ತೂಕ ಏರಿಕೆ, ಹೃದಯಾಘಾತ, ಪಾರ್ಶ್ವವಾಯು ಸೇರಿದಂತೆ ಅನೇಕ ರೋಗಕ್ಕೆ ನಿಮ್ಮ ಕೊಲೆಸ್ಟ್ರಾಲ್ ಕಾರಣವಾಗ್ತಿದೆ. ಅನೇಕರು ಹೆಚ್ಚಾಗ್ತಿರುವ ಕೊಲೆಸ್ಟ್ರಾಲ್ ಬಗ್ಗೆ ಗಮನ ಹರಿಸೋದಿಲ್ಲ. ಇದು ಎಷ್ಟು ಅಪಾಯಕಾರಿ ಅಂದ್ರೆ ಒಂದು ಹಂತದಲ್ಲಿ ನಿಮ್ಮನ್ನು ಸಂಪೂರ್ಣ ಕುರುಡರನ್ನಾಗಿ ಮಾಡುತ್ತೆ.
ವೇಗವಾಗಿ ಹರಡುತ್ತಿರುವ ಸಮಸ್ಯೆಗಳಲ್ಲಿ ಕೊಲೆಸ್ಟ್ರಾಲ್ ಕೂಡ ಒಂದು. ನಮ್ಮ ದೇಹಕ್ಕೆ ಸ್ವಲ್ಪ ಪ್ರಮಾಣದ ಕೊಲೆಸ್ಟ್ರಾಲ್ ಅಗತ್ಯವಿದೆ. ಆದ್ರೆ ಅದು ಮಿತಿಮೀರಿದಾಗ ಸಮಸ್ಯೆ ಹೆಚ್ಚಾಗುತ್ತದೆ. ಕೊಲೆಸ್ಟ್ರಾಲ್ ರಕ್ತದಲ್ಲಿ ಸಂಗ್ರಹವಾಗುವ ಜಿಗುಟಾದ ವಸ್ತುವಾಗಿದೆ. ಇದು ರಕ್ತನಾಳಗಳಲ್ಲಿ ಸಮಸ್ಯೆಯನ್ನುಂಟು ಮಾಡುತ್ತದೆ. ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಂತೆ ರಕ್ತದ ಹರಿವು ನಿಧಾನವಾಗುತ್ತದೆ. ಅನೇಕ ಬಾರಿ ರಕ್ತ ಸಂಚಾರ ಸಂಪೂರ್ಣ ನಿಲ್ಲುತ್ತದೆ. ಇದ್ರಿಂದ ಹೃದಯಾಘಾತವಾಗುವ ಅಪಾಯವಿರುತ್ತದೆ. ಪಾರ್ಶ್ವವಾಯುವಿಗೂ ಕೊಲೆಸ್ಟ್ರಾಲ್ ಮುಖ್ಯ ಕಾರಣ.
ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ (Cholesterol) ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಪತ್ತೆ ಮಾಡುವುದು ಸುಲಭವಲ್ಲ. ಅದ್ರ ಲಕ್ಷಣಗಳು ನಿಮಗೆ ಬೇಗ ತಿಳಿಯೋದಿಲ್ಲ. ಅನೇಕ ಬಾರಿ ಇದನ್ನು ಪತ್ತೆ ಹಚ್ಚುವ ಹೊತ್ತಿಗೆ ತಡವಾಗಿರುತ್ತದೆ. ಕೊಲೆಸ್ಟ್ರಾಲ್ ಪ್ರಮಾಣ ಪತ್ತೆ ಹಚ್ಚಲು ರಕ್ತ (Blood) ಪರೀಕ್ಷೆ ಮಾಡಿಸಬೇಕು. ವರ್ಷಕ್ಕೊಮ್ಮೆ ರಕ್ತ ಪರೀಕ್ಷೆ ಮಾಡಿಸ್ತ ಬಂದಲ್ಲಿ ನಿಮ್ಮ ರಕ್ತದಲ್ಲಿ ಎಷ್ಟು ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬ ಮಾಹಿತಿ ನಿಮಗೆ ಸಿಗುತ್ತದೆ. ಇದಲ್ಲದೆ ಕೊಲೆಸ್ಟ್ರಾಲ್ ಹೆಚ್ಚಳವನ್ನು ನಿಮ್ಮ ಕಣ್ಣಿ (eyes) ನಲ್ಲಾಗುವ ಬದಲಾವಣೆಯಿಂದ ತಿಳಿಯಬಹುದು.
undefined
ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಇಂಥಾ ಕಾಳು ತಿಂದ್ರೆ ಕಾಯಿಲೆ ಕಾಡೋ ಭಯವಿಲ್ಲ!
ಕಣ್ಣಿನ ಈ ಲಕ್ಷಣದಿಂದ ಕೊಲೆಸ್ಟ್ರಾಲ್ ಹೆಚ್ಚಳ ಪತ್ತೆ ಮಾಡಿ :
ಬದಲಾಗುವ ಕಣ್ಣಿನ ಬಣ್ಣ : ನಿಮ್ಮ ಕಣ್ಣಿನಲ್ಲಿ ಹಳದಿ ಕಲೆಗಳು ಕಾಣಿಸಿಕೊಳ್ಳುವುದು ಆರಂಭದಲ್ಲಿ ಹಾನಿಕಾರಕವಲ್ಲ. ಆದ್ರೆ ಇದು ಹೆಚ್ಚಾದಾಗ ಮತ್ತು ನೋವು ಕಾಣಿಸಿಕೊಳ್ಳಲು ಶುರುವಾದಾಗ ಅದು ಅಪಾಯಕಾರಿ. ಇದ್ರಿಂದ ಶಾಶ್ವತ ಕುರುಡುತನ ನಿಮ್ಮನ್ನು ಕಾಡುವ ಸಾಧ್ಯತೆ ಇದೆ. ಕಣ್ಣಿನ ಬಣ್ಣ ಬದಲಾಗುವುದನ್ನು ಕ್ಸಾಂಥೆಲಾಸ್ಮಾ ಎಂದು ಕರೆಯುತ್ತಾರೆ.
ಕ್ಸಾಂಥೆಲಾಸ್ಮಾ ಸಾಮಾನ್ಯವಾಗಿ ನಿಮ್ಮ ಮೇಲಿನ ಮತ್ತು ಕೆಳಗಿನ ಕಣ್ಣುರೆಪ್ಪೆಗಳ ಒಳ ಭಾಗಗಳಲ್ಲಿ ಚರ್ಮದ ಅಡಿಯಲ್ಲಿ ಸಂಗ್ರಹವಾದ ಕೊಬ್ಬಿನ ವಸ್ತುಗಳಿಂದ ಮಾಡಲ್ಪಟ್ಟಿದೆ. ಆರಂಭದಲ್ಲಿ, ಕ್ಸಾಂಥೆಲಾಸ್ಮಾ ನಿಮ್ಮ ಕಣ್ಣುರೆಪ್ಪೆಗಳ ಕೆಲಸವನ್ನು ದುರ್ಬಲಗೊಳಿಸುವುದಿಲ್ಲ. ಕಾಲಾನಂತರದಲ್ಲಿ ಅವು ಕ್ರಮೇಣ ದೊಡ್ಡದಾಗುತ್ತವೆ ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತವೆ. ಕ್ಸಾಂಥೆಲಾಸ್ಮಾ ಹೊಂದಿರುವ ಬಹುತೇಕರು ಹೆಚ್ಚಿನ ಕೊಲೆಸ್ಟ್ರಾಲ್ ಸಮಸ್ಯೆ ಹೊಂದಿರುತ್ತಾರೆ. ಏಷ್ಯನ್ ಅಥವಾ ಮೆಡಿಟರೇನಿಯನ್ ಮೂಲದ ಮಹಿಳೆಯರಲ್ಲಿ ಇದು ಸಾಮಾನ್ಯವಾಗಿ ಕಾಣಸಿಗುತ್ತದೆ.
ಲಿಪಿಡ್ ಡಿಸಾರ್ಡರ್ ಹೊಂದಿರುವ ಜನರ ಕಣ್ಣಿನಲ್ಲಿ ಈ ಹಳದಿ ಬಣ್ಣ ಕಾಣಿಸುವುದು ಹೆಚ್ಚು. ಒಟ್ಟು ಕೊಲೆಸ್ಟ್ರಾಲ್ ಪ್ರತಿ ಡೆಸಿಲಿಟರ್‌ಗೆ 200 ಮಿಲಿಗ್ರಾಂಗಿಂತ ಹೆಚ್ಚಾಗಿದ್ದರೆ ಅದನ್ನು ಹೈಪರ್ಕೊಲೆಸ್ಟರಾಲ್ಮಿಯಾ ಎಂದು ಕರೆಯುತ್ತಾರೆ. ಇದು ಲಿಪಿಡ್ ಡಿಸಾರ್ಡರ್ ಗೆ ಕಾರಣವಾಗುತ್ತದೆ. ಹೈಪರ್ಟ್ರಿಗ್ಲಿಸರೈಡಿಮಿಯಾ ಕೂಡ ಇದಕ್ಕೆ ಕಾರಣ. ಇದಲ್ಲದೆ ಕೆಟ್ಟ ಕೊಲೆಸ್ಟ್ರಾಲ್ ಎಂದೂ ಕರೆಯಲ್ಪಡುವ ಹೆಚ್ಚಿನ ಮಟ್ಟದ ಎಲ್ ಡಿಎಲ್, ಉತ್ತಮ ಕೊಲೆಸ್ಟ್ರಾಲ್ ಎಂದೂ ಕರೆಯಲ್ಪಡುವ ಹೆಚ್ಚಿನ ಮಟ್ಟದ ಎಚ್‌ಡಿಎಲ್ ಇವೆರಡೂ ಕಾರಣವಾಗುತ್ತದೆ.
ಕಣ್ಣಿನಲ್ಲಿ ಕಿರಿಕಿರಿ (Eye Irritation): ಕಣ್ಣುಗಳು ಸಾಮಾನ್ಯವಾಗಿ ಉರಿ, ತುರಿಕೆ ಅಥವಾ ಅಸ್ವಸ್ಥತೆಯನ್ನು ಅನುಭವಿಸಿದರೆ, ಅದು ಅಧಿಕ ಕೊಲೆಸ್ಟ್ರಾಲ್‌ನ ಸಂಕೇತವಾಗಿರಬಹುದು. ಅಧಿಕ ಕೊಲೆಸ್ಟ್ರಾಲ್ ಕ್ರಮೇಣ ರಕ್ತದಲ್ಲಿನ ಕೆಟ್ಟ ಕೊಬ್ಬಿನ ಪ್ರಮಾಣವನ್ನು ಹೆಚ್ಚಿಸುತ್ತದೆ, ಇದು ಕಣ್ಣುಗಳ ಮೇಲ್ಮೈಯಲ್ಲಿ ಸುಡುವ ಅಥವಾ ತುರಿಕೆ ಸಂವೇದನೆಯನ್ನು ಉಂಟುಮಾಡುತ್ತದೆ.
ಗರ್ಭಾವಸ್ಥೆಯಲ್ಲಿ ಫಾಸ್ಟ್ ಫುಡ್ ಸೇವಿಸಿದ್ರೆ… ಹುಟ್ಟೋ ಮಕ್ಕಳಲ್ಲಿ ಸಮಸ್ಯೆ ಬರುತ್ತಂತೆ!
ಶುಷ್ಕ ಕಣ್ಣುಗಳು (Dry Eyes) : ಕಣ್ಣುಗಳ ಮೇಲ್ಮೈಯಲ್ಲಿ ಹೆಚ್ಚಿನ ಕೊಲೆಸ್ಟ್ರಾಲ್ ಇದ್ದಾಗ ಕಣ್ಣು ಶುಷ್ಕವಾಗುತ್ತದೆ. ಕಣ್ಣುಗಳು ದುರ್ಬಲಗೊಳ್ಳುತ್ತವೆ. ಇದ್ರಿಂದ ಅನೇಕ ರೋಗಲಕ್ಷಣ ಕಾಣಿಸುತ್ತದೆ. ಊತ, ತುರಿಕೆ ಮತ್ತು ಕಣ್ಣುಗಳಲ್ಲಿ ನೀರು ಬರುವಂತಹ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹೇಗೆ? (How to reduce cholesterol) : ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿದ್ದರೆ ನೀವು ಆರೋಗ್ಯವಾಗಿದ್ದಂತೆ. ಕೊಲೆಸ್ಟ್ರಾಲ್ ನಿಯಂತ್ರಿಸಲು ನೀವು ನಿಯಮಿತವಾಗಿ ವ್ಯಾಯಾಮ ಮತ್ತು ಪ್ರೋಟೀನ್ ಹೆಚ್ಚಿರುವ ಆಹಾರವನ್ನು ಸೇವನೆ ಮಾಡಬೇಕು.