ಒಂದು ವರ್ಷದ ಮಗುವಿನಲ್ಲಿ ಅಪರೂಪದ ಹಾರ್ಮೋನಿನ ಅಸಮತೋಲನ ಪತ್ತೆಯಾಗಿದ್ದು, ಅವನ ದೇಹದಲ್ಲಿ ಅಸಾಮಾನ್ಯ ಬೆಳವಣಿಗೆ ಕಂಡುಬಂದಿದೆ. ವೈದ್ಯಕೀಯವಾಗಿ ಪ್ರಿಕಾಶಿಯಸ್ ಪ್ಯೂಬರ್ಟಿ ಎಂದು ಕರೆಯಲ್ಪಡುವ ಈ ಸ್ಥಿತಿಯು ಮಗುವಿನ ದೈಹಿಕ ಬೆಳವಣಿಗೆ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುತ್ತಿದೆ.
Rare Hormonal condition: ಒಂದು ವರ್ಷದ ಮಗುವಿಗೆ ಆಸೆಗಳು ಇರುತ್ತವೆಯಾ ಅಥವಾ ಇಲ್ಲವಾ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಲೋಕವನ್ನೇ ಅರಿಯದ ಒಂದು ವರ್ಷದ ಮಗುವಿಗೆ ಅಮ್ಮನ ಮಡಿಲು, ಅಪ್ಪನ ಹೆಗಲು ಇದ್ರೆ ಸಾಕು. ಮುಖ ಪರಿಚಯವಿಲ್ಲದವರ ಬಳಿಯೂ ಮಕ್ಕಳು ಹೋಗಲು ಹೆದರುತ್ತವೆ. ಇಂದು ನಾವು ಹೇಳುತ್ತಿರುವ ಈ ಒಂದು ವರ್ಷದ ಮಗುವಿಗೆ 25ರ ವಯಸ್ಸಿನ ಯುವಕನ ಆಸೆಗಳು ಕಂಡು ಬಂದಿವೆ. ಮಗುವಿನ ವಿಚಿತ್ರ ನಡವಳಿಗೆ ಹಾಗೂ ಅದರ ಬೆಳವಣಿಗೆಯನ್ನು ಕಂಡು ಪೋಷಕರು ವೈದ್ಯರ ಬಳಿ ಕರೆದೊಯ್ದ ಸಂದರ್ಭದಲ್ಲಿ ಆಘಾತಕಾರಿ ವಿಷಯ ಹೊರ ಬಂದಿದೆ. ಮಗು ಬಳಲುತ್ತಿರುವ ಕಾಯಿಲೆ ಬಗ್ಗೆ ತಿಳಿದ ಪೋಷಕರು ಒಂದು ಕ್ಷಣ ಶಾಕ್ ಆಗಿದ್ದಾರೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಜನನಾಂಗ ಮಾತ್ರ ವಯಸ್ಕರ ರೀತಿಯಲ್ಲಿ ಬೆಳವಣಿಗೆಯಾಗಿದೆ.
ಒಂದು ವರ್ಷದ ಮಗುವಿನ ದೇಹದ ಮೇಲೆ ವಯಸ್ಕರ ರೀತಿಯಲ್ಲಿ ಕೂದಲು ಬಂದಿದೆ. ಅಷ್ಟು ಮಾತ್ರವಲ್ಲದೇ ಮಗುವಿನ ಜನನಾಂಗದದ ಬಳಿಯೂ ಕೂದಲು ಬಂದಿದೆ. ಮಗುವಿನ ಒಂದು ವರ್ಷದ ವಯಸ್ಸಿನಲ್ಲಿಯೇ 25ರ ಯುವಕನಲ್ಲಿರಬೇಕಾದಷ್ಟು ಟೆಸ್ಟೊಸ್ಟೆರಾನ್ ಪ್ರಮಾಣದಲ್ಲಿದೆ. ಈ ಮಗು ರೇರ್ ಹಾರ್ಮೋನಲ್ ಕಂಡೀಷನ್ ಪ್ರಿಕಾಶಿಯಸ್ ಪ್ಯೂಬರ್ಟಿ (Rare Hormonal condition Precocious Puberty) ಎಂಬ ಸಮಸ್ಯೆಯಿಂದ ಬಳಲುತ್ತಿದೆ. ಹಾಗಾಗಿ ಮಗುವಿನಲ್ಲಿ ವಿಚಿತ್ರ ಬೆಳವಣಿಗೆಯಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ.
ಪೋಷಕರಿಗೆ ಗೊತ್ತಾಗಿದ್ದೇಗೆ?
ಡೇಲಿ ಮೇಲ್ ವರದಿ ಪ್ರಕಾರ, ಪೋಷಕರು ಮಗುವಿನ ಕಾಯಿಲೆ ಬಗ್ಗೆ ತಿಳಿದಾಗ ದಿಗ್ಬ್ರಾಂತಗೊಂಡಿದ್ದರು. ಆರು ತಿಂಗಳ ಹಿಂದೆಯೇ ಪೋಷಕರಿಗೆ ಮಗುವಿನಲ್ಲಾಗುತ್ತಿರುವ ವಿಚಿತ್ರ ಬೆಳವಣಿಗೆ ಬಗ್ಗೆ ಗಮನಕ್ಕೆ ಬಂದಿತ್ತು. ಮಗು ಆರು ತಿಂಗಳಿದ್ದಾಗಲೇ ದೇಹ ಹಾಗೂ ಜನನಾಂಗದ ಸುತ್ತಲೂ ಕೂದಲು ಬೆಳವಣಿಗೆಯಾಗುತ್ತಿರೋದನ್ನು ಪೋಷಕರು ಗಮನಿಸಿದ್ದರು. ಈ ಬೆಳವಣಿಗೆ ಪೋಷಕರಿಗೆ ವಿಚಿತ್ರ ಅನ್ನಿಸಿತ್ತು. ಮಾಧ್ಯಮವೊಂದರ ಜೊತೆ ಮಾತನಾಡಿರುವ ಮಗುವಿನ ತಾಯಿ, ಮಗುವಿನ ಎತ್ತರ ಬೆಳವಣಿಗೆ ಬಗ್ಗೆ ನಾವು ಅಷ್ಟು ಗಮನ ಹರಿಸಲಿಲ್ಲ. ಹಾಗಾಗಿಯೇ ನಾವು ವೈದ್ಯರ ಬಳಿಯೂ ಹೋಗಲಿಲ್ಲ. ಆರು ತಿಂಗಳ ನಂತರ ಅನುಮಾನ ಬಂದಾಗ ವೈದ್ಯರ ಬಳಿ ಮಗುವನ್ನು ಕರೆದುಕೊಂಡು ಹೋಗಲಾಯ್ತು ಎಂದು ಹೇಳಿದ್ದಾರೆ.
ಭಾರತದ ಈ ಗ್ರಾಮದ ಪುರುಷರಿಂದ ಗರ್ಭಿಣಿಯಾಗಲು ವಿದೇಶದಿಂದ ಬರ್ತಾರೆ ಮಹಿಳೆಯರು!
ಡಾಕ್ಟರ್ ಹೇಳಿದ್ದೇನು?
ಮಗುವಿನ ಪರೀಕ್ಷೆ ನಡೆಸಿದ ವೈದ್ಯರು Rare Hormonal condition Precocious Puberty ಸಮಸ್ಯೆಯಿಂದ ಕಂದಮ್ಮ ಬಳಲುತ್ತಿರೋದನ್ನು ಖಚಿತಪಡಿಸಿದ್ದಾರೆ. ಪೆರೂವಿನ ಲೀನಾ ಮೆಡಿನಾ ಎಂಬ ಐದು ವರ್ಷದ ಮಗು ತಾಯಿಯಾಗಿದ್ದ ವಿಷಯವನ್ನು ಹೇಳಿದ್ದಾರೆ. ಲೀನಾ ಪೋಷಕರು ಆರಂಭದಲ್ಲಿ ಮಗಳ ಹೊಟ್ಟೆಯಲ್ಲಿ ಯಾವುದಾದರೂ ಗಡ್ಡೆ ಇರಬಹುದು ಎಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ 5 ವರ್ಷದ ಲೀನಾ ಮೆಡಿನಾ ಗರ್ಭಿಣಿ ಅನ್ನೋದು ಖಚಿತವಾಗಿತ್ತು.
ಇದೀಗ ಒಂದು ವರ್ಷದ ಮಗುವಿನಲ್ಲಿ ಉಂಟಾಗುತ್ತಿರುವ ಬಗ್ಗೆ ಮಾತನಾಡಿರುವ ವೈದ್ಯರು, ಇದು ಗಂಭೀರವಾದ ಆರೋಗ್ಯ ಸಮಸ್ಯೆ. ಸೆಕ್ಸ್ ಆಸೆಯುಂಟಾದಾಗ ಮಗು ಅಗ್ರೆಸ್ಸಿವ್ ಆಗುತ್ತದೆ. ಈ ಸಮಸ್ಯೆಯಿಂದಾಗ ಮಗುವಿನ ಎತ್ತರ 3 ಅಥವಾ 4 ಫೂಟ್ ಆಗ್ತಿದೆ ಎಂದು ಹೇಳಿದ್ದಾರೆ. ಸದ್ಯ ಮಗುವಿಗೆ ಔಷಧಿ (ಮಾತ್ರೆ) ನೀಡುವ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಅವನಿಗೆ ತಿಳುವಳಿಕೆ ಮತ್ತು ಬೌದ್ಧಿಕವಾಗಿ ವಯಸ್ಕನಾಗುವರೆಗೂ ಈ ಔಷಧಿ ನೀಡಬೇಕಾಗುತ್ತೆ ಎಂದು ವೈದ್ಯರು ಸೂಚಿಸಿದ್ದಾರೆ.
ಹೋಟೆಲ್‌ನಲ್ಲಿ ಪುರುಷನ ಖಾಸಗಿ ಭಾಗಕ್ಕೆ ಕಚ್ಚಿದ ಚೇಳು; ನನ್ನ ಜೀವನವೇ ಹಾಳಾಯ್ತು ಅಂತ ಕಣ್ಣೀರಿಟ್ಟ ಪತ್ನಿ!