ಮಕ್ಕಳಿಗೆ ಯಾವ ಆಹಾರ ನೀಡ್ಬೇಕು, ಯಾವುದನ್ನು ನೀಡಬಾರದು ಎಂಬ ಗೊಂದಲ ಸದಾ ಪಾಲಕರಲ್ಲಿರುತ್ತದೆ. ಕೆಲವರು ಜಾಹೀರಾತು ನಂಬಿ ಮಕ್ಕಳ ಆರೋಗ್ಯದ ಜೊತೆ ಆಟವಾಡ್ತಾರೆ. ಮಕ್ಕಳು ಆರೋಗ್ಯವಾಗಿರಬೇಕೆಂದ್ರೆ ಅವರಿಗೆ ಕೆಲ ಆಹಾರವನ್ನು ನೀಡ್ಲೇಬಾರದು.
ಮಕ್ಕಳ ಆರೋಗ್ಯದ ವಿಷ್ಯ ಬಂದಾಗ ಪಾಲಕರು ಅಲರ್ಟ್ ಆಗ್ತಾರೆ. ಮಕ್ಕಳಿಗೆ ಪೌಷ್ಟಿಕಾಂಶ ಸಿಗಬೇಕು, ಮಕ್ಕಳು ಸದಾ ಲವಲವಿಕೆಯಿಂದ ಇರಬೇಕು, ಅವರ ಬುದ್ಧಿಮಟ್ಟ, ನೆನಪಿನ ಶಕ್ತಿ ಹೆಚ್ಚಾಗಲು ಏನು ಮಾಡ್ಬೇಕು ಎನ್ನುವುದನ್ನು ಪಾಲಕರು ಆಲೋಚನೆ ಮಾಡ್ತಿರುತ್ತಾರೆ. ಮಕ್ಕಳಿಗೆ ಆರೋಗ್ಯಕರ ಆಹಾರ ಸೇವನೆ ಮಾಡಲು ಸಲಹೆ ನೀಡ್ತಿರುತ್ತಾರೆ. ಮಕ್ಕಳ ದೇಹಕ್ಕೆ ಪೌಷ್ಟಿಕಾಂಶ ಸೇರ್ಬೇಕು, ಆದ್ರೆ ಕೆಲ ಪಾಲಕರಿಗೆ ಎಲ್ಲವನ್ನೂ ಮನೆಯಲ್ಲಿ ಸಿದ್ಧಪಡಿಸಲು ಸಾಧ್ಯವಾಗೋದಿಲ್ಲ. ಹಾಗಾಗಿಯೇ ಮಾರುಕಟ್ಟೆಯಲ್ಲಿ ಸಿಗುವ ಪೌಷ್ಟಿಕಾಂಶದ ಆಹಾರಕ್ಕೆ ಮೊರೆ ಹೋಗ್ತಾರೆ.
ಮಾರುಕಟ್ಟೆ (Market) ಯಲ್ಲಿ ಈಗ ಮಕ್ಕಳ ಆರೋಗ್ಯ (Health) ಕ್ಕೆ ಸಂಬಂಧಿಸಿದ ಅನೇಕ ಆಹಾರ (Food) ವನ್ನು ನೀವು ನೋಡ್ಬಹುದು. ಮಲ್ಟಿಗ್ರೀನ್ ಮಾಲ್ಟ್ ಮನೆಯಲ್ಲಿ ಎಲ್ಲರಿಗೂ ಮಾಡಲು ಸಾಧ್ಯವಿಲ್ಲ. ಹಾಗಾಗಿಯೇ ಅದ್ರಿಂದ ಹಿಡಿದು ಜ್ಯೂಸ್ (Juice) ವರೆಗೆ ಎಲ್ಲವನ್ನೂ ಮಾರುಕಟ್ಟೆಯಿಂದ ತರ್ತಾರೆ.
Health Tips: ಕ್ಯಾನ್ಸರ್ ವಿರುದ್ಧ ಹೋರಾಡುವ ಈರುಳ್ಳಿ ಹೆಚ್ಚು ತಿಂದ್ರೂ ಅಪಾಯ!
ಹಣ್ಣು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಈ ಬೇಸಿಗೆಯಲ್ಲಂತೂ ದ್ರವ ಪದಾರ್ಥವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ಬೇಕು. ಇದೇ ಕಾರಣಕ್ಕೆ ಜ್ಯೂಸ್ ಗೆ ಹೆಚ್ಚಿನ ಬೇಡಿಗೆ ಬರೋದು. ಮನೆಯಲ್ಲಿ ಜ್ಯೂಸ್ ಮಾಡಲು ಸಾಧ್ಯವಿಲ್ಲ ಎನ್ನುವವರು ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕೇಜ್ಡ್ ಫ್ರೂಟ್ ಜ್ಯೂಸ್ ಮೊರೆ ಹೋಗ್ತಾರೆ. ಈ ಫ್ರೂಟ್ ಜ್ಯೂಸ್ ಪ್ಯಾಕೇಟ್ ಮೇಲೆ ಇದು ಆರೋಗ್ಯಕ್ಕೆ ಒಳ್ಳೆಯದು, ಯಾವುದೇ ಕೆಮಿಕಲ್ ಮಿಶ್ರಣವಾಗಿಲ್ಲವೆಂದು ನಮೂದಿಸಿರುತ್ತಾರೆ. ಇದನ್ನು ಮಕ್ಕಳಿಗೆ ನೀಡಿದ್ರೆ ಮಕ್ಕಳಿಗೆ ಶಕ್ತಿ ಸಿಗುತ್ತೆ, ಮಕ್ಕಳ ಆರೋಗ್ಯ ಸುಧಾರಿಸುತ್ತೆ ಎಂದು ಕೆಲವರು ಭಾವಿಸ್ತಾರೆ. ಆದ್ರೆ ಮನೆಯಲ್ಲಿ ಮಾಡಿದ ಜ್ಯೂಸ್ ನಂತೆ ಪ್ಯಾಕೇಜ್ಡ್ ಜ್ಯೂಸ್ ಆರೋಗ್ಯವಾಗಿರಲು ಸಾಧ್ಯವೇ ಇಲ್ಲ. ಪಾಲಕರು ಮಕ್ಕಳ ತಿಂಡಿ ಬಾಕ್ಸ್ ಗೆ ಈ ಜ್ಯೂಸ್ ನೀಡುವ ತಪ್ಪು ಮಾಡ್ಬೇಡಿ.
ಕಿಡ್ನಿ ಸ್ಟೋನ್ ಗಿಂತ ಭೀಕರವಾಗಿರುತ್ತೆ ಪಿತ್ತಕೋಶದ ಕಲ್ಲು… ಮನೆಮದ್ದು ಇಲ್ಲಿವೆ
ಪ್ಯಾಕೇಜ್ಡ್ ಫ್ರೂಟ್ ಜ್ಯೂಸ್ನಿಂದಾಗುವ ಹಾನಿ
• ಯಾವುದೇ ಪ್ಯಾಕೇಜ್ಡ್ ಆಹಾರವಿರಲಿ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದ್ರಲ್ಲೂ ಜ್ಯೂಸ್ ಮಕ್ಕಳಿಗೆ ಅಪ್ಪಿತಪ್ಪಿಯೂ ನೀಡಬಾರದು.
• ಪ್ಯಾಕೇಜ್ಡ್ ಜ್ಯೂಸ್ ನಲ್ಲಿ ಪ್ರಿಜರ್ವೆಟಿವ್ ಇರುತ್ತದೆ. ಇದು ಕೊಬ್ಬನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅಲ್ಲದೆ ನಿಮ್ಮ ನರಮಂಡಲದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.
• ಪ್ಯಾಕೇಜ್ಡ್ ಜ್ಯೂಸ್ ಸೇವನೆ ಮಾಡೋದ್ರಿಂದ ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆ ಮಕ್ಕಳನ್ನು ಕಾಡುತ್ತದೆ.
• ಪ್ಯಾಕೇಟ್ ನಲ್ಲಿ ಸಿಗುವ ಜ್ಯೂಸ್ ಗಳು ಹೆಚ್ಚು ಸಿಹಿಯನ್ನು ಹೊಂದಿರುತ್ತವೆ. ಇದು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
• ಪ್ಯಾಕ್ ಮಾಡಿದ ಜ್ಯೂಸ್ ನಲ್ಲಿ ಹಣ್ಣಿನ ಪ್ರಮಾಣ ಅತಿ ಕಡಿಮೆ ಇರುತ್ತದೆ. ಹಣ್ಣಿನ ಜ್ಯೂಸ್ ಎನ್ನುವ ಕಾರಣಕ್ಕೆ ನೀವು ಈ ಜ್ಯೂಸನ್ನು ಮಕ್ಕಳಿಗೆ ನೀಡಿದ್ರೆ ಪ್ರಯೋಜನವಿಲ್ಲ. ಇದ್ರಲ್ಲಿ ಶೇಕಡಾ 25ರಷ್ಟು ಮಾತ್ರ ಹಣ್ಣಿನ ರಸವಿರುತ್ತದೆ. ಇದರ ಸೇವನೆಯಿಂದ ಮಕ್ಕಳಿಗೆ ಹೊಟ್ಟೆ ನೋವು, ಅತಿಸಾರ, ಹೊಟ್ಟೆ ಉಬ್ಬರ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ರಾತ್ರಿ ನಿದ್ದೆ ಮಾಡ್ದೆ ರಗಳೆ ಮಾಡ್ತಾರಾ ಮಕ್ಳು, ಬೇಗ ಮಲಗಿಸಲು ಈ ಟ್ರಿಕ್ ಯೂಸ್ ಮಾಡಿ
• ಪ್ಯಾಕ್ ಮಾಡಿದ ಹಣ್ಣಿನ ರಸದಲ್ಲಿ ಹಣ್ಣಿನ ನಾರಿನ ಅಂಶವನ್ನು ತೆಗೆದಿರಲಾಗುತ್ತದೆ. ನೀವು ಮಕ್ಕಳಿಗೆ ಈ ಜ್ಯೂಸ್ ನೀಡಿದ್ರೆ ಮಕ್ಕಳಿಗೆ ಹಣ್ಣಿನಲ್ಲಿರುವ ಫೈಬರ್ ಪ್ರಮಾಣ ಸಿಗುವುದಿಲ್ಲ. ಇದ್ರಿಂದ ಮಕ್ಕಳಿಗೆ ಅಜೀರ್ಣ, ಚರ್ಮದ ಸಮಸ್ಯೆ ಕಾಡುತ್ತದೆ.
• ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ಗೆ ಹೆಚ್ಚಿನ ಮಟ್ಟದಲ್ಲಿ ಸಕ್ಕರೆ ಬೆರೆಸಿರಲಾಗುತ್ತದೆ. ಪ್ರತಿ ದಿನ ನಿಮ್ಮ ಮಕ್ಕಳಿಗೆ ಈ ಜ್ಯೂಸ್ ನೀಡಿದ್ರೆ ಮಕ್ಕಳ ತೂಕ ವೇಗವಾಗಿ ಹೆಚ್ಚಾಗುತ್ತದೆ.
• ಪ್ಯಾಕ್ ಮಾಡಿದ ಮತ್ತು ಸುವಾಸನೆಯ ಹಣ್ಣಿನ ರಸಗಳು ಕ್ಯಾಡ್ಮಿಯಮ್, ಸಾವಯವ, ಆರ್ಸೆನಿಕ್ ಮತ್ತು ಪಾದರಸ ಅಥವಾ ಸೀಸವನ್ನು ಹೊಂದಿರುತ್ತವೆ. ಇದು ಮಕ್ಕಳ ಆರೋಗ್ಯಕ್ಕೆ ಅಪಾಯಕಾರಿ.