Air Pollution: ಹದಿಹರೆಯದವರಲ್ಲಿ ಹೆಚ್ಚುತ್ತಿದೆ ಖಿನ್ನತೆ !

By Suvarna News  |  First Published Mar 16, 2022, 5:13 PM IST

ಇವತ್ತಿನ ಹದಿಹರೆಯ (Adolescents)ದ ಮಕ್ಕಳನ್ನು ಗಮನಿಸಿದ್ದೀರಾ ? ಎಲ್ಲಾ ಇದ್ರೂ ಅವ್ರು ಖುಷಿಯಾಗಿರಲ್ಲ. ಯಾವಾಗ್ಲೂ ಏನನ್ನೋ ಕಳೆದುಕೊಂಡವರಂತೆ ಇದ್ದುಬಿಡ್ತಾರೆ. ಸಣ್ಣಪುಟ್ಟ ಕಾರಣಕ್ಕೆ ಸುಸೈಡ್ (Sucide) ಮಾಡಿಕೊಳ್ಳೋರ ಸಂಖ್ಯೆನೂ ಹೆಚ್ಚಾಗಿದೆ. ಇದಕ್ಕೆಲ್ಲಾ ವಾಯುಮಾಲಿನ್ಯಾ (Air Pollution)ನೂ ಕಾರಣವಾಗ್ತಿದೆ ಅಂದ್ರೆ ನೀವು ನಂಬ್ತೀರಾ. ಹೇಗೆ ? ಏನೂಂತ ತಿಳ್ಕೊಳ್ಳೋಕೆ ಈ ಆರ್ಟಿಕಲ್ ಓದಿ.


ಕಾಲ ಬದಲಾಗುತ್ತಿರುವ ಹಾಗೆಯೇ ಜನಸಂಖ್ಯೆ ಹೆಚ್ಚಳದ ಜತೆಗೆ ಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಿದೆ. ಜಲಮಾಲಿನ್ಯ, ಭೂಮಾಲಿನ್ಯ, ಶಬ್ದ ಮಾಲಿನ್ಯ ವಿಪರೀತವಾಗುತ್ತಿದೆ. ಮನುಷ್ಯ ಹೊಸ ಹೊಸ ಕಾಯಿಲೆಗಳಿಗೆ ಹೆದರುವ ಹಾಗೆಯೇ ಬದಲಾಗುವ ವಾತಾವರಣಕ್ಕೂ ಹೆದರಬೇಕಾಗಿದೆ. ಅದರಲ್ಲೂ ವಾಯುಮಾಲಿನ್ಯ ಹಲವಾರು ಆರೋಗ್ಯ ಸಮಸ್ಯೆ (Health Problem)ಗಳಿಗೆ ಕಾರಣವಾಗ್ತಿದೆ.

ಬೇಕಾಬಿಟ್ಟಿ ವಾಹನಗಳ ಓಡಾಟ, ಗಣಿಗಾರಿಕೆ, ಎಲ್ಲೆಡೆ ಕಾರ್ಖಾನೆ, ಕಾಂಕ್ರೀಟ್ ಬಿಲ್ಡಿಂಗ್‌ಗಳ ನಿರ್ಮಾಣದಿಂದ ವಾಯಮಾಲಿನ್ಯ (Air Pollution) ವಿಪರೀತವಾಗುತ್ತಿದೆ. ಇದರಿಂದಲೇ ಅಸ್ತಮಾ, ಕೆಮ್ಮು, ಜ್ವರ, ಶ್ವಾಸಕೋಶದ ಸಮಸ್ಯೆ, ಉಸಿರಾಟದ ಸಮಸ್ಯೆಗಳು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದೆ.

Tap to resize

Latest Videos

ವಾಯು ಮಾಲಿನ್ಯವು ಪರಿಸರದ ಹೊರತಾಗಿ ಆರೋಗ್ಯಕ್ಕೆ ದೊಡ್ಡ ಅಪಾಯವನ್ನುಂಟು ಮಾಡುತ್ತಿದೆ. ಮನೆಯ ಹೊರಗಿನ ಹಾಗೂ ಮನೆಯೊಳಗಿನ ವಾಯು ಮಾಲಿನ್ಯದ ಪರಿಣಾಮಗಳು ಭಾರತದಲ್ಲಿ ಪ್ರತಿ ವರ್ಷ ಲಕ್ಷಾಂತರ ಅಕಾಲಿಕ ಮರಣಗಳಿಗೆ ಕಾರಣವಾಗುತ್ತವೆ. ವಾಯು ಮಾಲಿನ್ಯವು ಪಾರ್ಶ್ವವಾಯು, ಹೃದ್ರೋಗ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್ ಮತ್ತು ತೀವ್ರವಾದ ಉಸಿರಾಟದ ಸೋಂಕಿನಿಂದ ಮರಣದ ಅಪಾಯ (Danger)ವನ್ನು ಹೆಚ್ಚಿಸುತ್ತದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಆದರೆ ಇದಲ್ಲದೆಯೂ ವಾಯುಮಾಲಿನ್ಯ ಹದಿಹರೆಯದವರಲ್ಲಿ (Adolescents) ಖಿನ್ನತೆಗೂ ಕಾರಣವಾಗುತ್ತದೆ ಎಂಬುದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ.

Health Tips: ವಾಯುಮಾಲಿನ್ಯದಿಂದ ಧೂಮಪಾನದಷ್ಟೇ ಅಪಾಯ ! ಆರೋಗ್ಯವಾಗಿರಲು ಹೀಗೆ ಮಾಡಿ

ಇವತ್ತಿನ ಹದಿಹರೆಯ (Adolescents)ದ ಮಕ್ಕಳು ಎಲ್ಲಾ ಇದ್ರೂ ಖುಷಿಯಾಗಿರಲ್ಲ. ಯಾವಾಗ್ಲೂ ಏನನ್ನೋ ಕಳೆದುಕೊಂಡವರಂತೆ ಇದ್ದುಬಿಡ್ತಾರೆ. ಸಣ್ಣಪುಟ್ಟ ಕಾರಣಕ್ಕೆ ಸುಸೈಡ್ (Sucide) ಮಾಡಿಕೊಳ್ಳೋರ ಸಂಖ್ಯೆನೂ ಹೆಚ್ಚಾಗಿದೆ. ಇದಕ್ಕೆಲ್ಲಾ ವಾಯುಮಾಲಿನ್ಯಾ (Air Pollution)ನೂ ಕಾರಣವಾಗ್ತಿದೆ. ವಾಯುಮಾಲಿನ್ಯಕ್ಕೂ ಖಿನ್ನತೆ (Depression)ಗೂ ಏನು ಸಂಬಂಧ ಎಂದು ನೀವು ಯೋಚಿಸಬಹುದು. ಆದ್ರೆ ಅಧ್ಯಯನದಲ್ಲಿ  ಹದಿಹರೆಯದವರಲ್ಲಿ ಖಿನ್ನತೆಯ ಲಕ್ಷಣಗಳಿಗೆ ವಾಯು ಮಾಲಿನ್ಯ ಕಾರಣವಾಗುತ್ತಿದೆ ಎಂದು ತಿಳಿಸುತ್ತದೆ. 

ಹೊಸ ಅಧ್ಯಯನದ ಪ್ರಕಾರ, ಓಝೋನ್ ಅನಿಲದ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವಿಕೆಯು ಹದಿಹರೆಯದವರಲ್ಲಿ ಖಿನ್ನತೆಯ ಲಕ್ಷಣಗಳಿಗೆ ಸಂಬಂಧಿಸಿದೆ. 'ಡೆವಲಪ್‌ಮೆಂಟಲ್ ಸೈಕಾಲಜಿ' ಜರ್ನಲ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಓಝೋನ್ ಎಂಬುದು ಮೋಟಾರು ವಾಹನದ ನಿಷ್ಕಾಸ, ವಿದ್ಯುತ್ ಸ್ಥಾವರಗಳು ಮತ್ತು ಇತರ ಮೂಲಗಳಿಂದ ವಿವಿಧ ಮಾಲಿನ್ಯಕಾರಕಗಳು ಸೂರ್ಯನ ಬೆಳಕಿಗೆ ಪ್ರತಿಕ್ರಿಯಿಸಿದಾಗ ಉತ್ಪತ್ತಿಯಾಗುವ ಅನಿಲವಾಗಿದೆ. ಹೆಚ್ಚಿನ ಓಝೋನ್ ಮಟ್ಟಗಳು ಅಸ್ತಮಾ, ಉಸಿರಾಟದ ವೈರಸ್‌ಗಳು ಮತ್ತು ಉಸಿರಾಟದ ಕಾರಣಗಳಿಂದ ಅಕಾಲಿಕ ಮರಣ ಸೇರಿದಂತೆ ವಿವಿಧ ದೈಹಿಕ ಕಾಯಿಲೆಗಳಿಗೆ ಸಂಬಂಧಿಸಿವೆ.

Nitrogen Dioxideನಿಂದ ಮಕ್ಕಳಲ್ಲಿ ಹೆಚ್ತಿದೆ ಅಸ್ತಮಾ

ಈ ಅಧ್ಯಯನವು ಓಝೋನ್ ಮಟ್ಟಗಳು ಮತ್ತು ಹದಿಹರೆಯದವರಲ್ಲಿ ಕಾಲಾನಂತರದಲ್ಲಿ ಖಿನ್ನತೆಯ ಲಕ್ಷಣಗಳ ಬೆಳವಣಿಗೆಯ ನಡುವಿನ ಸಂಬಂಧವನ್ನು ಪರಿಶೋಧಿಸುತ್ತದೆ. ಆ ರೋಗಲಕ್ಷಣಗಳು ದುಃಖ ಅಥವಾ ಹತಾಶತೆಯ ನಿರಂತರ ಭಾವನೆಗಳು, ಏಕಾಗ್ರತೆಯ ತೊಂದರೆ, ನಿದ್ರಾ ಭಂಗಗಳು ಮತ್ತು ಆತ್ಮಹತ್ಯೆ (Sucide)ಯ ಬಗ್ಗೆ ಆಲೋಚನೆಗಳನ್ನು ಒಳಗೊಂಡಿರಬಹುದು ಎಂದು ಸೂಚಿಸುತ್ತದೆ.

ವಾಯು ಮಾಲಿನ್ಯ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎಂದು ಡೆನ್ವರ್ ವಿಶ್ವವಿದ್ಯಾನಿಲಯದ ಮನೋವಿಜ್ಞಾನದ ಸಹಾಯಕ ಪ್ರಾಧ್ಯಾಪಕರಾದ ಪ್ರಮುಖ ಸಂಶೋಧಕ ಎರಿಕಾ ಮನ್ಕ್ಜಾಕ್ ಹೇಳಿದ್ದಾರೆ.

ಸ್ಯಾನ್ ಫ್ರಾನ್ಸಿಸ್ಕೊದಲ್ಲಿ 9ರಿಂದ 13 ವರ್ಷ 213 ಹದಿಹರೆಯದ ವಯಸ್ಸಿನವರನ್ನು ಸೇರಿಸಿಕೊಂಡು  ಅಧ್ಯಯನ ನಡೆಸಲಾಯಿತು. ಇದರಲ್ಲಿ ತುಲನಾತ್ಮಕವಾಗಿ ಹೆಚ್ಚಿನ ಓಝೋನ್ ಮಟ್ಟವನ್ನು ಹೊಂದಿರುವ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಖಿನ್ನತೆಯ ರೋಗಲಕ್ಷಣಗಳಲ್ಲಿ ಗಮನಾರ್ಹ ಹೆಚ್ಚಳವಾಗಿರುವುದು ಕಂಡು ಬಂತು.  ಲಿಂಗ, ವಯಸ್ಸು, ಜನಾಂಗ, ಮನೆಯ ಆದಾಯ, ಪೋಷಕರ ಶಿಕ್ಷಣ ಅಥವಾ ಅವರ ನೆರೆಹೊರೆಯ ಸಾಮಾಜಿಕ ಆರ್ಥಿಕ ಗುಣಲಕ್ಷಣಗಳು ವ್ಯತ್ಯಸ್ತತೆಯಿದ್ದರೂ ಎಲ್ಲರೂ ಖಿನ್ನತೆಯ ಲಕ್ಷಣಗಳು ಕಂಡು ಬಂತು

click me!