ಆತಂಕದ ಸಮಸ್ಯೆ, ಖಿನ್ನತೆ ಸೇರಿದಂತೆ ಹಲವು ರೀತಿಯ ಮಾನಸಿಕ ಸಮಸ್ಯೆ ಉಳ್ಳವರ ಬಳಿ ಮಾತನಾಡುವಾಗ ಎಚ್ಚರಿಕೆ ಅಗತ್ಯ. ಏಕೆಂದರೆ, ಅವರಿಗೆ ಬೆಂಬಲ ಸೂಚಿಸುವ ಮಾತನಾಡಿದರೂ ಪರಿಣಾಮ ಬೇರೆಯದೇ ರೀತಿ ಆಗಬಹುದು.
ಮಾನಸಿಕ ಸಮಸ್ಯೆ ಹೊಂದಿರುವವರ ಬಳಿ ಏನು ಮಾತನಾಡಬೇಕೆಂದು ತಿಳಿಯುವುದಿಲ್ಲ. ಆತಂಕದ ಸಮಸ್ಯೆ, ಖಿನ್ನತೆಯಂತಹ ಸಮಸ್ಯೆಯುಳ್ಳವರಿಗೆ ಬೆಂಬಲ ಹಾಗೂ ಸಹಾನುಭೂತಿ ಸೂಚಿಸುವ ಭರದಲ್ಲಿ ಏನಾದರೂ ಮಾತನಾಡುವುದು ಅಭಾಸವಾಗುತ್ತದೆ. ಕೆಲವೊಮ್ಮೆ ಮಾತುಗಳು ಹೆಚ್ಚು ಡ್ಯಾಮೇಜ್ ಮಾಡಿಬಿಡುತ್ತವೆ. ಆತಂಕದ ಸಮಸ್ಯೆ, ಖಿನ್ನತೆ ಸೇರಿದಂತೆ ಹಲವು ರೀತಿಯ ಮಾನಸಿಕ ಸಮಸ್ಯೆ ಉಳ್ಳವರಿಗೆ ಭಾವನಾತ್ಮಕ ಬೆಂಬಲ ಸೂಚಿಸಬೇಕು ಎಂದಿದ್ದರೂ ಕೆಲವು ರೀತಿಯ ವಾಕ್ಯಗಳನ್ನು ಅವರ ಬಳಿ ಎಂದಿಗೂ ಆಡಬಾರದು. ಏಕೆಂದರೆ, ಅವುಗಳಿಂದ ಹಾನಿಯೇ ಹೆಚ್ಚಾಗುತ್ತದೆ. ಅವರ ಬಳಿ ಮಾತನಾಡುವಾಗ ಮಾತುಗಳ ಬಗ್ಗೆ ಅತಿಯಾಗಿ ಎಚ್ಚರಿಕೆ ಇರಬೇಕು. ನಾವು ಸಾಮಾನ್ಯವಾಗಿ ಆಡುವ ಮಾತುಗಳು ಕೂಡ ಅವರಿಗೆ ಹೆಚ್ಚು ಘಾಸಿಯುಂಟು ಮಾಡಬಹುದು.
ನಿಮ್ಮ ಉದ್ದೇಶ ಒಳ್ಳೆಯದೇ ಆಗಿದ್ದರೂ ಅದರಿಂದ ನಕಾರಾತ್ಮಕ ಪರಿಣಾಮಗಳೇ ಹೆಚ್ಚಾಗಬಹುದು. ಉದಾಹರಣೆಗೆ, “ರಿಲ್ಯಾಕ್ಸ್ ಆಗುʼ ಎನ್ನುವಂತಹ ಮಾತುಗಳನ್ನಾಡುವುದು ವ್ಯರ್ಥ. ಏಕೆಂದರೆ, ಅವರಿಗೆ ರಿಲ್ಯಾಕ್ಸ್ ಆಗಲು ಸಾಧ್ಯವೇ ಆಗುವುದಿಲ್ಲ. ಇಂತಹ ಮಾತನಾಡುವುದು ನಿಮ್ಮಲ್ಲಿ ಅರಿವು ಇಲ್ಲದಿರುವುದನ್ನು ಸೂಚಿಸುತ್ತದೆ, ಅವರಿಗೆ ಯಾವುದೇ ಸಹಾಯವಾಗುವುದಿಲ್ಲ. ಬದಲಿಗೆ, ಅವರಲ್ಲಿ ಏನೋ ಒಂದು ರೀತಿಯ ಕೀಳರಿಮೆ ಮೂಡಿಸಬಲ್ಲದು. ಅಂತಹ ಹಲವು ವಾಕ್ಯಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಬೇಗ ಸುಧಾರಿಸಿಕೊಳ್ಳಿ (Get Over It): ಈ ಮಾತನ್ನು ಸುಲಭವಾಗಿ ಹೇಳಿಬಿಡುತ್ತೇವೆ. ಆದರೆ, ಇದರಿಂದ ಅವರಲ್ಲಿ ತಮಗೇನೋ ಆಗಿದೆ ಎನ್ನುವ ಭಾವನೆ ಅಧಿಕವಾಗುತ್ತದೆ. ಇದರಿಂದ ಅವರಲ್ಲಿ ನಕಾರಾತ್ಮಕ ಭಾವನೆ (Negative Feel) ಇನ್ನಷ್ಟು ಹೆಚ್ಚುತ್ತದೆ. ಮತ್ತಷ್ಟು ಆತಂಕಕ್ಕೆ (Anxiety) ಒಳಗಾಗಬಹುದು.
Stress and Happiness: ಒತ್ತಡವನ್ನು ಖುಷಿಯನ್ನಾಗಿ ಬದಲಿಸಿಕೊಳ್ಳಿ!
ಏನ್ ಪ್ರಾಬ್ಲಮ್ಮು ನಿಂಗೆ?: ಸಮೀಪವರ್ತಿಗಳಲ್ಲಿ ಹೀಗೆ ಕೇಳುವುದು ಸಾಮಾನ್ಯ. ತಮಗಾಗುತ್ತಿರುವ ಮಾನಸಿಕ (Mental) ತೊಳಲಾಟಕ್ಕೆ ಪರಿಹಾರ ಪಡೆಯಲು ಅವರು ಯಾರದ್ದಾದರೂ ಸಹಾಯ (Help) ಕೇಳಬೇಕೆಂದುಕೊಂಡಿದ್ದರೆ ಈ ಪ್ರಶ್ನೆಯಿಂದ ಹಿಂದೇಟು ಹಾಕಬಹುದು. ಅವರಲ್ಲಿ ಗೊಂದಲವುಂಟಾಗಬಹುದು.
ನಿಂಗೆ ಸರಿಯಾಗಿ ಯೋಚ್ನೆ (Proper Thinking) ಮಾಡೋಕೆ ಬರ್ತಾ ಇಲ್ಲ: ಈ ವಾಕ್ಯ ಅವರ ಭಾವನೆಗಳನ್ನು ನೀವು ನಂಬುತ್ತಿಲ್ಲ ಎನ್ನುವುದನ್ನು ಸೂಚಿಸುತ್ತದೆ. ತಮಗೆ ಹೀಗಾಗುತ್ತಿದೆ ಎಂದು ಅವರು ಹೇಳಿದ್ದರೆ, ನೀವು ಅದು ತಪ್ಪು ಎನ್ನುತ್ತೀರಿ. ಅದು ತಪ್ಪೋ, ಸರಿಯೋ ಬೇಕಿಲ್ಲ, ಅವರಿಗೆ ಆ ಭಾವನೆ ಉಂಟಾಗಿರುವುದು ನಿಜ ಎನ್ನುವುದನ್ನು ಮೊದಲು ಅರಿತುಕೊಂಡು ಸಹಾನುಭೂತಿಯಿಂದ ವರ್ತಿಸಬೇಕಾಗುತ್ತದೆ. ಇದರಿಂದ ತಮ್ಮ ವಿಚಾರಗಳ ಬಗ್ಗೆ ಅವರಲ್ಲಿ ಅನುಮಾನ ಹೆಚ್ಚಬಹುದು.
ಎಲ್ಲವೂ ನಿನ್ನ ತಲೆಯಲ್ಲಿದೆ: ಆತಂಕದ ಸಮಸ್ಯೆ ನಿನ್ನ ತಲೆಯಲ್ಲಿದೆ (Head) ಅಥವಾ ಅದನ್ನು ಸರಿಪಡಿಸಿಕೊಳ್ಳುವುದು ನಿನ್ನ ವಿಚಾರದಲ್ಲಿದೆ ಎಂದೆಲ್ಲ ಹೇಳುವುದು ಸಿಕ್ಕಾಪಟ್ಟೆ ಅಪಾಯಕಾರಿ ಸ್ಟೇಟ್ ಮೆಂಟ್. ಇಂತಹ ಮಾತುಗಳಿಂದ ಅವರ ಮಾನಸಿಕ ಆರೋಗ್ಯ (Mental Health) ಇನ್ನಷ್ಟು ಹಾನಿಗೆ ಒಳಗಾಗಬಹುದು. ವಿಪರೀತ ಮೊಬೈಲ್ ಬಳಸೋ ಮಕ್ಕಳನ್ನು ಕಾಡುತ್ತೆ ಮಾನಸಿಕ ಸಮಸ್ಯೆ, ಪೋಷಕರು ಏನ್ಮಾಡ್ಬೇಕು?
ಥಿಂಕ್ ಪಾಸಿಟಿವ್ (Just Think Positive): ಇದು ಹೇಳಿದಷ್ಟು ಸುಲಭವಾಗಿದ್ದರೆ ಯಾರಿಗೂ ಯಾವುದೇ ಮಾನಸಿಕ ಸಮಸ್ಯೆಗಳೇ ಕಾಡುತ್ತಿರಲಿಲ್ಲ. ಎಲ್ಲರೂ ಪಾಸಿಟಿವ್ ಥಿಂಕ್ ಮಾಡಿಕೊಂಡು ಹಾಯಾಗಿರುತ್ತಿದ್ದರು. ಮಾನಸಿಕ ಸಮಸ್ಯೆ ಉಳ್ಳವರಿಗೆ ತಮ್ಮ ನಕಾರಾತ್ಮಕ ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದು (Control) ಸಾಧ್ಯವಾಗುವುದಿಲ್ಲ. ಈ ಮಾತಿನಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಒಂದೊಮ್ಮೆ ಅವರಿಗೆ ಯಾವುದೇ ಸಮಸ್ಯೆ ಇಲ್ಲದೆ ನಕಾರಾತ್ಮಕ ಚಿಂತನೆ ಉಳ್ಳವರಾಗಿದ್ದರೂ ಈ ವಾಕ್ಯ ಹೇಳುವುದು ಸರಿಯಲ್ಲ. ಇದರಿಂದ ಅವರು ಇನ್ನಷ್ಟು ಕುಗ್ಗುವಂತೆ ಆಗಬಹುದು.
ನಿನಗೆ ಹೇಗನ್ನಿಸುತ್ತಿದೆ ನನಗೆ ಗೊತ್ತು: ಇದಂತೂ ಎಷ್ಟು ಹಾಸ್ಯಾಸ್ಪದ ಎಂದರೆ, ಯಾರೂ ಇನ್ನೊಬ್ಬರ ಮನಸ್ಥಿತಿ ಅರಿಯಲು ಸಾಧ್ಯವಿಲ್ಲ, ಊಹಿಸಬಹುದಷ್ಟೆ. ಪ್ರತಿಯೊಬ್ಬರೂ ವಿಭಿನ್ನವಾಗಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಹೀಗಾಗಿ, ಈ ಮಾತಿನಿಂದ ಪ್ರಯೋಜನವಿಲ್ಲ. ಅವರಿಗೆ ಸಹಾಯ ಮಾಡಬೇಕು ಎನ್ನುವ ಅಭಿಲಾಷೆ ನಿಮಗಿದ್ದರೆ “ಹೇಗೆ ನಿಮಗೆ ಸಹಾಯ ಮಾಡಬಲ್ಲೆ? ಆತಂಕದ ಭಾವನೆ ಓಕೆ, ಈಗ ನಿನಗೇನು ಅಗತ್ಯವಿದೆ? ನಾನು ನಿನಗಾಗಿ ಯಾವತ್ತೂ ಇರುತ್ತೇನೆ, ನಿನ್ನ ನಂಬುತ್ತೇನೆ, ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿದ್ದೇನೆ, ಭಾವನೆ ಹಂಚಿಕೊಂಡಿದ್ದಕ್ಕೆ ಧನ್ಯವಾದ, ನೀವೊಬ್ಬರೇ ಅಲ್ಲ… ಇಂತಹ ಮಾತುಗಳ ಮೂಲಕ ಅವರಲ್ಲಿ ಧೈರ್ಯ (Courage) ಹೆಚ್ಚಿಸಬೇಕು.