ಇಸ್ರೇಲ್‌ಗೂ ತಲುಪಿತು ಮಂಕಿಪಾಕ್ಸ್ ಹಾವಳಿ..! ಇದು ಕೊರೋನಾದಂತೆ ಮತ್ತೊಂದು ಸಾಂಕ್ರಾಮಿಕ ಕಾಯಿಲೆನಾ ?

Published : May 23, 2022, 02:45 PM ISTUpdated : May 23, 2022, 02:46 PM IST
ಇಸ್ರೇಲ್‌ಗೂ ತಲುಪಿತು ಮಂಕಿಪಾಕ್ಸ್ ಹಾವಳಿ..! ಇದು ಕೊರೋನಾದಂತೆ ಮತ್ತೊಂದು ಸಾಂಕ್ರಾಮಿಕ ಕಾಯಿಲೆನಾ ?

ಸಾರಾಂಶ

ಜಗತ್ತಿನಾದ್ಯಂತ ಕೋವಿಡ್ (Covid) ಸೋಂಕಿನ ಪ್ರಭಾವ ಸಂಪೂರ್ಣವಾಗಿ ಕಡಿಮೆಯಾಗಿಲ್ಲ. ಹೀಗಿರುವಾಗ ಮತ್ತೊಂದು ಗಂಭೀರ ಸಮಸ್ಯೆ (Problem) ಆವರಿಸುವ ಆತಂಕ ಎದುರಾಗಿದೆ. ಅತಿ ಅಪರೂಪದ ಸೋಂಕಾದ ಮಂಕಿಪಾಕ್ಸ್ ವೈರಸ್ (Monkeypox virus) ಒಂದೊಂದೇ ದೇಶಕ್ಕೆ ಲಗ್ಗೆಯಿಡುತ್ತಿದೆ. ಈಗ, ಇಸ್ರೇಲ್ (Israel) ಕೂಡ ವಿದೇಶದಿಂದ ಹಿಂದಿರುಗಿದ ವ್ಯಕ್ತಿಯಲ್ಲಿ ವೈರಸ್ ಸೋಂಕಿನ ಮೊದಲ ಪ್ರಕರಣವನ್ನು ದೃಢಪಡಿಸಿದೆ. 

ಜಗತ್ತಿನಾದ್ಯಂತ ಹೆಚ್ಚುತ್ತಿರುವ ಮಂಕಿಪಾಕ್ಸ್ Monkeypox) ಪ್ರಕರಣಗಳು ಎಚ್ಚರಿಕೆಯ ಗಂಟೆಗಳನ್ನು ಬಾರಿಸುತ್ತಿವೆ. ಈಗ, ಇಸ್ರೇಲ್ (Israel) ಕೂಡ ವಿದೇಶದಿಂದ ಹಿಂದಿರುಗಿದ ವ್ಯಕ್ತಿಯಲ್ಲಿ ಸೋಂಕಿನ (Virus) ಮೊದಲ ಪ್ರಕರಣವನ್ನು ದೃಢಪಡಿಸಿದೆ. ಜಾಗತಿಕ ಮಂಕಿಪಾಕ್ಸ್ ಪರಿಸ್ಥಿತಿಯು ಕಳವಳಿ ಪಡಬೇಕಾದ ವಿಷಯವಾಗಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ (Joe Biden) ಹೇಳಿದ್ದಾರೆ. ಶನಿವಾರದ ಹೊತ್ತಿಗೆ, ವಿಶ್ವ ಆರೋಗ್ಯ ಸಂಸ್ಥೆಯು (WHO) ವೈರಸ್‌ಗೆ ಸ್ಥಳೀಯವಲ್ಲದ 12 ಸದಸ್ಯ ರಾಷ್ಟ್ರಗಳಿಂದ 92 ದೃಢಪಡಿಸಿದ ಪ್ರಕರಣಗಳು ಮತ್ತು 28 ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ತಿಳಿದುಬಂದಿದೆ.

ವ್ಯಕ್ತಿಯನ್ನು ಟೆಲ್ ಅವಿವ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಪ್ರಸ್ತುತ ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಜ್ವರ ಮತ್ತು ಗಾಯಗಳೊಂದಿಗೆ ವಿದೇಶದಿಂದ ಹಿಂದಿರುಗಿದ ಎಲ್ಲರಿಗೂ ವೈದ್ಯರನ್ನು ಭೇಟಿ ಮಾಡುವಂತೆ ಆರೋಗ್ಯ ಅಧಿಕಾರಿಗಳು ಸೂಚಿಸಿದ್ದಾರೆ.

ಜಗತ್ತಿನಾದ್ಯಂತ ಮಂಕಿಪಾಕ್ಸ್‌ ಭೀತಿ, ಬೆಲ್ಜಿಯಂನಲ್ಲಿ 21 ದಿನ ಕ್ವಾರಂಟೈನ್ ಕಡ್ಡಾಯ

ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಕಳವಳ
ಮಂಕಿಪಾಕ್ಸ್ ಕುರಿತು ತನ್ನ ಮೊದಲ ಸಾರ್ವಜನಿಕ ಕಾಮೆಂಟ್‌ಗಳಲ್ಲಿ, ಯುಎಸ್ ಅಧ್ಯಕ್ಷ ಬೈಡೆನ್ ಮಂಕಿಪಾಕ್ಸ್ ತೀವ್ರವಾಗಿ ಹರಡಿದರೆ ಪರಿಣಾಮ ಬೀರುವುದು ಖಂಡಿತ ಎಂದು ತಿಳಿಸಿದ್ದಾರೆ. ಮಂಕಿಪಾಕ್ಸ್ ಯಾವ ಮಟ್ಟಕ್ಕೆ ಹರಡುತ್ತಿದೆ ಎಂದು ನನಗೆ ತಿಳಿದಿಲ್ಲ. ಆದರೆ ಇದು ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಾದ ವಿಷಯವಾಗಿದೆ ಎಂದು ಬೈಡೆನ್ ಹೇಳಿದರು. ಯಾವ ಲಸಿಕೆ ಪರಿಣಾಮಕಾರಿಯಾಗಬಹುದು ಎಂಬುದನ್ನು ನಿರ್ಧರಿಸುವ ಕೆಲಸ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ

ಮಂಕಿಪಾಕ್ಸ್‌ನ (Monkeypox) ಮೊದಲ ಪ್ರಕರಣವನ್ನು ಯುಕೆ ದೃಢಪಡಿಸಿತ್ತು.  ಇತ್ತೀಚೆಗಷ್ಟೇ ನೈಜೀರಿಯಾಕ್ಕೆ ತೆರಳಿದ್ದ ವ್ಯಕ್ತಿಯಲ್ಲಿ ಈ ವೈರಸ್ ಪತ್ತೆಯಾಗಿತ್ತು. ರೋಗಿಯನ್ನು ಪ್ರಸ್ತುತ ಲಂಡನ್‌ನ ಸೇಂಟ್ ಥಾಮಸ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಘಟಕದಲ್ಲಿ ಚಿಕಿತ್ಸೆ (Treatment) ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ತಿಂಗಳು ಹಲವಾರು ದೇಶಗಳಲ್ಲಿ ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಮೇ 6ರಿಂದ ಯುಕೆ ಅಪರೂಪದ ವೈರಸ್‌ನ 20 ಪ್ರಕರಣಗಳನ್ನು ದೃಢಪಡಿಸಿದೆ. ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ಕೂಡ ಇಂದು ತಮ್ಮ ಮೊದಲ ಮಂಕಿಪಾಕ್ಸ್ ಪ್ರಕರಣವನ್ನು ವರದಿ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆಯಿಂದ ಎಚ್ಚರಿಕೆ
ವಿಶ್ವ ಆರೋಗ್ಯ ಸಂಸ್ಥೆ ಮುಂದಿನ ದಿನಗಳಲ್ಲಿ ಮಂಕಿಪಾಕ್ಸ್‌ನ ಹೆಚ್ಚಿನ ಪ್ರಕರಣಗಳು ಕಂಡು ಬರುವ ಸಾಧ್ಯತೆಯಿದೆ  ಎಂದು ಹೇಳಿದೆ. ಮಂಕಿಪಾಕ್ಸ್‌ನ ಇತ್ತೀಚಿನ ಏಕಾಏಕಿ ವೈರಾಣುಗಳು ನಿಯಮಿತವಾಗಿ ಪ್ರಸಾರವಾಗದ ದೇಶಗಳಲ್ಲಿ ಸಂಭವಿಸುವುದರಿಂದ ಅವು ಅಸಹನೀಯವಾಗಿವೆ. ವಿಜ್ಞಾನಿಗಳು ಪ್ರಸ್ತುತ ಪ್ರಕರಣಗಳ ಮೂಲವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಮತ್ತು ವೈರಸ್ ಬಗ್ಗೆ ಏನಾದರೂ ಬದಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.

ಲೈಂಗಿಕ ಸಂಪರ್ಕದ ಮೂಲಕವೂ ಹರಡುತ್ತಂತೆ ಮಂಕಿಪಾಕ್ಸ್ ವೈರಸ್ !

ಸಿಡುಬು-ಸಂಬಂಧಿತ ಕಾಯಿಲೆಯ ಪ್ರಕರಣಗಳು ಈ ಹಿಂದೆ ಮಧ್ಯ ಮತ್ತು ಪಶ್ಚಿಮ ಆಫ್ರಿಕಾಕ್ಕೆ ಸಂಪರ್ಕ ಹೊಂದಿರುವ ಜನರಲ್ಲಿ ಮಾತ್ರ ಕಂಡುಬಂದಿವೆ. ಆದರೆ ಬ್ರಿಟನ್, ಸ್ಪೇನ್, ಪೋರ್ಚುಗಲ್, ಇಟಲಿ, ಯುಎಸ್, ಸ್ವೀಡನ್ ಮತ್ತು ಕೆನಡಾ ಎಲ್ಲಾ ಸೋಂಕುಗಳನ್ನು ವರದಿ ಮಾಡಿದೆ, ಹೆಚ್ಚಾಗಿ ಈ ಹಿಂದೆ ಆಫ್ರಿಕಾಕ್ಕೆ ಪ್ರಯಾಣಿಸದ ಯುವಕರಲ್ಲಿ. ಫ್ರಾನ್ಸ್, ಜರ್ಮನಿ, ಬೆಲ್ಜಿಯಂ ಮತ್ತು ಆಸ್ಟ್ರೇಲಿಯಾ ಕೂಡ ಪ್ರಕರಣಗಳನ್ನು ಗುರುತಿಸಿವೆ.

ಮಂಕಿಪಾಕ್ಸ್ ಕೊರೋನಾದಂತೆ ಮತ್ತೊಂದು ಸಾಂಕ್ರಾಮಿಕವೇ ?
ವಿಜ್ಞಾನಿಗಳ ಪ್ರಕಾರ, ಮಂಕಿಪಾಕ್ಸ್ ಏಕಾಏಕಿ ಕೋವಿಡ್ -19 ನಂತಹ ಸಾಂಕ್ರಾಮಿಕ ರೋಗವಾಗಿ ವಿಕಸನಗೊಳ್ಳುವುದಿಲ್ಲ ಏಕೆಂದರೆ ಈ  ವೈರಸ್ ಸುಲಭವಾಗಿ ಹರಡುವುದಿಲ್ಲ. ಜರ್ಮನಿಯ ರಾಬರ್ಟ್ ಕೋಚ್ ಇನ್‌ಸ್ಟಿಟ್ಯೂಟ್‌ನ ಸಂಶೋಧಕ ಫ್ಯಾಬಿಯನ್ ಲೀಂಡರ್ಟ್ಜ್, "ಈ ಸಾಂಕ್ರಾಮಿಕ ರೋಗವು ಹೆಚ್ಚು ಕಾಲ ಉಳಿಯುವ ಸಾಧ್ಯತೆ ಕಡಿಮೆ. ಸಂಪರ್ಕ ಪತ್ತೆಹಚ್ಚುವಿಕೆಯ ಮೂಲಕ ಪ್ರಕರಣಗಳನ್ನು ಚೆನ್ನಾಗಿ ಪ್ರತ್ಯೇಕಿಸಬಹುದು ಮತ್ತು ಅಗತ್ಯವಿದ್ದರೆ ಬಳಸಬಹುದಾದ ಔಷಧಗಳು ಮತ್ತು ಪರಿಣಾಮಕಾರಿ ಲಸಿಕೆಗಳೂ ಇವೆ" ಎಂದು ತಿಳಿಸಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!
ಒಂದು ಗ್ಲಾಸ್ ನೀರಿನ ಜೊತೆ ಇದನ್ನ ಬೆರೆಸಿದ್ರೆ ಅದೆಷ್ಟೋ ಸಮಸ್ಯೆ ನಿವಾರಣೆಯಾಗುತ್ತೆ