
ಚಳಿಗಾಲ (Winter)ದಲ್ಲಿ ಆರೋಗ್ಯ (Health)ವನ್ನು ಕಾಪಾಡಿಕೊಳ್ಳುವುದು ತುಂಬಾ ಕಷ್ಟ. ಅದರಲ್ಲೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾದ ಅಗತ್ಯವಿರುತ್ತದೆ. ಮೈ ಕೊರೆಯುವ ಚಳಿಯಲ್ಲಿ ವಯಸ್ಕರು ಸ್ನಾನ (Bath) ಮಾಡುವುದೇ ಕಷ್ಟ, ಇನ್ನು ಮಕ್ಕಳಿಗೆ ಸ್ನಾನ ಮಾಡಿಸುವುದು ಹೇಗೆ ? ಅಥವಾ ಇಂಥಾ ಥಂಡಿ ವಾತಾವರಣದಲ್ಲಿ ಮಕ್ಕಳಿಗೆ ಸ್ನಾನ ಮಾಡಿಸಬಹುದಾ ? ಶಿಶುಗಳು ಸಾಮಾನ್ಯವಾಗಿ ಹೆಚ್ಚು ಬೆವರುವುದಿಲ್ಲ ಅಥವಾ ಪೂರ್ಣ ಸ್ನಾನದ ಅಗತ್ಯವಿರುವ ಧೂಳಿಗೆ ಒಡ್ಡಿಕೊಳ್ಳುವುದಿಲ್ಲ. ಆದ್ದರಿಂದ, ನವಜಾತ ಶಿಶುವನ್ನು ಸ್ನಾನ ಮಾಡಿಸಲು ಕೇವಲ 5ರಿಂದ 10 ನಿಮಿಷ ಸಾಕಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದಲ್ಲದೆ, ನವಜಾತ ಶಿಶುವಿಗೆ ಶೀತ ಮತ್ತು ಅನಾರೋಗ್ಯವನ್ನು ತಡೆಗಟ್ಟಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ.
ಮಗುವಿಗೆ ಸ್ನಾನ ಮಾಡಿಸುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು
ಸ್ನಾನ ಮತ್ತು ಉತ್ತಮ ತ್ವಚೆಯ ಆರೈಕೆಯು ಮಗುವಿನ ಚರ್ಮ (Skin)ವನ್ನು ಆರೋಗ್ಯಕರವಾಗಿ ಮತ್ತು ನಯವಾಗಿಡಬಹುದು. ನವಜಾತ ಶಿಶುವಿಗೆ ಸ್ನಾನ ಮಾಡಿಸುವ ಮೊದಲು ನೀವು ತಿಳಿದುಕೊಳ್ಳಬೇಕಾದ ಕೆಲ ವಿಷಯಗಳು ಇಲ್ಲಿವೆ.
Kids Health: ಆಟಿಕೆಯಿಂದ ಕಾಯಿಲೆ ಹರಡುತ್ತೆ, ಟಾಯ್ಸ್ ಕ್ಲೀನ್ ಮಾಡೋದ್ ಹೇಗೆ ಗೊತ್ತಿರಲಿ
- ಮಗುವಿನ ಪ್ರತಿಯೊಂದು ಅಂಗವನ್ನೂ ತಾಜಾ ಬಟ್ಟೆ ಅಥವಾ ಹತ್ತಿ ಉಂಡೆಯಿಂದ ಸ್ವಚ್ಛಗೊಳಿಸಬೇಕು. ಮೂಗಿನ ಸೇತುವೆಯಿಂದ ಪ್ರಾರಂಭಿಸಿ ಮತ್ತು ಕಣ್ಣಿನ ಮೂಲೆಗೆ ಹೊರಕ್ಕೆ ಸಹ ಕ್ಲೀನ್ ಮಾಡಬೇಕು
- ಮಗುವಿನ ಮುಖವನ್ನು ಸ್ವಚ್ಛಗೊಳಿಸಲು ಸಾಬೂನು ಇಲ್ಲದೆ ಮೃದುವಾದ ಮತ್ತು ಒದ್ದೆಯಾದ ಬಟ್ಟೆಯನ್ನು (Cloth) ಬಳಸಿ.
- ಸ್ಕ್ರಬ್ ಮಾಡುವ ಅಗತ್ಯವಿಲ್ಲದಿದ್ದರೂ, ಹೆಚ್ಚಿನ ನವಜಾತ ಶಿಶುಗಳು ಸ್ನಾನ ಮಾಡುವಾಗ ತಮ್ಮ ಕೈ ಮತ್ತು ಕಾಲುಗಳನ್ನು ಮೃದುವಾಗಿ ಮಸಾಜ್ ಮಾಡಲು ಇಷ್ಟಪಡುತ್ತಾರೆ ಎಂದು ತಜ್ಞರು ಹೇಳುತ್ತಾರೆ.
- ಸ್ನಾನದ ನಂತರ, ಡ್ರೆಸ್ಸಿಂಗ್ ಮಾಡುವ ಮೊದಲು ನಿಮ್ಮ ಮಗುವಿನ ದೇಹದಲ್ಲಿ (Body) ಸ್ಪಲ್ಪ ಪ್ರಮಾಣದಲ್ಲಿಯೂ ನೀರಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ
- ಚಿಕ್ಕ ಮಗುವಿಗೆ ಸೌಮ್ಯವಾದ ಟಬ್ ಸ್ನಾನವು ಉತ್ತಮವಾಗಿದೆ.
- ನಿಮ್ಮ ಮಗುವನ್ನು ದೀರ್ಘಕಾಲದವರೆಗೆ ಸ್ನಾನ ಮಾಡಿಸಬೇಡಿ.
ಚಳಿಗಾಲದಲ್ಲಿ ನವಜಾತ ಶಿಶುವಿಗೆ ಸ್ನಾನ ಮಾಡಬೇಕಾದ ರೀತಿ ಯಾವುದು ?
1. ವಿಪರೀತ ಚಳಿಯಿರುವ ದಿನ ಮಗುವಿಗೆ ಸ್ನಾನ ಮಾಡುವುದನ್ನು ತಪ್ಪಿಸಿ: ಶೀತ ವಾತಾವರಣ ಮಕ್ಕಳ ಮೇಲೆ ತುಂಬಾ ಬೇಗನೇ ಪರಿಣಾಮ ಬೀರುತ್ತದೆ. ಹೀಗಾಗಿ ಚಳಿಯಿರುವ ದಿನ ಮಗುವಿಗೆ ಸ್ನಾನ ಮಾಡುವುದನ್ನು ತಪ್ಪಿಸಿ. ಮಗುವಿಗೆ ಸ್ನಾನ ಮಾಡಿಸುವ ಮೊದಲು ವಾತಾವರಣ ಹೇಗಿದೆ ಎಂಬುದನ್ನು ಗಮನಿಸಿಕೊಳ್ಳಿ. ತುಂಬಾ ಚಳಿಯಿರುವ ದಿನ ಮಗುವಿಗೆ ಸ್ನಾನ ಮಾಡಿಸುವ ಅಗತ್ಯವಿಲ್ಲ. ಬದಲಿಗೆ ಸ್ಪಲ್ಪ ಮಟ್ಟಿನ ಸೂರ್ಯ ಶಾಖವಿದ್ದರೆ ಮಗುವಿಗೆ ಸ್ನಾನ ಮಾಡಿಸಿ ಅಥವಾ ಚಳಿಯಿರುವ ದಿನ ಸೂರ್ಯ ಬಂದ ಮೇಲೆ ನೀವು ಮಗುವಿಗೆ ಸ್ನಾನ ಮಾಡಿಸಬಹುದು.
ಮಕ್ಕಳು ಶಾಲೆಗೆ ಹೋಗೋದನ್ನು ತಪ್ಪಿಸಲು ಅನಾರೋಗ್ಯ ನೆಪ ಹೇಳ್ತಿದ್ದಾರಾ?
2. ತಾಪಮಾನವು ಬಿಸಿಗೊಳಿಸಲು ಹೀಟರ್ ಬಳಸಿ: ಹೊರಗಿನ ತಾಪಮಾನವು (Temparature) ತುಂಬಾ ಕಡಿಮೆಯಿದ್ದರೆ ನವಜಾತ ಶಿಶುವಿನ ಸ್ನಾನಕ್ಕಾಗಿ ಸ್ನಾನದ ಪ್ರದೇಶದಲ್ಲಿ ಶಾಖವನ್ನು ಉಂಟು ಮಾಡಲು ರೂಮ್ ಹೀಟರ್ ಅನ್ನು ಬಳಸಬಹುದು. ಹಾಗೆಯೇ ಮಗುವಿನ ದೇಹ ಬೆಚ್ಚಗಾಗಲು ಬೇಕಾಗುವಷ್ಟು ಬಿಸಿ ನೀರನ್ನು ಅವರ ಸ್ನಾನಕ್ಕೆ ಬಳಸಿ. ಅದಕ್ಕಿಂತ ಹೆಚ್ಚು ಸಹ ಬೇಡ, ಕಡಿಮೆಯೂ ಸಹ
3. ರಾಸಾಯನಿಕ ಬೇಬಿ ಉತ್ಪನ್ನ ಬಳಸದಿರಿ: ಮಗುವಿನ ಆರೈಕೆಗಾಗಿ (Care) ಆಯ್ಕೆಮಾಡಿದ ಉತ್ಪನ್ನಗಳು ನೈಸರ್ಗಿಕ, ವಿಷಕಾರಿ ಮುಕ್ತ ಮತ್ತು ನವಜಾತ ಶಿಶುವಿನ ಸ್ನಾನಕ್ಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಿ). ಚಳಿಗಾಲದಲ್ಲಿ ರಾಸಾಯನಿಕಗಳು ಮತ್ತು ಹಾನಿಕಾರಕ ಸಂಯುಕ್ತಗಳ ಉಪಸ್ಥಿತಿಯಿಂದಾಗಿ ನವಜಾತ ಶಿಶುವಿನ ಚರ್ಮವು ಅದರ ನೈಸರ್ಗಿಕ ತೈಲಗಳನ್ನು ಕಳೆದುಕೊಳ್ಳಬಹುದು, ಇದು ಶುಷ್ಕ ಮತ್ತು ಅಹಿತಕರವಾಗಿರುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು.
4. ಸ್ನಾನದ ಬಳಿಕ ಮಗುವಿಗೆ ಬೆಚ್ಚಗಿನ ಹೊದಿಕೆಯನ್ನು ಇರಿಸಿ: ಸ್ನಾನದ ಬಳಿಕವೂ ಮಗುವಿನ ದೇಹ ಬೆಚ್ಚಗಿರುವಂತೆ ನೋಡಿಕೊಂಡಿರುವುದು ಮುಖ್ಯ. ಹೀಗಾಗಿ ಸ್ನಾನದ ನಂತರ ಮಗುವಿಗೆ ಸಾಮಾನ್ಯ ಬಟ್ಟೆ ಹಾಕಿ ಬಿಡಬೇಡಿ. ಬದಲಿಗೆ ಸ್ವೆಟರ್, ಸಾಕ್ಸ್, ಗ್ಲೌಸ್‌ಗಳನ್ನು ಹಾಕಿ ಅವರನ್ನು ಬೆಚ್ಚಗೆಗೊಳಿಸಿ. ಇದಕ್ಕೆ ಟವೆಲ್ ಅಥವಾ ಹೊದಿಕೆಯನ್ನು ನೀವು ಬಳಸಬಹುದು.
ಹಾಗೆಯೇ ಚಳಿಗಾಲದಲ್ಲಿ ಮಗುವನ್ನು ಮನೆಗೆ ಕರೆದೊಯ್ದ ತಕ್ಷಣ ಸ್ನಾನ ಮಾಡುವ ಬಗ್ಗೆ ಹೆಚ್ಚು ಉತ್ಸುಕರಾಗಬೇಡಿ. ನವಜಾತ ಶಿಶುವಿನ ಚರ್ಮವು ಹೆಚ್ಚು ಸೂಕ್ಷ್ಮವಾಗಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದ್ದರಿಂದ ಹೊಕ್ಕುಳಬಳ್ಳಿ ಬೀಳುವವರೆಗೆ ಮಗುವಿಗೆ ಸ್ನಾನ ಮಾಡಿಸುವುದನ್ನು ತಪ್ಪಿಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.