ಋತು ಬದಲಾದಂತೆ ನಮ್ಮ ಆಹಾರ ಶೈಲಿ ಬದಲಾಗಬೇಕು. ಬೇಸಿಗೆಯಲ್ಲಿ ತಿಂದ ಆಹಾರವನ್ನೇ ಚಳಿಗಾಲದಲ್ಲಿ ತಿನ್ನುತ್ತೇವೆ ಅಂದ್ರೆ ಆರೋಗ್ಯ ಏರುಪೇರಾಗುತ್ತದೆ. ಮೊಸರು ಎಷ್ಟೇ ಪ್ರಿಯವಾಗಿದ್ದರೂ ಕೆಲ ಸಂದರ್ಭದಲ್ಲಿ ಅದ್ರ ಸೇವನೆ ನಿಲ್ಲಿಸ್ಲೇಬೇಕು.
ಮೊಸರಿಲ್ಲದೆ ಊಟ ಪೂರ್ಣವಾಗೋದಿಲ್ಲ. ಕೊನೆಯಲ್ಲಿ ಸ್ವಲ್ಪ ಅನ್ನಕ್ಕೆ ಮೊಸರು ಹಾಕಿ ತಿಂದ್ರೆ ಮಾತ್ರ ಹೊಟ್ಟೆ ತುಂಬಿದಂತೆ ಎನ್ನುವವರಿದ್ದಾರೆ. ಯಾವುದೇ ಮಸಾಲೆ ಪದಾರ್ಥವನ್ನು ಸೇವನೆ ಮಾಡಿದ ನಂತ್ರ ನೀವು ಮೊಸರು ತಿಂದ್ರೆ ಹೊಟ್ಟೆ ತಣ್ಣಗಾದ ಅನುಭವವಾಗುತ್ತದೆ. ಮೊಸರು ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲ (Winter) ದಲ್ಲಿ ತಣ್ಣನೆಯ ಮೊಸರು (Curd) ತಿನ್ನೋದು ಸ್ವಲ್ಪ ಕಷ್ಟದ ಕೆಲಸ. ಕೆಲವರು ಫ್ರಿಜ್ ನಲ್ಲಿಟ್ಟ ಮೊಸರು ಬಿಟ್ಟು ಸಾಮಾನ್ಯ ಮೊಸರನ್ನು ಸೇವನೆ ಮಾಡ್ತಾರೆ. ಆದ್ರೆ ಚಳಿಗಾಲದಲ್ಲಿ ಮೊಸರು ಸೇವನೆ ಮಾಡಿದ್ರೆ ಕಫ ಹೆಚ್ಚಾಗುತ್ತದೆ ಎಂಬ ಭಯ ಅನೇಕರನ್ನು ಕಾಡುತ್ತದೆ. ಚಳಿ ಋತುವಿನಲ್ಲಿ ಮೊಸರು ಸೇವನೆ ಬೇಕೇ, ಬೇಡ್ವೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.
ಮೊಸರು ಪೋಷಕಾಂಶ (Nutrient)ಗಳಿಂದ ತುಂಬಿದೆ. ಇದ್ರಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡುಬರುತ್ತದೆ. ಇದು ಉತ್ತಮ ಬ್ಯಾಕ್ಟೀರಿಯಾ (Bacteria) ಮತ್ತು ಪ್ರೋಟೀನ್‌ನ ಮೂಲವಾಗಿದೆ. ಇದು ವಿಟಮಿನ್ ಗಳು, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಒಳಗೊಂಡಿದೆ. ಮೊಸರಿನಲ್ಲಿ ವಿಟಮಿನ್ ಬಿ 6 ಮತ್ತು ಬಿ 12 ನಂತಹ ಪೋಷಕಾಂಶ ಇದೆ. ಇದು ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಚರ್ಮ ಮತ್ತು ಕೂದಲಿಗೆ ಸಹ ಪ್ರಯೋಜನಕಾರಿಯಾಗಿದೆ.
ಡಯಾಬಿಟಿಸ್ ಪೇಷೆಂಟ್ಸ್ ಗಾಯ ವಾಸಿಗೆ ಯಾಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತೆ ?
undefined
ಆಯುರ್ವೇದದಲ್ಲೂ ಮೊಸರಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಆಯುರ್ವೇದದ ಪ್ರಕಾರ ಮೊಸರು ರುಚಿಯಲ್ಲಿ ಹುಳಿಯಾಗಿರುತ್ತದೆ. ಅದ್ರ ಗುಣ ಬಿಸಿ. ಮೊಸರನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ಬೇಕು. ಮೊಸರನ್ನು ನೀವು ಸೇವನೆ ಮಾಡುವುದ್ರಿಂದ ನಿಮ್ಮ ಜೀರ್ಣಶಕ್ತಿ ಸುಧಾರಿಸುತ್ತದೆ. ದೇಹಕ್ಕೆ ಶಕ್ತಿ ಸಿಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮೊಸರಿಂದ ಆಗುತ್ತದೆ. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲ ಮತ್ತು ಪ್ರೋಬಯಾಟಿಕ್ ಇರುತ್ತದೆ. ಮೊಸರಿನಲ್ಲಿ ಇರುವ ಉತ್ತಮ ಬ್ಯಾಕ್ಟೀರಿಯಾ ಕರುಳಿನ ಆರೋಗ್ಯ ಕಾಪಾಡುತ್ತದೆ. ಸೋಂಕು ಉಂಟುಮಾಡುವ ಸೂಕ್ಷ್ಮಾಣುಜೀವಿಗಳ ವಿರುದ್ಧ ನಮ್ಮನ್ನು ರಕ್ಷಿಸುತ್ತದೆ. ಹಲ್ಲು ಮತ್ತು ಮೂಳೆಗಳ ಆರೋಗ್ಯವನ್ನು ಕಾಪಾಡಲು ಮೊಸರು ನೆರವಾಗುತ್ತದೆ. ಕೊಬ್ಬು ಕರಗಿಸಲು ಸಹಾಯ ಮಾಡುವುದಲ್ಲದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಚಳಿಗಾಲದಲ್ಲಿ ಮೊಸರಿನ ಸೇವನೆ ಬೇಕೆ? : ತಜ್ಞರ ಪ್ರಕಾರ ಚಳಿಗಾಲದಲ್ಲಿ ಮೊಸರಿನ ಸೇವನೆ ಮಾಡುವುದನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಏಕೆಂದರೆ ಮೊಸರು ಗ್ರಂಥಿಗಳಿಂದ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಫ ಸಮಸ್ಯೆಗೆ ಕಾರಣವಾಗುತ್ತದೆ. ಉಸಿರಾಟದ ತೊಂದರೆ, ಅಸ್ತಮಾ, ಶೀತ ಮತ್ತು ಕೆಮ್ಮು ಇರುವವರಿಗೆ ಲೋಳೆಯ ಶೇಖರಣೆ ಬಹಳಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಮೊಸರಿನಿಂದ ದೂರವಿದ್ರೆ ಒಳ್ಳೆಯದು ಎನ್ನುತ್ತಾರೆ ತಜ್ಞರು.
ರಾತ್ರಿ ಮೊಸರಿನ ಸೇವನೆ ಬೇಡ: ಮೊಸರು ಬಿಡಲು ಸಾಧ್ಯವೇ ಇಲ್ಲ ಎನ್ನುವವರು ಹಗಲಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮೊಸರಿನ ಸೇವನೆ ಮಾಡಬಹುದು. ಆದ್ರೆ ಅಪ್ಪಿತಪ್ಪಿಯೂ ರಾತ್ರಿ ಮೊಸರನ್ನು ತಿನ್ನಬೇಡಿ. ಇದ್ರಿಂದ ಸ್ಥೂಲಕಾಯ, ಕೆಮ್ಮು, ರಕ್ತಸ್ರಾವ ತೊಂದರೆ ಮತ್ತು ಉರಿಯೂತದಿಂದ ಬಳಲುವವರಿಗೆ ಸಮಸ್ಯೆ ಉಲ್ಬಣಿಸುತ್ತದೆ. ಚಳಿಗಾಲದಲ್ಲಿ ಪ್ರತಿ ದಿನ ಮೊಸರಿನ ಸೇವನೆ ತಪ್ಪಿಸಿ. ನೀವು ಮಜ್ಜಿಗೆಗೆ ಉಪ್ಪು, ಕಾಳು ಮೆಣಸಿನ ಪುಡಿ ಅಥವಾ ಜೀರಿಗೆ ಸೇರಿಸಿ ಸೇವನೆ ಮಾಡಬಹುದು. ನೀವು ಹಣ್ಣುಗಳ ಜೊತೆ ಮೊಸರು ತಿನ್ನುವ ಸಾಹಸಕ್ಕೆ ಹೋಗಬೇಡಿ. ನೀವು ಪ್ರತಿ ದಿನ ಹಣ್ಣಿನ ಜೊತೆ ಮೊಸರು ತಿಂದ್ರೆ ಜೀರ್ಣಕ್ರಿಯೆ ಸಮಸ್ಯೆ ಹಾಗೂ ಅಲರ್ಜಿ ಕಾಡುವ ಸಾಧ್ಯತೆಯಿರುತ್ತದೆ.
Health Tips: ಭಾರ ಎತ್ತೋದು ಮೂಳೆ ಮುರಿತ ಮಾತ್ರವಲ್ಲ, ಪೈಲ್ಸ್‌ಗೂ ಕಾರಣವಾಗ್ಬೋದು
ಮೊಸರನ್ನು ನೀವು ಮಾಂಸಹಾರದ ಜೊತೆ ಕೂಡ ತಿನ್ನಬಾರದು. ಮೀನು, ಕೋಳಿ, ಮಟನ್ ನಂತಹ ಆಹಾರದ ಜೊತೆ ಮೊಸರು ಬೆರೆಸಬೇಡಿ. ಈ ಬೇಯಿಸಿದ ಮಾಂಸಹಾರಕ್ಕೆ ಮೊಸರು ಹಾಕಿದ್ರೆ ಅದು ವಿಷವಾಗುತ್ತದೆ. ಇದ್ರಿಂದ ನಿಮ್ಮ ಆರೋಗ್ಯ ಹದಗೆಡುವ ಅಪಾಯವಿರುತ್ತದೆ.