ಕಿರುಚಾಡಿದ್ರೆ ಬಿಪಿ ಹೆಚ್ಚಾಯ್ತಾ ಅಂತ ತಮಾಷೆ ಮಾಡ್ಬೇಡಿ, ಅಧಿಕ ರಕ್ತದೊತ್ತಡದಿಂದ ಎಷ್ಟೊಂದು ಅಪಾಯವಿದೆ ತಿಳ್ಕೊಳ್ಳಿ

By Suvarna News  |  First Published May 14, 2022, 1:05 PM IST

ಕಿರುಚಾಡಿದ್ರೆ ಬಿಪಿ ಹೆಚ್ಚಾಯ್ತಾ ಎನ್ನುತ್ತೇವೆ. ಅನೇಕರು ಈ ಬಿಪಿ ಶಬ್ಧವನ್ನು ತಮಾಷೆಗೆ ಬಳಸ್ತಾರೆ. ಆದ್ರೆ ಇದು ತುಂಬಾ ಅಪಾಯಕಾರಿ ರೊಗ. ಒಬ್ಬರಿಂದ ಒಬ್ಬರಿಗೆ ಹರಡದೆ ಹೋದ್ರೂ ದೇಹ (Body)ವನ್ನು ಒಳಗೆ ಸುಡುತ್ತದೆ. ಭಾರತದಲ್ಲಿ ಮೂವರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡವಿದೆ (Hypertension) ಎಂಬ ಮಾಹಿತಿ ಈಗಾಗಲೇ ಬಹಿರಂಗವಾಗಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಭಾರತದಲ್ಲಿ ಪ್ರತಿ ಮೂವರಲ್ಲಿ ಒಬ್ಬರನ್ನು ಕಾಡ್ತಿದೆ ಬಿಪಿ. ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಬಿಪಿ (Bp ) ಸಮಸ್ಯೆ ಜನರನ್ನು ಕಾಡ್ತಿದೆ. ಅಧಿಕ ರಕ್ತದೊತ್ತಡ ಗಂಭೀರ (Serious) ವಾದ ಖಾಯಿಲೆಯಾಗಿದ್ದು,  ಇದು ಹೃದಯ, ಮೆದುಳು, ಮೂತ್ರಪಿಂಡ ಮತ್ತು ಇತರ ಕಾಯಿಲೆಗಳ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ( WHO) ವರದಿಯ ಪ್ರಕಾರ, ಪ್ರಪಂಚದಾದ್ಯಂತ, 30-79 ವರ್ಷ ವಯಸ್ಸಿನ ಸುಮಾರು 1.28 ಶತಕೋಟಿ ವಯಸ್ಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.

ಅಧಿಕ ರಕ್ತದೊತ್ತಡ ಹೊಂದಿರುವ ಸುಮಾರು ಶೇಕಡಾ 50ರಷ್ಟು ವಯಸ್ಕರು ತಮ್ಮ ಸಮಸ್ಯೆಯ ಬಗ್ಗೆ ತಿಳಿದೇ ಇಲ್ಲ. ಇದಲ್ಲದೆ ಅರ್ಧಕ್ಕಿಂತ ಕಡಿಮೆ ಜನರು ರೋಗ ಪತ್ತೆ ಮಾಡಿ  ಅದಕ್ಕೆ ಸೂಕ್ತವಾದ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾರತದಲ್ಲಿ ಮೂವರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡವಿದೆ ಎಂಬ ಮಾಹಿತಿ ಈಗಾಗಲೇ ಬಹಿರಂಗವಾಗಿದೆ. ತಪ್ಪು ಆಹಾರ ಪದ್ಧತಿ (Food style) ಅಂದ್ರೆ ಅತಿಯಾದ ಉಪ್ಪು ಸೇವನೆ, ಅಧಿಕ ಸ್ಯಾಚುರೇಟೆಡ್ ಕೊಬ್ಬು (Saturated Fat) ಮತ್ತು ಟ್ರಾನ್ಸ್ ಕೊಬ್ಬಿನ ಆಹಾರ ಸೇವನೆ, ಹಣ್ಣುಗಳು ಮತ್ತು ತರಕಾರಿಗಳಿಂದ ದೂರವಿರುವುದು ಅಧಿಕ ರಕ್ತದೊತ್ತಡಕ್ಕೆ ಒಂದು ಕಾರಣ. ಜಡ ಜೀವನಶೈಲಿ, ತಂಬಾಕು ಮತ್ತು ಮದ್ಯದ ಸೇವನೆ ಮತ್ತು ಅಧಿಕ ತೂಕ ಅಥವಾ ಬೊಜ್ಜು ಅಧಿಕ ಬಿಪಿಗೆ ಕಾರಣವಾಗ್ತಿದೆ.

Tap to resize

Latest Videos

Hign BP and Pregnancy: ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡ ನಿರ್ವಹಿಸುವುದು ಹೇಗೆ ?

ಇವುಗಳ ಹೊರತಾಗಿ, ಅಧಿಕ ರಕ್ತದೊತ್ತಡದ ಕುಟುಂಬಸ್ಥರಿಂದ ಬಳುವಳಿಯಾಗಿ ಬರ್ತಿದೆ. 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಮಧುಮೇಹ ಅಥವಾ ಮೂತ್ರಪಿಂಡದ ಕಾಯಿಲೆಯಿಂದ ಬಳಲುವವರಿಗೆ  ಅಧಿಕ ರಕ್ತದೊತ್ತಡ ಕಾಡಬಹುದು. ಅಧಿಕ ರಕ್ತದೊತ್ತಡಕ್ಕೆ ಕಾರಣವೇನು ಮತ್ತು ಏಕೆ ಇಷ್ಟು ಹೆಚ್ಚಾಗ್ತಿದೆ ಎಂಬುದನ್ನು ನಾವು ಹೇಳ್ತೇವೆ.  

ಈ ಸಾಮಾನ್ಯ ಲಕ್ಷಣಗಳೂ ಅಧಿಕ ರಕ್ತದೊತ್ತಡದ ಚಿಹ್ನೆಗಳಾಗಿರಬಹುದು : ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್  ಎಂದು ಕರೆಯಲಾಗುತ್ತದೆ. ಏಕೆಂದರೆ ಅದು ಯಾವುದೇ ನಿರ್ದಿಷ್ಟ ಲಕ್ಷಣಗಳು ಅಥವಾ ಚಿಹ್ನೆಗಳನ್ನು ಹೊಂದಿಲ್ಲ. ಅದಕ್ಕಾಗಿಯೇ ವೈದ್ಯರು ಆಗಾಗ್ಗೆ ರಕ್ತದೊತ್ತಡವನ್ನು ಪರೀಕ್ಷಿಸಲು ಶಿಫಾರಸು ಮಾಡುತ್ತಾರೆ. ಇದರ ಹೊರತಾಗಿ, ಕೆಲವು ಸಾಮಾನ್ಯ ರೋಗಲಕ್ಷಣಗಳು ಅಧಿಕ ಬಿಪಿ ಸಮಸ್ಯೆಯ ಎಚ್ಚರಿಕೆಯಾಗಿ ಕಂಡುಬರುತ್ತವೆ. ಇವುಗಳಲ್ಲಿ ಮುಂಜಾನೆ ತಲೆನೋವು, ಮೂಗಿನಲ್ಲಿ ರಕ್ತಸ್ರಾವ, ಅಸಹಜ ಹೃದಯ ಬಡಿತ, ದೃಷ್ಟಿ ಸಮಸ್ಯೆ, ಕಿವಿಯಲ್ಲಿ ರಿಂಗಿಂಗ್, ಸುಸ್ತು, ವಾಕರಿಕೆ, ವಾಂತಿ, ಗೊಂದಲ, ಹೆದರಿಕೆ, ಎದೆ ನೋವು ಮತ್ತು ಸ್ನಾಯುಗಳ ನಡುಕ ಇವೆಲ್ಲವೂ ಬಿಪಿಯ ಲಕ್ಷಣವಾಗಿರುತ್ತದೆ. ಆದ್ರೆ ಅದನ್ನು ಪತ್ತೆ ಮಾಡ್ಬೇಕು. 

Food and Health: ಈ ಅನಾರೋಗ್ಯ ಕಾಡುತ್ತಿದ್ದರೆ ರವೆ, ಕಡ್ಲೆಹಿಟ್ಟು ತಿನ್ಬೇಡಿ

ಸೈಲೆಂಟ್ ಕಿಲ್ಲರ್ ಹೈಪರ್ ಟೆನ್ಶನ್ ನಿಂದ ಬದುಕುಳಿಯುವುದು ಹೇಗೆ ? 
ಬಿಪಿ ಬರದಂತೆ ನಾವು ಎಚ್ಚರಿಕೆ ವಹಿಸಿಬೇಕು. ಬಂದ್ಮೇಲೆ ಅದನ್ನು ನಿಯಂತ್ರಿಸುವುದು ಕಷ್ಟ. ಹಾಗೆ ಬಿಪಿ ಬಂದವರು ಕೂಡ ಉಪ್ಪು ಸೇವನೆಯನ್ನು ಕಡಿಮೆ ಮಾಡಬೇಕು. ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪುನಸೇವನೆ ಮಾಡ್ಬೇಕು. .ಫಾಸ್ಟ್ ಫುಡ್ ಸೇವನೆ ಮಾಡುವ ಜನರು ಹಣ್ಣು – ತರಕಾರಿಯಿಂದ ದೂರವಾಗಿದ್ದಾರೆ. ಈ ಫಾಟ್ ಪುಡ್ ಗಳು ಆರೋಗ್ಯ ಹಾಳು ಮಾಡುತ್ತವೆ. ಹಾಗಾಗಿ ಬಿಪಿ ಬರಬಾರದು ಎನ್ನುವವರು  ಹಣ್ಣು –ತರಕಾರಿಗಳನ್ನು ಸರಿಯಾಗಿ ಸೇವನೆ ಮಾಡಿ. 

ದೈಹಿಕ ವ್ಯಾಯಾಮ ಕಡಿಮೆಯಾದ್ರೆ ದೇಹ ಆಲಸಿಯಾಗುತ್ತದೆ. ಒಂದೊಂದೇ ರೋಗ ಅಂಟಿಕೊಳ್ಳುತ್ತದೆ.  ಹಾಗಾಗಿ ನಿಯಮಿತವಾಗಿ ವ್ಯಾಯಾಮ ಮಾಡುವ ಅಗತ್ಯವಿದ. ಪ್ರತಿ ದಿನ ಯೋಗ, ಪ್ರಾಣಾಯಾಮ ಸೇರಿದಂತೆ ಕೆಲ ಯೋಗ ಮಾಡಿ, ದೇಹವನ್ನು ತಣಿಸಬೇಕಿದೆ. 
ತಂಬಾಕು ಬಳಕೆಯನ್ನು ತಪ್ಪಿಸುವುದು. ಹಾಗೆ ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಬೇಕು. ಇವೆರಡರಿಂದಲೂ ಬಿಪಿ ಹೆಚ್ಚಾಗುತ್ತದೆ. ಸ್ಯಾಚುರೇಟೆಡ್ ಕೊಬ್ಬಿನಂಶವಿರುವ ಆಹಾರಗಳ ಸೇವನೆಯನ್ನು ಮಿತಿಗೊಳಿಸಬೇಕು. ಆಹಾರದಲ್ಲಿ ಟ್ರಾನ್ಸ್ ಕೊಬ್ಬಿನ ಸೇವನೆಯನ್ನು ಡಿಮೆ ಮಾಡಿ,ನಮ್ಮ ದೇಹವನ್ನು ನಾವು ಸುರಕ್ಷಿತವಾಗಟ್ಟುಕೊಳ್ಳಬೇಕು. 

ಅನಿಯಂತ್ರಿತ ಅಧಿಕ ರಕ್ತದೊತ್ತಡ ಎಷ್ಟು ಭಯಾನಕವಾಗಿದೆ?: ಎದೆ ನೋವು, ಹೃದಯಾಘಾತ, ಹೃದಯ ವೈಫಲ್ಯ, ಅನಿಯಮಿತ ಹೃದಯ ಬಡಿತ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಹಾನಿ  ಇದೆಲ್ಲ ಸಮಸ್ಯೆ ಅಧಿಕ ರಕ್ತದೊತ್ತಡವಿರುವರನ್ನು ಕಾಡುತ್ತೆ,

ನಿರ್ವಹಣೆ ಹೇಗೆ? :  ಬಿಪಿ ನಿಯಂತ್ರಣ ಮಾಡುವುದು ಬಹಳ ಮಖ್ಯ. ಇದಕ್ಕಾಗಿ ಅನವಶ್ಯಕ ಒತ್ತಡವನ್ನು ಕಡಿಮೆ ಮಾಡಬೇಕು. ನಿಯಮಿತವಾಗಿ ರಕ್ತದೊತ್ತಡವನ್ನು ಪರೀಕ್ಷಿಸುವುದು ಮುಖ್ಯ.  

click me!