
ಮಹಾರಾಷ್ಟ್ರ (Maharashtra)ದ ವ್ಯಕಿಯೊಬ್ಬರು ಬಹಳ ಅಪರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೃದಯದಲ್ಲಿ ಗೆಡ್ಡೆ (heart tumor) ಕಾಣಿಸಿಕೊಂಡಿದ್ದು, ಆಪರೇಷನ್ ನಂತ್ರ ವ್ಯಕ್ತಿ ಆರೋಗ್ಯವಾಗಿದ್ದಾರೆ. ಹೃದಯದಲ್ಲಿ ಗಡ್ಡೆ ಕಾಣಿಸಿಕೊಳ್ಳೋದು ಬಹಳ ಅಪರೂಪ. ಲಕ್ಷ ಜನರಲ್ಲಿ ಒಬ್ಬರಿಗೂ ಈ ಕಾಯಿಲೆ ಬರುವುದಲ್ಲ. ಹಾಗಿರುವಾಗ ಮಹಾರಾಷ್ಟ್ರದ ಡೊಂಬಿವಲಿಯ ನಿವಾಸಿ 67 ವರ್ಷದ ಯೋಗೇಶ್ ಮೆಹ್ತಾ ಈ ಸಮಸ್ಯೆಗೆ ತುತ್ತಾಗಿದ್ದರು, ಯೋಗೇಶ್ ಮೆಹ್ತಾ ಹೃದಯದಲ್ಲಿ ಮೈಕ್ಸೋಮಾ ಎಂಬ ಗಡ್ಡೆ ಇತ್ತು. ಈ ಗಡ್ಡೆ ಅಪಾಯಕಾರಿಯಾಗಿರಲಿಲ್ಲ. ಆದ್ರೆ ಹೃದಯದ ಮುಖ್ಯ ಅಪಧಮನಿಯಲ್ಲಿ ಅಡಚಣೆ ಇತ್ತು. ಹಾಗಾಗಿ ಯೋಗೇಶ್ ಮೆಹ್ತಾಗೆ ಆಪರೇಷನ್ ಮಾಡೋದು ಅನಿವಾರ್ಯವಗಿತ್ತು. ಹಾರ್ಟ್ ಸರ್ಜನ್ ಡಾ. ಬಿಜೋಯ್ ಕುಟ್ಟಿ, ಮೆಹ್ತಾ ಅವರಿಗೆ ಯಶಸ್ವಿ ಹೃದಯ ಚಿಕಿತ್ಸೆ ಮಾಡಿದ್ದಾರೆ.
ಯೋಗೇಶ್ ಮೆಹ್ತಾ, ಮಹಾರಾಷ್ಟ್ರದಲ್ಲಿ ಹಾರ್ಡ್ವೇರ್ ಬ್ಯುಸಿನೆಸ್ ಮಾಮಾಡ್ತಿದ್ರು. ಅವರು ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಅತಿಸಾರ ಮತ್ತು ದೌರ್ಬಲ್ಯ ಅವರನ್ನು ಕಾಡುತ್ತಿತ್ತು. ಚಿಕಿತ್ಸೆಗೆ ಬಂದ ಯೋಗೇಶ್ ಮೆಹ್ತಾ ಹೊಟ್ಟೆ ಪರೀಕ್ಷೆ ಮಾಡಿದ್ರು ವೈದ್ಯರು.
ಹೃದಯಾಘಾತಕ್ಕೆ 21 ವರ್ಷದ MBBS ವಿದ್ಯಾರ್ಥಿ ಬಲಿ: ಇದ್ದೊಬ್ಬ ಮಗನ ಸಾವಿನಿಂದ ಪ್ರಜ್ಞಾಶೂನ್ಯಳಾದ ತಾಯಿ
ವಿಚಿತ್ರವೆಂದ್ರೆ ಮೆಹ್ತಾ ಮಲಗಿದ್ದಾಗ ಅವರಿಗೆ ಉಸಿರಾಡಲು ತೊಂದ್ರೆ ಆಗ್ತಿತ್ತು. ಅವರು ಮೂರ್ಛೆ ಹೋಗ್ತಿದ್ದರು. ಆದ್ರೆ ಇದು ಹೃದಯ ಖಾಯಿಲೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಎಷ್ಟೇ ವೈದ್ಯರ ಬಳಿ ಹೋದ್ರೂ ಪರಿಹಾರ ಸಿಕ್ಕಿರಲಿಲ್ಲ. ಯಾವ್ದೇ ವೈದ್ಯರಿಗೆ ಇದು ಹೃದಯ ಸಂಬಂಧಿ ಖಾಯಿಲೆ ಎಂಬುದು ಅರ್ಥವಾಗಿರಲಿಲ್ಲ. ಕೊನೆಯಲ್ಲಿ ಯೋಗೇಶ್ ಮೆಹ್ತಾ ಹೃದಯದಲ್ಲಿದ್ದ ಗೆಡ್ಡೆ ತುಂಬಾ ದೊಡ್ಡದಾಗಿ ಬೆಳೆದಿದ್ದಲ್ಲದೆ ಹೃದಯ ಮತ್ತು ರಕ್ತನಾಳಗಳ ಮೇಲೆ ಒತ್ತಡ ಹೇರಲು ಶುರು ಮಾಡಿತ್ತು. ಇದ್ರಿಂದ ರಕ್ತ ಪರಿಚಲನೆ ಸರಿಯಾಗಿ ಆಗ್ತಿರಲಿಲ್ಲ. ತಲೆ ಸುತ್ತುವ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಕೊನೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು, ಕಿತ್ತಳೆ ಹಣ್ಣಿನಷ್ಟು ದೊಡ್ಡದಿದ್ದ ಗಡ್ಡೆಯನ್ನು ಹೊರಗೆ ತೆಗೆದಿದ್ದಾರೆ. ಮೆಹ್ತಾ ಈಗ ಆರೋಗ್ಯವಾಗಿದ್ದು, ಓಡಾಡುತ್ತಿದ್ದಾರೆ. ಇಷ್ಟು ಬೇಗ ಮೆಹ್ತಾ ಚೇತರಿಕೆ ವೈದ್ಯರನ್ನು ಅಚ್ಚರಿಗೊಳಿಸಿದೆ.
ಮೆಹ್ತಾ ಹಲವು ವರ್ಷಗಳಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ಮೆಹ್ತಾ ಪತ್ನಿ ತೃಪ್ತಿ ಹೇಳಿದ್ದಾರೆ. ಮೆಹ್ತಾ ಹೃದಯ ಕಾಯಿಲೆಯಿಂದ ಬಳಲ್ತಿದ್ದಾರೆ ಎಂಬ ಮಾಹಿತಿ ಅವರ ಕುಟುಂಬಕ್ಕೆ ಇರಲಿಲ್ಲ. ಮಾರ್ಚ್ 23 ರಂದು ಮೆಹ್ತಾ, ಬಾತ್ ರೂಮಿನಲ್ಲಿ ಬಿದ್ರು. ಅವರಿಗೆ ಪ್ರಜ್ಞೆ ಬರಲು ಸ್ವಲ್ಪ ಟೈಂ ಬೇಕಾಯ್ತು. ತಕ್ಷಣ ಅವರ ಮಗ ಪರಾಸ್ ಹತ್ತಿರದ ಓಂ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಅವರನ್ನು ಡೊಂಬಿವಲಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಲಾಗಿತ್ತು.
ಡಾ. ಕುಟ್ಟಿ ಮೆಹ್ತಾರನ್ನು ಪರೀಕ್ಷಿಸಿ, ಸ್ಕ್ಯಾನ್ ಮಾಡಿ, ಗೆಡ್ಡೆ ಇರುವುದನ್ನು ಪತ್ತೆ ಮಾಡಿದ್ದರು. ಅಲ್ಲದೆ ಹೃದಯದ ಅಡಚಣೆಯನ್ನೂ ಪತ್ತೆ ಮಾಡಿದ್ದರು. ಅಲ್ಲದೆ, ಮುಲುಂಡ್ನಲ್ಲಿರುವ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲು ಕಟ್ಟಿ, ಮೆಹ್ತಾ ಕುಟುಂಬದವರಿಗೆ ಸೂಚನೆ ನೀಡಿದ್ದರು. ಮಾರ್ಚ್ 26 ರಂದು ಮೆಹ್ತಾ ಶಸ್ತ್ರಚಿಕಿತ್ಸೆಗೆ ಒಳಗಾದ್ರು. ವೈದ್ಯರು ಗೆಡ್ಡೆ ಮತ್ತು ಅಡಚಣೆ ಎರಡನ್ನೂ ತೆಗೆದುಹಾಕಿದ್ದಾರೆ. ಶಸ್ತ್ರಚಿಕಿತ್ಸೆ ಐದು ಗಂಟೆ ನಡೆದಿದ್ದು, ಮತ್ತೆ ಗಡ್ಡೆ ವಾಪಸ್ ಬರುವುದಿಲ್ಲ ಎಂದು ವೈದ್ಯರು ಭರವಸೆ ನೀಡಿದ್ದಾರೆ.
ನಕಲಿ ವೈದ್ಯನಿಂದ ಪೃಷ್ಠದ ಗಾತ್ರ ಹೆಚ್ಚಿಸುವ ಸರ್ಜರಿಗೆ ಒಳಗಾದ ಮಹಿಳೆ ಸಾವು
ಹೃದಯದಲ್ಲಿ ಗಡ್ಡೆಯಾದ್ರೆ ಅದು ಒಡೆದು ರಕ್ತಪ್ರವಾಹಕ್ಕೆ ಸೇರುವ ಸಾಧ್ಯತೆ ಇರುತ್ತದೆ. ಇದು ರಕ್ತನಾಳವನ್ನು ಮುಚ್ಚಿ ಪಾರ್ಶ್ವವಾಯು ಅಥವಾ ಇತರ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನು ಎಂಬೋಲೈಸೇಶನ್ ಎಂದು ಕರೆಯಲಾಗುತ್ತದೆ. ಮೆಹ್ತಾಗೆ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಹೃದಯ ಖಾಯಿಲೆಯ ಸೂಚನೆ ಆಗಿರಲಿಲ್ಲ. ಆದ್ರೆ ಮೆಹ್ತಾ ಈಗ ಸಾವು ಗೆದ್ದು ಬಂದಿದ್ದಾರೆ. ಅವರಿಗೆ ಇದು ಮರು ಹುಟ್ಟು ಎಂದು ಮಕ್ಕಳು ಭಾವಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.