ಮಕ್ಕಳು ಆರೋಗ್ಯವಾಗಿರೋದು ಬಹಳ ಮುಖ್ಯ. ಉತ್ತಮ ಆಹಾರ ಮಕ್ಕಳ ಆರೋಗ್ಯವನ್ನು ವೃದ್ಧಿಸುತ್ತದೆ. ಹೊರಗಿನ ತಿಂಡಿ ಇಷ್ಟಪಡುವ ಮಕ್ಕಳು ಶಕ್ತಿ, ಉತ್ಸಾಹದಿಂದ ದಿನ ಕಳೆಯಬೇಕೆಂದ್ರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಕ್ಕಳಿಗೆ ಕೆಲ ಆಹಾರ ನೀಡಿ.
ಮಕ್ಕಳಿಗೆ ಊಟ, ತಿಂಡಿ ಮಾಡಿಸುವುದು ಎಷ್ಟು ಕಷ್ಟ ಎಂಬುದು ಎಲ್ಲ ತಾಯಂದಿರಿಗೂ ತಿಳಿದ ವಿಷಯ. ಮಕ್ಕಳಿಗೆ ಹೊಟ್ಟೆ ತುಂಬ ತಿಂಡಿ ತಿನ್ನಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಹೆತ್ತವರಿಗೆ ದೊಡ್ಡ ಸವಾಲು. ಈಗಿನ ಮಕ್ಕಳು ಊಟ, ತಿಂಡಿ ಸರಿಯಾಗಿ ಮಾಡುವುದಿಲ್ಲ. ಊಟ ಮಾಡುವಾಗ ತಿಂಡಿ ತಿನ್ನುವಾಗ ಇಲ್ಲ ಸಲ್ಲದ ಕಿರಿಕಿರಿ ಮಾಡುತ್ತಾರೆ ಅಥವಾ ಕೋಪ ಮಾಡಿಕೊಂಡು ಊಟವನ್ನು ಅರ್ಧದಲ್ಲೇ ನಿಲ್ಲಿಸುತ್ತಾರೆ ಅನ್ನೋದು ಪಾಲಕರ ಆರೋಪ.
ಮಕ್ಕಳ (Children) ಸರ್ವಾಂಗೀಣ ಅಭಿವೃದ್ಧಿಯ ಮೊದಲ ಮೆಟ್ಟಿಲೇ ಉತ್ತಮ ಆರೋಗ್ಯ (Health) . ಉತ್ತಮ ಆರೋಗ್ಯವಿದ್ದಾಗ ಮಾತ್ರ ಒಂದು ಮಗು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಲು ಸಾಧ್ಯ. ಆದರೆ ಈಗಿನ ಮಕ್ಕಳು ಹೆಚ್ಚು ಹೆಚ್ಚು ಹೊರಗಡೆ ಸಿಗುವ ತಿಂಡಿಗಳನ್ನೇ ಇಷ್ಟಪಡುತ್ತಾರೆ. ಅಂತಹ ರಾಸಾಯನಿಕ (Chemical) ಬೆರೆತ ಆಹಾರಗಳಿಂದಲೇ ಮಕ್ಕಳ ಆರೋಗ್ಯ ಹದಗೆಡುತ್ತದೆ. ಅಂತಹ ಫುಡ್ ಗಳನ್ನು ಇಷ್ಟಪಡುವ ಮಕ್ಕಳು ತರಕಾರಿ, ಹಣ್ಣು (Fruit) ಗಳನ್ನು ಇಷ್ಟಪಟ್ಟು ತಿನ್ನುವುದೇ ಇಲ್ಲ. ಇತ್ತೀಚೆಗೆ ಎಲ್ಲ ಮಕ್ಕಳೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಇದಾಗಿದೆ. ಆದ್ದರಿಂದ ಈ ಕೆಳಗಿನ ಕೆಲವು ಹೆಲ್ದಿ ಫುಡ್ ಗಳನ್ನು ಮಕ್ಕಳಿಗೆ ಖಾಲಿ ಹೊಟ್ಟೆಯಲ್ಲಿ ನೀಡಿದರೆ ಅದರಿಂದ ಮಕ್ಕಳ ಆರೋಗ್ಯ ಸುಧಾರಿಸುತ್ತದೆ. ಇವುಗಳಲ್ಲಿನ ಪೋಷಕ ತತ್ವಗಳು ಮಕ್ಕಳನ್ನು ಅನೇಕ ರೋಗದಿಂದ ದೂರವಿಡುತ್ತವೆ.
ಮಕ್ಕಳು ಬೆಳಿಗ್ಗೆ ಎದ್ದೊಡನೆ ಈ ಐದು ಆಹಾರ ನೀಡಿ :
BUTTER CANDLE : ಬೆಳಕು ಕೊಡುವ ಜೊತೆಗೆ ಹಸಿವು ನೀಗಿಸುತ್ತೆ ಈ ಮೇಣದಬತ್ತಿ !
ಬಾದಾಮಿ : ಬಾದಾಮಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಐರನ್, ಪ್ರೊಟೀನ್, ಫೈಬರ್, ವಿಟಮಿನ್ ಇ ಮುಂತಾದ ಪೋಷಕ ತತ್ವಗಳ ಭಂಡಾರವೇ ಆಗಿದೆ. ಬಾದಾಮಿಯನ್ನು ತಿನ್ನುವುದರಿಂದ ಮಕ್ಕಳ ಬುದ್ಧಿಶಕ್ತಿ ಹೆಚ್ಚುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾದಾಮಿಯನ್ನು ಸೇವಿಸಿದರೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ. ರಾತ್ರಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು. ಇದರಿಂದ ಜೀರ್ಣಕ್ರಿಯೆ ಕೂಡ ಸರಾಗವಾಗಿ ನಡೆಯುತ್ತದೆ. ಬಾದಾಮಿಯಲ್ಲಿರುವ ವಿಟಮಿನ್ ಇ ಚರ್ಮ ಮತ್ತು ಕೂದಲಿನ ಪೋಷಣೆಗೆ ಅತ್ಯಗತ್ಯವಾಗಿದೆ. ಬಾದಾಮಿ ನಮ್ಮ ಶರೀರದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಹೆಚ್ಚಲು ಸಹಾಯಮಾಡುತ್ತದೆ.
ಬಾಳೆಹಣ್ಣು : ಬಾಳೆಹಣ್ಣಿನಲ್ಲಿ ಕಾರ್ಬೊಹೈಡ್ರೇಟ್, ಐರನ್, ಸೋಡಿಯಂ ಮತ್ತು ಜಿಂಕ್ ಗಳು ಹೇರಳವಾಗಿದೆ. ನಿಮ್ಮ ಮಕ್ಕಳು ತೆಳ್ಳಗಿದ್ದರೆ ನೀವು ಬೆಳಿಗ್ಗೆ ಎದ್ದೊಡನೆ ಅವರಿಗೆ ಬಾಳೆಹಣ್ಣು ಕೊಡಬಹುದು. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ಅವರ ತೂಕ ಹೆಚ್ಚುತ್ತದೆ ಮತ್ತು ಮೂಳೆಗಳೂ ಸಹ ಬಲಗೊಳ್ಳುತ್ತವೆ. ಸಾಮಾನ್ಯವಾಗಿ ಊಟವಾದ ಮೇಲೆ ಎಲ್ಲರೂ ಬಾಳೆಹಣ್ಣು ತಿನ್ನುತ್ತಾರೆ. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣಿನ ಸೇವನೆಯಿಂದ ಮಕ್ಕಳ ರೋಗನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.
ನೆಲ್ಲಿಕಾಯಿ ಜಾಮ್ : ನೆಲ್ಲಿಕಾಯಿ ನೋಡಲು ಸಣ್ಣದಾಗಿದ್ದರೂ ಅದರ ಉಪಯೋಗ ಬೆಟ್ಟದಷ್ಟು ದೊಡ್ಡದಿದೆ. ನೆಲ್ಲಿಕಾಯಿಯಲ್ಲಿ ಐರನ್, ಕ್ಯಾಲ್ಸಿಯಂ, ವಿಟಮಿನ್ ಸಿ ಗಳಿವೆ. ಮಕ್ಕಳಿಗೆ ಪ್ರತಿದಿನ ಬೆಳಿಗ್ಗೆ ನೆಲ್ಲಿಕಾಯಿಯ ಜಾಮ್ ನೀಡಿದರೆ ಮಕ್ಕಳ ಕಣ್ಣು ತೀಕ್ಷ್ಣವಾಗುತ್ತದೆ. ನೆಲ್ಲಿಕಾಯಿಯಿಂದ ಹೊಟ್ಟೆಯ ಸಮಸ್ಯೆ ಶೀತ ಜ್ವರದ ತೊಂದರೆಯೂ ಬರುವುದಿಲ್ಲ. ಇದರಿಂದ ಮೂತ್ರಕೋಶದ ಸಣ್ಣ ಪುಟ್ಟ ತೊಂದರೆಗಳು ಕೂಡ ನಿವಾರಣೆಯಾಗುತ್ತದೆ.
ಸೇಬು ಹಣ್ಣು : ಸೇಬು ಹಣ್ಣಿನಲ್ಲಿ ಕ್ಯಾಲ್ಸಿಯಮ್, ಐರನ್, ಜಿಂಕ್ ಮತ್ತು ಪೊಟಾಶಿಯಂ ನಂತಹ ಪೌಷ್ಟಿಕ ಗುಣಗಳಿವೆ. ಸೇಬುಹಣ್ಣನ್ನು ಪ್ರತಿದಿನ ಖಾಲಿಹೊಟ್ಟೆಯಲ್ಲಿ ತಿನ್ನುವುದರಿಂದ ಕಣ್ಣುಗಳ ದೃಷ್ಠಿ ಚೆನ್ನಾಗಿರುತ್ತೆ ಮತ್ತು ಇಮ್ಯುನಿಟಿ ಕೂಡ ಹೆಚ್ಚಾಗುತ್ತೆ.
ನೀವು ಬಳಸೋ ಟೀ ಪುಡಿ ಕಲಬೆರಕೆ ಆಗಿದ್ಯಾ? ಹೀಗ್ ಚೆಕ್ ಮಾಡಿ
ಬಿಸಿ ನೀರು : ಉತ್ತಮ ಆರೋಗ್ಯಕ್ಕೆ ನೀರು ಬೇಕೇ ಬೇಕು. ಬೆಳಿಗ್ಗೆ ಎದ್ದೊಡನೆ ಬಿಸಿ ನೀರನ್ನು ಕುಡಿಯುವ ಅಭ್ಯಾಸವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಬಿಸಿ ನೀರು ಕುಡಿಯುವುದರಿಂದ ವಾತಾವರಣ ಬದಲಾದಾಗ ಬರುವ ರೋಗಗಳು ಯಾವುದೂ ಬರುವುದಿಲ್ಲ. ಇದರಿಂದ ಮಲಬದ್ಧತೆಯ ಸಮಸ್ಯೆ ಕೂಡ ದೂರವಾಗುತ್ತದೆ.