ಹೇರ್ ಕಟ್ ಶಾಪ್ ನೋಡಿದ್ರೂ ಅಳ್ತಾನೆ ಈ ಹುಡುಗ, ಯಾಕಪ್ಪ ಹಿಂಗೆ?

By Roopa Hegde  |  First Published May 22, 2024, 1:23 PM IST

ಈಗ ಉದ್ದದ ಕೂದಲು ಬಿಡೋಕೆ ಹೆಣ್ಮಕ್ಕಳೇ ಮನಸ್ಸು ಮಾಡೋದಿಲ್ಲ. ಬಾಯ್ಸ್ ಮಾತ್ರವಲ್ಲ ಗರ್ಲ್ ಕೂಡ ಬಾಯ್ ಕಟ್ ಮಾಡ್ಕೊಂಡು ತಿರುಗ್ತಾರೆ. ಹೀಗಿರೋವಾಗ ಸೊಂಟದವರೆಗೆ ಕೂದಲು ಬಂದ್ರೂ ಈ ಹುಡುಗ ಮಾತ್ರ ಕೂದಲು ಕಟ್ ಮಾಡೋದ್ ಇರಲಿ, ಕತ್ತರಿ ನೋಡಿದ್ರೂ ಅಳ್ತಾನೆ. ಯಾಕೆ ಗೊತ್ತಾ? 
 


ಸ್ಕೂಲ್ ಗಳಲ್ಲಿ ಶಿಸ್ತು ಪಾಲನೆ ಮಾಡೋದು ಅನಿವಾರ್ಯ. ಬರೀ ಸ್ಕೂಲ್ ಮಾತ್ರವಲ್ಲ ಸಾರ್ವಜನಿಕರ ಜೊತೆ ನಾವು ಬದುಕುವ ಅನಿವಾರ್ಯತೆ ಇರುವ ಕಾರಣ ಆಯಾ ಸ್ಥಳದ ನಿಯಮಗಳನ್ನು ಪಾಲಿಸಬೇಕು. ಸ್ಕೂಲ್ ನಲ್ಲಿ ಹೆಣ್ಮಕ್ಕಳಿಗೆ ಹಾಗೂ ಗಂಡು ಮಕ್ಕಳಿಗೆ ಬೇರೆ ಸಮವಸ್ತ್ರವಿರುತ್ತದೆ. ಅದೇ ರೀತಿ ಹೇರ್ ಸ್ಟೈಲ್ ಬಗ್ಗೆಯೂ ಶಾಲೆಗಳು ಕಟ್ಟುನಿಟ್ಟಿನ ನಿಯಮ ರೂಪಿಸಿರುತ್ತವೆ. ಹೆಣ್ಮಕ್ಕಳು ಕೂದಲು ಕಟ್ಟಿಕೊಂಡು ಬಂದ್ರೆ ಗಂಡು ಮಕ್ಕಳು ಕೂದಲನ್ನು ಕತ್ತರಿಸಿಕೊಂಡು ಬರ್ಬೇಕು. ವಿದ್ಯಾರ್ಥಿಗಳ ಕೂದಲು ಸ್ವಲ್ಪ ಉದ್ದ ಬಂದ್ರೂ ಶಾಲೆ ಅವರಿಗೆ ಬೈದು, ಶಿಕ್ಷೆ ನೀಡೋದಿದೆ. ಶಾಲೆ ಈ ನಿಯಮಗಳು ಕೆಲವೊಮ್ಮೆ ಕಿರಿಕಿರಿ ಎನ್ನಿಸಿದ್ರೂ ಶಿಸ್ತನ್ನು ರೂಢಿಸುತ್ತವೆ. ಆದ್ರೆ ಈ ಬಾಲಕನಿಗೆ ಶಾಲೆ ಹೇರ್ ಕಟ್ ರೂಲ್ಸ್ ದೊಡ್ಡ ಸಮಸ್ಯೆಯಾಗಿದೆ. ಶಾಲೆಯಾದ್ರೂ ಬಿಡ್ತೇನೆ ಹೇರ್ ಕಟ್ ಮಾಡಿಸೋದಿಲ್ಲ ಎನ್ನುತ್ತಿದ್ದಾನೆ ಬಾಲಕ. 

ಹುಡುಗ್ರು ಒಂದು ವಯಸ್ಸಿಗೆ ಬಂದ್ಮೇಲೆ ಅವರ ಕೂದಲು (Hair) ಕತ್ತರಿಸುವ ಪದ್ಧತಿ ನಮ್ಮಲ್ಲಿದೆ. ಮೊದಲ ಬಾರಿ ಕೂದಲು ಕತ್ತರಿಸುವ ಸಮಯದಲ್ಲಿ ಕೆಲ ನಿಯಮಗಳನ್ನು ಕೂಡ ಪಾಲನೆ ಮಾಡಲಾಗುತ್ತೆ. ನಂತ್ರ ಕೂದಲು ಸ್ವಲ್ಪ ಉದ್ದ ಬೆಳೆಯೋಕೆ ಅವರು ಬಿಡೋದಿಲ್ಲ. ಈಗ ಹೆಣ್ಮಕ್ಕಳಂತೆ ಕೂದಲು ಬಿಡೋದು ಫ್ಯಾಷನ್ (Fashion) ಆದ್ರೂ ಎಲ್ಲರೂ ಅದನ್ನು ಪಾಲಿಸೋದಿಲ್ಲ. ಈ ಹುಡುಗ ಹುಟ್ಟಿದಾಗಿನಿಂದ ಕೂದಲು ಕತ್ತರಿಸೋಕೆ ಬಿಟ್ಟಿಲ್ಲ. ಆತನಿಗೆ ಕತ್ತರಿ ಕಂಡ್ರೆ ಭಯ (Fear). 

Latest Videos

undefined

ಪತಿಗೆ ಮೋಸ ಮಾಡುವ ಪತ್ನಿಗೆ ಚೀನಾದಲ್ಲಿ ಈ ಘೋರ ಶಿಕ್ಷೆ ಕೊಡ್ತಿದ್ರು!

ಫಾರೂಕ್ ಜೇಮ್ಸ್ ವಯಸ್ಸು ಈಗ 12 ವರ್ಷ. ಹೆಣ್ಮಕ್ಕಳಂತೆ ಉದ್ದವಾದ, ದಟ್ಟವಾದ ಕೂದಲಿದೆ. ಸಾಮಾಜಿಕ ಜಾಲತಾಣದಲ್ಲಿ (Social Media) ತನ್ನ ಕೂದಲಿನಿಂದಲೇ ಆತ ಪ್ರಸಿದ್ಧಿ ಪಡೆದಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ (Instagram) 2.5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾನೆ. ಫಾರೂಕ್ ಜೇಮ್ಸ್ ಚಿಕ್ಕವನಿದ್ದ ಕಾರಣ ಕೂದಲು ಆತನಿಗೆ ದೊಡ್ಡ ಸಮಸ್ಯೆ ಆಗಿರಲಿಲ್ಲ. ಆದ್ರೀಗ ಶಾಲೆಯ ರೂಲ್ಸ್ ಅವನಿಗೆ ತಲೆನೋವು ತಂದಿದೆ.

ಫಾರೂಕ್ ಜೇಮ್ಸ್ ಶಾಲೆಯಲ್ಲಿ ಕೂದಲು ಕತ್ತರಿಸುವಂತೆ ಕಟ್ಟುನಿಟ್ಟಿನ ನಿಯಮವಿದೆ. ಅನೇಕ ಬಾರಿ ಫಾರೂಕ್ ಜೇಮ್ಸ್ ಶಿಕ್ಷೆ ಕೂಡ ಅನುಭವಿಸಿದ್ದಾನೆ. ಸೊಂಟದವರೆಗೆ ಕೂದಲು ಹೊಂದಿರುವ ಫಾರೂಕ್ ಜೇಮ್ಸ್ ಇಷ್ಟಾದ್ರೂ ಕೂದಲು ಕತ್ತರಿಸಲು ಸಿದ್ಧವಿಲ್ಲ. ಶಾಲೆ ಬಿಡ್ತೇನೆಯೇ ಹೊರತು ಕೂದಲು ಕಟ್ ಮಾಡೋದಿಲ್ಲ ಎನ್ನುತ್ತಿದ್ದಾನೆ. 

ಕೂದಲು ಕತ್ತರಿಸದಿರಲು ಕಾರಣ ಏನು? : ಫಾರೂಕ್ ಜೇಮ್ಸ್ ಕೂದಲು ಕತ್ತರಿಸದಿರಲು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಪ್ರಸಿದ್ಧಿ ಕಾರಣವಲ್ಲ. ಆತನಿಗಿರುವ ಖಾಯಿಲೆ ಕಾರಣ. ಫಾರೂಕ್ ಜೇಮ್ಸ್ ಟಾನ್ಸುರೆಫೋಬಿಯಾ ಹೆಸರಿನ ಖಾಯಿಲೆಯಿಂದ ಬಳಲುತ್ತಿದ್ದಾನೆ. ಇದೊಂದು ಮಾನಸಿಕ ಖಾಯಿಲೆಯಾಗಿದೆ. ಇದ್ರಲ್ಲಿ ಕೂದಲು ಕತ್ತರಿಸಲು ಜನರಿಗೆ ಭಯ ಕಾಡುತ್ತದೆ. ಫಾರೂಕ್ ಜೇಮ್ಸ್ ಗೆ ಈ ಸಮಸ್ಯೆ ಇದೆ ಅನ್ನೋದು ಪಾಲಕರಿಗೆ ತಿಳಿದಿದೆ. ಹಾಗಾಗಿಯೇ ಅವರು ಕೂದಲು ಕತ್ತರಿಸುವಂತೆ ಫಾರೂಕ್ ಗೆ ಒತ್ತಾಯ ಮಾಡ್ತಿಲ್ಲ. ಜಡೆ ಕಟ್ಟಿ ಸ್ಕೂಲಿಗೆ ಕಳುಹಿಸಲು ಫಾರೂಕ್ ಅಮ್ಮ ಸಿದ್ಧವಿದ್ದಾಳೆ. ಫಾರೂಕ್ ಸ್ಕೂಲ್ ನಲ್ಲಿಯೂ ಆತನ ಖಾಯಿಲೆ ಬಗ್ಗೆ ತಿಳಿಸಲಾಗಿದೆ. ಆದ್ರೆ ಸ್ಕೂಲ್ ಮಾತ್ರ ಆತನ ಖಾಯಿಲೆಯನ್ನು ಒಪ್ಪುತ್ತಿಲ್ಲ. ಕೂದಲು ಕಟ್ ಮಾಡಿದ್ರೆ ಶಾಲೆಗೆ ಬರಲು ಅವಕಾಶ ಎನ್ನುತ್ತಿದೆ.  

ಸ್ಟ್ರೆಸ್ ಸ್ಟ್ರೆಸ್ ಅಂತ ಹೆದರಬೇಡಿ, ಅಲ್ಪ ಸ್ವಲ್ಪ ಒತ್ತಡ ಲೈಫಲ್ಲಿರಬೇಕು!

ಟಾನ್ಸುರೆಫೋಬಿಯಾ ಅಂದ್ರೇನು? : ಕೂದಲಿಗೆ ಸಂಬಂಧಿಸಿದಂತೆ ಜನರಲ್ಲಿ ಅನೇಕ ರೀತಿಯ ಫೋಬಿಯಾ (Phobia) ಇದೆ. ಅದ್ರಲ್ಲಿ ಟಾನ್ಸುರೆಫೋಬಿಯಾ ಕೂಡ ಒಂದು. ಇದ್ರಲ್ಲಿ ಜನರು ಕೂದಲು ಕತ್ತರಿಸಲು ಭಯಪಡುತ್ತಾರೆ. ಕೂದಲು ಕತ್ತರಿಸಬೇಕು ಎಂದಾಗೆಲ್ಲ ಅವರ ಹೃದಯಬಡಿತ (Heart Beat) ಹೆಚ್ಚಾಗುತ್ತದೆ. ತೀವ್ರ ಆತಂಕದಿಂದ ಬಳಲುತ್ತಾರೆ. ಅವರ ಇಡೀ ದೇಹದ ಮೇಲೆ ಬೆವರು ಕಾಣಿಸಿಕೊಳ್ಳುತ್ತದೆ. ಫಾರೂಕ್ ಕೂಡ ಇದೇ ಸ್ಥಿತಿಯಲ್ಲಿದ್ದು, ಕ್ಷೌರದ ಶಾಪ್ ನೋಡಿದ್ರೆ ಆತನಿಗೆ ಭಯವಾಗುತ್ತದೆ. 

click me!