Health Tips: ಮಾವು ತಿಂದ್ರೆ ತೂಕ ಹೆಚ್ಚಾಗುತ್ತಾ? ಇಲ್ಲಿದೆ ನಿಮ್ಮೆಲ್ಲ ಪ್ರಶ್ನೆಗೆ ಉತ್ತರ

By Suvarna News  |  First Published Apr 13, 2024, 4:38 PM IST

ಹಿಂದಿನ ಕಾಲದಿಂದಲೂ ನಂಬಿ ಬಂದ ಕೆಲ ವಿಷ್ಯಗಳಿವೆ. ಅದು ಎಷ್ಟು ಸುಳ್ಳು, ಎಷ್ಟು ಸತ್ಯ ಎಂಬುದನ್ನು ಪರಿಶೀಲಿಸದೆ ಜನರು ಪಾಲಿಸುತ್ತಾರೆ. ಹಣ್ಣಿನ ರಾಜ ಮಾವಿನ ಬಗ್ಗೆಯೂ ಕೆಲ ನಂಬಿಕೆ ಇದ್ದು, ಅದೆಷ್ಟು ಸತ್ಯ ಎಂಬ ಮಾಹಿತಿ ಇಲ್ಲಿದೆ. 


ಮಾವಿನ ಹಣ್ಣಿನ ಋತು ಶುರುವಾಗ್ತಿದೆ. ನಿಧಾನವಾಗಿ ಮಾರುಕಟ್ಟೆಗೆ ಮಾವುಗಳು ಬರ್ತಿವೆ. ಆರಂಭದಲ್ಲಿ ಮಾವಿನ ಬೆಲೆ ದುಬಾರಿ ಆದ್ರೂ ಈ ಋತುವಿನ ಮೊದಲ ಮಾವು ಅಂತಾ ಜನರು ಬಾಯಿಚಪ್ಪರಿಸಿ ತಿನ್ನುತ್ತಾರೆ. ಇದೇ ಕಾರಣಕ್ಕೆ ಮಾವನ್ನು ಹಣ್ಣಿನ ರಾಜ ಅನ್ನೋದು. ಮಾವಿನ ಹಣ್ಣು ಇಷ್ಟಪಡದ ಜನರಿಲ್ಲ. ಬಹುತೇಕ ಎಲ್ಲರಿಗೂ ಮಾವು ಪ್ರಿಯವಾದ ಹಣ್ಣು. ಮಾವಿನ ಹಣ್ಣು ಅಂದ್ರೆ ನನಗೆ ಬಹಳ ಪ್ರೀತಿ… ಒಂದೇ ಬಾರಿ ನಾಲ್ಕು ಹಣ್ಣನ್ನು ತಿನ್ನಬಲ್ಲೆ.. ಆದ್ರೆ ಈ ಹಣ್ಣು ನನ್ನ ತೂಕ ಹೆಚ್ಚಿಸುತ್ತೆ ಅನ್ನೋ ಭಯಕ್ಕೆ ಬಾಯಿಗೆ ಬೀಗ ಹಾಕ್ತೇನೆ ಎನ್ನುವ ಜನರಿದ್ದಾರೆ. ಮಾವಿನ ಹಣ್ಣು ತಿನ್ನೋವಾಗ ಸ್ವಲ್ಪ ಎಚ್ಚರ ಇರಲಿ, ಮುಖದ ಮೇಲೆ ಮೊಡವೆ ಬರುತ್ತೆ ಅಂತ ಹಿರಿಯರು ಹೇಳೋದನ್ನು ನೀವು ಕೇಳಿರಬಹುದು. ಆರೋಗ್ಯಕ್ಕೆ ಉತ್ತಮವಾದ ಈ ಮಾವಿನ ಹಣ್ಣಿನ ಬಗ್ಗೆ ಅನೇಕ ನಂಬಿಕೆ ಜನರಲ್ಲಿದೆ. ನಾವಿಂದು ಮಾವಿನ ಬಗ್ಗೆ ಜನರಿಗಿರೋ ತಪ್ಪು ಕಲ್ಪನೆ ಏನು ಎಂಬುದನ್ನು ಹೇಳ್ತೇವೆ.

ಮಾವಿನ ಹಣ್ಣಿನ ಬಗೆಗಿರೋ ಮಿಥ್ಯಗಳಿವು : 

Latest Videos

undefined

ರಾತ್ರಿ ಮಾವಿನ (Mango) ಹಣ್ಣು ತಿಂದ್ರೆ ತೂಕ ಹೆಚ್ಚಾಗುತ್ತೆ : ರಾತ್ರಿ ಮಾವಿನ ಹಣ್ಣು (Fruit) ತಿಂದ್ರೆ ತೂಕ ಹೆಚ್ಚಾಗುತ್ತೆ ಎನ್ನುವವರು ಸರಿಯಾಗಿ ತಿಳಿದ್ಕೊಳ್ಳಿ ಮಾವು ತೂಕ (Weight) ಹೆಚ್ಚಿಸುವ ಕೆಲಸ ಮಾಡೋದಿಲ್ಲ. ನೀವು ಯಾವುದೇ ಸಮಯದಲ್ಲಿ ಮಾವಿನ ಹಣ್ಣು ತಿಂದ್ರೂ ಅದು ನಿಮ್ಮ ತೂಕ ಹೆಚ್ಚಿಸುವ ಬದಲು ಇಳಿಸುತ್ತದೆ. ಆದ್ರೆ ಹಣ್ಣಿನ ಪ್ರಮಾಣದ ಬಗ್ಗೆ ಗಮನ ಇರಲಿ. ಯಾಕೆಂದ್ರೆ ಅತಿಯಾದ್ರೆ ಅದು ಬೇರೆ ಸಮಸ್ಯೆ ತರಬಹುದು. ಮಾವಿನ ಹಣ್ಣಿನಲ್ಲಿ ಕೊಬ್ಬು, ಸೋಯಡಿಂ ಹಾಗೂ ಕೊಲೆಸ್ಟ್ರಾಲ್ ಇಲ್ಲ. ಹಾಗಾಗಿ ನೀವು ಮಾವಿನ ಹಣ್ಣು ತಿಂದ್ರೆ ನಿಮ್ಮ ತೂಕ ಏರಿಕೆಯಾಗೋದಿಲ್ಲ. 

ಹಾಲು ಆರೋಗ್ಯಕ್ಕೆ ಒಳ್ಳೆಯದು ನಿಜ, ಆದ್ರೆ ಸಿಂಹಿಣಿ ಹಾಲು ಕುಡಿದ್ರೆ ಏನಾಗುತ್ತೆ?

ಮಧುಮೇಹಿಗಳಿಗೆ ಮಾವು ನಿಷಿದ್ಧ : ಅದರಲ್ಲಿ ಸಿಹಿ ಅಂಶ ಇರುವ ಕಾರಣ ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಾರದು ಎಂಬ ನಂಬಿಕೆ ಅನೇಕ ವರ್ಷಗಳಿಂದ ಜನರಲ್ಲಿದೆ. ಇದು ತಪ್ಪು ಕಲ್ಪನೆ. ಮಧುಮೇಹಿಗಳು ಕೂಡ ಮಾವಿನ ಹಣ್ಣು ತಿನ್ನಬಹುದು. ಅದನ್ನು ಸಮತೋಲಿತ ಆಹಾರ ಎಂದು ತಜ್ಞರು ಪರಿಗಣಿಸುತ್ತಾರೆ. ನೀವು ದಿನಕ್ಕೆ ಒಂದು ಮಾವಿನ ಹಣ್ಣು ತಿಂದ್ರೆ ಸಾಕು.

ಮಾವಿನ ಹಣ್ಣು ಅಲರ್ಜಿ : ಅತೀ ಅಪರೂಪಕ್ಕೆ ಒಬ್ಬರು ಅಥವಾ ಇಬ್ಬರಿಗೆ ಮಾವಿನ ಹಣ್ಣು ಅಲರ್ಜಿಯುಂಟು ಮಾಡುತ್ತದೆಯೇ ವಿನಃ ಎಲ್ಲರಿಗೂ ಅಲ್ಲ. ಹಾಗಾಗಿ ನೀವು ಮಾವಿನ ಋತುವಿನಲ್ಲಿ ನಿಮಗೆ ಇಷ್ಟವಾಗುವಷ್ಟು ಹಣ್ಣನ್ನು ಸೇವನೆ ಮಾಡಬಹುದು. 

ಮಾವು ತಿಂದ್ರೆ ಮೊಡವೆ : ಇದು ಕೂಡ ಸಂಪೂರ್ಣ ತಪ್ಪು ಕಲ್ಪನೆಯಾಗಿದೆ. ಮಾವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದು ದೇಹದಲ್ಲಿರುವ ಎಲ್ಲಾ ವಿಷಕಾರಿ ವಸ್ತುಗಳನ್ನು ತೆಗೆದುಹಾಕುತ್ತದೆ. ಇದರರ್ಥ ಇದು ದೇಹವನ್ನು ನಿರ್ವಿಷಗೊಳಿಸುತ್ತದೆ. ಆದ್ದರಿಂದ ಮಾವು ತಿನ್ನುವುದರಿಂದ ಮೊಡವೆ ಉಂಟಾಗುವುದಿಲ್ಲ. ಮಾವು ಕ್ಯಾರೋಟಿನ್ ಹೊಂದಿರುತ್ತದೆ. ಇದು ಚರ್ಮಕ್ಕೆ ಹೊಳಪು ನೀಡುವ ಕೆಲಸ ಮಾಡುತ್ತದೆ. ಮಾವಿನ ಹಣ್ಣು ತಿಂದ ನಂತ್ರ ನಿಮಗೆ ಮೊಡವೆ ಕಾಣಿಸಿಕೊಂಡ್ರೆ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿ. ಮಾವಿನ ಸೇವನೆಯನ್ನು ಸಂಪೂರ್ಣ ಬಿಡೋದು ಇದಕ್ಕೆ ಪರಿಹಾರವಲ್ಲ.

ಗರ್ಭಿಣಿಯರು ಮಾವು ತಿನ್ನಬಾರದು : ಗರ್ಭಾವಸ್ಥೆಯಲ್ಲಿ ಪೋಷಕಾಂಶದ ಅಗತ್ಯವಿರುತ್ತದೆ. ಮಾವಿನ ಹಣ್ಣಿನಲ್ಲಿ ಪೋಷಕಾಂಶವಿದೆ. ಗರ್ಭಿಣಿಯರು ಮಾವಿನ ಹಣ್ಣಿನ ಸೇವನೆ ಮಾಡಬಹುದು. ಆದ್ರೆ ಅತಿಯಾಗದಿರುವಂತೆ ನೋಡಿಕೊಳ್ಳಿ. 

ಬೇಸಿಗೆಯಲ್ಲಿ ಅಪ್ಪಿತಪ್ಪಿಯೂ ಇಂಥಾ ಆಹಾರ ತಿನ್ನೋಕೆ ಹೋಗ್ಬೇಡಿ!

ಮಾವಿನ ಸಿಪ್ಪೆ ವಿಷಕಾರಿ : ಇಂಥ ತಪ್ಪು ಕಲ್ಪನೆ ಹೊಂದಿರುವ ಜನರೂ ನಮ್ಮಲ್ಲಿದ್ದಾರೆ. ಮಾವಿನ ಸಿಪ್ಪೆ ವಿಷಕಾರಿಯಲ್ಲ. ಅದಕ್ಕೆ ಕೆಮಿಕಲ್ ಸಿಂಪಡಿಸುವ ಸಾಧ್ಯತೆ ಇರುವ ಕಾರಣ ಅದನ್ನು ಸ್ವಚ್ಛಗೊಳಿಸಿ ಸೇವನೆ ಮಾಡಬೇಕು. 

click me!