ನಮಗೆ ಟೈಂ ಎಲ್ಲಿದೆ ಸ್ವಾಮಿ. ಇಡೀ ದಿನ ಕೆಲಸ.. ಹೊತ್ತಲ್ಲದ ಹೊತ್ತಲ್ಲಿ ಊಟ. ಹೊಟ್ಟೆ ತುಂಬುತ್ತಿದ್ದಂತೆ ನಿದ್ರೆ.. ಜೀವನ ಓಡ್ತಿದೆ ಎನ್ನುವವರು ನೀವಾಗಿದ್ರೆ ಇಂದೇ ಎಚ್ಚೆತ್ತುಕೊಳ್ಳಿ. ಈ ಊಟ – ನಿದ್ರೆ ನಿಮ್ಮನ್ನು ಆಸ್ಪತ್ರೆಗೆ ಸೇರಿಸ್ಬಹುದು.
ಜೀವನಶೈಲಿ ಬದಲಾವಣೆ ಇಂದು ಅನೇಕ ರೋಗಗಳಿಗೆ ಮೂಲವಾಗಿದೆ. ಚಿಕ್ಕವರು ದೊಡ್ಡವರು ಎಂಬ ಬೇಧವಿಲ್ಲದೇ ಎಲ್ಲರನ್ನೂ ಖಾಯಿಲೆಗಳು ಮುತ್ತಿಕೊಳ್ಳುತ್ತಿವೆ. ಇಂತಹ ಖಾಯಿಲೆಗಳಿಂದಲೇ ಅದೆಷ್ಟೋ ಜೀವಗಳು ಅಕಾಲಿಕ ಮರಣವನ್ನಪ್ಪುತ್ತಿವೆ. ಹಿಂದಿನ ಕಾಲದವರು ಬೇಗ ಮಲಗಿ ಬೇಗ ಏಳು ಎಂಬ ಮಾತನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದರು. ಆದರೆ ಇಂದು ಮನುಷ್ಯ ಕೆಲಸದ ಒತ್ತಡ (Stress) , ಜೀವನಶೈಲಿಯಿಂದಾಗಿ ರಾತ್ರಿ ಮನೆಗೆ ತಡವಾಗಿ ಬಂದು ಊಟಮಾಡಿ ಹಾಗೆಯೇ ಮಲಗುವ ಅಭ್ಯಾಸ ಬೆಳೆಸಿಕೊಂಡಿದ್ದಾನೆ. ಅವನ ಈ ತಪ್ಪಿದ ಜೀವನ ಕ್ರಮವೇ ಅನಾರೋಗ್ಯ (Illness) ಕ್ಕೆ ಮೂಲಕಾರಣವಾಗಿದೆ. ಸಮಯಕ್ಕೆ ಸರಿಯಾಗಿ ಒಳ್ಳೆಯ ಆಹಾರ (Food) ತೆಗೆದುಕೊಳ್ಳದೇ ಇರುವುದರಿಂದ ದೇಹಕ್ಕೆ ಅನೇಕ ರೀತಿಯ ಹಾನಿಯಾಗುತ್ತದೆ.
ಆಯುರ್ವೇದ ಶಾಸ್ತ್ರವೂ ಇದನ್ನೇ ಹೇಳುತ್ತದೆ. ದಿನದ ಯಾವುದೋ ಸಮಯದಲ್ಲಿ ಆಹಾರ ಸೇವಿಸುವುದರಿಂದ ಬೊಜ್ಜು ಮಾತ್ರವಲ್ಲ ಕ್ಯಾನ್ಸರ್ ಕೂಡ ಬರುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇದ್ದಾಗ ಜೀವಕೋಶಗಳು ಅಸಹಜವಾಗಿ ಬೆಳೆಯಲು ಆರಂಭಿಸುತ್ತವೆ. ಇದೇ ಮುಂದೆ ಕ್ಯಾನ್ಸರ್ ಖಾಯಿಲೆಗೆ ಕಾರಣವಾಗುತ್ತದೆ.
Healthy Food : ಅಮೃತ ಸಮಾನ ಈ ಕಾಳಿನ ನೀರು, ಅಪ್ಪಿತಪ್ಪಿಯೂ ಚೆಲ್ಲಬೇಡಿ
ಇಂದು ಹೆಣ್ಣು, ಗಂಡೆಂಬ ಬೇಧವಿಲ್ಲದೇ ಎಲ್ಲರೂ ಸರಿಸಮಾನವಾಗಿ ದುಡಿಯುತ್ತಾರೆ. ಕೆಲವರು ಹಗಲು ಪಾಳಿಯಲ್ಲಿ ಕೆಲಸ ನಿರ್ವಹಿಸಿದರೆ ಕೆಲವರದು ರಾತ್ರಿ ಪಾಳಿಯ ಕೆಲಸವಾಗಿರುತ್ತದೆ. ಕೆಲಸದ ಸಮಯ ಹೀಗಿರುವಾಗ ಸಹಜವಾಗಿಯೇ ಅವರ ಊಟ, ನಿದ್ದೆಯಲ್ಲಿ ವ್ಯತ್ಯಾಸವಾಗುತ್ತದೆ. ಡಬ್ಲುಎಚ್ಓ ದ ಕ್ಯಾನ್ಸರ್ ಅಧ್ಯಯನ ಕೇಂದ್ರ ನಡೆಸಿದ ಶೋಧನೆಯ ಪ್ರಕಾರ, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಸರ್ಕಾಡಿಯನ್ ರಿದಮ್ ಗೆ ತೊಂದರೆಯಾಗುತ್ತದೆ ಎಂಬ ವಿಷ್ಯ ತಿಳಿದುಬಂದಿದೆ.
ಸರ್ಕಾಡಿಯನ್ ಎನ್ನುವುದು ಲ್ಯಾಟಿನ್ ನುಡಿಗಟ್ಟಾದ ಸಿರ್ಕಾ ಡೈಮ್ ಎಂಬ ಪದದಿಂದ ಬಂದಿದೆ. ಸಿರ್ಕಾ ಡೈಮ್ ಎಂದರೆ ಒಂದು ದಿನ ಎಂದರ್ಥ. ಇದು 24 ಗಂಟೆಗಳ ದೇಹದ ಆಂತರಿಕ ಗಡಿಯಾರವನ್ನು ಸೂಚಿಸುತ್ತದೆ. ಇದು ನಮ್ಮ ಮೆದುಳು ದಿನವಿಡೀ ಎಚ್ಚರವಾಗಿದ್ದು ದೈನಂದಿನ ಕಾರ್ಯಗಳನ್ನು ಪೂರೈಸಲು ಸಹಾಯಮಾಡುತ್ತದೆ. ನಾವು ತಡವಾಗಿ ಊಟ, ನಿದ್ರೆ ಮಾಡಿದಾಗ ಸರ್ಕಾಡಿಯನ್ ರಿದಮ್ ಏರುಪೇರಾಗಿ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇದ್ದಕ್ಕಿದ್ದಂತೆ ಮೂರ್ಛೆ ಹೋಗೋದು 'ಅಪಾಯ'! ತಕ್ಷಣ ವೈದ್ಯರ ಸಂಪರ್ಕಿಸಿ
ತಡವಾಗಿ ಊಟಮಾಡುವುದು ಅಪಾಯಕಾರಿ : ಬಾರ್ಸಿಲೋನಾ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ಸಂಶೋಧನೆಯ ಪ್ರಕಾರ ಕ್ಯಾನ್ಸರ್ ರೋಗವು ನಾವು ಯಾವ ಸಮಯದಲ್ಲಿ ಆಹಾರವನ್ನು ತೆಗೆದುಕೊಳ್ಳುತ್ತೇವೆ ಎನ್ನುವುದನ್ನು ಅವಲಂಬಿಸಿದೆ ಎಂದು ಹೇಳುತ್ತೆ. ರಾತ್ರಿ ಊಟದ ನಂತರ ಮಲಗಲು ಕನಿಷ್ಠ ಎರಡು ಗಂಟೆಗಳ ಅಂತರ ಇಲ್ಲದೇ ಇದ್ದರೆ ಅದು ಕ್ಯಾನ್ಸರ್ ಗೆ ಕಾರಣವಾಗಬಹುದು. ಅಂತಹ ಅಭ್ಯಾಸ ಇರುವವರಿಗೆ ಪ್ರತಿಶತ 25ರಷ್ಟು ಹೆಚ್ಚು ಕ್ಯಾನ್ಸರ್ ನ ಅಪಾಯವಿದೆ ಎಂದು ಸಂಶೋಧನೆ ಹೇಳುತ್ತದೆ.
ರಾತ್ರಿಯ ಊಟಕ್ಕೂ ಕ್ಯಾನ್ಸರ್ ಗೂ ಏನು ಸಂಬಂಧ? : ನಮ್ಮ ದೇಹದ ಸರ್ಕಾಡಿಯನ್ ರಿದಮ್ ದಿನದ 24 ಗಂಟೆಗಳ ಪ್ರಕಾರ ಕಾರ್ಯ ನಿರ್ವಹಿಸುತ್ತದೆ. ಇದು ರಾತ್ರಿ 9 ಗಂಟೆಯ ನಂತರ ಕೆಲಸ ನಿರ್ವಹಿಸುವುದಿಲ್ಲ. ಏಕೆಂದರೆ ಶರೀರದ ಆಂತರಿಕ ಗಡಿಯಾರದ ಪ್ರಕಾರ ಅದು ವಿಶ್ರಾಂತಿಯ ಸಮಯವಾಗಿರುತ್ತದೆ. ಹಾಗಾಗಿ ಅಂತಹ ಸಮಯದಲ್ಲಿ ಯಾರಾದರೂ ಆಹಾರ ಸೇವಿಸಿದರೆ ಸರ್ಕಾಡಿಯನ್ ರಿದಮ್ ಕೆಟ್ಟುಹೋಗುತ್ತದೆ. ಇದರಿಂದ ಹಸಿವು ಮತ್ತು ನಿದ್ದೆ ಎರಡರ ಮೇಲೂ ನಕಾರಾತ್ಮಕ ಪ್ರಭಾವ ಬೀರುತ್ತದೆ.
ಕ್ಯಾನ್ಸರ್ ಹೇಗೆ ಉಂಟಾಗುತ್ತದೆ? : ಬಾರ್ಸಿಲೋನಾ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಹೆಲ್ತ್ ನಡೆಸಿದ ಸಂಶೋಧನೆಯಲ್ಲಿ 600 ಕ್ಕೂ ಹೆಚ್ಚು ಕ್ಯಾನ್ಸರ್ ಪೀಡಿತ ಪುರುಷರು ಹಾಗೂ 1200 ಕ್ಕೂ ಹೆಚ್ಚು ಮಹಿಳೆಯರನ್ನು ಸೇರಿಸಿಕೊಳ್ಳಲಾಗಿತ್ತು. ಇದರಲ್ಲಿ ಅವರ ರಾತ್ರಿ ಪಾಳಿಯ ಕೆಲಸ ಮತ್ತು ಊಟದ ಸಮಯದ ಬಗ್ಗೆ ಮಾಹಿತಿ ತೆಗೆದುಕೊಂಡಾಗ ರಾತ್ರಿ ಊಟಮಾಡಿ ಎರಡು ಮೂರು ಗಂಟೆಯ ನಂತರ ಮಲಗುವವರಲ್ಲಿ ಕ್ಯಾನ್ಸರ್ ಪ್ರತಿಶತ 20ರಷ್ಟು ಕಡಿಮೆ ಕಂಡುಬಂತು. ಅದೇ ರಾತ್ರಿ ತಡವಾಗಿ ಊಟಮಾಡಿ ಹಾಗೆಯೇ ಮಲಗುವವರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಿರುವುದು ಸಾಬೀತಾಗಿದೆ.