ವಿಪರೀತ ಕೆಮ್ಮೆಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ದೇಹದೊಳಗೆ ಡಜನ್‌ಗಟ್ಟಲೆ ಹುಳುಗಳು ಪತ್ತೆಯಾದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ಸ್ಕ್ಯಾನ್‌ಗಳ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ವೈದ್ಯಕೀಯ ಲೋಕದಲ್ಲಿ ಅಚ್ಚರಿಯೆನಿಸುವ ಹಲವಾರು ಘಟನೆಗಳು ನಡೆಯುತ್ತವೆ. ವೈದ್ಯರು ವಿಚಿತ್ರವಾದ ರೋಗಗಳನ್ನು ಪತ್ತೆಹಚ್ಚುತ್ತಾರೆ. ಅನಾರೋಗ್ಯದಿಂದ ಬಳಲುವ ಮನುಷ್ಯನ ದೇಹದಲ್ಲಿ ವಿಚಿತ್ರವೆನಿಸುವ ವಸ್ತುಗಳು ಸಹ ಪತ್ತೆಯಾಗುತ್ತವೆ. ಮನುಷ್ಯನ ಹೊಟ್ಟೆಯೊಳಗೆ ಕೂದಲಿನ ಉಂಡೆ, ಇತರ ವಸ್ತುಗಳು ಪತ್ತೆಯಾಗಿರೋದು ಹಿಂದೆ ವೈದ್ಯಲೋಕವೇ ಬೆಚ್ಚಿಬೀಳುವಂತೆ ಮಾಡಿತ್ತು. ವೈದ್ಯರೊಬ್ಬರು ರೋಗಿಯ ಕಣ್ಣಿನಿಂದ ಜೀವಂತ ಹುಳುವನ್ನು ಹೊರತೆಗೆದಿದ್ದರು. ಮೂಗಿನಿಂದಲೂ ಕೀಟಗಳನ್ನು ಹೊರತೆಗೆದಿರುವ ಸಾಕಷ್ಟು ವಿಲಕ್ಷಣ ಘಟನೆಗಳು ಈ ಹಿಂದೆ ನಡೆದಿದೆ. ಹಾಗೆಯೇ ಇತ್ತೀಚಿನ ಪ್ರಕರಣದಲ್ಲಿ, ನಿರಂತರ ಕೆಮ್ಮಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಯೊಬ್ಬರು ತಮ್ಮ ದೇಹದಲ್ಲಿ ಡಜನ್ ಗಟ್ಟಲೆ ಹುಳಗಳಿರುವುದನ್ನು ತಿಳಿದು ಆಘಾತಕ್ಕೊಳಗಾದರು.
ಆರೋಗ್ಯ (Health) ಸರಿಯಿಲ್ಲವೆಂದು ಆಸ್ಪತ್ರೆಗೆ ಬಂದ ರೋಗಿಗೆ ವೈದ್ಯರು ಎಕ್ಸ್-ರೇ ತೆಗೆದಾಗ ಆಘಾತಕಾರಿ ವಿಚಾರ ಪತ್ತೆಯಾಯಿತು. ಬ್ರೆಜಿಲ್‌ನ ಸಾವೊ ಪಾಲೊದಲ್ಲಿರುವ ದಾಸ್ ಕ್ಲಿನಿಕಾಸ್ ಬೊಟುಕಾಟು ಆಸ್ಪತ್ರೆಯ ಅಭ್ಯಾಸಿ ಡಾ.ವಿಟರ್ ಬೋರಿನ್ ಪಿ. ಡಿ ಸೋಜಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡ ನಂತರ ಸ್ಕ್ಯಾನ್‌ಗಳ ಫೋಟೋಗಳು ವೈರಲ್ ಆಯಿತು.
ಹಸಿ ರಕ್ತದ ಪುಡ್ಡಿಂಗ್ ತಿಂದ ಮಹಿಳೆ, ಮೆದುಳು ಸೇರಿತ್ತು ಹುಳುಗಳ ರಾಶಿ!
ಹಂದಿಮಾಂಸ ಸೇವನೆಯಿಂದ ದೇಹ ಸೇರಿತ್ತು ಹುಳುಗಳು
ಪರೀಕ್ಷೆಗಳು ಮತ್ತು ಸ್ಕ್ಯಾನ್‌ಗಳು ಹಂದಿಮಾಂಸದಿಂದ ದೇಹ (Body)ದಲ್ಲಿ ಹುಳುಗಳು ಉಂಟಾಗಿರುವುದ್ನು ಬಹಿರಂಗಪಡಿಸಿತು. ವ್ಯಕ್ತಿ ಅಂಗಾಂಶದ ಸೋಂಕಿನ ಸಿಸ್ಟಿಸರ್ಕೋಸಿಸ್‌ನಿಂದ ಬಳಲುತ್ತಿರುವುದು ಪರೀಕ್ಷೆಯಿಂದ ತಿಳಿದುಬಂತು. ಇದು ಸಾಮಾನ್ಯವಾಗಿ ಆಹಾರ (Food) ಸೇವನೆಯಿಂದ ಅಥವಾ ಮಾನವನ ಮಲದಿಂದ ಟೇಪ್ ವರ್ಮ್‌ಗಳ ಮೊಟ್ಟೆಗಳಿಂದ ಕಲುಷಿತಗೊಂಡ ನೀರನ್ನು ಕುಡಿಯುವುದರಿಂದ ಉಂಟಾಗುತ್ತದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ಹೇಳುತ್ತದೆ:
'ಒಬ್ಬ ವ್ಯಕ್ತಿಯು ಟೇಪ್ ವರ್ಮ್ ಮೊಟ್ಟೆಗಳನ್ನು ನುಂಗಿದ ನಂತರ ಈ ಸೋಂಕು ಸಂಭವಿಸುತ್ತದೆ. ಲಾರ್ವಾಗಳು ಸ್ನಾಯು ಮತ್ತು ಮೆದುಳಿನಂತಹ ಅಂಗಾಂಶಗಳಿಗೆ ಪ್ರವೇಶಿಸುತ್ತವೆ. ವಯಸ್ಕ ಹುಳುಗಳಿಂದ ಸೋಂಕಿತ ವ್ಯಕ್ತಿಯ ಮಲದಲ್ಲಿ ಟೇಪ್ ವರ್ಮ್ ಮೊಟ್ಟೆಗಳು ಇರುತ್ತವೆ. ಇದು ಟೇನಿಯಾಸಿಸ್ ಎಂದು ಕರೆಯಲ್ಪಡುವ ಸ್ಥಿತಿಯಾಗಿದೆ. ಕಳಪೆ ಬೇಯಿಸಿದ ಹಂದಿ ಮಾಂಸ ತಿನ್ನುವುದರಿಂದ ಈ ಸಮಸ್ಯೆ ಉಂಟಾಗಬಹುದು ಎಂದು ಹೇಳಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು (WHO) ಈ ಸ್ಥಿತಿಯು ವಿವಿಧ ಟೇಪ್ ವರ್ಮ್‌ಗಳಿಂದ ಉಂಟಾಗಬಹುದು ಎಂದು ಹೇಳುತ್ತದೆ. ಟೇನಿಯಾ ಸೋಲಿಯಮ್ ಎಂದು ಕರೆಯಲ್ಪಡುವ ಈ ಆರೋಗ್ಯ ಸಮಸ್ಯೆಯು ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಕಿವಿ ನೋವೆಂದು ಆಸ್ಪತ್ರೆಗೆ ಬಂದ ವೃದ್ಧನ ಕಿವಿ ನೋಡಿ ವೈದ್ಯರೇ ಕಂಗಾಲು
ರೋಗಿಯ ಮೆದುಳಿನಲ್ಲಿರುವ ಹುಳಗಳ ಬಗ್ಗೆ MRI ಸ್ಕ್ಯಾನ್ ನಡೆಸಲಾಗುತ್ತಿದೆ. ಇದು ಸಾಮಾನ್ಯವಾಗಿ ತಲೆನೋವು, ತಲೆತಿರುಗುವಿಕೆ ಮೊದಲಾದ ಸಮಸ್ಯೆಯನ್ನು ಉಂಟುಮಾಡುತ್ತದೆ. ಕೆಲವು ವರ್ಷಗಳ ಹಿಂದೆ, ನಿರಂತರ ತಲೆನೋವು ಮತ್ತು ರೋಗಗ್ರಸ್ತವಾಗುವಿಕೆಗಳ ಬಗ್ಗೆ ದೂರು ನೀಡಿದ ನಂತರ ಒಬ್ಬ ವ್ಯಕ್ತಿಯನ್ನು ಝೀಜಿಯಾಂಗ್ ಪ್ರಾಂತ್ಯದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸಾಂಕ್ರಾಮಿಕ ರೋಗಗಳ ವಿಭಾಗದ ಡಾ ವಾಂಗ್ ಜಿಯಾನ್-ರಾಂಗ್ ಅವರು ರೋಗಿಯ (Patient) ವೈದ್ಯಕೀಯ ಪರೀಕ್ಷೆಯನ್ನು ಮಾಡಿದರು ಮತ್ತು ಅವರು ಟೇನಿಯಾಸಿಸ್, ಟೇಪ್ ವರ್ಮ್ಗಳ ಸೋಂಕಿನಿಂದಾಗಿ ಪರಾವಲಂಬಿ ಕಾಯಿಲೆಯನ್ನು ಹೊಂದಿದ್ದಾರೆಂದು ಕಂಡುಹಿಡಿದರು.
ಅವರ ಪ್ರಮುಖ ಅಂಗಗಳ ಸಂಪೂರ್ಣ ಸ್ಕ್ಯಾನ್ ಮಾಡಿದಾಗ, ಫಲಿತಾಂಶಗಳು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಯನ್ನು ಆಘಾತಗೊಳಿಸಿದವು. ವ್ಯಕ್ತಿಯ ಮೆದುಳು, ಎದೆ ಮತ್ತು ಶ್ವಾಸಕೋಶದಲ್ಲಿ 700 ಟೇಪ್ ವರ್ಮ್‌ಗಳಿವೆ ಎಂದು ಸ್ಕ್ಯಾನ್‌ಗಳು ಬಹಿರಂಗಪಡಿಸಿದವು.
ಮಾನವ ಮೂಳೆ ಮಾಂಸದ ತಡಿಕೆ ಮಾತ್ರವಲ್ಲ, ಹುಳಗಳ ಸಾಮ್ರಾಜ್ಯವೂ ಹೌದು