ಸದಾ ನಗ್ತಿರು ಅಂತಾ ದೊಡ್ಡವರು ಕಿರಿಯರಿಗೆ ಆಶೀರ್ವಾದ ಮಾಡ್ತಾರೆ. ಆದ್ರೆ ಅನೇಕರಿಗೆ ನಗುವಿನ ಮಹತ್ವವೇ ತಿಳಿದಿರೋದಿಲ್ಲ. ನಗೋ ವಿಷ್ಯವನ್ನೂ ಗಂಭೀರವಾಗಿ ತೆಗೆದುಕೊಳ್ತಾರೆ. ಇದ್ರಿಂದ ನಿಮಗೇ ನಷ್ಟ ಅನ್ನೋದು ಅವರಿಗೆ ತಿಳಿದಿರೋದಿಲ್ಲ.
ಮನುಷ್ಯ ಆರೋಗ್ಯವಂತನಾಗಿರಬೇಕು ಅಂದ್ರೆ ಉತ್ತಮ ಆಹಾರ, ವ್ಯಾಯಾಮ ಮಾತ್ರ ಮುಖ್ಯವಲ್ಲ. ಮನಸ್ಥಿತಿ ಕೂಡ ಮುಖ್ಯವಾಗಿರುತ್ತದೆ. ಸದಾ ನಗ್ತಾ ಇದ್ರೆ ಎಲ್ಲ ಕಷ್ಟಗಳು ದೂರವಾಗುತ್ತವೆ ಎನ್ನುವ ಮಾತನ್ನು ನೀವು ಕೇಳಿರಬಹುದು. ಹಾಗೆಯೇ ನಗು ನಮ್ಮ ಆರೋಗ್ಯವನ್ನು ವೃದ್ಧಿಸುವ ಕೆಲಸ ಮಾಡುತ್ತದೆ. ಇಂದಿನ ಜೀವನಶೈಲಿಯಲ್ಲಿ ಜನರಿಗೆ ನಗೋಕೂ ಟೈಂ ಇಲ್ಲ ಎನ್ನುವಂತಾಗಿದೆ. ಜನರು ದಿನದಲ್ಲಿ ಒಮ್ಮೆ ಮನಸ್ಸು ಬಿಚ್ಚಿ ನಗೋದು ಕಷ್ಟವಾಗಿದೆ. ಸದಾ ಮುಖವನ್ನು ಗಂಟು ಹಾಕಿಕೊಂಡು ಇಲ್ಲವೆ ಟೆನ್ಷನ್ ನಲ್ಲಿ ಸಮಯ ಕಳೆಯುವ ಜನರು ನಗುವಿಗಾಗಿ ಸಮಯ ಮೀಸಲಿಡುವ ಸ್ಥಿತಿ ನಿರ್ಮಾಣವಾಗಿದೆ.
ನಗು ನಮ್ಮ ದೈಹಿಕ ಆರೋಗ್ಯ (Health) ಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಬಹಳ ಮುಖ್ಯ. ಅತಿಯಾದ ಒತ್ತಡ ಮತ್ತು ಆತಂಕದಿಂದಾಗಿ ನಮ್ಮ ಆರೋಗ್ಯ ಹಾಳಾಗಿದ್ರೆ ಮನಸ್ಸು ಬಿಚ್ಚಿ ನಕ್ಕರೆ ಸಾಕು. ನಿಮ್ಮೆಲ್ಲ ರೋಗ ಗುಣಮುಖವಾಗುತ್ತದೆ. ನಗು (Smile) ವಿಗಾಗಿಯೇ ಈಗ ನಗುವಿನ ಥೆರಪಿಗಳನ್ನು ನಡೆಸಲಾಗುತದೆ. ನೀವು ದಿನದಲ್ಲಿ ಎಷ್ಟೇ ಬ್ಯುಸಿಯಾಗಿರಿ, ಪ್ರತಿದಿನ 15-20 ನಿಮಿಷಗಳ ಕಾಲ ನಗೋದನ್ನು ಮರೆಯಬೇಡಿ. ನಗುವುದರಿಂದ ದೇಹಕ್ಕೆ ಆಗುವ ಲಾಭಗಳೇನು ಎಂಬುದು ಇಲ್ಲಿದೆ.
ADHD IN CHILDREN: ನಿಮ್ಮ ಮಕ್ಕಳು ಎಲ್ಲರ ಹಾಗಿಲ್ವಾ? ಪಾಲಕರು ಗುರ್ತಿಸೋಕೆ ತಡ ಮಾಡ್ಬೇಡಿ
ನಗುವಿನಂದ ಆಗುವ ಲಾಭವೇನು? :
ಒತ್ತಡ (Stress) ನಿವಾರಣೆಗೆ ನಗು ಮದ್ದು : ಖುಷಿಯಾದಾಗ ನಾವು ಮನಸ್ಸು ಬಿಚ್ಚಿ ನಗುತ್ತೇವೆ. ಈ ನಗುವಿಂದ ಏನು ಮಹಾ ಆಗುತ್ತೆ ಎಂತಾ ನೀವಂದುಕೊಂಡಿರಬಹುದು. ಆದ್ರೆ ಪ್ರತಿ ಬಾರಿ ನೀವು ನಕ್ಕಾಗಲೂ ಎಂಡಾರ್ಫಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಎಂಡಾರ್ಫಿನ್ ಎಂಬ ಹಾರ್ಮೋನು ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ. ಈ ಹಾರ್ಮೋನ್ ಬಿಡುಗಡೆ ಮಾಡೋದ್ರಿಂದ ನಿಮ್ಮ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಮನಸ್ಸಿನಲ್ಲಿ ಉತ್ತಮ ಭಾವನೆ ಮೂಡುತ್ತದೆ. ಒತ್ತಡದಿಂದ ಬಳಲುತ್ತಿರುವವರು ನೀವಾಗಿದ್ದರೆ ಆಗಾಗ ನಗೋದನ್ನು ರೂಢಿಮಾಡಿಕೊಳ್ಳಿ.
ರೋಗನಿರೋಧಕ ಶಕ್ತಿ ಹೆಚ್ಚಳ : ರೋಗನಿರೋಧಕ ಶಕ್ತಿ ಎಷ್ಟು ಅವಶ್ಯಕ ಎಂಬುದು ಕೊರೊನಾ ಸಮಯದಲ್ಲಿ ಜನರಿಗೆ ತಿಳಿದಿದೆ. ಪ್ರತಿಯೊಬ್ಬರೂ ರೋಗನಿರೋಧಕ ಶಕ್ತಿ ಪಡೆಯುವುದು ಬಹಳ ಮುಖ್ಯ. ನಗು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಅನೇಕ ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಆರೋಗ್ಯವಂತರಾಗಿರಬೇಕೆಂದ್ರೆ ನೀವು ಪ್ರತಿ ದಿನ ನಗಲು ಸ್ವಲ್ಪ ಸಮಯವನ್ನು ಮೀಸಲಿಡಿ.
ಯಪ್ಪಾ..ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಹಾಕಿದ ಡಾಕ್ಟರ್!
ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತೆ ನಗು : ಆಗಾಗ ನೀವು ನಗ್ತಿದ್ದೀರಿ ಅಂದ್ರೆ ಮತ್ತಷ್ಟು ನಗೋದನ್ನು ಅಭ್ಯಾಸ ಮಾಡಿಕೊಳ್ಳಿ. ಯಾಕೆಂದ್ರೆ ನಗು ನಿಮ್ಮ ರಕ್ತದೊತ್ತಡವನ್ನು ಸರಿಯಾಗಿಡುವ ಕೆಲಸ ಮಾಡುತ್ತದೆ. ನಗು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ಪಾರ್ಶ್ವವಾಯು ಅಪಾಯವನ್ನು ಸಹ ಕಡಿಮೆ ಮಾಡುತ್ತದೆ.
ಸುಖಕರ ನಿದ್ರೆಗೆ ಮನಸ್ಪೂರ್ವಕ ನಗು : ಮನಸ್ಪೂರ್ವಕವಾಗಿ ನೀವು ನಗುತ್ತಿದ್ದರೆ ನಿಮ್ಮ ನಿದ್ರೆಗೆ ಎಂದೂ ಕೊರತೆಯಾಗೋದಿಲ್ಲ. ನಿದ್ರಾಹೀನತೆ ಸಮಸ್ಯೆಯಿರುವವರು ಮನಸ್ಸು ಬಿಚ್ಚಿ ನಗುತ್ತಿದ್ದರೆ ನಿದ್ರೆ ತಾನಾಗಿಯೇ ಬರುತ್ತೆ. ರಾತ್ರಿ ಸರಿಯಾಗಿ ನಿದ್ರೆನೇ ಬರಲ್ಲ ಎನ್ನುವವರು ನೀವಾಗಿದ್ದರೆ ದಿನಕ್ಕೆ ಒಮ್ಮೆಯಾದ್ರೂ ನಗೋದನ್ನು ಪ್ರಾಕ್ಟೀಸ್ ಮಾಡಿ. ಸುಮ್ಮಸುಮ್ಮನೆ ನಗು ಬರಲ್ಲ ಅಂತಾದ್ರೆ ನಗು ಥೆರಪಿಗೆ ಸೇರಿಕೊಳ್ಳಿ.
ಹೃದಯದ ಆರೋಗ್ಯಕ್ಕೆ ನಗು ಬೆಸ್ಟ್ : ಸದಾ ನಗ್ತಿದ್ದರೆ ನಿಮ್ಮ ಹೃದಯ ಗಟ್ಟಿಯಾಗಿರುತ್ತೆ ಎನ್ನುತ್ತಾರೆ ತಜ್ಞರು. ಹೃದಯಾಘಾತದ ಸಮಸ್ಯೆ ಕೂಡ ಹೆಚ್ಚಾಗಿ ಕಾಡೋದಿಲ್ಲ.
ಚರ್ಮ ಶೈನ್ ಆಗ್ಬೇಕೆಂದ್ರೆ ನಗ್ತಾನೇ ಇರಿ : ನಗು ನಮ್ಮ ಸ್ನಾಯುಗಳಿಗೆ ವ್ಯಾಯಾಮ ನೀಡುತ್ತದೆ. ಇದ್ರಿಂದ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ಇದ್ರಿಂದ ಚರ್ಮ ಹೊಳು ಪಡೆಯುತ್ತದೆ. ಮುಖದ ಸೌಂದರ್ಯ ಹೆಚ್ಚಾಗುತ್ತದೆ.