ಭಾರತ ಸೇರಿದಂತೆ ವಿಶ್ವದಾದ್ಯಂತ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗ್ತಿದೆ. ಅದ್ರಲ್ಲಿ ಕಿಡ್ನಿ ಕ್ಯಾನ್ಸರ್ ಕೂಡ ಒಂದು. ಈ ಕ್ಯಾನ್ಸರ್ ಆರಂಭಿಕ ಲಕ್ಷಣವನ್ನು ಪತ್ತೆ ಮಾಡಿದ್ರೆ ಚಿಕಿತ್ಸೆ ಸುಲಭ.
ಕಿಡ್ನಿ ಜೀವಕೋಶಗಳಲ್ಲಿ ಪ್ರಾರಂಭವಾಗುವ ಕ್ಯಾನ್ಸರನ್ನು ಮೂತ್ರಪಿಂಡದ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಒಂದು ಮೂತ್ರಪಿಂಡದಲ್ಲಿ ಮಾತ್ರ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಆದರೆ ಅಪರೂಪದ ಸಂದರ್ಭಗಳಲ್ಲಿ ಎರಡೂ ಮೂತ್ರಪಿಂಡಗಳಲ್ಲಿ ಕ್ಯಾನ್ಸರ್ ಬೆಳೆಯಬಹುದು. 2023 ರಲ್ಲಿ 4,600 ಕ್ಕೂ ಹೆಚ್ಚು ಜನರು ಮೂತ್ರಪಿಂಡದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ರೋಗನಿರ್ಣಯದ ಸರಾಸರಿ ವಯಸ್ಸು 65 ವರ್ಷಗಳು.
ಕಿಡ್ನಿ (Kidney ) ಕ್ಯಾನ್ಸರ್ ಆಸ್ಟ್ರೇಲಿಯಾದಲ್ಲಿ ಏಳನೇ ಅತ್ಯಂತ ಸಾಮಾನ್ಯ ಕ್ಯಾನ್ಸರ್ (Cancer) ಆಗಿದೆ. 65 ಜನರ ಪೈಕಿ ಒಬ್ಬರಿಗೆ ಅವರ 85 ವರ್ಷದೊಳಗೆ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. ಕಿಡ್ನಿ ಕ್ಯಾನ್ಸರ್ ಆರಂಭಿಕ ಲಕ್ಷಣ ಸಾಮಾನ್ಯವಾಗಿರುತ್ತದೆ. ಹಾಗಾಗಿ ಅದನ್ನು ಗುರುತಿಸುವ ಬದಲು ನಿರ್ಲಕ್ಷ್ಯ ಮಾಡುವವರ ಸಂಖ್ಯೆಯೇ ಹೆಚ್ಚಿರುತ್ತದೆ. ಕಿಡ್ನಿ ಕ್ಯಾನ್ಸರ್ ಆರಂಭಿಕ ಲಕ್ಷಣ (Symptoms) ಆರಂಭದಲ್ಲೇ ಪತ್ತೆಯಾದ್ರೆ ಚಿಕಿತ್ಸೆ ಮೂಲಕ ಜೀವ ಉಳಿಸಿಕೊಳ್ಳಬಹುದು. ನಾವಿಂದು ಕಿಡ್ನಿ ಕ್ಯಾನ್ಸರ್ ಆರಂಭಿಕ ಲಕ್ಷಣ ಸೇರಿದಂತೆ ಅದಕ್ಕೆ ಸಂಬಂಧಿಸಿದ ಕೆಲ ಮಾಹಿತಿ ನೀಡ್ತೇವೆ.
ನೀವು ಫಿಟ್ ಆಗಿರಬೇಕಾ? ಹಾಗಿದ್ರೆ ಇವತ್ತಿನಿಂದಲೇ ದೇವಿ ಆಸನ ಟ್ರೈ ಮಾಡಿ
ಕಿಡ್ನಿ ಕ್ಯಾನ್ಸರ್ ಆರಂಭಿಕ ಲಕ್ಷಣ : ಮೊದಲೇ ಹೇಳಿದಂತೆ ಕಿಡ್ನಿ ಕ್ಯಾನ್ಸರ್ ಆರಂಭಿಕ ಲಕ್ಷಣ ಪತ್ತೆ ಹಚ್ಚುವುದು ಸ್ವಲ್ಪ ಕಠಿಣ. ಹೊಟ್ಟೆ ನೋವು, ವಿಶೇಷವಾಗಿ ಹೊಟ್ಟೆಯ ಒಂದು ಬದಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುತ್ತದೆ. ಇದರಿಂದ ಬಳಲುವ ಜನರು ತೂಕ ಕಳೆದುಕೊಳ್ತಾರೆ. ಯಾವುದೇ ಗಾಯವಿಲ್ಲದೆ ಮೂಳೆ ನೋವು, ತೋಳು ಅಥವಾ ಕೆಳ ಬೆನ್ನಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಜ್ವರ ಮತ್ತು ರಕ್ತಹೀನತೆ ಸಮಸ್ಯೆ ಕೂಡ ಅವರನ್ನು ಕಾಡುತ್ತದೆ.
ಕಿಡ್ನಿ ಕ್ಯಾನ್ಸರ್ ನಿಂದ ಬಳಲುವ ಜನರು ನಿರಂತರ ಆಯಾಸಗೊಳ್ತಾರೆ. ಪದೇ ಪದೇ ಮೂತ್ರ ವಿಸರ್ಜನೆ, ರಾತ್ರಿ ಆಗಾಗ ಮೂತ್ರ ವಿಸರ್ಜನೆ, ಮೂತ್ರದ ಬಣ್ಣದಲ್ಲಿ ಬದಲಾವಣೆ ಕೂಡ ಕಾಣಿಸುತ್ತದೆ. ಈ ಎಲ್ಲ ಲಕ್ಷಣ ನಿಮಗೆ ಕಾಣಿಸ್ತಿದೆ ಅಂದ್ರೆ ನಿಮಗೆ ಮೂತ್ರಕೋಶದ ಕ್ಯಾನ್ಸರ್ ಇದೆ ಎಂದರ್ಥವಲ್ಲ.
ಕಿಡ್ನಿ ಕ್ಯಾನ್ಸರ್ ಗೆ ಕಾರಣ : ಮೂತ್ರಪಿಂಡದ ಕ್ಯಾನ್ಸರ್ ಗೆ ನಿಖರ ಕಾರಣ ತಿಳಿದಿಲ್ಲವಾದ್ರೂ ಧೂಮಪಾನಿಗಳಿಗೆ ಕಿಡ್ನಿ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಗಣಿಗಾರಿಕೆ, ಕೃಷಿ ಮತ್ತು ಚಿತ್ರಕಲೆಯಲ್ಲಿ ಬಳಸುವ ಆರ್ಸೆನಿಕ್, ಕೆಲವು ಲೋಹದ ಡಿಗ್ರೇಸರ್‌ಗಳು ಅಥವಾ ಕ್ಯಾಡ್ಮಿಯಂನಂತಹ ರಾಸಾಯನಿಕವಿರುವ ಜಾಗದಲ್ಲಿ ಕೆಲಸ ಮಾಡುವುದು ಈ ಅಪಾಯವನ್ನು ಹೆಚ್ಚಿಸುತ್ತದೆ. ಕುಟುಂಬದ ಸದಸ್ಯರು ಮೂತ್ರಪಿಂಡದ ಕ್ಯಾನ್ಸರ್ ಗೆ ಒಳಗಾಗಿದ್ದರೆ ಅದು ನಿಮ್ಮನ್ನು ಕಾಡುವ ಅಪಾಯವಿದೆ. ಅಧಿಕ ತೂಕ ಅಥವಾ ಬೊಜ್ಜು, ತೀವ್ರ ರಕ್ತದೊತ್ತಡ, ಮೂತ್ರಪಿಂಡದ ಕಾಯಿಲೆ ಕೂಡ ಇದಕ್ಕೆ ಕಾರಣವಾಗುತ್ತದೆ. ಪುರುಷರಿಗೆ ಮೂತ್ರಪಿಂಡದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು.
ಹಾಲು ಆರೋಗ್ಯಕ್ಕೆ ಒಳ್ಳೆಯದು ನಿಜ, ಆದ್ರೆ ಸಿಂಹಿಣಿ ಹಾಲು ಕುಡಿದ್ರೆ ಏನಾಗುತ್ತೆ?
ಮೂತ್ರಪಿಂಡದ ಕ್ಯಾನ್ಸರ್ ಪತ್ತೆ ವಿಧಾನ : ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡುವ ಮೂಲಕ ನೀವು ಕ್ಯಾನ್ಸರ್ ಪತ್ತೆ ಹಚ್ಚಲು ಸಾಧ್ಯವಿಲ್ಲ. ಆದ್ರೆ ಮೂತ್ರಪಿಂಡದಲ್ಲಿ ಸಮಸ್ಯೆಯ ಇದೆ ಎಂಬುದನ್ನು ಪತ್ತೆ ಮಾಡಬಹುದು. ಸಿಟಿ ಸ್ಕ್ಯಾನ್ ಹಾಗೂ ಎಂಆರ್ ಐ ಸ್ಕ್ಯಾನ್ ಮೂಲಕ ಗಡ್ಡೆ ಗಾತ್ರವನ್ನು ಪತ್ತೆ ಮಾಡಲಾಗುತ್ತದೆ.
ಅಲ್ಟ್ರಾಸೌಂಡ್, ಎದೆಯ ಎಕ್ಸ್-ರೇ, ಸಿಟಿ ಸ್ಕ್ಯಾನ್, ಎಂಆರ್ ಐ, ಅಥವಾ ರೇಡಿಯೊಐಸೋಟೋಪ್, ಮೂಳೆ ಸ್ಕ್ಯಾನ್ ಮುಂತಾದ ಸ್ಕ್ಯಾನ್ ಮೂಲಕ ನಿಮ್ಮ ದೇಹದ ಇತರ ಭಾಗಗಳಿಗೆ ಕ್ಯಾನ್ಸರ್ ಹರಡಿದೆಯೇ ಎಂಬುದನ್ನು ಪತ್ತೆ ಮಾಡಬಹುದು.