ಚಿಂತೆ ಯಾಕೋ ಬೆನ್ನು ಬಿಡೋಲ್ಲ ಅಂತಿದ್ದರೆ, ಈ ಟಿಪ್ಸ್ ಫಾಲೋ ಮಾಡಿ ನೆಮ್ಮದಿಯಿಂದ ಇರಿ

By Suvarna News  |  First Published Feb 13, 2023, 5:45 PM IST

ನೀವು ಅತಿಯಾದ ಆಲೋಚನೆ ಅಥವಾ ಓವರ್ ಥಿಂಕಿಂಗ್ ಡಿಸಾರ್ಡರ್ ಗೆ ತುತ್ತಾಗಿರುವಿರಾ? ಇದು ಮೇಲ್ನೋಟಕ್ಕೆ ಸಮಸ್ಯೆಯಂತೆ ಕಾಣುವುದಿಲ್ಲವಾದರೂ ವ್ಯಕ್ತಿಯ ಜೀವನವನ್ನು ದುಃಖಮಯವನ್ನಾಗಿ ಮಾಡಿಬಿಡುತ್ತದೆ. ಹೀಗಾಗಿ, ಅದಕ್ಕಿರುವ ಕಾರಣ ಹಾಗೂ ನಿವಾರಣೆಯ ಮಾರ್ಗಗಳ ಬಗ್ಗೆ ಅರಿತುಕೊಳ್ಳಿ.
 


ನೀವೆಂದಾದರೂ “ಅತಿಯಾದ ಆಲೋಚನೆ’ ಎನ್ನುವ ಸಮಸ್ಯೆಯ ಸುಳಿಗೆ ಸಿಲುಕಿದ್ದೀರಾ? ಆಲೋಚನೆ ಮಾಡುವುದೂ ಸಮಸ್ಯೆ ಆಗಬಹುದೇ ಎನ್ನುವ ಪ್ರಶ್ನೆ ಮೂಡಬಹುದು. ಅತಿಯಾದರೆ ಅಮೃತವೂ ವಿಷ ಎಂದಾದ ಮೇಲೆ ಆಲೋಚನೆಯೂ ವಿಷವಾಗುತ್ತದೆ. ಹೌದು, ಓವರ್ ಥಿಂಕಿಂಗ್ ಡಿಸಾರ್ಡರ್ ಅಥವಾ ಯಾವುದಾದರೂ ಒಂದು ವಿಚಾರದ ಬಗ್ಗೆ ನಿರಂತರವಾಗಿ ದುಃಖಿಸುತ್ತಲೇ ಇರುವುದು, ಒಂದೇ ವಿಚಾರದ ಬಗ್ಗೆ ಇಡೀ ದಿನ ಚಿಂತಿಸುವುದು  ಒಂದು ಮಾನಸಿಕ ಸಮಸ್ಯೆಯೇ. ಸಾಮಾನ್ಯವಾಗಿ, ದಿನವಿಡೀ ನಾವು ಒಂದಲ್ಲ ಒಂದು ವಿಚಾರದಲ್ಲಿ ಮನಸ್ಸನ್ನು ತೊಡಗಿಸುತ್ತೇವೆ. ಆದರೆ, ನಾವು ಯಾವುದೋ ಕೆಲಸ ಮಾಡುತ್ತಿದ್ದರೂ ಮನಸ್ಸು ಅದರ ಪಾಡಿಗದು ಕೇವಲ ಒಂದೇ ಅಂಶದ ಸುತ್ತ ಗಿರಕಿ ಹೊಡೆಯುತ್ತಿರುವುದು ಸರಿಯಲ್ಲ. ಆಗಲೇ ನಾವು ಮಾಡುವ ಚಿಂತೆ ಸಮಸ್ಯೆಯಾಗುತ್ತದೆ. ನಿಮಗೆ ಗೊತ್ತೇ? ಅತಿಯಾದ ಆಲೋಚನೆಯ ಸುಳಿಗೆ ಸಿಲುಕಿರುವಾಗ ಮಿದುಳಿನ ಹೈಪೋಥಲಾಮಸ್ ಎನ್ನುವ ಭಾಗ ಕೆಲಸ ನಿರ್ವಹಿಸುತ್ತಿರುತ್ತದೆ. ಇದೇ ಭಾಗ ಒತ್ತಡ ಹಾಗೂ ಆತಂಕದ ಸಮಸ್ಯೆಗೂ ಕಾರಣವಾಗುತ್ತದೆ. ಹಲವು ಕಾರಣದಿಂದ ನೀವು ಅತಿಯಾಗಿ ಆಲೋಚನೆ ಮಾಡುತ್ತಿರಬಹುದು. ಇದೊಂದು ವರ್ತನೆಗೆ ಸಂಬಂಧಿಸಿದ ಮಾದರಿಯೂ (ಬಿಹೇವಿಯರ್ ಪ್ಯಾಟರ್ನ್) ಆಗಿರಬಹುದು. ಇವುಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದನ್ನೂ ಅರಿತುಕೊಳ್ಳಿ. 

•    ಪರಿಪೂರ್ಣತೆ (Perfectionist) ಬಯಸ್ತೀರಾ?
ಕೆಲವು ಜನ ಎಲ್ಲದರಲ್ಲೂ ಪರಿಪೂರ್ಣತೆ ಬಯಸುತ್ತಾರೆ. ಇದು ಅಸಹಜ (Unrealistic) ಧೋರಣೆ. ಏಕೆಂದರೆ, ಎಲ್ಲವೂ ಪರಿಪೂರ್ಣವಾಗಿರಲು ಸಾಧ್ಯವಿಲ್ಲ. ಹೀಗಾಗಿ ಅದನ್ನು ಬಯಸುವುದು ಒತ್ತಡ (Stress) ನಿರ್ಮಿಸುತ್ತದೆ. ಇದರಿಂದ ನಿಯಂತ್ರಣ (Control) ಮಾಡುವ ಬುದ್ಧಿ ಬೆಳೆಯುತ್ತದೆ. ಇಂಥವರಲ್ಲಿ ಆತ್ಮವಿಶ್ವಾಸ (Self Esteem) ಕಡಿಮೆ ಇರುತ್ತದೆ, ಕೀಳರಿಮೆ ಅನುಭವಿಸುತ್ತಾರೆ, ಇತರರೊಂದಿಗೆ ತಮ್ಮನ್ನು ಹೋಲಿಕೆ ಮಾಡಿಕೊಳ್ಳುತ್ತಾರೆ. ಆಗ ಸುಲಭವಾಗಿ ಅತಿಯಾದ ಆಲೋಚನೆಯ (Over Thinking) ಸುಳಿಗೆ ಸಿಲುಕುತ್ತಾರೆ. ಇದಕ್ಕೆ ಪರಿಹಾರವೆಂದರೆ, ನೈಜ (Real) ಎನಿಸುವಂತಹ ಗುರಿಗಳನ್ನು ಫಿಕ್ಸ್ ಮಾಡಿಕೊಳ್ಳಿ. ಜನರಲ್ಲಿರುವ ವಿಭಿನ್ನತೆಯನ್ನು (Uniqueness) ಗುರುತಿಸಲು, ಗೌರವಿಸಲು ಕಲಿತುಕೊಳ್ಳಿ.

Latest Videos

undefined

ಮಾನಸಿಕ ಆರೋಗ್ಯಕ್ಕೆ ಒಳ್ಳೆ ಮದ್ದು ಪುಸ್ತಕ ಓದೋ ಅಭ್ಯಾಸ

•    ನಿರ್ಧಾರ (Decision) ಕೈಗೊಳ್ಳಲು ಕಷ್ಟದ ಸಮಯ
ಕೆಲವು ಸಮಯದಲ್ಲಿ ಗೊಂದಲ ಕಾಡುತ್ತದೆ. ಅಂತಹ ಸಮಯದಲ್ಲಿ ಅದೊಂದೇ ವಿಚಾರದ ಬಗ್ಗೆ ಪದೇ ಪದೆ ಯೋಚನೆ ಬರುವುದು ಸಹಜ. ಏನು ಮಾಡಬೇಕೆಂದು ತಿಳಿಯದೆ ಒದ್ದಾಡುವಂತಾಗುತ್ತದೆ. ಆದರೆ, ಸರಳವಾದ ವಿಚಾರಕ್ಕೂ ಹೀಗಾದರೆ, ನೀವು ಆ ವಿಚಾರದ ಬಗ್ಗೆ ಅತಿಯಾಗಿ ಯೋಚನೆ ಮಾಡುತ್ತಿರಬಹುದು! ಒಂದೇ ಅಂಶಕ್ಕೆ ಹೆಚ್ಚು ಗಮನ ನೀಡಿದಾಗ ಒತ್ತಡ, ಆತಂಕ (Anxiety) ಉಂಟಾಗುತ್ತದೆ. ಹೀಗಾಗಿಯೇ ನಿರ್ಧಾರ ಕೈಗೊಳ್ಳಲು ಸಹ ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ಏನು ಮಾಡಬೇಕೆಂದರೆ, ನೀವು ಕೈಗೊಳ್ಳಬೇಕಾದ ನಿರ್ಧಾರದ ಉತ್ತಮ ಹಾಗೂ ಕೆಟ್ಟ ಪರಿಣಾಮಗಳ (Effect) ಬಗ್ಗೆ ಲಿಸ್ಟ್ ಮಾಡಿ. ಅದನ್ನು ಆಧರಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ.

•    ಇತಿಹಾಸದಲ್ಲಿ (History) ಬದುಕ್ತೀರಾ?
ಹಿಂದೆ ಆಗಿಹೋದ ದುಃಖದ (Painful) ಘಟನೆಗಳು, ಕ್ಲಿಷ್ಟಕರ ಸಮಯಗಳನ್ನು (Bad Time) ಪದೇ ಪದೆ ನೆನಪಿಸಿಕೊಳ್ಳುವುದರಿಂದ ದೇಹ (Body), ಮನಸ್ಸು, ಬುದ್ಧಿ (Mind) ಹಾಗೂ ನಮ್ಮ ಸ್ಥೈರ್ಯಕ್ಕೆ (Spirit) ಹೊಡೆತ ಬೀಳುತ್ತದೆ. ಹಿಂದಾಗಿರುವುದನ್ನು ಬದಲಿಸಲು ಸಾಧ್ಯವಿಲ್ಲ ಎಂದಾದ ಮೇಲೆ ಅದರ ಬಗ್ಗೆ ಯೋಚಿಸಬಾರದು. ಬದಲಿಗೆ, ಖುಷಿಗೆ (Happy) ಕಾರಣವಾದ ಸಂಗತಿಗಳನ್ನು ನೆನಪಿಟ್ಟುಕೊಳ್ಳಬೇಕು. ಮಿದುಳಿಗೆ (Brain) ಸೂಕ್ತ ತರಬೇತಿ ನೀಡಿದರೆ ಇದು ಸಾಧ್ಯ. 

•    ಸಿಕ್ಕಾಪಟ್ಟೆ ಒತ್ತಡ (Stress)
ನಿಮಗೆ ಈಗಾಗಲೇ ತುಂಬ ಒತ್ತಡವಿದೆ ಎಂದಾದರೆ ಯಾವುದೇ ಸನ್ನಿವೇಶಕ್ಕೆ ಅತಿಯಾಗಿ ಸ್ಪಂದಿಸುತ್ತೀರಿ. ಭಯಪಡುತ್ತೀರಿ. ಆರೋಗ್ಯ (Health), ಹಣಕಾಸು (Finance), ಸಂಬಂಧಗಳ (Relation) ಬಗ್ಗೆ ಚಿಂತಿಸುತ್ತೀರಿ ಎಂದಾದರೆ ಮೊದಲು ನಿಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಿ. ಅಷ್ಟೇ ಅಲ್ಲ, ಭವಿಷ್ಯದ (Future) ಕುರಿತಾಗಿಯೂ ಅತಿಯಾದ ನಿರೀಕ್ಷೆ, ಆಲೋಚನೆ ಸಲ್ಲದು. ಬದುಕಿನ ಈ ಕ್ಷಣದ ಖುಷಿಯ ಬಗ್ಗೆ ಗಮನ ನೀಡಿ.

ಮಗು ಸದಾ ಡಲ್ ಇರುತ್ತಾ? ಮೂಡ್ ಆಫ್ ಆಗುತ್ತಿದ್ದರೆ ಈ ಸಮಸ್ಯೆ ಇರ್ಬಹುದು

•    ಸೀಮಿತ ನಂಬಿಕೆ (Limited Belief)
ನೀವು ಯಾರನ್ನೂ ನಂಬುವುದಿಲ್ಲವೇ? ಜೀವನದಲ್ಲಿ ಸೀಮಿತ ಸಂಗತಿಗಳ ಬಗ್ಗೆ ನಂಬಿಕೆ ಹೊಂದಿದ್ದೀರಾ? ಸೀಮಿತ ನಂಬಿಕೆಗಳನ್ನು ನಿಮ್ಮನ್ನು ಬಂಧಿಸುತ್ತವೆ. ಸದಾ ನಕಾರಾತ್ಮಕತೆಯನ್ನೇ (Nagetivity) ನೋಡುವವರನ್ನಾಗಿ ರೂಪಿಸುತ್ತದೆ. ಇದಕ್ಕೆ ಪರಿಹಾರವೆಂದರೆ, ನಿಮ್ಮ ಉತ್ತಮ ಗುಣಗಳತ್ತ ಫೋಕಸ್ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಸಕಾರಾತ್ಮಕತೆಯನ್ನು (Positivity) ಕಾಣುವ ಧೋರಣೆ ಬೆಳೆಸಿಕೊಳ್ಳಿ. 

 
 

click me!