ಧ್ವನಿಯಲ್ಲಿ ಅಸಹಜ ಬದಲಾವಣೆ ಕಂಡು ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ರೋಗಿಗೆ 15 ಗಂಟೆಗಳ ನಿರಂತರ ಹೃದಯ ಶಸ್ತ್ರಚಿಕಿತ್ಸೆಯ ನಡೆಸಿ ಜೀವ ಉಳಿಸಿದಂತಹ ಅಚ್ಚರಿಯ ಘಟನೆ ನಡೆದಿದೆ.
ದೆಹಲಿ: ಧ್ವನಿಯಲ್ಲಿ ಅಸಹಜ ಬದಲಾವಣೆ ಕಂಡು ಬಂದ ಹಿನ್ನೆಲೆ ಆಸ್ಪತ್ರೆಗೆ ದಾಖಲಾದ ರೋಗಿಗೆ 15 ಗಂಟೆಗಳ ನಿರಂತರ ಹೃದಯ ಶಸ್ತ್ರಚಿಕಿತ್ಸೆಯ ನಡೆಸಿ ಜೀವ ಉಳಿಸಿದಂತಹ ಅಚ್ಚರಿಯ ಘಟನೆ ನಡೆದಿದೆ. ನೋಯ್ಡಾದ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಬಿಷಣ್ ಸಿಂಗ್ ಬಿಶ್ತ್ ಎಂಬ ವ್ಯಕ್ತಿಯೊಬ್ಬರು ತನ್ನ ಧ್ವನಿಯಲ್ಲಿ ವಿಚಿತ್ರ ಬದಲಾವಣೆಯಾಗಿದೆ ಎಂದು ವೈದ್ಯರ ಬಳಿಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಎಲ್ಲಾ ರೀತಿಯ ಸ್ಕ್ಯಾನಿಂಗ್ ಹಾಗೂ ತಪಾಸಣೆಯನ್ನು ನಡೆಸಿದಾಗ ಬಿಶ್ತ್ ಅವರ ದೇಹದ ಮುಖ್ಯ ಅಫದಮನಿಯಲ್ಲಿ (main aorta) ಕಿತ್ತಳೆ ಗಾತ್ರದ ಮಹಾಪಧಮನಿಯ ಅನ್ಯೂರಿಸ್ಮ್ ಎಂದು ಕರೆಯಲ್ಪಡುವ ಗುಳ್ಳೆಯೊಂದು ( aortic aneurysm) ಬೆಳೆದಿತ್ತು.
ಈ ಗುಳ್ಳೆ ಒಡೆದರೆ ಜೀವಕ್ಕೆ ಸಂಚಕಾರ ತರುವುದು ಈ ಹಿನ್ನೆಲೆಯಲ್ಲಿ ನೋಯ್ಡಾದ ಸೆಕ್ಟರ್ 27ರಲ್ಲಿ ಇರುವ ಕೈಲಾಸ್ ಆಸ್ಪತ್ರೆ ಹಾಗೂ ಹಾರ್ಟ್ ಇನ್ಸ್‌ಟಿಟ್ಯೂಟ್‌ನಲ್ಲಿ ಅವರಿಗೆ ಮೂರು ಹಂತಗಳ ಸುದೀರ್ಘ ಶಸ್ತ್ರಚಿಕಿತ್ಸೆಯನ್ನು ಮಾಡಿ ಜೀವ ಉಳಿಸಲಾಗಿದೆ. ಈ ಬಗ್ಗೆ ಆಸ್ಪತ್ರೆಯ ಮುಖ್ಯ ಹೃದಯ ಶಸ್ತ್ರಚಿಕಿತ್ಸಕ ಹಾಗೂ ನಾಳಿ ಶಸ್ತ್ರಚಿಕಿತ್ಸಕ (vascular surgeon) ಸತೀಶ್ ಮ್ಯಾಥೀವ್ ಮಾತನಾಡಿದ್ದು, ರೋಗಿ ಭಿಷಣ್ ಸಿಂಗ್ ಬಿಸ್ತ್ ಅವರು ತಮ್ಮ ಧ್ವನಿಯಲ್ಲಿ ವಿಚಿತ್ರವಾದ ಒರಟುತನ ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಅವರಿಗೆ ಎಲ್ಲಾ ಟೆಸ್ಟ್‌ಗಳನ್ನು ಮಾಡಿದಾಗ ಅವರ ಅಫದಮನಿಯಲ್ಲಿ ಕಿತ್ತಳೆ ಹಣ್ಣಿ ಗಾತ್ರದ ಗಡ್ಡೆಯೊಂದು ದೊಡ್ಡದಾಗಿರುವುದು ಕಂಡು ಬಂತು. ಇದು ಒಡೆದರೆ ಜೀವಕ್ಕೆ ಅಪಾಯಕಾರಿ. ಕೊರೊನರಿ ಆಂಜಿಯೋಗ್ರಾಮ್ ಪರೀಕ್ಷೆಯಲ್ಲಿ (coronary angiogram tests) ಅವರ ಹೃದಯಕ್ಕೆ ರಕ್ತವನ್ನು ಸಾಗಿಸುವ ಎರಡು ಪ್ರಮುಖ ಅಪಧಮನಿಗಳು ಸಹ ಬಂದ್ ಆಗಿವೆ ಎಂಬುದು ಕಂಡು ಬಂತು. ಇದರಿಂದಾಗಿ ಹೃದಯಾಘಾತದ ಅಪಾಯವೂ ಇತ್ತು ಎಂದರು.
undefined
ಮ್ಯಾಥ್ಯೂ ಅವರ ನೇತೃತ್ವದಲ್ಲಿ ಕೈಲಾಸ್ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಕರ ತಂಡವು ರೋಗಿಯ ಜೀವಕ್ಕೆ ಅಪಾಯವಾಗದಂತೆ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಮೂರು ಹಂತಗಳಲ್ಲಿ ನಡೆಸಿದೆ. ಮೂರು ಹಂತಗಳ ಈ ಶಸ್ತ್ರಚಿಕಿತ್ಸೆಯುದ್ದಕ್ಕೂ ವೈದ್ಯ ಮ್ಯಾಥ್ಯೂ ಹಾಗೂ ಅವರ ತಂಡವು ಆಫ್-ಪಂಪ್ ಕ್ಯಾಬ್ಜ್( off-pump CABG) ಮೂಲಕ ಕೃತಕ ಟ್ಯೂಬ್‌ಗಳನ್ನು ಬಳಸಿಕೊಂಡು ಮೆದುಳಿಗೆ ಹೊಸ ರಕ್ತ ಪೂರೈಕೆಯಾಗುವಂತೆ ಮಾಡಿದರು. ರಕ್ತವೂ ದೇಹದ ಕೆಳಗಿನ ಭಾಗಕ್ಕೆ ನೇರವಾಗಿ ಹೋಗಲು ರಕ್ತಕ್ಕೆ ವ್ಯಾಲಿಯಂಟ್ ಕ್ಯಾಪ್ಟಿವಾ ಎಂಡೋಗ್ರಾಫ್ಟ್ ಮಾಡಿ ಮಹಾಪಧಮನಿಯನ್ನು ಬಲಪಡಿಸಿದರು.
ಆ್ಯಪಲ್ ವಾಚ್ ಅಲರ್ಟ್‌ನಿಂದ ಉಳಿಯಿತು ತುಂಬು ಗರ್ಭಿಣಿ ಜೊತೆ ಮಗುವಿನ ಪ್ರಾಣ!
ಆಸ್ಪತ್ರೆಯ ಪ್ರಕಾರ ಈ ಸಂಕೀರ್ಣ ಶಸ್ತ್ರಚಕಿತ್ಸೆಯೂ 15 ಗಂಟೆಗಳನ್ನು ತೆಗೆದುಕೊಂಡಿದೆ. ಶಸ್ತ್ರಚಿಕಿತ್ಸೆಯ ನಂತರ ಬಿಶ್ತ್ ಅವರು ಏಳು ದಿನಗಳ ಕಾಲ ವೈದ್ಯರು ಮತ್ತು ಸಿಬ್ಬಂದಿ ಅವರನ್ನು ಪರಿಶೀಲನೆಯಲ್ಲಿಟ್ಟಿದ್ದು, ನಂತರ ತಂಡವು ಅವರನ್ನು ಪರೀಕ್ಷಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಕಳೆದ ಎರಡು ದಶಕದಲ್ಲಿ ಈ ಆಸ್ಪತ್ರೆಯೂ ಒಟ್ಟು 5 ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಯನ್ನು ನಡೆಸಿದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಆಹಾ ನನ್ನ ಮದ್ವೆಯಂತೇ.., ಎಂದು ಖುಷಿಯಲ್ಲಿದ್ದ ವರನಿಗೆ ಮದುವೆ ಚಪ್ಪರದಲ್ಲಿಯೇ ಹಾರ್ಟ್ ಅಟ್ಯಾಕ್!