ಲಿವರ್ ಗೆ ಸಂಬಂಧಿಸಿದ ಖಾಯಿಲೆ ಹೆಪಟೈಟಿಸ್. ಅದಕ್ಕೆ ಚಿಕಿತ್ಸೆ ಲಭ್ಯವಿದೆ. ಭಾರತದಲ್ಲಿ ಲಸಿಕೆ ವ್ಯವಸ್ಥೆ ಇದೆ. ಆದ್ರೂ ನಿತ್ಯ ಇದ್ರಿಂದ ಸಾಯುವ ಜನರ ಸಂಖ್ಯೆ ಕಡಿಮೆ ಆಗೋ ಬದಲು ಹೆಚ್ಚಾಗ್ತಾನೆ ಇದೆ.
ವಿಶ್ವದಾದ್ಯಂತ ಹೃದ್ರೋಗ, ಕ್ಯಾನ್ಸರ್, ಮಧುಮೇಹದಂತೆ ವೈರಲ್ ಹೆಪಟೈಟಿಸ್ ದೊಡ್ಡ ಸಮಸ್ಯೆಯಾಗಿದೆ. ಡಬ್ಲ್ಯುಎಚ್‌ಒ 2024 ಗ್ಲೋಬಲ್ ಹೆಪಟೈಟಿಸ್ ವರದಿ ಪ್ರಕಾರ, 2022 ರಲ್ಲಿ 13 ಲಕ್ಷಕ್ಕೂ ಹೆಚ್ಚು ಮಂದಿ ಇದರಿಂದ ಸಾವನ್ನಪ್ಪಿದ್ದಾರೆ. 2019ರಲ್ಲಿ ಈ ಸಂಖ್ಯೆ 11 ಲಕ್ಷವಿತ್ತು. ವೇಗವಾಗಿ ಜನರು ಹೆಪಟೈಟಿಸ್ ಗೆ ಬಲಿಯಾಗ್ತಿದ್ದಾರೆ. ವಿಶ್ವದಾದ್ಯಂತ ಹೆಪಟೈಟಿಸ್ ಬಿ ಮತ್ತು ಸಿ ಸೋಂಕಿನಿಂದ ಪ್ರತಿದಿನ ಸುಮಾರು 3,500 ಜನರು ಸಾಯುತ್ತಿದ್ದಾರೆ ಎಂಬ ವರದಿ ಆತಂಕ ಮೂಡಿಸಿದೆ. ನಾವಿಂದು ಹೆಪಟೈಟಿಸ್ ಲಕ್ಷಣ, ಕಾರಣ ಹಾಗೂ ಪರಿಹಾರದ ಬಗ್ಗೆ ನಿಮಗೆ ಮಾಹಿತಿ ನೀಡ್ತೇವೆ.
ಹೆಪಟೈಟಿಸ್ (Hepatitis) ಲಕ್ಷಣ : ನೀವು ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬೇಕು ಅಂದ್ರೆ ಹೆಪಟೈಟಿಸ್ ಯಕೃತ್ತಿ (Liver) ಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇದರಲ್ಲಿ ಲಿವರ್ ಊದಿಕೊಳ್ಳುತ್ತದೆ. ಹೆಪಟೈಟಿಸ್ ಎ, ಬಿ ಮತ್ತು ಸಿ ವೈರಸ್ (Virus) ಸೋಂಕು ಇದಕ್ಕೆ ಮುಖ್ಯ ಕಾರಣ. ನೀವು ಹೆಪಟೈಸಿಸ್ ಲಕ್ಷಣವನ್ನು ಗಮನಿಸೋದಾದ್ರೆ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಮೂತ್ರದ ಬಣ್ಣ ಬದಲಾಗುತ್ತದೆ. ಅಧಿಕ ಸುಸ್ತು ನಿಮ್ಮನ್ನು ಕಾಡುತ್ತದೆ. ವಾಕರಿಕೆ ಮತ್ತು ವಾಂತಿ, ಹೊಟ್ಟೆ ನೋವು, ಹಸಿವಾಗದೆ ಇರೋದು, ಹಠಾತ್ ತೂಕ ಇಳಿಕೆ ಲಕ್ಷಣವನ್ನು ಕಾಣಬಹುದು.
undefined
ಕಿಡ್ನಿ ಕ್ಯಾನ್ಸರ್ ಆರಂಭಿಕ ಲಕ್ಷಣ ಕಡೆಗಣಿಸ್ಬೇಡಿ
ಹೆಪಟೈಟಿಸ್ ಗೆ ಚಿಕಿತ್ಸೆ : ಪ್ರತಿ ದಿನ ಅಷ್ಟೊಂದು ಜನ ಹೆಪಟೈಟಿಸ್ ನಿಂದ ಸಾವನ್ನಪ್ಪುತ್ತಿದ್ದರೂ ಅದಕ್ಕೆ ಚಿಕಿತ್ಸೆ ಇದೆ. ಅದನ್ನು ತುರ್ತಾಗಿ ಗುರುತಿಸಬೇಕು. ಜೊತೆಗೆ ಅದಕ್ಕೆ ತಕ್ಕ ಚಿಕಿತ್ಸೆ ಪಡೆಯಬೇಕು. ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್, ಯಕೃತ್ತಿನ ಕಾರ್ಯ ಪರೀಕ್ಷೆ, ಆಟೋಇಮ್ಯೂನ್ ಬ್ಲಡ್ ಮಾರ್ಕರ್ ಪರೀಕ್ಷೆ ಮತ್ತು ಯಕೃತ್ತಿನ ಬಯಾಪ್ಸಿ ಮಾಡುವ ಮೂಲಕ ನಿಮಗೆ ಹೆಪಿಟೈಟಿಸ್ ಆಗಿದೆಯೇ ಎಂಬುದನ್ನು ಪತ್ತೆ ಮಾಡಲಾಗುತ್ತದೆ.
ಹೆಪಟೈಟಿಸ್ ಪ್ರಕಾರ : ಹೆಪಟೈಟಿಸ್ ನಲ್ಲಿ ಐದು ವಿಧವಿದೆ.
ಹೆಪಟೈಟಿಸ್ ಎ - ಇದು ಕೆಲವು ವಾರಗಳಿಂದ 6 ತಿಂಗಳವರೆಗೆ ಇರುತ್ತದೆ
ಹೆಪಟೈಟಿಸ್ ಬಿ - ಯಕೃತ್ತಿಗೆ ಹಾನಿ ಮಾಡುವ ಗಂಭೀರ ಸೋಂಕಾಗಿದೆ.
ಹೆಪಟೈಟಿಸ್ ಸಿ - ಸುಲಭವಾಗಿ ಚಿಕಿತ್ಸೆ ನೀಡಬಹುದಾದ ರೋಗ
ಹೆಪಟೈಟಿಸ್ ಡಿ - ಹೆಪಟೈಟಿಸ್ ಬಿ ಸೋಂಕಿತ ಜನರ ಮೇಲೆ ಮಾತ್ರ ಪರಿಣಾಮ ಬೀರುವ ರೋಗ
ಹೆಪಟೈಟಿಸ್ ಇ - ಗರ್ಭಿಣಿ ಮಹಿಳೆಯರಲ್ಲಿ ಗಂಭೀರವಾದ ಅಲ್ಪಾವಧಿಯ ಕಾಯಿಲೆ
ಹೆಪಟೈಟಿಸ್ ಗೆ ಚಿಕಿತ್ಸೆ : ಹೆಪಟೈಟಿಸ್ ಎಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ನಿಧಾನವಾಗಿ ರೋಗಿ ಗುಣಮುಖನಾಗುತ್ತಾನೆ. ಹೆಪಟೈಟಿಸ್ ಬಿ ತಡೆಯಲು ನೀವು ಔಷಧಿ ತೆಗೆದುಕೊಳ್ಳಬೇಕು. ಹೆಪಟೈಟಿಸ್ ಸಿ ರೋಗಿಗೆ ಕೂಡ ವೈದ್ಯರು ಔಷಧಿ ಸೇವಿಸಲು ಸಲಹೆ ನೀಡುತ್ತಾರೆ. ಇನ್ನು ಹೆಪಟೈಟಿಸ್ ಡಿಗೂ ಔಷಧವಿದೆ. ಹೆಪಟೈಟಿಸ್ ಇ ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಇದಲ್ಲದೆ ಹೆಪಿಟೈಟಿಸ್ ಬರದಂತೆ ಲಸಿಕೆ ಹಾಕಲಾಗುತ್ತದೆ. ಅದನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕು.
ಹೆಪಟೈಟಿಸ್ ಯಕೃತ್ತಿನ ಸಮಸ್ಯೆಯಾಗಿದೆ. ನಾವು ಯಕೃತ್ತನ್ನು ಆರೋಗ್ಯಕರವಾಗಿಡಲು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಲು ಆದ್ಯತೆ ನೀಡಬೇಕು. ಆಲ್ಕೋಹಾಲ್, ಜಂಕ್ ಫುಡ್ ಮತ್ತು ಸಂಸ್ಕರಿಸಿದ ಆಹಾರವನ್ನು ತ್ಯಜಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು.
ನೀವು ಫಿಟ್ ಆಗಿರಬೇಕಾ? ಹಾಗಿದ್ರೆ ಇವತ್ತಿನಿಂದಲೇ ದೇವಿ ಆಸನ ಟ್ರೈ ಮಾಡಿ
ಭಾರತದಲ್ಲಿ ಹೆಪಟೈಟಿಸ್ : ಭಾರತದಲ್ಲಿ ಹೆಪಟೈಟಿಸ್ ರೋಗ ತಡೆಗಟ್ಟಲು ಲಸಿಕೆ ಲಭ್ಯವಿದೆ. 1982 ರಿಂದಲೇ ಲಸಿಕೆ ಹಾಕಲಾಗ್ತಿದೆ. ಈ ಲಸಿಕೆ ರೋಗದ ಅಪಾಯವನ್ನು ಶೇಕಡಾ 95ರಷ್ಟು ತಡೆಯುತ್ತದೆ. ಆದ್ರೂ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ, ಭಾರತದಲ್ಲಿ ಈ ಕಾಯಿಲೆಯಿಂದ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಾರೆ.