಾಶ, ಅಶ್ವಗಂಧಗಳನ್ನೂ ಹೆಚ್ಚಾಗಿ ಸೇವಿಸಿದರೆ ಜೀರ್ಣಾಂಗ ಸಮಸ್ಯೆ, ಇತರ ಸಮಸ್ಯೆಗಳೂ ಸೃಷ್ಟಿಯಾಗಬಹುದು. ಹೆಚ್ಚಿನ ಆಯುರ್ವೇದ ಮದ್ದುಗಳು ಉಷ್ಣಕಾರಿ. ಇವುಗಳನ್ನು ಸೇವಿಸುವಾಗ ದೇಹದ ತಂಪು ಕಾಪಾಡಿಕೊಳ್ಳಲು ಇನ್ನೊಂದು ಆಹಾರವೋ, ಎಳನೀರು ಅಥವಾ ಮೊಸರು ಇತ್ಯಾದಿ ಸೇವಿಸಿ ಬ್ಯಾಲೆನ್ಸ್ ಮಾಡಬೇಕಾಗುತ್ತದೆ.