ಅದೇ ಹೆಲ್ದಿ ತರಕಾರಿ, ಚೀಸ್‌ ಇದ್ರೂ ಬರ್ಗರ್‌ ಅನ್‌ ಹೆಲ್ದಿ ಹೇಗಾಗುತ್ತೆ?

By Suvarna News  |  First Published Nov 15, 2023, 12:08 PM IST

ಆರೋಗ್ಯಕಾರಿಯಾಗಿರುವ ತರಕಾರಿ, ಚೀಸ್‌ ಗಳು ಬರ್ಗರ್‌ ನಲ್ಲಿ ಸೇರಿದಾಕ್ಷಣ ಅನಾರೋಗ್ಯಕಾರಿ ಆಗುತ್ತದೆಯಾ? ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಉಂಟಾಗಿದ್ದು, ಬರ್ಗರ್‌ ನಲ್ಲಿ ಎಲ್ಲವನ್ನೂ ಅಧಿಕ ಪ್ರಮಾಣದಲ್ಲಿ ಬಳಸುವುದರಿಂದ ಹೀಗಾಗುತ್ತೆ ಎನ್ನುವ ಸಮಜಾಯಿಷಿಯನ್ನೂ ನೀಡಲಾಗಿದೆ. ತರಕಾರಿಯ ಸತ್ವ ದೊರೆಯಬೇಕಾದರೆ ಕೆಲವನ್ನು ಹಾಗೆಯೇ ಸೇವಿಸಬೇಕು. 


ತರಕಾರಿ ಆರೋಗ್ಯಕ್ಕೆ ಒಳ್ಳೆಯದು ಎಂದು ಅದರ ಜತೆ ಬ್ರೆಡ್‌ ಅಥವಾ ಬನ್‌ ಸೇರಿಸಿ ಮಕ್ಕಳಿಗೆ ನೀಡೋ ಪದ್ಧತಿಯನ್ನು ತುಂಬ ಜನ ತಾಯಂದಿರು ಅನುಸರಿಸುತ್ತಾರೆ. ಎಲ್ಲಾದರೂ ಹೋದಾಗಲೂ ಅಷ್ಟೆ. ತರಕಾರಿ, ಚೀಸ್‌ ಇರೋ ಬರ್ಗರ್‌ ಆಯ್ಕೆ ಮಾಡುತ್ತಾರೆ. ಮಕ್ಕಳಿಗಂತೂ ಇದು ಭಾರೀ ಪ್ರೀತಿಯಾದ ಆಹಾರ. ಅವರು ಇಷ್ಟಪಟ್ಟು ತಿನ್ನುತ್ತಾರೆ ಎಂದರೆ ಅದರಲ್ಲಿ ಅವರ ದೇಹ ಹಾಗೂ ಆರೋಗ್ಯಕ್ಕೆ ಆಗಿಬರದ ಯಾವುದೋ ಅಂಶಗಳು  ಇವೆ ಎಂದು ಸಂಶಯ ಪಡಬೇಕು! ಏಕೆಂದರೆ, ಅಂಥ ಆಹಾರಗಳೇ ಮಕ್ಕಳಿಗೆ ಸಾಮಾನ್ಯವಾಗಿ ಇಷ್ಟವಾಗುತ್ತವೆ. ಅಷ್ಟಕ್ಕೂ ಬನ್‌, ಬರ್ಗರ್‌, ಬ್ರೆಡ್‌ ಯಾರಿಗೆ ಇಷ್ಟವಾಗೋದಿಲ್ಲ? ಎಲ್ಲರೂ ಟೀ ಜತೆಗೆ ಇಷ್ಟಪಟ್ಟು ತಿನ್ನುವ ಆಹಾರಗಳಲ್ಲಿ ಬ್ರೆಡ್‌ ಕೂಡ ಒಂದು. ಆದರೆ, ಅದೆಷ್ಟು ಹಾನಿಕರ ಎನ್ನುವುದು ಬಹಳಷ್ಟು ಜನರಿಗೆ ಅಂದಾಜಿಲ್ಲ. ಇಂದಿಗೂ ಗರ್ಭಿಣಿಯರನ್ನು ನೋಡಲು ಹೋಗುವಾಗ, ಹುಷಾರಿಲ್ಲದವರನ್ನು ಮಾತನಾಡಿಸಲು ಹೋಗುವಾಗ ಬ್ರೆಡ್‌ ತೆಗೆದುಕೊಂಡು ಹೋಗುವ ಪದ್ಧತಿ ಕೆಲವೆಡೆ ಇದೆ. ಬ್ರೆಡ್‌, ಬನ್‌ ಗಳು ಆರೋಗ್ಯಕ್ಕೆ ಎಷ್ಟು ಹಾನಿ ಉಂಟುಮಾಡುತ್ತವೆ ಎನ್ನುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಬರೀ ಬ್ರೆಡ್‌, ಬನ್‌ ಗಳು ಮಾತ್ರವಲ್ಲ, ತರಕಾರಿ ಜತೆಗೆ ಅವನ್ನು ಸೇರಿಸಿ ಕೊಟ್ಟರೂ ಹಾನಿಯೇ ಎನ್ನುವುದು ಇಲ್ಲಿನ ಮುಖ್ಯ ಅಂಶ. 

ಎಕ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ನಾನ್‌ ಏಸ್ತೆಟಿಕ್‌ ಥಿಂಗ್ಸ್‌ ಎನ್ನುವ ಅಕೌಂಟ್‌ ನಿಂದ ಹೆಲ್ದಿ ಫುಡ್‌ (Healthy Food) ವಿಭಾಗದಲ್ಲಿ ತರಕಾರಿ, ಚೀಸ್‌, ಬನ್‌ ಗಳ ಚಿತ್ರಗಳನ್ನು ನೀಡಿದ್ದು, ಅನ್‌ ಹೆಲ್ದಿ ಫುಡ್‌ (Unhealthy Food) ವಿಭಾಗದಲ್ಲಿ ಅವೇ ತರಕಾರಿ, ಬನ್‌, ಚೀಸ್‌ ಗಳನ್ನು ಒಳಗೊಂಡ ಬರ್ಗರ್‌ ಚಿತ್ರ ನೀಡಿದ್ದಾರೆ. ಇದು ಈಗ ಬಹಳಷ್ಟು ಜನರನ್ನು ಸೆಳೆದಿದೆ. ಸಾಕಷ್ಟು ಜನರ ಕಮೆಂಟ್‌ ಗಳು ಹರಿದುಬರುತ್ತಿವೆ.

ತಲೆಗೂದಲು ಸೋಂಪಾಗಿ, ಹೊಟ್ಟಿಲ್ಲದೇ ಬೆಳೆಯಲು ಸಿಂಪಲ್​ ಟಿಪ್ಸ್​ ತಿಳಿಸಿದ ನಟಿ ಅದಿತಿ ಪ್ರಭುದೇವ

Latest Videos

undefined

ಒಬ್ಬರಂತೂ, 'ಇದರ ಪಾಠವೆಂದರೆ, ಎಲ್ಲವನ್ನು ಬಿಡಿಬಿಡಿಯಾಗಿಯೇ ತಿನ್ನಬೇಕು, ಒಟ್ಟಿಗೆ ಸೇರಿಸಿ ತಿನ್ನಬಾರದುʼ ಎಂದು ಲೇವಡಿ ಮಾಡಿದ್ದಾರೆ. ಮತ್ತೊಬ್ಬರು 'ಅದು ಹೇಗೆ ಎಲ್ಲವನ್ನೂ ಪ್ರತ್ಯೇಕ ಮಾಡಿದಾಕ್ಷಣ ಆರೋಗ್ಯಕಾರಿ ಆಗುತ್ತವೆ? ಎಲ್ಲವನ್ನೂ ಸೇರಿಸಿದಾಗ ಅದು ಹೇಗೆ ಬರ್ಗರ್‌ ಅನಾರೋಗ್ಯಕಾರಿ ಆಹಾರವಾಗುತ್ತದೆ?ʼ ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್‌ ಹಾಗೂ ಅದಕ್ಕೆ ಬಂದಿರುವ ಕಾಮೆಂಟ್‌ ಗಳು ಭಾರೀ ಕುತೂಹಲಕಾರಿಯಾಗಿವೆ.
 

pic.twitter.com/1IIviQnAUm

— non aesthetic things (@PicturesFoIder)

 

ಗೊಂದಲದ ಹೇಳಿಕೆ!
ಕೆಲವರು “ಬರ್ಗರ್‌ ಅನ್‌ ಹೆಲ್ದಿ ತಿನಿಸು ಅಲ್ಲವೇ ಅಲ್ಲʼ ಎಂದು ಹೇಳಿದ್ದರೆ, ಮತ್ತೆ ಕೆಲವರು “ಇದು ಗೊಂದಲ (Confusion) ಮೂಡಿಸುವ ಹೇಳಿಕೆʼ ಎಂದು ಹೇಳಿದ್ದಾರೆ. ಒಬ್ಬಾತ ಬರ್ಗರ್‌ (Burger) ತನ್ನ ಜೀವನರೀತಿ, ಧರ್ಮ ಎಂದೆಲ್ಲ ಹೇಳಿಕೆ ನೀಡಿದ್ದಾನೆ. ಒಬ್ಬರು, “ಆರೋಗ್ಯಕಾರಿ ತಿನಿಸುಗಳಿಗೆ ಹೆಚ್ಚು ಉಪ್ಪು (Salt), ಹೆಚ್ಚು ಎಣ್ಣೆ (Oil), ಹೆಚ್ಚು ಸಕ್ಕರೆ (Sugar) ಹಾಗೂ ಸಾಸ್‌ ಬೆರೆಸಿದರೆ ಅದು ಸಹ ಅನಾರೋಗ್ಯಕಾರಿ ತಿನಿಸೇ ಆಗುತ್ತದೆʼ ಎಂದು ವಿವರಣೆ ನೀಡಿದ್ದಾರೆ.  

ಎಲ್ಲವೂ ಅಧಿಕ
ನೈಜವಾದ ವಿಚಾರವೆಂದರೆ, ತರಕಾರಿಗಳಿಂದ ಕೂಡಿದ್ದರೂ ಬರ್ಗರ್‌ ಆರೋಗ್ಯಕ್ಕೆ (Health) ಒಳ್ಳೆಯದಲ್ಲ. ಅದರಲ್ಲಿರುವ ತರಕಾರಿ, ಚೀಸ್‌ ಎಲ್ಲವೂ ಆರೋಗ್ಯಕ್ಕೆ ಉತ್ತಮ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವುಗಳನ್ನು ಬನ್‌ (Bun) ಜತೆ ಸೇರಿಸಿ ಸೇವಿಸಬಾರದು. ಏಕೆಂದರೆ, ಬರ್ಗರ್‌ ನಲ್ಲಿ ನಾವು ಸಾಮಾನ್ಯವಾಗಿ ಸೇವಿಸುವ ಹಲವು ಪಟ್ಟು ಹೆಚ್ಚು ಚೀಸ್‌ (Cheese) ಇರುತ್ತದೆ. 

Health Tips : ನೋವು ನಿವಾರಕ ಮಾತ್ರೆ Vs ಜೆಲ್.. ಯಾವುದಕ್ಕೆ ಫುಲ್ ಮಾರ್ಕ್ಸ್ ?

ಹಲವು ರೀತಿಯ ಎಣ್ಣೆಗಳಿಂದ ಕೂಡಿರುವ ಬನ್‌ ಅಥವಾ ಬ್ರೆಡ್‌ ಗಳು ಆರೋಗ್ಯಕ್ಕೆ ಒಳ್ಳೆಯದನ್ನೇನೂ ಮಾಡುವುದಿಲ್ಲ. ಅವುಗಳಲ್ಲಿ ಸಿಕ್ಕಾಪಟ್ಟೆ ಪ್ರಮಾಣದ ಕೊಬ್ಬು (Fat) ಇರುತ್ತದೆ. ಇದು ಕೆಟ್ಟ ಕೊಬ್ಬು. ಇವುಗಳನ್ನು ಯಾರೇ ಸೇವನೆ ಮಾಡಿದರೂ ಅವರ ರಕ್ತದಲ್ಲಿನ ಕೊಬ್ಬಿನ ಮಟ್ಟ ಹೆಚ್ಚಾಗುತ್ತದೆ. ಮಧುಮೇಹಿಗಳಂತೂ ಬ್ರೆಡ್‌, ಬನ್‌, ಬರ್ಗರ್‌ ಗಳನ್ನು ತಿನ್ನಲೇಬಾರದು. ಇವುಗಳಲ್ಲಿರುವ ಕೊಬ್ಬಿನ ಅಂಶದಿಂದಾಗಿ ಹೃದಯದ ಸಮಸ್ಯೆಯೂ ಉಂಟಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ತಜ್ಞರು. 

click me!