ನಾಲ್ಕು ಕಾಲಿನ ಹೆಣ್ಣು ಮಗು ಜನನ: ಮಧ್ಯಪ್ರದೇಶದಲ್ಲಿ ಅಪರೂಪದ ಪ್ರಕರಣ

By Anusha Kb  |  First Published Dec 16, 2022, 10:25 PM IST

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಹಿಳೆಯೊಬ್ಬರು ವಿಚಿತ್ರ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಮಗು 2.3 ಕೆಜಿ ತೂಕವಿದ್ದು, ನಾಲ್ಕು ಕಾಲುಗಳನ್ನು ಹೊಂದಿದೆ.


ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಹಿಳೆಯೊಬ್ಬರು ವಿಚಿತ್ರ ಮಗುವೊಂದಕ್ಕೆ ಜನ್ಮ ನೀಡಿದ್ದಾರೆ. ಮಗು 2.3 ಕೆಜಿ ತೂಕವಿದ್ದು, ನಾಲ್ಕು ಕಾಲುಗಳನ್ನು ಹೊಂದಿದೆ. ಈ ವಿಚಾರವೀಗ ಜನರಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಸಿಕಂದರ್ ಕಾಂಪು (Sikandar Kampoo) ನಿವಾಸಿ ಅರತಿ ಕುಶ್ವಾಹ್ (Aarti Kushwaha) ಎಂಬುವವರೇ ಹೀಗೆ ನಾಲ್ಕು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ . ಗ್ವಾಲಿಯರ್‌ನ ಕಮಲಾ ರಾಜ್ ಆಸ್ಪತ್ರೆಯ (Kamla Raja Hospital) ಮಹಿಳೆ ಹಾಗೂ ಮಕ್ಕಳ ವಿಭಾಗದಲ್ಲಿ ಅವರು ಈ ಅಪರೂಪದ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಮಗು 2.3 ಕೆಜಿ ತೂಗುತ್ತಿದ್ದು, ಜನನದ ನಂತರ ಗ್ವಾಲಿಯರ್‌ನಲ್ಲಿರುವ ಜಯಾರೋಗ್ಯ ಆಸ್ಪತ್ರೆಯ (Jayarogya Hospital) ವೈದ್ಯರ ತಂಡ ಈ ಮಗುವನ್ನು ತಪಾಸಣೆ ನಡೆಸಿದೆ.

ಈ ಬಗ್ಗೆ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಜಯಾರೋಗ್ಯ ಆಸ್ಪತ್ರೆಯ ವೈದ್ಯರ ತಂಡ, ಶಿಶು ನಾಲ್ಕು ಕಾಲುಗಳನ್ನು ಹೊಂದಿದೆ. ದೈಹಿಕ ಅಸಮರ್ಥತೆಯನ್ನು (physical deformity) ಮಗು ಹೊಂದಿದೆ. ಕೆಲವು ಭ್ರೂಣಗಳು ಹೆಚ್ಚುವರಿ ಅಂಗಗಳನ್ನು ಹೊಂದಿರುತ್ತವೆ. ವೈದ್ಯಕೀಯ ವಿಜ್ಞಾನದ (medical science) ಭಾಷೆಯಲ್ಲಿ ಇದನ್ನು ಇಶಿಯೋಪಾಗಸ್ (Ischiopagus) ಎಂದು ಕರೆಯಲಾಗುತ್ತದೆ. ಭ್ರೂಣವೂ ಎರಡು ಭಾಗಗಳಾಗಿ ವಿಭಜನೆಯಾದಾಗ ದೇಹವೂ ಎರಡು ಭಾಗಗಳಲ್ಲಿ ಬೆಳವಣಿಗೆಯಾಗುತ್ತದೆ. ದೇಹದ ಕೆಳಭಾಗ ಎರಡು ಹೆಚ್ಚುವರಿ ಕಾಲುಗಳನ್ನು ಹೊಂದಿದೆ. ಆದರೆ ಆ ಎರಡು ಹೆಚ್ಚುವರಿ ಕಾಲುಗಳು ನಿಷ್ಕ್ರಿಯವಾಗಿವೆ.

Tap to resize

Latest Videos

ಗಂಗಾವತಿ: ಒಂದೇ ಕಾಲಿರುವ ಅಪರೂಪದ ಮಗು ಜನನ..!

ಇದಲ್ಲದೇ ಈ ಅಪರೂಪದ ಮಗುವಿಗೆ ಬೇರೇನಾದರೂ ದೈಹಿಕ ನ್ಯೂನ್ಯತೆಗಳಿವೆಯೇ ಎಂಬುದನ್ನು ಮಕ್ಕಳ ತಜ್ಞ ವೈದ್ಯರು ತಪಾಸಣೆ ಮಾಡಿದ್ದಾರೆ. ತಪಾಸಣೆ ವೇಳೆ ಬೇರೇನೂ ನ್ಯೂನ್ಯತೆ ಇಲ್ಲ ಎಂಬುದು ತಿಳಿದು ಬಂದಿದೆ. ಆಕೆ ಆರೋಗ್ಯವಾಗಿದ್ದರೆ, ಆಕೆಯ ಆ ಎರಡು ಬಲ ಇಲ್ಲದ ಕಾಲುಗಳನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗುವುದು. ನಂತರ ಆಕೆ ಸಾಮಾನ್ಯರಂತೆ ಬದುಕುತ್ತಾಳೆ ಎಂದು ವೈದ್ಯ ಡಾ. ಧಕಡ್ (Dr Dhakad) ಹೇಳಿದ್ದಾರೆ.

ಪ್ರಸ್ತುತ ಈ ಮಗು ಕಮಲಾ ರಾಜ್ ಆಸ್ಪತ್ರೆಯ ಮಕ್ಕಳ ವಿಭಾಗದ ವಿಶೇಷ ನವಜಾತ ಶಿಶುಗಳ ನಿಗಾ ಘಟಕದಲ್ಲಿ ದಾಖಲಾಗಿದ್ದು, ಮಗುವಿನ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಗಮನಿಸಲಾಗುತ್ತಿದೆ. ಆಸ್ಪತ್ರೆಯ ವೈದ್ಯರು ಮಗುವಿನ ಎರಡು ಹೆಚ್ಚುವರಿ ಕಾಲುಗಳನ್ನು ಸರ್ಜರಿ ಮಾಡಿ ತೆಗೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಸ್ತುತ ಈ ಮಗು ಸಂಪೂರ್ಣವಾಗಿ ಆರೋಗ್ಯವಾಗಿದೆ ಎಂದು ಅವರು ಹೇಳಿದ್ದಾರೆ.  ಈ ವರ್ಷದ ಮಾರ್ಚ್‌ನಲ್ಲಿ ಮಧ್ಯಪ್ರದೇಶದ (Madhya Pradesh) ರತ್ಲಮ್ (Ratlam) ಜಿಲ್ಲೆಯಲ್ಲಿ ಮಹಿಳೆಯೊಬ್ಬರು  ಎರಡು ತಲೆ ಮೂರು ಕೈ ಇರುವ ಮಗುವಿಗೆ ಜನ್ಮ ನೀಡಿದ್ದರು. ಇದು ಆ ದಂಪತಿಗಳ ಮೊದಲ ಮಗುವಾಗಿತ್ತು. ಹೆರಿಗೆಗೆ ಮೊದಲು ಸ್ಕ್ಯಾನಿಂಗ್ ವೇಳೆ ಇದು ಎರಡು ಮಗು ಇದ್ದಂತೆ ಕಾಣಿಸಿತ್ತು. ಆದರೆ ಇದು ಅತ್ಯಂತ ವಿರಳ ಪ್ರಕರಣವಾಗಿದ್ದು, ಮಗು ಬಹಳ ದಿನಗಳ ಕಾಲ ಬದುಕಲು ಸಾಧ್ಯವಾಗದು ಎಂದು ವೈದ್ಯರು ಹೇಳಿದ್ದಾರೆ. 

ವೈದ್ಯಲೋಕಕ್ಕೆ ಸವಾಲು; ಅಪರೂಪದ ಮಗು ಜನನ

click me!