ಡ್ರೈ ಸ್ಕಿನ್‌ ಅಂತ ಸಿಕ್ಕಾಪಟ್ಟೆ ಮಾಯಿಶ್ಚರೈಸರ್ ಬಳಸುತ್ತೀರಾ? ಈ ಸಮಸ್ಯೆ ಬರಬಹುದು ನೋಡಿ!

By Suvarna News  |  First Published Feb 22, 2024, 1:48 PM IST

ಹಲವರು ಡ್ರೈ ಸ್ಕಿನ್ ಸಮಸ್ಯೆಗೆ ಮಾಯಿಶ್ಚರೈಸರ್ ಪರಿಹಾರ ಅಂದುಕೊಂಡಿದ್ದಾರೆ. ಆದರೆ ಅತಿಯಾದ ಮಾಯಿಶ್ಚರೈಸರ್ ಬಳಸೋದರಿಂದ ಏನೆಲ್ಲ ಸಮಸ್ಯೆ ಆಗಬಹುದು?


ಈಗಂತೂ ನೀವು ಯಾವ ಮಾಲ್‌ಗೆ ಹೋದ್ರೂ ಫೇಮಸ್ ಕಂಪನಿಗಳ ಮಾಯಿಶ್ಚರೈಸರ್‌ಗಳು ಹಲವು ಆಫರ್‌ಗಳೊಂದಿಗೆ ಥಂಡಿಯಾಗಿ ಖರೀದಿಯನ್ನು ಎದುರು ನೋಡ್ತಾ ಇರುತ್ತವೆ. ಆಫರ್‌ನಲ್ಲಿ ಸಿಕ್ತಿದೆ ಅಂತ ಅದನ್ನು ಮನೆಗೆ ತಂದು ಗುಡ್ಡೆ ಹಾಕ್ಕೊಂಡು ಬಳಸೋದೂ ನಮ್ಮಲ್ಲಿ ಬಹಳ ಕಾಮನ್. ಆದರೆ ಆದರೆ ಅತಿಯಾದ ಮಾಯಿಶ್ಚರೈಸರ್ ಬಳಕೆಯಿಂದ ಚರ್ಮಕ್ಕೆ ಎಷ್ಟು ಸಮಸ್ಯೆಗಳಿವೆ ಗೊತ್ತಾ? ಕೆಲವರಂತೂ ಡ್ರೈ ಸ್ಕಿನ್ ಇದ್ರೆ ಹೆಚ್ಚು ವಯಸ್ಸಾದಂತೆ ಕಾಣುತ್ತದೆ ಅಂತ ಮಾಯಿಶ್ಚರೈಸರ್ ಹಚ್ತಾರೆ. ಆದರೆ ಅತಿ ಮಾಯಿಶ್ಚರೈಸರ್ ಹಚ್ಚೋದ್ರಿಂದಲೇ ಚರ್ಮ ವಯಸ್ಸಾದವರ ಚರ್ಮದಂತೆ ಬದಲಾಗುವ ಅಪಾಯ ಇದೆ ಅಂತ ಹೆಸರಾಂತ ಹೆಲ್ತ್ ಮ್ಯಾಗಜಿನ್ ಒಂದು ಇತ್ತೀಚೆಗೆ ವರದಿ ಮಾಡಿದೆ. ಜೊತೆಗೆ ಡಲ್ ಸ್ಕಿನ್ ಸಮಸ್ಯೆಗೆ ಇದು ಕಾರಣವಾಗುತ್ತಂತೆ. ಹೀಗಾಗಿ ದಯಮಾಡಿ ಸನ್‌ಸ್ಕೀನ್‌ ಅನ್ನು ವಿಪರೀತ ಬಳಸಬೇಡಿ. ಇದರಿಂದ ನಿಮ್ಮ ಚರ್ಮಕ್ಕೆ ಸಮಸ್ಯೆ ಉಂಟಾಗಬಹುದು ಅಂತ ಸೌಂದರ್ಯ ತಜ್ಞೆ ಒಬ್ಬರು ಸಲಹೆ ನೀಡುತ್ತಾರೆ.

ಇದಲ್ಲದೇ ಮಾಯಿಶ್ಚರೈಸರ್‌ನ ಅತಿಯಾದ ಬಳಕೆ ಚರ್ಮವನ್ನು ದುರ್ಬಲಗೊಳಿಸಿ ರಂಧ್ರಗಳು ಕಟ್ಟಿಕೊಳ್ಳುವಂತೆ ಮಾಡುತ್ತದೆ. ಇದರಿಂದ ನಿಮಗೆ ಮೊಡವೆ ಮತ್ತು ಒಣಚರ್ಮದ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ, ನೀವು ಈ ಬಗ್ಗೆ ತಿಳಿದಿರಬೇಕು, ಅದನ್ನು ಅಗತ್ಯಕ್ಕಿಂತ ಹೆಚ್ಚು ಹಚ್ಚಿದರೆ, ನಿಮ್ಮ ಚರ್ಮ ಅಂಟಾಗುತ್ತದೆ ಮತ್ತು ಮಂಕಾಗುತ್ತದೆ. ಜೊತೆಗೆ, ನಿಮ್ಮ ಮುಖ ಆಯಾಸದಿಂದಿರುವಂತೆ ಕಾಣುತ್ತದೆ.

Latest Videos

ಏನು, ಸಮಂತಾ ವಯಸ್ಸಿನ್ನೂ 23 ಆಹ್? ಏನಿದು ಮೆಟಾಬಾಲಿಕ್ ಏಜ್ ಅಂದ್ರೆ?

ಅತಿಯಾಗಿ ಮಾಯಿಶ್ಚರೈಸರ್ ಬಳಸುವುದರ ಕಪ್ಪುಕಲೆ ಉಂಟಾಗಬಹುದು ಚರ್ಮದ ರಂಧ್ರಗಳು ಬ್ಲಾಕ್‌ (block) ಆಗಬಹುದು. ಚರ್ಮದಲ್ಲಿ ಒಡಕು, ಮೃತ ಚರ್ಮಕೋಶಗಳು ಅಂದರೆ ಡೆಡ್‌ ಸ್ಕಿನ್ ಬೆಳೆಯುವುದು ಮತ್ತು ಊದಿದಂತಿರುವ ಚರ್ಮ ಇಂಥಾ ಸಮಸ್ಯೆ ಕಾಣಿಸಿಕೊಳ್ಳಬಹುದು. ಮಾಯಿಶ್ಚರೈಸರ್ ಅನ್ನು ಅತಿಯಾಗಿ ಬಳಸುವುದರಿಂದ ಮುಖ ಹೆಚ್ಚು ಸೆನ್ಸಿಟಿವ್ ಆಗುತ್ತೆ. ಹಾಗೂ ಅದನ್ನು ಹಚ್ಚಿದ ನಂತರ, ನೀವು ನಿಮ್ಮ ಮುಖದ ಮೇಲೆ ಯಾವುದೇ ಮೇಕಪ್ ಹಚ್ಚಿದರೆ, ಅದು ನಿಮ್ಮ ಚರ್ಮಕ್ಕೆ ಅಂಟಿದಂತಾಗಿ ಅದನ್ನು ಹಾಳುಮಾಡುತ್ತದೆ.

ಜೊತೆಗೆ ಮಾಯಿಶ್ಚರೈಸರ್ ಅನ್ನು ಅತಿಯಾಗಿ ಬಳಸುವುದರಿಂದ ನಿಮ್ಮ ಮುಖದ ಮೇಲೆ ಮೊಡವೆ, ಮತ್ತು ಗುಳ್ಳೆಯಂತಹ ಸಮಸ್ಯೆಗಳು ಕಂಡುಬರುತ್ತವೆ. ಅತಿಯಾಗಿ ಮಾಯಿಶ್ಚರೈಸ್ ಮಾಡುವುದರಿಂದ ನಿಮ್ಮ ಮುಖದ ಪ್ರಾಕೃತಿಕ ಸೌಂದರ್ಯ ಕಡಿಮೆಯಾಗಿ, ನಿಮ್ಮ ಮೇಕಪ್ ಸುಲಭವಾಗಿ ಹಾಳಾಗಲು ಕಾರಣವಾಗುತ್ತದೆ. ಎಷ್ಟೋ ಜನ ತಮ್ಮ ಚರ್ಮ ಹೊಳಪಾಗಿರಲು ಮಾಯಿಶ್ಚರೈಸರ್ ಬಳಸುತ್ತಾರೆ, ಆದರೆ ಅತಿಯಾಗಿ ಮಾಯಿಶ್ಚರೈಸ್ (moisturiser) ಮಾಡುವುದರಿಂದ ನಿಮ್ಮ ಮುಖದ ಹೊಳಪು ಮಾಯವಾಗಿ ಚರ್ಮ ಅಂಟಿದಂತಾಗುತ್ತದೆ. ಮಾಯಿಶ್ಚರೈಸರ್ ಅಧಿಕವಾಗಿ ಬಳಸುವುದರಿಂದ ರಂಧ್ರಗಳು ಕಟ್ಟಿಕೊಂಡು ನಿಮ್ಮ ಮುಖದ ಮೇಲೆ ಮೊಡವೆ ಉಂಟಾಗುತ್ತದೆ. ಮಾಯಿಶ್ಚರೈಸರ್ ಸೂತ್ರ ದಪ್ಪವಾಗಿದ್ದು ಇದರ ಅಧಿಕ ಬಳಕೆ ನಿಮ್ಮ ಮುಖದಲ್ಲಿ ತೇವವನ್ನು ಹೆಚ್ಚಿಸಿ ಮುಖದಲಿ ಕಲೆ ಮತ್ತು ಬೊಬ್ಬೆ ಹೆಚ್ಚಿಸುತ್ತದೆ.

ಇದರ ಬದಲು ಮಾಯಿಶ್ಚರೈಸರ್‌ನ ಸರಿಯಾದ ಬಳಕೆ (use) ತಿಳಿದುಕೊಳ್ಳಿ.

ಒಂದು ಚಿಕ್ಕ ಬಟಾಣಿ ಗಾತ್ರದ ಮಾಯಿಶ್ಚರೈಸರ್‌ (ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು) ಅನ್ನು ಅಂಗೈಯಲ್ಲಿ ತೆಗೆದುಕೊಂಡು ನಿಮ್ಮ ಕೈಯಲ್ಲಿ ಉಜ್ಜಿಕೊಳ್ಳಿ. ಮಾಯಿಶ್ಚರೈಸರ್ ಅನ್ನು ಕೆನ್ನೆಯ ಮೇಲೆ ವೃತ್ತಾಕಾರವಾಗಿ ಹಚ್ಚಿ. ಈಗ ಉಳಿದಿರುವುದನ್ನು ಹಣೆಯೂ ಸೇರಿದಂತೆ ಮುಖಕ್ಕೆ ಹಚ್ಚಿ. ವಿಶೇಷವಾಗಿ ಕತ್ತಿಗೆ ಮೆಲುವಾಗಿ ಮತ್ತು ಹಗುರವಾಗಿ ಮೇಲ್ಮುಖವಾಗಿ ಹಚ್ಚಿ.

ಬೆಳಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಇಂಥಾ ಕಾಳು ತಿಂದ್ರೆ ಕಾಯಿಲೆ ಕಾಡೋ ಭಯವಿಲ್ಲ!

ಬೆಳಗಿನ ಸಮಯ ಸ್ನಾನದ ನಂತರ ಸ್ವಲ್ಪ ತೇವವಾದ ಚರ್ಮದ ಮೇಲೆ ಮಾಯಿಶ್ಚರೈಸರ್ ಹಚ್ಚಬೇಕು (ಇದು ನಿಮ್ಮನ್ನು ಅಧಿಕವಾಗಿ ಹಚ್ಚದಂತೆ ತಡೆಯುತ್ತದೆ). ರಾತ್ರಿ ಮಲಗುವ ಮೊದಲು ಒಂದು ಬಾರಿ ಮಾಯಿಶ್ಚರೈಸರ್ ಹಚ್ಚಬೇಕು, ಇದು ನಿಮ್ಮ ಚರ್ಮವನ್ನು ತೇವಗೊಳಿಸಿ ಮೃದುವಾಗಿಸುತ್ತದೆ. ನಿಮ್ಮ ಚರ್ಮ ನಿರ್ಜಲವಾಗಿದ್ದರೆ, ನೀವು ನಿಮ್ಮ ಚರ್ಮಕ್ಕೆ ಅನುಗುಣವಾಗಿ ಅದನ್ನು ಹಚ್ಚಬೇಕು. ನಿಮ್ಮ ಚರ್ಮ ತೈಲದಿಂದ ಕೂಡಿದ್ದರೆ, ಅದನ್ನು ಎಚ್ಚರಿಕೆಯಿಂದ ಬಳಸಬೇಕು.

ವಾರಕ್ಕೊಮ್ಮೆ ಮೃತ ಚರ್ಮಕೋಶವನ್ನು (Deak Skin) ತೆಗೆಯುವುದರಿಂದ ನಿಮ್ಮ ಚರ್ಮದ ರಂಧ್ರಗಳು (Skin Poles) ತೆರೆದು ಮಾಯಿಶ್ಚರೈಸರ್ ಅನ್ನು ಸರಿಯಾಗಿ ಹೀರುತ್ತದೆ. ನೀವು ಹೀಗೆ ಮಾಡಿದಲ್ಲಿ ನಿಮ್ಮ ಚರ್ಮವನ್ನು (skin) ಎಲ್ಲಾ ಸಮಸ್ಯೆಗಳಿಂದ ರಕ್ಷಿಸಬಹುದು.

click me!