Latest Videos

ಮಾನವನ ವೀರ್ಯದಲ್ಲಿ ಮೈಕ್ರೋಪ್ಲಾಸ್ಟಿಕ್, ಹೆಚ್ಚುತ್ತಿದೆ ಪುರುಷ ಬಂಜೆತನದ ಅಪಾಯ!

By Vinutha PerlaFirst Published May 23, 2024, 4:11 PM IST
Highlights

ಇತ್ತೀಚಿನ ಅಧ್ಯಯನವು ಮಾನವನ ವೀರ್ಯದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳ ಉಪಸ್ಥಿತಿಯನ್ನು ದೃಢಪಡಿಸಿದೆ. ಈ ಸಂಶೋಧನೆಯು ದುರ್ಬಲತೆಯ ಮೇಲೆ ಪ್ಲಾಸ್ಟಿಕ್ ಮಾಲಿನ್ಯದ ಪ್ರಭಾವದ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತದೆ.

ಇತ್ತೀಚಿನ ಅಧ್ಯಯನವು ಮಾನವನ ವೀರ್ಯದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳ ಉಪಸ್ಥಿತಿಯನ್ನು ದೃಢಪಡಿಸಿದೆ. ಈ ಸಂಶೋಧನೆಯು ದುರ್ಬಲತೆಯ ಮೇಲೆ ಪ್ಲಾಸ್ಟಿಕ್ ಮಾಲಿನ್ಯದ ಪ್ರಭಾವದ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತದೆ. ಅಮೇರಿಕನ್ ಜರ್ನಲ್ ಆಫ್ ಟಾಕ್ಸಿಕೊಲಾಜಿಕಲ್ ಸೈನ್ಸಸ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ಮಾನವನ ವೃಷಣಗಳು ಮತ್ತು ವೀರ್ಯದಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳ ಉಪಸ್ಥಿತಿಯನ್ನು ಬಹಿರಂಗಪಡಿಸಿದೆ. ಸಂಶೋಧನೆಯು ಪ್ಲಾಸ್ಟಿಕ್ ಮಾಲಿನ್ಯದ ಪರಿಣಾಮಗಳ ಬಗ್ಗೆ ಕಳವಳವನ್ನು ಹುಟ್ಟುಹಾಕುತ್ತದೆ.

ನ್ಯೂ ಮೆಕ್ಸಿಕೋ ವಿಶ್ವವಿದ್ಯಾನಿಲಯದ ಸಂಶೋಧಕರು ನಾಯಿಗಳು ಮತ್ತು ಮಾನವರ ಅಂಗಾಂಶದ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ ಮತ್ತು ಅವುಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳನ್ನು ಕಂಡುಕೊಂಡಿದ್ದಾರೆ. ಮೈಕ್ರೋಪ್ಲಾಸ್ಟಿಕ್ ಕಣಗಳು ದುರ್ಬಲತೆಯನ್ನು ಹೆಚ್ಚಿಸಬಹುದು ಎಂದು ಈ ಅಧ್ಯಯನವು ಸೂಚಿಸುತ್ತದೆ.

ವೀರ್ಯ ಸೂಪರ್‌ಫುಡ್ ಅಂತ ಹೇಳಿದ್ಯಾರು? ಅದನ್ನು ತಿಂದ್ರೆ ಯಾರಾದ್ರೂ ಗರ್ಭ ಧರಿಸ್ತಾರಾ?

ಯುಕೆಎಂ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕ ಕ್ಸಿಯಾಂಗ್‌ಜಾನ್ ಝಾನ್ ಯು ನೇತೃತ್ವದ ಸಂಶೋಧನಾ ತಂಡವು ಈ ಅಧ್ಯಯನವನ್ನು ನಡೆಸಿದೆ. 47 ನಾಯಿಗಳು ಮತ್ತು 23 ಮಾನವ ವೃಷಣಗಳಲ್ಲಿ 12 ರೀತಿಯ ಮೈಕ್ರೋಪ್ಲಾಸ್ಟಿಕ್‌ಗಳನ್ನು ಅಧ್ಯಯನವು ಕಂಡುಹಿಡಿದಿದೆ. 'ನಮ್ಮ ಅಧ್ಯಯನವು ಎಲ್ಲಾ ಪರೀಕ್ಷೆಗಳಲ್ಲಿ ಮಾನವ ವೀರ್ಯದಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವಿಕೆಯನ್ನು ಬಹಿರಂಗಪಡಿಸಿದೆ' ಎಂದು ಝಾನ್ ಯು ಹೇಳುತ್ತಾರೆ. 'ಇತ್ತೀಚಿಗೆ ಪುರುಷರಲ್ಲಿ ದೌರ್ಬಲ್ಯದ ಸಮಸ್ಯೆ ಏಕೆ ಕಾಣಿಸಿಕೊಳ್ಳುತ್ತಿದೆ ಎಂದು ನೀವು ಯೋಚಿಸುತ್ತಿದ್ದರೆ. ಅದಕ್ಕೆ ಇದೇ ಕಾರಣವಿರಬೇಕು' ಎಂದು ಅವರು ಹೇಳುತ್ತಾರೆ.

ಪ್ಲಾಸ್ಟಿಕ್ ಚೀಲಗಳು ಮತ್ತು ಬಾಟಲಿಗಳಲ್ಲಿ ಬಳಸಲಾಗುವ ಪಾಲಿಥಿಲೀನ್ ಅತ್ಯಂತ ಸಾಮಾನ್ಯವಾದ ಪ್ಲಾಸ್ಟಿಕ್ ವಿಧವಾಗಿದೆ. ಮುಂದಿನದು ಪಿವಿಸಿ. (PVC) ಪಾಲಿವಿನೈಲ್ ಕ್ಲೋರೈಡ್ ಎಂದು ಕರೆಯಲಾಗುತ್ತದೆ.'ಆರಂಭದಲ್ಲಿ, ಮೈಕ್ರೊಪ್ಲಾಸ್ಟಿಕ್‌ಗಳು ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಭೇದಿಸಬಹುದೆಂದು ನಾನು ಅನುಮಾನಿಸಿದೆ. ನಾಯಿಗಳಲ್ಲಿ ಅಧ್ಯಯನದ ಫಲಿತಾಂಶಗಳನ್ನು ಮೊದಲು ನೋಡಿದಾಗ ನನಗೆ ಆಶ್ಚರ್ಯವಾಯಿತು. ನಾನು ಮನುಷ್ಯರಲ್ಲಿ ಇದೇ ರೀತಿಯ ಫಲಿತಾಂಶಗಳನ್ನು ನೋಡಿದಾಗ ನನಗೆ ಇನ್ನಷ್ಟು ಆಶ್ಚರ್ಯವಾಯಿತು" ಎಂದು ಯು ಹೇಳುತ್ತಾರೆ.

ಗರ್ಭ ಧರಿಸೋದಕ್ಕೆ ಸಮಸ್ಯೆ ಆಗ್ತಿದ್ಯಾ? ನಿಮ್ಮ ಆಹಾರದಲ್ಲಿ ಏಲಕ್ಕಿ, ತುಪ್ಪ, ದಾಳಿಂಬೆ ಇರಲಿ!

'ಮೈಕ್ರೊಪ್ಲಾಸ್ಟಿಕ್‌ಗಳು ನಮ್ಮ ಪರಿಸರದಲ್ಲಿ ಪರಿಚಲನೆಗೊಳ್ಳುತ್ತಿವೆ ಮತ್ತು ಮಾನವ ದೇಹದ ಅತ್ಯಂತ ಸೂಕ್ಷ್ಮ ಭಾಗಗಳನ್ನು ತಲುಪುತ್ತಿವೆ ಎಂದು ಈ ಸಂಶೋಧನೆಯು ದೃಢಪಡಿಸುತ್ತದೆ. ದುರ್ಬಲತೆಯ ಮೇಲೆ ಮೈಕ್ರೋಪ್ಲಾಸ್ಟಿಕ್‌ಗಳ ಪರಿಣಾಮವನ್ನು ನಿರ್ಧರಿಸಲು ಹೆಚ್ಚಿನ ಅಧ್ಯಯನಗಳು ಅಗತ್ಯವಿದೆ' ಎಂದು ಅವರು ಹೇಳಿದರು.

click me!