ಸುಂದರವಾಗಿ ಕಾಣ್ಬೇಕು ಅಂತ ಎಲ್ರೂ ಅಂದ್ಕೊಳ್ತಾರೆ. ಕೆಲವೊಬ್ರು ಇದಕ್ಕಾಗಿ ಮೇಕಪ್ ಮಾಡ್ಕೊಂಡ್ರೆ, ಇನ್ನು ಕೆಲವರು ಲಕ್ಷ ಲಕ್ಷ ವ್ಯಯಿಸಿ ಸರ್ಜರಿಯನ್ನೂ ಮಾಡಿಕೊಳ್ತಾರೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ ತನ್ನ ಎತ್ತರವನ್ನು ಏಳು ಇಂಚು ಹೆಚ್ಚಿಸಿಕೊಳ್ಳಲು 88 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ.
ಅಮೆರಿಕದಲ್ಲಿ ವ್ಯಕ್ತಿಯೊಬ್ಬ ತನ್ನ ಎತ್ತರವನ್ನು ಏಳು ಇಂಚು ಹೆಚ್ಚಿಸಿಕೊಳ್ಳಲು 88 ಲಕ್ಷ ರೂ. ಖರ್ಚು ಮಾಡಿದ್ದಾನೆ. ವರದಿಯ ಪ್ರಕಾರ, 33 ವರ್ಷದ ಬ್ರಿಯಾನ್ ಸ್ಯಾಂಚೆಜ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ, ಈಗಾಗಲೇ ಆರು ಅಡಿ ಎತ್ತರವನ್ನು ಹೊಂದಿದ್ದರೂ, ತನ್ನ ದೇಹದ ಮೇಲಿನ ಭಾಗದ ನಡುವೆ ಅಸಮತೋಲನವಿದೆ ಎಂದು ಭಾವಿಸಿದ ಕಾರಣ ತನ್ನ ಎತ್ತರವನ್ನು ಹೆಚ್ಚಿಸಲು ನಿರ್ಧರಿಸಿದನು. ನನ್ನ ಕಾಲುಗಳು ಯಾವಾಗಲೂ ವಿಲಕ್ಷಣವಾಗಿ ಕಾಣುತ್ತಿತ್ತು. ಅದು ಯಾಕೆಂದು ನನಗೆ ತಿಳಿದಿರಲಿಲ್ಲ. ಸೋದರ ಮಾವನನ್ನು ನೋಡಿ, ಅವನೊಂದಿಗೆ ಹೋಲಿಕೆ ಮಾಡಿಕೊಂಡಾಗ ವ್ಯತ್ಯಾಸವಿರುವುದು ಅರಿವಿಗೆ ಬಂತು.. ಅದಾದಮೇಲೆ ನಾನು ಸಮತೋಲವನ್ನು ಸರಿ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್‌ನ ಜಾರ್ಜಿಯಾದ ಬಾಡಿ ಬಿಲ್ಡರ್ ಸ್ಯಾಂಚೆಜ್ ಹೇಳಿದರು.
ತನ್ನ ಎತ್ತರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು ತೆಗೆದುಕೊಂಡ ಮೊದಲ ಹೆಜ್ಜೆ ಟರ್ಕಿಯ ಲೈವ್ ಲೈಫ್ ಟಾಲರ್ ಕ್ಲಿನಿಕ್‌ನಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯುವುದು. ಸ್ಯಾಂಚೆಜ್ ಡಿಸೆಂಬರ್ 2022ರಲ್ಲಿ ಒಂದು ಆಪರೇಷನ್‌ಗೆ (Surgery) ಒಳಗಾದರು. ಇದರಲ್ಲಿ ಟಿಬಿಯಾ ಮತ್ತು ಫೈಬುಲಾವನ್ನು ಕಿತ್ತುಹಾಕುವುದು, ಮೂಳೆಗಳೊಳಗೆ (Bone) ರಾಡ್ ಅನ್ನು ಸೇರಿಸುವುದು ಮತ್ತು ಅವುಗಳನ್ನು ಸ್ಕ್ರೂಗಳಿಂದ ಭದ್ರಪಡಿಸುವುದು ಒಳಗೊಂಡಿತ್ತು. ನಂತರ, ಮೂಳೆಗಳನ್ನು ಸಂಪರ್ಕಿಸಲು ಫಿಕ್ಸೆಟರ್‌ಗಳನ್ನು ಬಳಸಲಾಯಿತು, ಇದು ತೆರೆದ ಗಾಯಗಳಿಗೆ (Injury) ಕಾರಣವಾಯಿತು. ಶಸ್ತ್ರಚಿಕಿತ್ಸೆಯ ನಂತರದ ದಿನಚರಿಯು ಫಿಕ್ಸೆಟರ್‌ಗಳ ಮೇಲೆ ಬೋಲ್ಟ್ ಅನ್ನು ತಿರುಗಿಸುವುದನ್ನು ಒಳಗೊಂಡಿರುತ್ತದೆ, ಅದನ್ನು ಅವರು ಶ್ರದ್ಧೆಯಿಂದ ಅನುಸರಿಸಿದರು.
undefined
23 ವರ್ಷವಾದ್ರೂ ಯೋನಿ ಬೆಳವಣಿಗೆಯಾಗದ ಯುವತಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಬೆಂಗಳೂರಿನ ವೈದ್ಯರು
ಮಾರ್ಚ್ 2023 ರಲ್ಲಿ, ಸ್ಯಾಂಚೆಜ್ ತನ್ನ ಎಲುಬಿನ ಉದ್ದವನ್ನು (Height) ಹೆಚ್ಚಿಸಲು ಎರಡನೇ ಸರ್ಜರಿಗೆ ಒಳಪಟ್ಟರು. ಈ ಆಪರೇಷನ್‌ಗೆ ಸುಮಾರು 57.5 ಲಕ್ಷ ರೂ. ವೆಚ್ಚವಾಯಿತು. ಆದರೆ ಎರಡನೇ ಆಪರೇಷನ್ ನಂತರ ಚೇತರಿಕೆ ಪ್ರಕ್ರಿಯೆಯು ಸುಗಮವಾಗಿತ್ತು ಮತ್ತು ಪ್ರಕ್ರಿಯೆಯ ಅಂತ್ಯದ ವೇಳೆಗೆ, ಸ್ಯಾಂಚೆಜ್ ಅವರ ಎತ್ತರವು ಮೂರೂವರೆ ಇಂಚುಗಳಷ್ಟು ಹೆಚ್ಚಾಗಿತ್ತು.
ತನ್ನ ಎತ್ತರವನ್ನು ಹೆಚ್ಚಿಸಲು ನೋವಿನ ಮಾರ್ಗವನ್ನು ತೆಗೆದುಕೊಂಡರೂ, ಸ್ಯಾಂಚೆಝ್ ಅವರು ಯಾವುದೇ ವಿಷಾದವನ್ನು ಹೊಂದಿಲ್ಲ ಮತ್ತು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ, ಅವರ ಎತ್ತರವು ಆರು ಅಡಿಗಳಿಂದ ಆರು ಅಡಿ ಏಳು ಇಂಚುಗಳಿಗೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದರು.
ಸತ್ತು ಹೋಗುವಷ್ಟು ನೋವಾದ್ರೂ ನಾಲಿಗೆ ಸೀಳಿಕೊಂಡ ಮಹಿಳೆ, ಸೆಕ್ಸ್‌ಗಾಗಿ ಹೀಗೆಲ್ಲಾ ಮಾಡಿದ್ಲಾ!
ಸರಿಯಾಗಿ ಕಿಸ್ ಮಾಡೋಕಾಗಲ್ಲಾಂತ ನಾಲಿಗೆ ಕತ್ತರಿಸಿಕೊಂಡ ಯುವತಿ!
ಯುವತಿಯೊಬ್ಬಳು ತಾನು ಉತ್ತಮ ಕಿಸ್ಸರ್ ಆಗಬೇಕೆನ್ನುವ ಹಂಬಲದಲ್ಲಿ ನಾಲಿಗೆಯನ್ನೇ ಕತ್ತರಿಸಿಕೊಂಡ ಘಟನೆ ಈ ಹಿಂದೆ ನಡೆದಿತ್ತು. ನ್ಯೂಯಾರ್ಕ್ ಪೋಸ್ಟ್ ವೆಬ್‌ಸೈಟ್‌ನ ವರದಿಯ ಪ್ರಕಾರ, 22 ವರ್ಷದ ರೋಚೆಲ್ ಗ್ಯಾರೆಟ್ ಎಂಬಾಕೆ ಹೀಗೆ ನಾಲಿಗೆಗೆ ಸರ್ಜರಿ ಮಾಡಿಸಿದ್ದಾಳೆ. ಪೋಷಕರು ಎಷ್ಟೇ ವಿರೋಧಿಸಿದರೂ ಆಕೆ ಕೇಳಲ್ಲಿಲ್ಲ ಎಂದು ತಿಳಿದುಬಂದಿದೆ. ರೋಚೆಲ್ಗೆ ಇನ್ಸ್ಟಾಗ್ರಾಂನಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಫಾಲೋವರ್ಸ್ಗಳಿದ್ದಾರೆ. ವರದಿಯ ಪ್ರಕಾರ, ರೋಚೆಲ್ ತನ್ನ ನಾಲಿಗೆಯ ಒಂದು ಸಣ್ಣ ಭಾಗವನ್ನು ಕತ್ತರಿಸಿಕೊಂಡಿದ್ದಾಳೆ. ರೋಚೆಲ್ ಉತ್ತಮ ಕಿಸ್ಸರ್ ಆಗಲು ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಳು.
ರೋಚೆಲ್‌ನ ನಾಲಿಗೆಯ ಫ್ರೆನ್ಯುಲಮ್, ಅಂದರೆ, ನಾಲಿಗೆ ಮತ್ತು ಬಾಯಿಯ ಕೆಳಭಾಗವನ್ನು ಜೋಡಿಸಲಾದ ಅಂಗಾಂಶವು ತುಂಬಾ ಚಿಕ್ಕದಾಗಿದೆ.. ಇದರಿಂದಾಗಿ ಅವರ ನಾಲಿಗೆ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ಈ ಭಾಗವನ್ನು ಕತ್ತರಿಸಿ ಬೇರ್ಪಡಿಸಿದ್ದಾರೆ ಎಂದು ಸರ್ಜರಿ ಮಾಡಿದ ವೈದ್ಯರು ತಿಳಿಸಿದರು..