Health
ಚೀನಾದಲ್ಲಿ ಜೇನುನೊಣದ ವಿಷದಿಂದ ಚಿಕಿತ್ಸೆ ನೀಡಲಾಗುತ್ತದೆ. ಇದು ಕ್ಯಾನ್ಸರ್‌ನಂತಹಾ ಕಾಯಿಲೆಯನ್ನು ಪರಿಣಾಮಕಾರಿಯಾಗಿ ಗುಣಪಡಿಸುತ್ತೆ ಎಂದು ನಂಬಲಾಗಿದೆ.
ಜೇನುನೊಣದ ಕುಟುಕು ಚಿಕಿತ್ಸೆಯನ್ನು ವೈದ್ಯಕೀಯ ಭಾಷೆಯಲ್ಲಿ ಎಪಿಥೆರಪಿ ಎಂದು ಕರೆಯುತ್ತಾರೆ. ಇದರಲ್ಲಿ ಜೇನು, ಜೇನು ನೊಣ ವಿಷ ಮೊದಲಾದವುಗಳನ್ನು ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಬೀ ಸ್ಟಿಂಗ್ ಥೆರಪಿ ಪ್ರಾಚೀನ ಚಿಕಿತ್ಸಾ ವಿಧಾನವಾಗಿದ್ದು, ಇದನ್ನು ಚೀನಾದಲ್ಲಿ 3000 ವರ್ಷಗಳಿಂದ ಬಳಸಲಾಗುತ್ತಿದೆ. ಇದು ಸಂಧಿವಾತದ ನೋವನ್ನು ಕಡಿಮೆ ಮಾಡುತ್ತದೆ.
ವರದಿಯ ಪ್ರಕಾರ ಮೆಲಿಟಿನ್ ಮತ್ತು ಫಾಸ್ಪೋಲಿಪೇಸ್‌ನಂತಹ ಅನೇಕ ಪೋಷಕಾಂಶಗಳು ಜೇನುನೊಣದ ವಿಷದಲ್ಲಿ ಕಂಡು ಬರುತ್ತವೆ. ಇದು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ.
ಮಾಯ್ಚಿರೈಸರ್‌ಗಳು, ಲೋಷನ್‌ಗಳು ಮತ್ತು ಸೀರಮ್‌ಗಳಂತ ಅನೇಕ ಸೌಂದರ್ಯ ವರ್ಧಕಗಳನ್ನು ಸಹ ಜೇನುನೊಣದ ಕುಟುಕಿನಿಂದ ಹೊರಬರುವ ವಿಷದಿಂದ ತಯಾರಿಸಲಾಗುತ್ತದೆ.
ಸಂಶೋಧನೆಯೊಂದರ ಪ್ರಕಾರ, ಜೇನುನೊಣದ ಕುಟುಕಿನಲ್ಲಿರುವ ವಿಷವು ಸ್ತನ ಕ್ಯಾನ್ಸರ್ ಕೋಶಗಳನ್ನು ಕೊಲ್ಲುತ್ತದೆ. ಇದರಲ್ಲಿರುವ ಮೆಲಿಟಿನ್‌ನ್ನು ಕೀಮೋಥೆರಪಿ ಔಷಧಿಗಳಲ್ಲಿಯೂ ಬಳಸಲಾಗುತ್ತದೆ.
ಜೇನುನೊಣ ಕುಟುಕು ಚಿಕಿತ್ಸೆಯು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಅದು ಸಂಧಿವಾತದ ಊತ ಮತ್ತು ನೋವನ್ನು ಕಡಿಮೆ ಮಾಡುತ್ತದೆ.
ಚೀನಾದಲ್ಲಿ ಜೇನುನೊಣದ ಕುಟುಕು ಚಿಕಿತ್ಸೆಯಲ್ಲಿ ನೋವು ಇರುವ ದೇಹದ ಭಾಗವನ್ನು ಜೇನುನೊಣಗಳಿಂದ ಕಚ್ಚಿಸಲಾಗುತ್ತದೆ. ಇದು ದೇಹದಿಂದ ನಂಜನ್ನು ತೆಗೆದು ಹಾಕುತ್ತದೆ ಎಂದು ಹೇಳುತ್ತಾರೆ.
ಅನೇಕ ಚಿಕಿತ್ಸೆಗಳಲ್ಲಿ ಜೇನುನೊಣದ ವಿಷವನ್ನು ಸಂಗ್ರಹಿಸಿ ರೋಗಿಯ ದೇಹಕ್ಕೆ ಚುಚ್ಚಲಾಗುತ್ತದೆ.