ಕೇರಳಕ್ಕೆ ಮತ್ತೆ ಕಾಲಿಟ್ಟ ನಿಫಾ ವೈರಸ್‌, ಇಬ್ಬರು ಸಾವು ಕಂಡ ಬೆನ್ನಲ್ಲಿಯೇ ಆರೋಗ್ಯ ಇಲಾಖೆ ಅಲರ್ಟ್‌!

By Santosh Naik  |  First Published Sep 12, 2023, 4:20 PM IST

ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಪ್ರಕರಣ ವರದಿಯಾಗಿದೆ. 2018ರಲ್ಲಿ ಮೊಟ್ಟಮೊದಲ ಭಾರಿಗೆ ದಕ್ಷಿಣ ಭಾರತದಲ್ಲಿ ನಿಫಾ ವೈರಸ್‌ ಹಾವಳಿ ಸೃಷ್ಟಿಸಿತ್ತು. ಕೇರಳದ ಕೋಜಿಕ್ಕೋಡ್‌ ಮತ್ತು ಮಲಪ್ಪುರಂ ಜಿಲ್ಲೆಗಳು ಇದಕ್ಕೆ ಹೆಚ್ಚಾಗಿ ಹಾನಿಗೊಳಗಾಗಿದ್ದವು.


ಕೊಚ್ಚಿ (ಸೆ.12); ಕೇರಳದಲ್ಲಿ ಮತ್ತೆ ನಿಫಾ ವೈರಸ್‌ ಆರ್ಭಟ ಶುರುವಾಗಿದೆ. ಕೋಜಿಕ್ಕೋಡ್‌ ಜಿಲ್ಲೆಯಲ್ಲಿ ಅಸ್ವಾಭಾವಿಕವಾಗಿ ಸಾವನ್ನಪ್ಪಿದ್ದ ಇಬ್ಬರು ವ್ಯಕ್ತಿಗಳು ನಿಫಾ ವೈರಸ್‌  (NiV) ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಸಾವುಗಳು ವರದಿಯಾದ ಬೆನ್ನಲ್ಲಿಯೇ ಕೇರಳದ ಆರೋಗ್ಯ ಇಲಾಖೆ ಸೋಮವಾರ ರಾತ್ರಿ ಕೋಜಿಕ್ಕೋಡ್‌ ಜಿಲ್ಲೆಯಲ್ಲಿ ಹೆಲ್ತ್‌ ಅಲರ್ಟ್‌ ಘೋಷಣೆ ಮಾಡಿದೆ.  ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಪ್ರಕಾರ, ಮೃತರಲ್ಲಿ ಒಬ್ಬರ ಸಂಬಂಧಿಕರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ. ಮೃತರಾದ ಇಬ್ಬರನ್ನು ಕೋಝಿಕ್ಕೋಡ್ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಇದಕ್ಕೂ ಮುನ್ನ ಸೋಮವಾರ ರಾಜ್ಯ ಆರೋಗ್ಯ ಸಚಿವರು ಉನ್ನತ ಮಟ್ಟದ ಸಭೆ ನಡೆಸಿ ಜಿಲ್ಲೆಯ ಪರಿಸ್ಥಿತಿ ಅವಲೋಕಿಸಿದರು.

ಕೇರಳದಲ್ಲಿನ ನಿಫಾ ವೈರಸ್‌ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳು
- 2018 ರಲ್ಲಿ ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ನಿಫಾ ವೈರಸ್ ಹರಡಿರುವ ಬಗ್ಗೆ ವರದಿಯಾಗಿತ್ತು. ಆ ಬಳಿಕ 2021ರಲ್ಲಿ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ನಿಫಾ ವೈರಸ್‌ ಪ್ರಸಾರದ ಬಗ್ಗೆ ವರದಿಯಾಗಿತ್ತು.

Latest Videos

undefined

- ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ನಿಪಾ ವೈರಸ್ ಸೋಂಕು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುವ ಝೂನೋಟಿಕ್ ಕಾಯಿಲೆಯಾಗಿದ್ದು, ಕಲುಷಿತ ಆಹಾರದ ಮೂಲಕ ಅಥವಾ ನೇರವಾಗಿ ಜನರ ನಡುವೆ ಹರಡಬಹುದು ಮತ್ತು ಬಾವಲಿಗಳಿಂದ ಉಂಟಾಗುತ್ತದೆ. ವೈರಸ್ ಮನುಷ್ಯರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಮಾರಕವಾಗಿದೆ. ಈ ವೈರಸ್ ಹಂದಿಗಳಂತಹ ಪ್ರಾಣಿಗಳಲ್ಲಿ ತೀವ್ರವಾದ ರೋಗವನ್ನು ಉಂಟುಮಾಡಬಹುದು, ಇದರ ಪರಿಣಾಮವಾಗಿ ರೈತರಿಗೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

- ನಿಫಾ ವೈರಸ್ ಏಷ್ಯಾದಲ್ಲಿ ತಿಳಿದಿರುವ ಕೆಲವೇ ಸಾಂಕ್ರಾಮಿಕಗಳಿಗೆ ಕಾರಣವಾಗಿದ್ದರೂ, ಇದು ವ್ಯಾಪಕ ಶ್ರೇಣಿಯ ಪ್ರಾಣಿಗಳಿಗೆ ಸೋಂಕು ತರುತ್ತದೆ ಮತ್ತು ಜನರಲ್ಲಿ ತೀವ್ರವಾದ ಕಾಯಿಲೆ ಮತ್ತು ಸಾವಿಗೆ ಕಾರಣವಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

- ವೈರಸ್ ಸೋಂಕಿಗೆ ಒಳಗಾದವರು ತೀವ್ರವಾದ ಉಸಿರಾಟದ ಕಾಯಿಲೆ ಮತ್ತು ಮಾರಣಾಂತಿಕ ಎನ್ಸೆಫಾಲಿಟಿಸ್ನಂತಹ ತೀವ್ರ ಸಮಸ್ಯೆಗಳನ್ನು ಎದುರಿಸಬಹುದು. ನಿಫಾ ವೈರಸ್‌ನ ಲಕ್ಷಣಗಳು ಕೋವಿಡ್-19 ನಂತೆಯೇ ಇರುತ್ತವೆ - ಕೆಮ್ಮು, ನೋಯುತ್ತಿರುವ ಗಂಟಲು, ತಲೆತಿರುಗುವಿಕೆ, ಅರೆನಿದ್ರಾವಸ್ಥೆ, ಸ್ನಾಯು ನೋವು, ಸುಸ್ತು, ಎನ್ಸೆಫಾಲಿಟಿಸ್ (ಮೆದುಳಿನ ಊತ), ತಲೆನೋವು, ಕುತ್ತಿಗೆ ಬಿಗಿಯಾಗುವುದು, ಬೆಳಕಿನ ಸೂಕ್ಷ್ಮತೆಗಳು ಉಂಟಾಗುತ್ತದೆ.

 

ಹಣ್ಣುಗಳನ್ನು ತಿನ್ನೋ ಮುನ್ನ ಹುಷಾರ್‌, ಮತ್ತೆ ಹರಡುತ್ತಿದೆ ಮಾರಣಾಂತಿಕ ನಿಫಾ !

- ವೈರಸ್‌ಗೆ ಯಾವುದೇ ನಿರ್ಣಾಯಕ ಚಿಕಿತ್ಸೆ ಲಭ್ಯವಿಲ್ಲದಿದ್ದರೂ, ನೆಲದ ಮೇಲೆ ಬಿದ್ದ ಹಣ್ಣುಗಳನ್ನು ತಿನ್ನುವುದನ್ನು ತಪ್ಪಿಸಬೇಕು. ಹಂದಿಗಳಿಗೆ ಆಹಾರ ನೀಡುವುದನ್ನು ತಪ್ಪಿಸುವುದು ಮತ್ತು ಬಾವಲಿಗಳನ್ನು ದೂರವಿಡುವಂತಹ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು.

ನಿಫಾ ಭೀತಿಯಲ್ಲಿ ದಾಖಲಾಗಿದ್ದ ವ್ಯಕ್ತಿಯ ಪರೀಕ್ಷೆ ವರದಿ ನೆಗೆಟಿವ್‌

click me!