ನಮ್ಮ ದೇಹಕ್ಕೆ ಎಲ್ಲ ಪೋಷಕಾಂಶಗಳು ಅಗತ್ಯವಾಗಿ ಬೇಕು. ಕೆಲವೊಂದು ಕಮ್ಮಿ ಇದ್ರೆ ಅನಾರೋಗ್ಯ ಕಾಡುತ್ತೆ. ಆಹಾರದ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಯಾವ್ ಯಾವುದೋ ಆಹಾರ ತಿನ್ನುವ ಹುಡುಗಿಯರು ಗೊತ್ತಿಲ್ಲದೆ ರೋಗಕ್ಕೆ ತುತ್ತಾಗ್ತಿದ್ದಾರೆ.
ಆರೋಗ್ಯ ಸರಿಯಾಗಿಲ್ಲ ಅಂದ್ರೆ ಏನಿದ್ದೂ ಪ್ರಯೋಜನವಿಲ್ಲ. ಮಾನಸಿಕ ಹಾಗೆ ದೈಹಿಕ ಆರೋಗ್ಯ ಸರಿಯಾಗಿದ್ರೆ ಎಲ್ಲ ಕೆಲಸವನ್ನು ಸರಾಗವಾಗಿ ಮಾಡ್ಬಹುದು. ಇದ್ರಲ್ಲಿ ಒಂದು ಕೈಕೊಟ್ರೂ ಏನೇನೋ ಕಷ್ಟ ಅನುಭವಿಸ್ಬೇಕು. ನಾವು ತಿನ್ನುವ ಆಹಾರ, ನಮ್ಮ ದಿನಚರಿ ಯಾವ್ದೂ ಸರಿ ಇಲ್ಲ. ಅದಕ್ಕೆ ತಪ್ಪಾದ ಜೀವನಶೈಲಿ ಅಂತ ಹಣೆಪಟ್ಟಿ ಕಟ್ಟಾಗಿದೆ. ಇದೇ ನಮ್ಮ ಆರೋಗ್ಯ ಹಾಳು ಮಾಡ್ತಿದೆ. ಈಗಿನ ಯುವಕ – ಯುವತಿಯರಂತೂ ಝಿರೋ ಫಿಗರ್, ಡಯಟ್, ಫಿಟ್ನೆಸ್ ಅಂತಾ ಸರಿಯಾಗಿ ಆಹಾರ ತಿನ್ನೋದೇ ಇಲ್ಲ. ಇದ್ರಿಂದ ಒಂದಲ್ಲ ಒಂದು ಖಾಯಿಲೆ ಒಕ್ಕರಿಸಿಕೊಳ್ಳುತ್ತೆ.
ವಿಶ್ವದ ದೊಡ್ಡಣ್ಣ ಅಮೆರಿಕಾದ (America) ಲ್ಲೂ ಅನಾರೋಗ್ಯ (Sick) ಕ್ಕೊಳಗಾದವರ ಸಂಖ್ಯೆ ಬೇಕಷ್ಟಿದೆ. ಇತ್ತೀಚಿನ ಅಧ್ಯಯನವೊಂದು ಎಲ್ಲರಿಗೂ ಎಚ್ಚರಿಕೆ ನೀಡಿದೆ. ಅದ್ರಲ್ಲೂ ಹುಡುಗಿಯರಲ್ಲಿ ಹೆಚ್ಚುತ್ತಿರುವ ಗಂಭೀರ ಆರೋಗ್ಯ ಸಮಸ್ಯೆಯ ಬಗ್ಗೆ ಸಂಶೋಧಕ (Researcher) ರು ಕಳವಳ ವ್ಯಕ್ತಪಡಿಸಿದ್ದಾರೆ. ಕೇವಲ ಅಮೆರಿಕಾದಲ್ಲಿ ಶೇಕಡಾ 40ಕ್ಕಿಂತ ಹೆಚ್ಚು ಯುವತಿಯರಲ್ಲಿ ಕಬ್ಬಿಣ ಕೊರತೆ ಕಾಣಿಸಿಕೊಂಡಿದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ. ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾದ ಕಾರಣ ಆಯಾಸ ಕಾಡುತ್ತದೆ. ಅಲ್ಲದೆ ಅನೇಕ ಆರೋಗ್ಯ ಸಮಸ್ಯೆಯ ಅಪಾಯ ಹೆಚ್ಚು ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಅಂದಾಜು ಅಮೆರಿಕಾದ 100 ಯುವತಿಯರಲ್ಲಿ 6 ಮಹಿಳೆಯರು ಅತ್ಯಂತ ಕಡಿಮೆ ಕಬ್ಬಿಣದ ಮಟ್ಟವನ್ನು ಹೊಂದಿದ್ದಾರೆ. ಇದು ರಕ್ತಹೀನತೆಯ ಅಪಾಯವನ್ನು ಹೆಚ್ಚಿಸುತ್ತದೆ. ಇದು ಅವರನ್ನು ದುರ್ಬಲಗೊಳಿಸುವುದಲ್ಲದೆ ರಕ್ತಹೀನತೆಯಿಂದ ದೇಹದಲ್ಲಿ ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ.
undefined
ಜೇನುನೊಣದ ವಿಷ ನೀಡಿ ಜೀವ ಉಳಿಸೋ ಚಿಕಿತ್ಸೆ, ಏನಿದು?
ಅನೇಕ ಮಹಿಳೆಯರಿಗೆ ತಮಗೆ ರಕ್ತಹೀನತೆ ಇದೆ ಎಂಬುದೇ ತಿಳಿದಿಲ್ಲವಂತೆ. ಇದು ಮತ್ತಷ್ಟು ಅಪಾಯಕಾರಿ ಎನ್ನುತ್ತಾರೆ ಸಂಶೋಧಕರು. ಅಮೆರಿಕ ಮಾತ್ರವಲ್ಲ, ಬಹುತೇಕ ಎಲ್ಲಾ ದೇಶಗಳಲ್ಲಿ ಪರಿಸ್ಥಿತಿ ಹೆಚ್ಚು ಕಡಿಮೆ ಇದನ್ನೇ ಹೋಲುತ್ತಿದೆ. ಇದ್ರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ.
ಅಧ್ಯಯನ ಹೇಳೋದೇನು? : ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್‌ನಲ್ಲಿ ಅಧ್ಯಯನದ ವರದಿ ಪ್ರಕಟವಾಗಿದೆ. 12 ರಿಂದ 21 ವರ್ಷ ವಯಸ್ಸಿನ ಸುಮಾರು 3,500 ಹುಡುಗಿಯರು/ಮಹಿಳೆಯರ ಡೇಟಾವನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಕಬ್ಬಿಣದ ಕೊರತೆಯಿಂದ ರಕ್ತಹೀನತೆ ಅಪಾಯ ಹೆಚ್ಚು. ಅಮೆರಿಕಾದಲ್ಲಿ ಬಿಳಿ ಹುಡುಗಿಯರು ಮತ್ತು ಮಹಿಳೆಯರಿಗಿಂತ ಕರಿಯರಲ್ಲಿ ನಾಲ್ಕು ಪಟ್ಟು ಅಪಾಯ ಹೆಚ್ಚು ಎಂದು ಅಧ್ಯಯನದಲ್ಲಿ ಪತ್ತೆ ಮಾಡಲಾಗಿದೆ.
Healthy Food : ಅಮೃತ ಸಮಾನ ಈ ಕಾಳಿನ ನೀರು, ಅಪ್ಪಿತಪ್ಪಿಯೂ ಚೆಲ್ಲಬೇಡಿ
ಭಾರತದಲ್ಲೂ ಇದೆ ಸಮಸ್ಯೆ : ಭಾರತದಲ್ಲೂ ಅನೇಕ ಮಹಿಳೆಯರು ಕಬ್ಬಿಣದ ಕೊರತೆಯಿಂದ ಬಳಲುತ್ತಿದ್ದಾರೆ. ಇದೊಂದು ಗಂಭೀರ ಸಂಕೇತವಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಪ್ರಕಾರ, ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಅಂದ್ರೆ ಶೇಕಡಾ 55ರಷ್ಟು ಮಹಿಳೆಯರು ರಕ್ತಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧ್ಯಯನ ಒಂದರ ವರದಿಯ ಪ್ರಕಾರ, ಭಾರತದ ಪೂರ್ವ, ಈಶಾನ್ಯ ಮತ್ತು ಮಧ್ಯ ರಾಜ್ಯಗಳ ಮಹಿಳೆಯರು ರಕ್ತಹೀನತೆಯ ತೀವ್ರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಭಾರತದ ಮಹಿಳೆಯರಿಗೆ ಕಬ್ಬಿಣದ ಕೊರತೆ ಹೆಚ್ಚಾಗಲು ಇದು ಕಾರಣ : ಭಾರತದ ಮಹಿಳೆಯರಲ್ಲಿ ಕಬ್ಬಿಣದ ಕೊರತೆ ಗ್ರಾಮೀಣ ಮಹಿಳೆಯರಲ್ಲಿ ಹೆಚ್ಚು. ಅಲ್ಲದೆ ಕಳಪೆ ಆರ್ಥಿಕ ಸ್ಥಿತಿ ಹೊಂದಿರುವ ಹಾಗೂ ಶೈಕ್ಷಣಿಕ ಸ್ಥಿತಿ ಹೊಂದಿರುವವರು ಈ ಸಮಸ್ಯೆ ಎದುರಿಸುತ್ತಿದ್ದಾರೆ.
ಇವರಲ್ಲಿ ಕಂಡು ಬರುತ್ತೆ ಹೆಚ್ಚು ರಕ್ತಹೀನತೆ : ಅಧ್ಯಯನದ ಪ್ರಕಾರ, ಸಸ್ಯಾಹಾರಿ ಆಹಾರವನ್ನು ಸೇವಿಸುವ ಮಹಿಳೆಯರಲ್ಲಿ ರಕ್ತಹೀನತೆಯ ಅಪಾಯವು ಹೆಚ್ಚು ಕಂಡು ಬರುತ್ತದೆ. ಪ್ರತಿಯೊಬ್ಬ ಯುವತಿ, ಮಹಿಳೆಯರು ಕಬ್ಬಿಣದ ಕೊರತೆಯನ್ನು ಪತ್ತೆ ಹಚ್ಚಲು ನಿಗದಿತ ಸಮಯದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಲ್ಲದೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಕಬ್ಬಿಣಾಂಶವಿರುವ ಆಹಾರ ಸೇವನೆಗೆ ಆದ್ಯತೆ ನೀಡ್ಬೇಕು.