
ಕಣ್ಣು (Eyes) ಗಳು ನಮ್ಮ ದೇಹದ ಅಮೂಲ್ಯ ಅಂಗ (Organ). ಕಣ್ಣಿನ ಆರೈಕೆ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ದೃಷ್ಟಿ ದೋಷದ ಸಮಸ್ಯೆ ಅಧಿಕವಾಗ್ತಿದೆ. ಅದಕ್ಕೆ ಮುಖ್ಯ ಕಾರಣ ನಮ್ಮ ಲೈಫ್ ಸ್ಟೈಲ್ (Lifestyle). ಅತ್ಯಧಿಕ ಜನರು ದಿನದಲ್ಲಿ 8 ರಿಂದ 10 ಗಂಟೆಯವರೆಗೆ ಕಂಪ್ಯೂಟರ್ ಮುಂದೆ ಕಳೆಯುತ್ತಾರೆ. ಬರೀ ಕಂಪ್ಯೂಟರ್ ಬಳಕೆ ಮಾತ್ರವಲ್ಲ ಅದ್ರ ನಂತ್ರ ಮೊಬೈಲ್ ಬಳಸ್ತಾರೆ. ಕತ್ತಲ ಪ್ರದೇಶದಲ್ಲಿ ಕುಳಿತು ಮೊಬೈಲ್ ಹಾಗೂ ಕಂಪ್ಯೂಟರ್ ಬಳಕೆ ಮಾಡ್ತಾರೆ. ಇವುಗಳ ಜೊತೆಗೆ ನಮ್ಮ ಆಹಾರ ಕ್ರಮ ಹಾಗೂ ಕಣ್ಣಿನ ಆರೈಕೆಗೆ ಸಮಯ ನೀಡದಿರುವುದು ಮತ್ತು ಕಣ್ಣಿನ ಆರೋಗ್ಯ ವೃದ್ಧಿಸುವ ಆಹಾರ ಸೇವನೆ ಮಾಡದಿರುವುದು ಕೂಡ ದೃಷ್ಟಿ ಸಮಸ್ಯೆಗೆ ಕಾರಣವಾಗ್ತಿದೆ.
ವಯಸ್ಸು ಹೆಚ್ಚಾದಂತೆ ದೃಷ್ಟಿ ಮಂದವಾಗುವುದು ಸಹಜ. ಆದ್ರೆ ಈ ಸಂದರ್ಭದಲ್ಲಿ ಸರಿಯಾದ ಆಹಾರ ಸೇವನೆ ಮಾಡದೆ ಹೋದ್ರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ದೃಷ್ಟಿಗೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆಯುತ್ತಿರುತ್ತವೆ. ಇತ್ತೀಚಿಗೆ ತಜ್ಞರೊಬ್ಬರು ದೃಷ್ಟಿ ದೋಷ ಮತ್ತು ಕೊನೆಯಲ್ಲಿ ದೃಷ್ಟಿ ಕಳೆದುಕೊಳ್ಳಲು ಕೆಲ ಆಹಾರಗಳು ಕಾರಣವಂತೆ. ಇಂದು ಕುರುಡುತನಕ್ಕೆ ಯಾವ ಆಹಾರ ಕಾರಣವಾಗುತ್ತದೆ ಎಂಬುದನ್ನು ನಾವು ಹೇಳ್ತೇವೆ.
30 ವರ್ಷಗಳ ನಂತರ ಮೊಜಾಂಬಿಕ್‌ನಲ್ಲಿ ಪತ್ತೆಯಾಯ್ತು ಪೋಲಿಯೋ !
ತಜ್ಞ ಶರೋನ್ ಕೋಪ್ಲ್ಯಾಂಡ್ ಪ್ರಕಾರ, ವಯಸ್ಸಾಗ್ತಿದ್ದಂತೆ ದೃಷ್ಟಿ ಮಂದವಾಗುವುದು ಒಂದು ಸಾಮಾನ್ಯ ಪ್ರಕ್ರಿಯೆ. ಆದ್ರೆ ಕೆಟ್ಟ ಡಯೆಟ್, ಚಿಕ್ಕ ವಯಸ್ಸಿನಲ್ಲಿಯೇ ದೃಷ್ಟಿ ಹೀನತೆಗೆ ಕಾರಣವಾಗ್ತಿದೆ. ಅದಕ್ಕೆ ಅತಿಯಾದ ಸಿಹಿ ಆಹಾರ ಸೇವನೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳ ಸೇವನೆ ಕಾರಣವೆನ್ನುತ್ತಾರೆ. ಈ ಕೆಟ್ಟ ಸಂಸ್ಕರಿತ ಕಾರ್ಬೋಹೈಡ್ರೇಟ್ ಆಹಾರಗಳಲ್ಲಿ ಬಿಳಿ ಬ್ರೆಡ್ ಮತ್ತು ಪಾಸ್ಟಾ ಸೇರಿವೆ. ಇದಲ್ಲದೆ ಕೆಚಪ್ ಮತ್ತು ತಂಪು ಪಾನೀಯಗಳು ಸಹ ದೃಷ್ಟಿ ಕಳೆದುಕೊಳ್ಳಲು ಕಾರಣವಾಗಬಹುದು ಎಂದವರು ಹೇಳಿದ್ದಾರೆ.
ಈ ಆಹಾರಗಳು ಅತಿ ಬೇಗ ಜೀರ್ಣವಾಗುತ್ತವೆ. ಇದ್ರಿಂದಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ಬೇಗ ಹೆಚ್ಚಾಗುತ್ತದೆ. ರಕ್ತದಲ್ಲಿನ ಸಕ್ಕರೆಯ ಈ ಹೆಚ್ಚಳವು 'ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್' (AMD) ಗೆ ಕಾರಣವಾಗುತ್ತದೆ. ಮ್ಯಾಕ್ಯುಲರ್ ಡಿಜೆನರೇಶನ್ ಒಂದು ಕಣ್ಣಿನ ಕಾಯಿಲೆಯಾಗಿದೆ. ಈ ಖಾಯಿಲೆಯಿಂದ ಬಳಲುವವರಿಗೆ ದೃಷ್ಟಿ ಮಂದವಾಗುವ ಸಾಧ್ಯತೆಯಿರುತ್ತದೆ. ದೃಷ್ಟಿ ಕಳೆದುಕೊಳ್ಳುವ ಅಪಾಯವೂ ಇದ್ರಲ್ಲಿದೆ.
ಕೆಟ್ಟ ಡಯೆಟ್ ಟೈಪ್ 2 ಮಧುಮೇಹಕ್ಕೆ ಕಾರಣ : ತಜ್ಞ ಶರೋನ್ ಕೋಪ್ಲ್ಯಾಂಡ್ ಪ್ರಕಾರ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗ್ತಿದೆ ಅಂದ್ರೆ ಟೈಪ್ 2 ಮಧುಮೇಹ ಕಾಡುವ ಅಪಾಯವಿರುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಮಧುಮೇಹ ರೆಟಿನೋಪತಿಯನ್ನು ಅಭಿವೃದ್ಧಿಪಡಿಸಬಹುದು. ಆದ್ರೆ ಇದು ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ. ಮಧುಮೇಹಿಗಳಲ್ಲಿ ಎಲ್ಲಿಯವರೆಗೆ ರಕ್ತದಲ್ಲಿರುವ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುವುದಿಲ್ಲವೋ ಅಲ್ಲಿಯವರೆಗೆ ದೃಷ್ಟಿ ಕಳೆದುಕೊಳ್ಳುವ ಅಪಾಯವೂ ಇರುತ್ತದೆ. ಪಾಶ್ಚಾತ್ಯ ಆಹಾರ ತಿನ್ನುವವರಿಗೆ ಕಣ್ಣಿನ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಎನ್ನುತ್ತಾರೆ ಶರೋನ್ ಕೋಪ್ಲ್ಯಾಂಡ್. ಈ ಆಹಾರ ಕಣ್ಣಿಗೆ ಹಾನಿಯುಂಟು ಮಾಡುತ್ತದೆ. ಸಂಸ್ಕರಿಸಿದ ಮಾಂಸಗಳಾದ ಸಾಸೇಜ್, ಬೇಕನ್ ನಂತಹ ಆಹಾರ ಸೇವನೆ ಮಾಡಿದ್ರೆ ದೃಷ್ಟಿ ದೋಷ ಬೇಗ ಕಾಡುತ್ತದೆ ಎನ್ನುತ್ತಾರೆ ಶರೋನ್ ಕೋಪ್ಲ್ಯಾಂಡ್. ಈ ಸಂಸ್ಕರಿಸಿದ ಮಾಂಸದಲ್ಲಿ ಉಪ್ಪಿನಾಂಶ ಹೆಚ್ಚಿರುತ್ತದೆ. ಇದ್ರಿಂದ ರಕ್ತದೊತ್ತಡ ಹೆಚ್ಚಾಗುತ್ತದೆ. ಅಧಿಕ ರಕ್ತದೊತ್ತಡದಿಂದಲೂ ರೆಟಿನೋಪತಿ ಕಾಡುವ ಸಾಧ್ಯತೆ ಹೆಚ್ಚಿರುತ್ತದೆ.
ಹಸಿ ಹಾಲು ಸೇವನೆ ಆರೋಗ್ಯಕ್ಕೆ ಪ್ರಯೋಜನಕಾರಿಯೇ ಅಥವಾ ಹಾನಿಕಾರಕವೇ ?
ಕಣ್ಣಿನ ದೃಷ್ಟಿ ಕಳೆದುಕೊಂಡ 17 ವರ್ಷದ ಹುಡುಗ : ಎನಲ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಅಧಿಕ ಫಾಸ್ಟ್ ಫುಡ್ ಸೇವನೆ ಮಾಡ್ತಿದ್ದ 17 ವರ್ಷದ ಹುಡುಗನೊಬ್ಬ ಕಣ್ಣು ಕಳೆದುಕೊಂಡಿದ್ದಾನೆ. ಆತ ಫ್ರೆಂಚ್ ಫ್ರೈಸ್, ಬಿಳಿ ಬ್ರೆಡ್ ಮತ್ತು ಸಂಸ್ಕರಿಸಿದ ಮಾಂಸವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಿದ್ದನಂತೆ. ಆತನ ದೇಹದಲ್ಲಿ ವಿಟಮಿನ್ ಬಿ 12 ಅತಿ ಕಡಿಮೆಯಿತ್ತು ಎನ್ನಲಾಗಿದೆ. ಹಾಗೆ ಬೇರೆ ವಿಟಮಿನ್ ಗಳು ಕಡಿಮೆಯಿದ್ದವು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.